ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಕರ್ನಾಟಕದ ಜನರಿಗೆ ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ, ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆ ಹಾಗೂ ಬರ ಪರಿಹಾರದ ಬಗ್ಗೆ ಕೆಲವೊಂದು ಹೊಸ ಅಪ್ಡೇಟ್ಗಳು ಬಂದಿವೆ.
ಇದು ಲೋಕಸಭಾ ಚುನಾವಣೆ ಆದಮೇಲೆ ಬಂದಿರುವ ಕೆಲವೊಂದು ಮುಖ್ಯವಾದ ಅಪ್ಡೇಟ್ ಗಳಾಗಿವೆ. ಆದ್ದರಿಂದ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಬರ ಪರಿಹಾರದ ಮೂರನೇ ಕಂತಿನ ಹಣ ಬಿಡುಗಡೆ
ಸ್ನೇಹಿತರೆ ಸಾಕಷ್ಟ ರೈತರಿಗೆ ಬರ ಪರಿಹಾರ ಹಣ ಬರದಿರುವ ಕಾರಣ ಯಾವಾಗ ಬರಬಹುದು ಎಂಬ ಗೊಂದಲವಿತ್ತು. ಈಗ ಬರ ಪರಿಹಾರದ ಮೂರನೇ ಕಂತಿನ ಹಣವನ್ನು 17 ಲಕ್ಷ ರೈತರಿಗೆ ಬಿಡುಗಡೆ ಆಗುತ್ತದೆ.
ಪ್ರತಿಯೊಬ್ಬ ರೈತನಿಗೆ 3000 ರೂಪಾಯಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಕಂದಾಯ ಸಚಿವರಾಗಿರುವ ಕೃಷ್ಣ ಭೈರೇಗೌಡರು ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆ ಆಗಲೇ ಸಾಕಷ್ಟು ದಿನಪತ್ರಿಕೆಗಳಲ್ಲಿ ಕೂಡ ಬಂದಿದೆ.
PM ಕಿಸಾನ್ ಸಮ್ಮಾನ್ ಯೋಜನೆ 17ನೇ ಕಂತಿನ ಹಣ ಬಿಡುಗಡೆ
ಸ್ನೇಹಿತರೆ ದೇಶದ ಪ್ರಧಾನಿಯಾದ ಕೆಲವೇ ಗಂಟೆಗಳಲ್ಲಿ ನರೇಂದ್ರ ಮೋದಿಯವರು ಕಿಸಾನ್ ಸಮ್ಮಾನ್ ಯೋಜನೆಯ 17ನೇ ಕಂತಿನ ಹಣವನ್ನು ಬಿಡುಗಡೆ ವಿಷಯವಾಗಿ ಹೇಳಿದ್ದಾರೆ.
ದೇಶದ ಸುಮಾರು 9.3 ಕೋಟಿ ರೈತರಿಗೆ ಈ ಯೋಜನೆ ಅಡಿಯಲ್ಲಿ ವರ್ಷಕ್ಕೆ ಆರು ಸಾವಿರ ರೂಪಾಯಿ ಕೇಂದ್ರದಿಂದ ಬಿಡುಗಡೆಯಾಗುತ್ತದೆ. ಈಗ ಆತರ 17ನೇ ಕಂತಿನ ಹಣವನ್ನು ಕೆಲವೇ ದಿನಗಳಲ್ಲಿ ರೈತರಿಗೆ ಹಾಕುತ್ತೇವೆ ಎಂದು ಸ್ವತಃ ನರೇಂದ್ರ ಮೋದಿಯವರು ಹೇಳಿದ್ದಾರೆ.
ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಡಿಕೆ ಶಿವಕುಮಾರ್ ಹೇಳಿಕೆ
ಸಾಕಷ್ಟು ಫಲಾನುಭವಿಗಳಿಗೆ ಆಗಲೇ ಮೂರು ತಿಂಗಳಿಂದ ಅನ್ನಭಾಗ್ಯ ಯೋಜನೆಯ ಹಣ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಸರ್ಕಾರದ ಕಡೆಯಿಂದ ಸರಿಯಾಗಿ ಬಿಡುಗಡೆಯಾಗಿಲ್ಲ.
ಇದರ ಬಗ್ಗೆ ಹಣ ಯಾಕೆ ಬರುತ್ತಿಲ್ಲ ಒಂದು ವೇಳೆ ಯೋಚನೆಯನ್ನು ನಿಲ್ಲಿಸಿದ್ದೀರಾ ಎಂದು ಮೀಡಿಯಾದವರು ನೇರವಾಗಿ ಡಿಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ. ಇದರ ಬಗ್ಗೆ ನಾವು ಸರಿಯಾಗಿ ವಿಚಾರಿಸಿ ಆದಷ್ಟು ಬೇಗ ಎಲ್ಲ ಸರಿ ಮಾಡಲು ಪ್ರಯತ್ನಿಸುತ್ತೇವೆ ಎಂದು ಸ್ವತಹ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸ್ನೇಹಿತರೆ ಇದರ ಜೊತೆ ಒಂದು ವೇಳೆ ನಿಮಗೆ ಸಾಕಷ್ಟು ತಿಂಗಳಿನಿಂದ ಅನ್ನ ಭಾಗ್ಯ ಯೋಜನೆ ಅಕ್ಕಿ ಬದಲಿನ ಹಣ ಅಥವಾ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ ಎಂದರೆ ಒಮ್ಮೆ ನಿಮ್ಮ ದಾಖಲಾತಿಗಳನ್ನು ಸರಿ ಇದೆ ಎಂದು ಪರಿಶೀಲಿಸಿಕೊಳ್ಳಿ. ನಿಮ್ಮ ಬ್ಯಾಂಕ್ಗಳಿಗೆ ಹೋಗಿ eKYC ಆಗಿದೆ ಎಂದು ಪರಿಶೀಲಿಸಿಕೊಳ್ಳಿ.
ಒಂದು ವೇಳೆ ಎಲ್ಲಾ ದಾಖಲತಿಗಳು ಸರಿ ಇದ್ದರು ಹಣ ಬರುತ್ತಿಲ್ಲ ಎಂದರೆ ನಿಮ್ಮ ಹತ್ತಿರದ ಮಕ್ಕಳ ಮತ್ತು ಮಹಿಳೆಯರ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಅಲ್ಲಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.
ಇದನ್ನೂ ಓದಿ: PM Kisan 17ನೇ ಕಂತಿನ ಹಣ ಬಿಡುಗಡೆ!! 9.3 ಕೋಟಿ ರೈತರಿಗೆ ಹಣ ಬಿಡುಗಡೆ!