5 KG ಅಕ್ಕಿ ಹಣ ಬದಲು ದಿನಸಿ ಕಿಟ್!! ಸರ್ಕಾರ ಜನರಿಗೆ ದಿನಸಿ ಕಿಟ್ ಯಾವ ರೀತಿ ಕೊಡುತ್ತದೆ! ಇಲ್ಲಿದೆ ಮಾಹಿತಿ 

ಎಲ್ಲರಿಗೂ ನಮಸ್ಕಾರ, ರೇಷನ್ ಕಾರ್ಡ್ ಮೂಲಕ ಅಕ್ಕಿಯನ್ನು ತೆಗೆದುಕೊಳ್ಳುತ್ತಿರುವ ಜನರಿಗೆ ಒಂದು ಬಹು ಮುಖ್ಯವಾದಂತಹ ಅಪ್ಡೇಟ್. ಹೌದು ಇಷ್ಟು ದಿನಗಳ ಕಾಲ 5 kg ಅಕ್ಕಿಯನ್ನು ತೆಗೆದುಕೊಳ್ಳುತ್ತಾ ಇದ್ರಿ. ಕಳೆದ ವರ್ಷ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿಗಳ ಪ್ರಕಾರ ಅಂದ್ರೆ ಏನು ಅವರು ಗ್ಯಾರಂಟಿಯನ್ನ ಘೋಷಣೆ ಮಾಡಿದ್ರು ಆ ಪ್ರಕಾರ ಇನ್ನ 5 kg ಅಕ್ಕಿಯನ್ನ ಕೊಡ್ತೀವಿ ಅಂದ್ರೆ ಟೋಟಲ್ ಅನ್ನಭಾಗ್ಯ ಯೋಜನೆ ಮೂಲಕ 10 kg ಅಕ್ಕಿಯನ್ನ ಕೊಡ್ತೀವಿ ಅಂತ ಅಂದುಬಿಟ್ಟು ಘೋಷಣೆಯನ್ನ ಮಾಡಿದ್ರು.

ಅಕ್ಕಿ ಶಾರ್ಟೇಜ್ ಆಗಿದ್ದರಿಂದ ಕೇಂದ್ರ ಸರ್ಕಾರ ಹತ್ರ ಸ್ಟಾಕ್ ಇಲ್ಲ ಅಂತ ಹೇಳಿದ ಕಾರಣ ಅಕ್ಕಿ ಬದಲಿಗೆ ಪ್ರತಿಯೊಬ್ಬ ವ್ಯಕ್ತಿಗೂನು 170rs. 34 ಒಂದು ಕೆಜಿ ಗೆ ಅನ್ನೋ ರೀತಿಯಲ್ಲಿ 170rs ಹಣವನ್ನು ಅಕೌಂಟಿಗೆ ಹಾಕ್ತಾ ಬರ್ತಾ ಇತ್ತು, ಆದರೆ ಕಳೆದ ಎರಡು ವಾರಗಳ ಹಿಂದೆ ಈ 5 kg ಅಕ್ಕಿ ಬದಲಿಗೆ ಏನು 170rs ಹಣವನ್ನು ಕೊಡ್ತಾ ಇದ್ರು ಅದನ್ನ ಕ್ಯಾನ್ಸಲ್ ಮಾಡಿ ಅದರ ಬದಲಿಗೆ ದಿನಸಿ ಕಿಟ್ಟನ್ನ ಕೊಡಬೇಕು ಅನ್ನುವಂತಹ ಒಂದು ನಿರ್ಧಾರಕ್ಕೆ ಆಹಾರ ಇಲಾಖೆ ಬಂದಿತ್ತು

ಸರ್ಕಾರ ದಿನಸಿ ಕಿಟ್ ಯಾವ ರೀತಿ ಕೊಡುತ್ತದೆ

5 KG rice grocery kit instead of money To Karnataka people

ದಿನಸಿ ಕಿಟ್ ನಲ್ಲಿ ನಾಲ್ಕು ಜನ ಇರುವಂತಹ ಕುಟುಂಬಕ್ಕೆ ಎರಡು ಕೆಜಿ ತೊಗರಿಬೇಳೆ, 1 kg ಸಕ್ಕರೆ, 1 ತಾಳೆ ಎಣ್ಣೆ ಹಾಗೆ 1 kg ಅಯೋಡೈಸ್ ಉಪ್ಪನ್ನ ಕೊಡಬೇಕು ಅನ್ನುವಂತಹ ಒಂದು ನಿರ್ಧಾರಕ್ಕೆ ಬಂದಿದ್ರು ಈ ಬಗ್ಗೆ ಆಹಾರ ಇಲಾಖೆ ಪ್ರಸ್ತಾವನೆಯನ್ನ ಸಿದ್ಧಪಡಿಸಿ ಸಚಿವ ಸಂಪುಟಕ್ಕೆ ಅನುಮೋದನೆಗೆ ಅಂತ ಅಂದುಬಿಟ್ಟು ಕಳಿಸಿತ್ತು.

