Mahalakshmi Scheme: ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿಚಾರವಾಗಿ ಇಲಾಖೆಯು ಕೆಲವೊಂದು ಶಾಕಿಂಗ್ ಅಪ್ಡೇಟ್ಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷದ ಶಾಸಕರು ಎಲ್ಲಾ ಐದು ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯನವರಿಗೆ ಮನವಿಯನ್ನು ಮಾಡಿದ್ದರು. ವಿಚಾರವಾಗಿ ಎಲ್ಲಾ ಕಡೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈಗ ಇದರ ಬಗ್ಗೆ ಸ್ವತಃ ಸಿದ್ಧರಾಮಯ್ಯನವರೇ ಎಲ್ಲಾ ಶಾಸರಿಕರಿಗೂ ಒಂದು ಸ್ಪಷ್ಟನೆಯನ್ನು ನೀಡಿದ್ದಾರೆ.
ಸ್ನೇಹಿತರೆ ಇದರ ಜೊತೆ ಸಾಕಷ್ಟು ಕರ್ನಾಟಕದ ಮಹಿಳೆಯರು ಒಂದು ಲಕ್ಷ ರೂಪಾಯಿಯನ್ನು ಪಡೆಯಲು ಕಾಂಗ್ರೆಸ್ ಕಚೇರಿಯ ಬಳಿ ಹೋಗಿದ್ದಾರೆ. ಹಾಗಾದರೆ ಒಂದು ಲಕ್ಷ ರೂಪಾಯಿಯನ್ನು ಕಾಂಗ್ರೆಸ್ ಸರ್ಕಾರವು ಕೊಡಲು ಶುರು ಮಾಡಿದ್ದಾರ? ಈ ಎಲ್ಲಾ ವಿಷಯಗಳ ಬಗ್ಗೆ ವಿವರವಾಗಿ ತಿಳಿಯಲು ಈ ಲೇಖನೆಯನ್ನು ಪೂರ್ತಿಯಾಗಿ ಓದಿ.
ಮಹಿಳೆಯರು 1 ಲಕ್ಷ ರೂ ಪಡೆಯಲು ಕಾಂಗ್ರೆಸ್ ಕಚೇರಿ ಬಳಿ ಹೋಗುತ್ತಿದ್ದಾರೆ
ಸ್ನೇಹಿತರೆ ಲೋಕಸಭಾ ಚುನಾವಣೆಗೂ ಮುಂಚೆ ಕಾಂಗ್ರೆಸ್ ಪಕ್ಷದವರು ಜನರಿಗೆ ಕೆಲವೊಂದಿಷ್ಟು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದರು. ಅದರಲ್ಲಿ ಒಂದಾದದ್ದು ಮಹಾಲಕ್ಷ್ಮಿ ಯೋಜನೆ ಅಂದರೆ ಬಡ ಕುಟುಂಬದ ಒಬ್ಬ ಮಹಿಳೆಗೆ ಒಂದು ಲಕ್ಷ ರೂಪಾಯಿಯನ್ನು ಕೊಡುವುದಾಗಿ ಹೇಳಿದ್ದರು.
ಆದರೆ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಅಂದುಕೊಂಡಷ್ಟು ಹೆಚ್ಚು ಸೀಟ್ಗಳನ್ನು ಗಳಿಸಿಲ್ಲ ಹಾಗೂ ಕೇಂದ್ರದಲ್ಲಿ ಎಲ್ಲರ ಇಚ್ಛೆಯಂತೆ ಬಿಜೆಪಿ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದಿದೆ.
