ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದು ಒಂದು ವರ್ಷ ಪೂರ್ಣಗೊಂಡಿದೆ. ಒಂದು ವರ್ಷ ಮುಗಿದ ನಂತರ ಸಿದ್ದರಾಮಯ್ಯನವರು ಒಂದು ಪ್ರೆಸ್ ಮೀಟನ್ನು ನಡೆಸಿದರು ಇದರಲ್ಲಿ ರಾಜ್ಯದ ಜನರಿಗೆ ಒಂದು ಒಳ್ಳೆಯ ಸುದ್ದಿಯನ್ನು ತಿಳಿಸಿದ್ದಾರೆ.
ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಿಡುಗಡೆಯಾಗಬೇಕು ಹಾಗೂ ಗೃಹ ಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಎಲ್ಲರಿಗೂ ಸಿಗುತ್ತದೆ. ಪ್ರತಿ ತಿಂಗಳು ಶೂನ್ಯ ಕರೆಂಟ್ ಬಿಲ್ ಬರುತ್ತಾಯಿದೆ ಹಾಗೂ ಯುವ ನಿಧಿ ಯೋಜನೆಯ ಹಣ ಮತ್ತು ಅನ್ನಭಾಗ್ಯ ಯೋಜನೆಯ ಹಣ ಕೂಡ ಬರ್ತಾ ಇದೆ, ಆದರೆ ಜನರಿಗೆ ಇರುವ ಗೊಂದಲ ಏನೆಂದರೆ ಯೋಜನೆಗಳು ನಿಲ್ಲುತ್ತಾ ಎಂದು?
ಸಿಎಂ ಸಿದ್ದರಾಮಯ್ಯನವರು ಫಲಾನುಭವಿಗಳಿಗೆ ನೀಡಿದ ಗುಡ್ ನ್ಯೂಸ್ ಏನು?
ವಿರೋಧ ಪಕ್ಷದವರು ಏನು ಹೇಳುತ್ತಿದ್ದಾರೆ ಅಂದರೆ ಲೋಕಸಭಾ ಚುನಾವಣೆ ಮುಗಿದ ನಂತರ ರಾಜ್ಯದಲ್ಲಿ ನೀಡುತ್ತಿರುವ ಎಲ್ಲಾ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸುತ್ತಾರೆ ಎಂದು ಹೇಳಿದ್ದಾರೆ ಇದರ ಬಗ್ಗೆ ಸಿದ್ದರಾಮಯ್ಯನವರು ಸ್ಪಷ್ಟಣೆ ನೀಡಿದ್ದಾರೆ.
ನಾವು ಈಗಾಗಲೇ ಒಂದು ವರ್ಷದಿಂದ ಎಲ್ಲಾ ಯೋಜನೆಗಳ ಹಣವನ್ನು ಬಿಡುಗಡೆ ಮಾಡಿದ್ದೇವೆ ಹಾಗೂ ಫಲಾನುಭವಿಗಳಿಗೆ ಎಲ್ಲ ರೀತಿಯ ಸೌಲಭ್ಯ ಸಿಗುತ್ತದೆ ಲೋಕಸಭೆ ಚುನಾವಣೆ ಮುಗಿದ ನಂತರವೂ ರಾಜ್ಯದ ಎಲ್ಲಾ ಫಲಾನುಭವಿಗಳಿಗೆ ಯೋಜನೆಗಳ ಹಣ ಹಾಗೂ ಫಲ ಸಿಗುತ್ತದೆ ಎಂದು ಸಿದ್ದರಾಮಯ್ಯನವರು ನಡೆದ ಪ್ರೆಸ್ ಮೀಟಿನಲ್ಲಿ ತಿಳಿಸಿದ್ದಾರೆ.
ಮುಂದಿನ 4 ವರ್ಷದ ಕಾಲ ಕೂಡ ಯಾವುದೇ ರೀತಿಯ ತೊಂದರೆ ಆಗದೆ ಯಾವ ಯೋಜನೆಗಳು ಕೂಡ ರದ್ದು ಆಗುವುದಿಲ್ಲ ಎಂದು ತಿಳಿಸಿದ್ದಾರೆ ಹೇಳುವ ಮಾತುಗಳಿಗೆ ನೀವು ಕಿವಿ ಕೊಡಲು ಹೋಗಬೇಡಿ ಎಂದು ಕೂಡ ಹೇಳಿದ್ದಾರೆ.
ಇದನ್ನೂ ಓದಿ: ರೆವಿನ್ಯೂ ಡಿಪಾರ್ಟ್ಮೆಂಟ್ ನಲ್ಲಿ ಹುದ್ದೆಗಳು ಖಾಲಿ ಇವೆ- ಅರ್ಜಿ ಸಲ್ಲಿಸುವುದು ಹೇಗೆ?