ಈಗ ಸಚಿವ ಸಂಪುಟ ಆ ಒಂದು ಪ್ರಸ್ತಾವನೆಯನ್ನ ಅಂದ್ರೆ ಆಹಾರ ಇಲಾಖೆ ಸಿದ್ಧಪಡಿಸಿ ಕಳಿಸಿದಂತಹ ದಿನಸಿ ಕಿಟ್ ಪ್ರಸ್ತಾವನೆಯನ್ನ ತಿರಸ್ಕಾರ ಮಾಡಿದೆ ಹೌದು ಇದೆಲ್ಲವೂ ಸರಿಯಾಗಿದ್ರೆ ಈ ಅಕ್ಟೋಬರ್ ಒಂದ ರಿಂದ ಈ ಒಂದು ದಿನಸಿ ಕಿಟ್ ಯೋಜನೆ ಜಾರಿಗೆ ಬರಬೇಕಾಗಿತ್ತು ಹಣದ ಬದಲಾಗಿ, ದಿನಸಿ ಕಿಟ್ಟನ್ನ ಕೊಡಬೇಕಾಗಿತ್ತು ಜನರು ಕೂಡ ದಿನಸಿ ಕಿಟ್ಟೆ ಕೊಡ್ಲಿ ಅಂತ ಅಂದುಬಿಟ್ಟು ಒಂದು ಮನವಿಯನ್ನ ಕೂಡ ಮಾಡ್ಕೊಂಡಿದ್ರು.

ಯಾಕಂದ್ರೆ ಹಣ ಹಾಕಿದ್ರೆ ಹಣ ಖರ್ಚಾಗ್ಬಿಡುತ್ತೆ. ಅದರ ಬದಲಾಗಿ ಅಕ್ಕಿನಾದ್ರೂ ಕೊಡ್ಲಿ ಅಥವಾ ದಿನಸಿ ಕಿಟ್ಟಾದ್ರು ಕೊಡ್ಲಿ ಅಂತ ಅಂದುಬಿಟ್ಟು ಮನವಿಯನ್ನ ಮಾಡ್ಕೊಂಡಿದ್ರು ಆದ್ರೆ ಇವಾಗ ಆ ಒಂದು ಏನು ಪ್ರಸ್ತಾವನೆ ಇತ್ತು ದಿನಸಿ ಕಿಟ್ಟು ಅದನ್ನ ತಿರಸ್ಕಾರ ಮಾಡಿದ್ದಾರೆ. ಸಚಿವ ಸಂಪುಟ ಅಧಿಕೃತವಾಗಿ

ಈ ಬಗ್ಗೆ ಸಚಿವರಾದಂತಹ ಎಚ್ ಕೆ ಪಾಟೀಲ್ ಅವರು ಕೂಡ ಮಾಹಿತಿಯನ್ನ ಕೊಟ್ಟಿದ್ದಾರೆ. ಏನು ಈ ದಿನಸಿ ಕಿಟ್ಟನ್ನ ಕೊಡಬೇಕು ಅಂತ ಅನ್ಕೊಂಡಿದ್ರೋ ತೊಗರಿಬೇಳೆ, ಸಕ್ಕರೆ, ಎಣ್ಣೆ ಹಾಗೆ ಉಪ್ಪನ್ನ ಅದನ್ನ ಕೊಡೋದಿಲ್ಲ ಅದರ ಬದಲಾಗಿ 170rs ಹಣವನ್ನೇ ಕಂಟಿನ್ಯೂ ಮಾಡ್ತೀವಿ ಅಂತ ತಿಳಿಸಿದ್ದಾರೆ.

ದಿನಸಿ ಕಿಟ್ ಯೋಜನೆ ಜಾರಿಗೆ ಬರುವುದಿಲ್ಲ

ಆಹಾರ ಇಲಾಖೆಯಿಂದಾನೆ ಪ್ರಸ್ತಾವನೆ ಬಂದಂತಹ ಬಗ್ಗೆ ಮಾಹಿತಿಯನ್ನ ಕೊಟ್ಟಿದ್ದೆ. ಅದು ಜಾರಿಗೆ ಬರ್ತಾ ಇಲ್ಲ ಏನು 170rs ಇತ್ತು ಅದೇ ಕಂಟಿನ್ಯೂ ಆಗ್ತಾ ಇದೆ

ಇನ್ನು ಇದಕ್ಕೂ ಮೀರಿ ಇನ್ನೊಂದು ವಿಚಾರ ಅಂದ್ರೆ ಕೇಂದ್ರ ಸರ್ಕಾರ ಇವಾಗ ಅಕ್ಕಿ ಕೊಡೋದಕ್ಕೆ ರೆಡಿಯಾಗಿದೆ ಅಂದ್ರೆ ಏನು ಕಳೆದ ವರ್ಷ ಸ್ಟಾಕ್ ಇಲ್ಲ ಅಂತ ಹೇಳಿತ್ತು ಈ ವರ್ಷ 28 ರೂಪಾಯಿಗೆ ಒಂದು ಕೆಜಿ ಅಕ್ಕಿಯನ್ನ ಕೊಡ್ತೀವಿ ಆದರೆ ಕರ್ನಾಟಕ ರಾಜ್ಯ ಸರ್ಕಾರ ತಗೋತಾ ಇಲ್ಲ ಅನ್ನುವಂತಹ ಒಂದು ವಿಚಾರವನ್ನು ತಿಳಿಸಿತ್ತು ಆ ಬಗ್ಗೆ ಕೂಡ ಸಚಿವರು ಅಪ್ಡೇಟ್ ಅನ್ನ ಕೊಟ್ಟಿದ್ದಾರೆ.

ಏನಕ್ಕೆ ಕೇಂದ್ರ ಸರ್ಕಾರದಿಂದ ಈ ಸತಿ ಅಕ್ಕಿಯನ್ನ ತಗೋತಾ ಇಲ್ಲ ಅಂತ ಅಂದ್ರೆ ಅಕ್ಕಿ ಬದಲಾಗಿ ಯಾಕೆ ಹಣವನ್ನು ಕೊಡ್ತಾ ಇದ್ದೀರಾ ಅಂತ ಅಂದುಬಿಟ್ಟು ಪ್ರಶ್ನೆ ಕೇಳಿದ್ದಕ್ಕೆ ಅವರು ಉತ್ತರ ಕೊಟ್ಟಿದ್ದಾರೆ

ನಮ್ಮ ಸರ್ಕಾರ ನೀಡಿರುವ ಉತ್ತರ: “ಉತ್ತರ ಕರ್ನಾಟಕ ಭಾಗದವರಿಗೆ ಗೋಧಿ ಜೋಳ ತಿನ್ನುವಂತಹ ಅಭ್ಯಾಸ ಇದೆ ಈ ರೀತಿ ಒಂದೊಂದು ಭಾಗದವರಿಗೆ ಒಂದೊಂದು ಹವ್ಯಾಸ ಇದೆ ತಿಂಗಳಿಗೆ ಒಬ್ಬ ಸದಸ್ಯರಿಗೆ 5 kg ಅಕ್ಕಿ ಸಾಕಾಗುತ್ತೆ ಉಳಿದ ಹಣದಲ್ಲಿ ಅವರು ಬೇರೆ ಧಾನ್ಯ ಅವರಿಗೆ ಏನು ಇಷ್ಟನೋ ಆ ಧಾನ್ಯ ಆಗಿರಬಹುದು ಬೇಳೆ ಆಗಿರಬಹುದು ಅಥವಾ ಎಣ್ಣೆಯನ್ನು ಖರೀದಿಸಬಹುದು ಅಂತ ಅಂದುಬಿಟ್ಟು”

ಅದೇ ಕಾರಣಕ್ಕೋಸ್ಕರ ನಾವು 120rs ಹಣವನ್ನು ಕೊಡಬೇಕು ಅಂತ ಅನ್ಕೊಂಡಿದೀವಿ.

ಅಕ್ಕಿಯನ್ನ ಕೇಂದ್ರ ಸರ್ಕಾರದಿಂದ ತಗೋತಾ ಇಲ್ಲ ಅದಕ್ಕೋಸ್ಕರ ಹಣ ಕೊಡೋದನ್ನೇ ಮುಂದುವರಿಸುತ್ತಾ ಇದ್ದೀವಿ ಅಂತ ಅಂದುಬಿಟ್ಟು ಮಾಹಿತಿಯನ್ನ ಕೊಟ್ಟಿದ್ದಾರೆ.

ಕೊನೆಯ ಮಾತುಗಳು

ಹೌದು ಒಬ್ಬ ವ್ಯಕ್ತಿಗೆ 5 kg ಅಕ್ಕಿ ಸಾಕಾಗುತ್ತೆ ಇನ್ನು ಐದು ಕೆಜಿ ಅಕ್ಕಿ ಬದಲಿಗೆ ಏನು ಹಣವನ್ನು ಕೊಡ್ತಾ ಇದ್ದಾರೆ ಆ ಹಣದ ಬದಲಾಗಿ ದಿನಸಿ ಕಿಟ್ಟು ಕೊಟ್ಟಿದ್ರೇನೆ ಸಾಕಷ್ಟು ಜನರಿಗೆ ಅದೊಂದು ಹೆಲ್ಪ್ ಆಗ್ತಾ ಇತ್ತು ಹಣ ಇದ್ರೆ ಮುಂಚೆನೇ ಹೇಳಿದಂಗೆ ಅದು ಖರ್ಚು ಆಗ್ಬಿಡುತ್ತೆ ಅನ್ನೋದು ಒಂದು ನಿಜ ಅದು

ಮನೆಯ ಬೇರೆ ಸದಸ್ಯರು ಆ ಹಣವನ್ನು ಬೇರೆ ರೀತಿಯಾಗಿ ಖರ್ಚು ಮಾಡಿಕೊಳ್ಳುವುದು ಬದಲು ದಿನಸಿ ಕಿಟ್ಟನ್ನ ಕೊಟ್ಟಿದ್ರೆ ಅದು ಕುಟುಂಬಕ್ಕೆನೆ ಸರಿಯಾಗಿ ಸದುಪಯೋಗ ಆಗ್ತಾ ಇತ್ತು ಹಾಗೆ ಬಗ್ಗೆ ಬೇಳೆ ಮಂಡಳಿ ಜೊತೆ ಹಾಗೇನೇ ಎಣ್ಣೆ ಏನು ಫೆಡರೇಶನ್ ಗಳು ಇರುತ್ತೆ. ಎಲ್ಲದರ ಜೊತೆ ಕೂಡ ಚರ್ಚೆನು ಮಾಡಿದ್ರು ಜೊತೆಗೆ ಗುಜರಾತ್ ಇಂದ ಅಯೋಡೈಸರ್ ರೂಪನ ತಗೊಳ್ಳೋದಕ್ಕೆ ಟೆಂಡರ್ ಮೂಲಕ ಟೆಂಡರ್ ಅಪ್ಲೈ ಮಾಡಬೇಕು ಅಂತ ಕೂಡ ಅನ್ಕೊಂಡಿದ್ರು ಬಟ್ ಯಾವ ಕಾರಣಕ್ಕೋಸ್ಕರ ಅದನ್ನ ಕ್ಯಾನ್ಸಲ್ ಮಾಡಿದ್ರು ಅನ್ನೋದು ಗೊತ್ತಿಲ್ಲ.

ಆ ರೀತಿ ಖರೀದಿ ಮಾಡಿದ್ರೆ ಒಂದು ರೇಷನ್ ಕಾರ್ಡ್ ಇಂದ ಆಲ್ಮೋಸ್ಟ್ ಒಂದು 200 ರಿಂದ 250rs ರಾಜ್ಯ ಸರ್ಕಾರಕ್ಕೆ ಹಣ ಉಳಿತಾಯ ಆಗುತ್ತೆ ಅನ್ನುವಂತಹ ಒಂದು ಲೆಕ್ಕಾಚಾರ ಕೂಡ ಇತ್ತು ಆದರೆ ಯಾವ ಕಾರಣಕ್ಕೋಸ್ಕರ ಇದನ್ನ ಪ್ರಸ್ತಾವನೆಯನ್ನ ತಿರಸ್ಕಾರ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ.

ಇನ್ಮುಂದೆ ಕೂಡ ನಿಮ್ಮ ಒಂದು ರೇಷನ್ 5 kg ಬದಲಾಗಿ ಹಣವನ್ನೇ ಅವರು ನಿಮ್ಮ ಒಂದು ಖಾತೆಗೆ ಹಾಕ್ತಾರೆ. ಆ ಹಣದಲ್ಲೇ ನಿಮಗೆ ಏನು ಐಟಂಗಳು ಬೇಕೋ ಅದನ್ನ ತಗೋಬಹುದಾಗಿದೆ.

ಇದನ್ನೂ ಓದಿ: ಸರ್ಕಾರ ಜನರ ಒಂದಷ್ಟು ರೇಷನ್ ಕಾರ್ಡ್ ರದ್ದು ಮಾಡಿದ್ದಾರೆ!!

Leave a Comment

error: Content is protected !!