ಉತ್ತರ ಪ್ರದೇಶದ ಮಹಿಳೆಯರು ಕಾಂಗ್ರೆಸ್ ಪಕ್ಷವು ನೀಡಿದ್ದ ಗ್ಯಾರಂಟಿ ಕಾರ್ಡನ್ನು ಹಿಡಿದು ಕಾಂಗ್ರೆಸ್ ಕಚೇರಿಗೆ ಬಳಿ ಹೋಗುತ್ತಿದ್ದಾರೆ. ಇದಕ್ಕೆ ಕಾರಣವೇನೆಂದರೆ ಈಗಾಗಲೇ ಕಾಂಗ್ರೆಸ್ ಪಕ್ಷವು ಘೋಷಿಸಿದ್ದ ಒಂದು ಲಕ್ಷ ರೂಪಾಯಿಯನ್ನು ಪಡೆಯಲು ನಾವು ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ.
ಆದರೆ ಕಾಂಗ್ರೆಸ್ ಪಕ್ಷವು ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಈ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದರು. ಕಾಂಗ್ರೆಸ್ ಪಕ್ಷವು ಗೆಲ್ಲದಿರುವ ಕಾರಣ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡಲು ಮನವಿ.!
ಸ್ನೇಹಿತರೆ ಈಗಾಗಲೇ ಲೋಕಸಭೆ ಚುನಾವಣೆಯ ನಡೆದಿದ್ದು ಚುನಾವಣೆಯ ಫಲಿತಾಂಶವೂ ಕೂಡ ಹೊರಬಂದಿದೆ. ಈಗ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಂದುಕೊಂಡಷ್ಟು ಸೀಟ್ಗಳು ದೊರಕಿಲ್ಲ.
ಈ ಕಾರಣದಿಂದಾಗಿ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಕರ್ನಾಟಕದಲ್ಲಿ ನಿಲ್ಲಿಸಬೇಕು ಎಂಬ ಸಲಹೆಯನ್ನು ಕಾಂಗ್ರೆಸ್ ಪಕ್ಷದ ಶಾಸಕರೇ ಸಿದ್ದರಾಮಯ್ಯನವರಿಗೆ ಸಲಹೆ ನೀಡುತ್ತಿದ್ದಾರೆ ಹಾಗೂ ಕೆಲವೊಂದಷ್ಟು ಶಾಸಕರು ಒತ್ತಡವನ್ನು ಹೇರುತ್ತಿದ್ದಾರೆ.
ರದ್ದು ಮಾಡುವ ವಿಷಯವಾಗಿ ಸಿದ್ದರಾಮಯ್ಯನವರ ಸ್ಪಷ್ಟನೆ..!
ಸ್ನೇಹಿತರೆ ಈಗಾಗಲೇ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡಲು ಕಾಂಗ್ರೆಸ್ ಸರ್ಕಾರದ ಶಾಸಕರಿಂದ ಸಾಕಷ್ಟು ಮನವಿ ಸಿದ್ದರಾಮಯ್ಯನವರಿಗೆ ಬರುತ್ತಿದೆ. ಈ ವಿಷಯವಾಗಿ ಸ್ವತಹ ಸಿದ್ದರಾಮಯ್ಯನವರೇ ಎಲ್ಲಾ ಶಾಸಕರಿಗೂ ಒಂದು ಸ್ಪರ್ಶನೆಯನ್ನು ನೀಡಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಹೆಚ್ಚು ಸೀಟ್ ಗಳನ್ನು ಕರ್ನಾಟಕದಲ್ಲಿ ನಾವು ಗೆದ್ದಿದ್ದೇವೆ. ಇದರ ಅರ್ಥ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿದೆ ಹಾಗೂ ಗ್ಯಾರಂಟಿ ಯೋಜನೆಗಳು ನಮ್ಮ ಕೈಯನ್ನು ಹಿಡಿದಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡಲು ನನ್ನ ಒಪ್ಪಿಗೆ ಇಲ್ಲ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ.
ಇದನ್ನೂ ಓದಿ: Free Bus ಪ್ರಯಾಣ: ಶಕ್ತಿ ಯೋಜನೆ ಬಂದ್ ಆಗ್ತಿದೆಯಾ? ಹಾಗೆ ಬಸ್ ಟಿಕೆಟ್ ನ ಬೆಲೆ ಹೆಚ್ಚಾಗುವುದು?