ಸ್ನೇಹಿತರೆ ಪ್ರಧಾನಿಯಾದ ಮೊದಲ ದಿನವೇ ನರೇಂದ್ರ ಮೋದಿಯವರು ಒಂದು ದೊಡ್ಡ ಅನೌನ್ಸ್ಮೆಂಟ್ ಅನ್ನು ನೀಡಿದ್ದಾರೆ. ಎಲ್ಲಾ ಭಾರತದ ರೈತರಿಗೂ ಕೇಂದ್ರ ಸರ್ಕಾರದ ಕಡೆಯಿಂದ ಬಹಳ ದೊಡ್ಡ ಸಿಹಿ ಸುದ್ದಿ.
ಸ್ನೇಹಿತರೆ ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣವಚನವನ್ನು ಸ್ವೀಕರಿಸಿದ 24 ಗಂಟೆ ಒಳಗೆ ಪ್ರಧಾನಿ ಮೋದಿ ಅವರು ದೇಶದ ಎಲ್ಲಾ ರೈತರಿಗೆ ಒಂದು ಭರ್ಜರಿ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ಪ್ರಧಾನಿಯಾದ ಬೆನ್ನಲ್ಲೇ ನರೇಂದ್ರ ಮೋದಿಯವರು ರೈತರ ವಿಚಾರವಾಗಿ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹಾಗಾದರೆ ಇದರ ಬಗ್ಗೆ ವಿವರವಾಗಿ ತಿಳಿಯಲು ಲೇಖನೆಯನ್ನು ಪೂರ್ತಿಯಾಗಿ ಓದಿ.
ಕಿಸಾನ್ ಸಮ್ಮಾನ್ನಿಧಿಯ 17ನೇ ಕಂತಿನ ಹಣ ಬಿಡುಗಡೆ
ಸ್ನೇಹಿತರೆ ಪ್ರಮಾಣವಚನವನ್ನು ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ನಿಧಿಯ 17ನೇ ಕಂತಿನ ಹಣವನ್ನು ಎಲ್ಲಾ ರೈತರು ಇದು ಬಿಡುಗಡೆ ಮಾಡಲು ಪ್ರಧಾನಿ ನರೇಂದ್ರ ಮೋದಿಯವರು ನಿರ್ಧರಿಸಿದ್ದಾರೆ. ಇದರಿಂದ ನರೇಂದ್ರ ಮೋದಿಯವರು ತಮ್ಮ ಮೊದಲ ಕಡತಕ್ಕೆ ಸಹಿಯನ್ನು ಹಾಕಿದ್ದಾರೆ.
ಮೋದಿ ಅವರ ಈ ನಿರ್ಧಾರದಿಂದ ಸುಮಾರು ಭಾರತದ 9.3 ಕೋಟಿ ರೈತರಿಗೆ ಅನುಕೂಲವಾಗಲಿದೆ. ಆಗು ಅಂದಾಜು 20,000 ಕೋಟಿ ರೂಪಾಯಿ ಅನುದಾನ ರೈತರ ಕಲ್ಯಾಣಕ್ಕೆ ಉಪಯೋಗವಾಗಲಿದೆ.
ಭಾರತದ ರೈತರ ಕಲ್ಯಾಣದ ಬಗ್ಗೆ ಪ್ರಧಾನಿ ಮೋದಿಯವರು ಹೇಳಿದ್ದೇನು:
ಕಡತಕ್ಕೆ (file) ಸೈನ್ ಹಾಕಿದ ನಂತರ ಮಾತಾಡಿದ ಮೋದಿಯವರು ಒಂದು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ರೈತರ ಕಲ್ಯಾಣಕ್ಕೆ ನಾನು ಬದ್ಧನಾಗಿದ್ದೇನೆ. ಹಾಗೂ ಇದಕ್ಕೆ ಸಾಧ್ಯವಾದಷ್ಟು ಕೆಲಸವನ್ನು ನಾನು ಮಾಡುತ್ತೇನೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ನಿರಂತರವಾಗಿ ಕೆಲಸವನ್ನು ಮಾಡುತ್ತಿದೆ. ಹಾಗೂ ಇದನ್ನು ಮುಂದುವರೆದಿಸಲಿದೆ ಎಂದು ಮೋದಿಯವರು ಭರವಸೆಯನ್ನು ನೀಡಿದರು.
ರೈತರಿಗೆ ವರ್ಷಕ್ಕೆ ಆರು ಸಾವಿರ ರೂಪಾಯಿ ಸಿಗುತ್ತದೆ
ಈ ಹಿಂದೆ ಫೆಬ್ರವರಿಯಲ್ಲಿ ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ದೇಶದ ಕೋಟ್ಯಾಂತರ ರೈತರಿಗೆ 16ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಸದ್ಯಕ್ಕೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ ವರ್ಷಕ್ಕೆ ಆರು ಸಾವಿರ ರೂಪಾಯಿಯಂತೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ತಲುಪುತ್ತದೆ.
ಈಗ ಮತ್ತೆ ಕೇಂದ್ರದಲ್ಲಿ ಮೋದಿಯವರ ಸರ್ಕಾರ ಆಡಳಿತಕ್ಕೆ ಬಂದಿದ್ದು ಈಗ ಕಿಸಾನ್ ಯೋಜನೆಯ 17ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಹಾಗೂ ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಕಡೆತಕ್ಕೆ ಸಹಿ ಹಾಕಿದ್ದಾರೆ.
ಹಾಗೂ ದೇಶದ 9.3 ಕೋಟಿ ರೈತರಿಗೆ ಹಣ ತಲುಪಲಿದ್ದು 20,000 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಇದೊಂದು ಬಹಳ ಸಂತೋಷದ ವಿಷಯವಾಗಿದ್ದು ನಿಮ್ಮ ರೈತ ಬಾಂಧವರಿಗೂ ಕೂಡ ಈ ವಿಷಯವನ್ನು ಶೇರ್ ಮಾಡಿ.
ಇದನ್ನೂ ಓದಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅರ್ಹತೆ!! ಇಂತಹ ಜನರು ಮಾತ್ರ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು