KCET Mock Allotment, Option Entry ಎಂದರೆ ಏನು? ಇದಕ್ಕೆ ಯಾವಾಗ ಸಮಯ ನೀಡಲಾಗುವುದು?

ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, KCET 2024 ಏಪ್ರಿಲ್ 18,19 2024 ರಂದು ನಡೆದಿತ್ತು. ಜೂನ್ 1, 2024 ರಂದು ಫಲಿತಾಂಶವನ್ನು ಪ್ರಕಟಿಸಲಾಗಿತ್ತು. ಮುಂದೆ ಏನು? ಎಂಬ ಪ್ರಶ್ನೆಗಳಿಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಹಾಗಾಗಿ ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ ಮಾಹಿತಿ ಉಪಯುಕ್ತವಾಗಿದೆ.

KCET ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೇ, ಮುಂದೆ ಏನು ಮಾಡಬೇಕು. KCET ಪರೀಕ್ಷೆಯ ದಾಖಲೆ ಪರಿಶೀಲನೆ ಗೆ ಡಾಕ್ಯುಮೆಂಟ್ ವೇರಿಫಿಕೇಷನ್ ಸ್ಲಿಪ್ ಎಂದು ನೀಡುತ್ತಾರೆ. ಈ ಡಾಕ್ಯುಮೆಂಟ್ ವೆರಿಫಿಕೇಷನ್ ಸ್ಲಿಪ್ ನಲ್ಲಿ secret key ಇರುತ್ತದೆ, ಇದರ ಮೂಲಕ ನೀವು KEA ನಡೆಸುವ counselling ನಲ್ಲಿ ಭಾಗವಹಿಸಬೇಕು.

kcet-mock-allotment-and-option-entry

ಆಪ್ಷನ್ ಎಂಟ್ರಿ ಎಂದರೆ ಏನು? Mock allotment ಅಂದರೆ ಏನು?

ಮೇಲೆ ತಿಳಿಸಿದ ಡಾಕ್ಯುಮೆಂಟ್ ವೇರಿಫಿಕೆಷನ್ ಸ್ಲಿಪ್ ಸಿಕ್ಕ ನಂತರ ಸೀಟ್ ಮ್ಯಾಟ್ರಿಕ್ ಅಂದರೆ ಯಾವ ಯಾವ ಕಾಲೇಜಿನಲ್ಲಿ ಎಷ್ಟು ಸೀಟ್ ಇದೇ ಎಂಬ ಪಟ್ಟಿ ನೀಡಲಾಗುವುದು. ಅದರ ನಂತರ ಆಪ್ಷನ್ ಎಂಟ್ರಿ ಅಂದರೆ ನಿಮ್ಮ ಆಯ್ಕೆಯ ಕಾಲೇಜಿನ ಹೆಸರು ಮತ್ತು ನೀವು ಯಾವ ಪದವಿ ಪಡೆಯಲು ಇಚ್ಚಿಸುತ್ತಿರ ಎಂಬ ಪಟ್ಟಿ ತಯಾರಿಸಿ, kea ವೆಬ್ಸೈಟ್ ನಲ್ಲಿ ನೀಡಬೇಕು.

ಆಪ್ಷನ್ ಎಂಟ್ರಿ ಮಾಡಿದ ನಂತರ Mock Allotment ಅಂದರೆ ನಿಮ್ಮ KCET Rank ಆದರದ ಮೇಲೆ ಹಾಗು ನಿಮ್ಮ ಕಾಲೇಜಿನ ಆಯ್ಕೆಯ ಮೇಲೆ ನಿಮಗೆ ಒಂದು ಕಾಲೇಜ್ allot ಮಾಡಲಾಗುವುದು. ಆದರೆ ಇದು Mock Allotment ಆಗಿರುವುದರಿಂದ ಆ ಕಾಲೇಜಿಗೆ ಹೋಗಿ Admission ಆಗುವಂತಿಲ್ಲ. ನೀವು ತಿಳಿಸಿರುವ ಕಾಲೇಜು ಹಾಗೂ ನಿಮ್ಮ rank ಪ್ರಕಾರ ಇಂತಹ ಕಾಲೇಜು ಸಿಗಬಹುದು ಎಂದು ತಿಳಿಸಲಾಗುವುದು.

Mock Allotment ನಂತರ ಏನು ಮಾಡಬೇಕು?

Mock allotment ಆದ ನಂತರ ನಿಮ್ಮ ಇಚ್ಛೆಯಂತೆ ಕಾಲೇಜು ಸಿಕ್ಕಿದ್ದರೆ ಅಥವಾ ನಿಮ್ಮ ಆಪ್ಷನ್ ಎಂಟ್ರಿ ಅಲ್ಲಿ ಬದಲಾವಣೆ ಕಾಲೇಜಿನ ಹೆಸರು ಸೇರಿಸಬಹುದು ಹಾಗು ಪದವಿಗಳನ್ನು ಸೇರಿಸಬಹುದು. ಹಾಗೆ ಬೇಡದೆ ಇರುವ ಕಾಲೇಜಿನ ಹೆಸರು ತೆಗೆಯಬಹುದು. ಕಾಲೇಜಿನ ಕ್ರಮವನ್ನೂ ಕೂಡ ಬದಲಿಸಬಹುದು.

ಮೊದಲನೇ, ಎರಡನೇ ಸುತ್ತಿನಲ್ಲಿ ನೀವು ಕಾಲೇಜುಗಳನ್ನು ಸೇರಿಸಲು ಸಾದ್ಯವಾಗುವುದಿಲ್ಲ. ಹಾಗೆ ಕಾಲೇಜನ್ನು ತೆಗೆಯಲು ಸಾದ್ಯವಾಗುವುದಿಲ್ಲ.

ಹಾಗಾಗಿ Mock allotment ನಲ್ಲಿ ಸರಿಯಾಗಿ ಪರಿಶೀಲಿಸಿ ಆಪ್ಷನ್ ಎಂಟ್ರಿ ಯನ್ನು ಮಾಡಬೇಕು. ಮೊದಲನೇ ಸುತ್ತು ಎರಡನೇ ಸುತ್ತಿನಲ್ಲಿ ಸಿಗುವ ಕಾಲೇಜು ನಿಮಗೆ ಒಪ್ಪಿಗೆ ಇದ್ದರೆ ಅಡ್ಮಿಷನ್ ಆಗಬಹುದು.

ಇದನ್ನೂ ಓದಿ: ಆಧಾರ್ ಕಾರ್ಡ್ ಇದ್ದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 10,000

Leave a Comment

error: Content is protected !!