ಉಚಿತ ಹೊಲಿಗೆ ಯಂತ್ರ ಯೋಜನೆ 2024!! ಹೇಗೆ ಪಡೆಯುವುದು? ಇದರ ಸಂಪೂರ್ಣ ಫಲ ಈ ರೀತಿ ಪಡೆದುಕೊಳ್ಳಿ

ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, ಇಂದಿನ ನಮ್ಮ ಈ ಲೇಖನದಲ್ಲಿ ಉಚಿತ ಹೊಲಿಗೆ ಯಂತ್ರ ಯೋಜನೆಯ  ಸಂಪೂರ್ಣವಾದ ಫಲ ಹೇಗೆ ಪಡೆಯುವುದು? ಹೇಗೆ ಅರ್ಜಿ ಸಲ್ಲಿಸುವುದು? ಯಾರು ಯಾರು ಪಡೆಯಬಹುದು? ಎಂಬ ಇದರ ಕುರಿತು ಪೂರ್ಣ ಮಾಹಿತಿ ತಿಳಿಯೋಣ. ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ ಮಾಹಿತಿ ಉಪಯುಕ್ತವಾಗಿದೆ.

ಈ ಉಚಿತ ಹೊಲಿಗೆ ಯಂತ್ರ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಹಾಗೆ ಈ ಯೋಜನೆ ಪಿಎಂ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಬರುವುದು. ಪಿಎಂ ವಿಶ್ವ ಕರ್ಮ ಯೋಜನೆಯಲ್ಲಿ ಸ್ವಯಂ ಉದ್ಯೋಗ ಹಾಗು ಆರ್ಥಿಕವಾಗಿ ಬೆಂಬಲ ನೀಡಲು ಸಹಾಯ ಧನವನ್ನು ನೀಡಲಾಗುವುದು.

ಉಚಿತ ಹೊಲಿಗೆ ಯಂತ್ರ ಯೋಜನೆ 2024!!, Free Sewing Machine Project 2024

ಈ ಯೋಜನೆಯ ಸಂಪೂರ್ಣ ಫಲ ಹೇಗೆ ಪಡೆಯುವುದು

ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು ಪಡೆಯಲು ಆನ್ಲೈನ್ ಮೂಲಕ ಪಿಎಂ ವಿಶ್ವಕರ್ಮ ಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕು. ಈ ಯೋಜನೆಯಲ್ಲಿ ಹೊಲಿಗೆ ಯಂತ್ರವನ್ನೂ ನೀಡುವುದಿಲ್ಲ, ಬದಲಿಗೆ ಆಯ್ಕೆಯಾದ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 15,000/- ಹಣವನ್ನು ನೀಡಲಾಗುವುದು.

ಈ ಹಣದಿಂದ ಹೊಲಿಗೆ ಯಂತ್ರವನ್ನು ಖರೀದಿಸಬೇಕು. ಹಾಗೆ ಇದು ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಬರುವುದರಿಂದ ನೀವು ಯಾವುದೇ ಯಂತ್ರ ಪಡೆಯಲು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಆನ್ಲೈನ್ ಮೂಲಕ ಪಿಎಂ ವಿಶ್ವಕರ್ಮ ಅಫೀಷಿಯಲ್ ವೆಬ್ಸೈಟ್ ನಲ್ಲಿ ಸಲ್ಲಿಸಬಹುದು. ಅಥವಾ ಹತ್ತಿರದ CSC ಕೇಂದ್ರಗಳಲ್ಲಿ ಕೂಡ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಯಾರು ಯಾರು ಅರ್ಹರು?

ಆ ಕುಟುಂಬದಲ್ಲಿ ಕೇವಲ ಒಬ್ಬರಿಗೆ ಮಾತ್ರ ಈ ಸೌಲಭ್ಯ ಒದಗಿಸಲು ಸಾಧ್ಯವಾಗುವುದು. ಹಾಗೆ ಕಳೆದ 5 ವರ್ಷದಿಂದ ಸರ್ಕಾರದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಡಿಯಲ್ಲಿ ಇದ್ದ ಯಾವುದೇ ಯೋಜನೆಗಳ ಸೌಲಭ್ಯ ಅಥವಾ ಸಾಲ ಪಡೆದಿರಬಾರದು. ಹಾಗೆ ಆ ಕುಟುಂಬದ ಯಾವುದೇ ಸರ್ಕಾರಿ ನೌಕರ ಇದ್ದರೆ ಅವರಿಗೆ ಇದರ ಫಲ ಸಿಗುವುದಿಲ್ಲ.

ಅರ್ಜಿ ಸಲ್ಲಿಸಲು ಯಾವ ದಾಖಲೆಗಳ ಅವಶ್ಯವಿದೆ:

  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆಯ ಮಾಹಿತಿ
  • ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್
  • ಅಭ್ಯರ್ಥಿಗೆ ಕನಿಷ್ಟ 18 ವರ್ಷ ಆಗಿರಬೇಕು

ಇದನ್ನೂ ಓದಿ: ಕೆ.ಎಸ್.ಆರ್.ಟಿ.ಸಿ (KSRTC) ಬಸ್ ಪಾಸ್ ಪಡೆಯಲು ಅರ್ಜಿ ಹೇಗೆ ಸಲ್ಲಿಸುವುದು?ಯಾವ ದಾಖಲೆಗಳು ಬೇಕು?

Leave a Comment

error: Content is protected !!