ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಕರ್ನಾಟಕ ಜನರಿಗೆ ಕಾಂಗ್ರೆಸ್ ಸರ್ಕಾರವು ಬೆಲೆ ಏರಿಕೆಗಳ ಶಾಕ್ ಅನ್ನು ನೀಡುತ್ತಲೇ ಇದೆ. ಇಷ್ಟು ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಲಾಗಿತ್ತು ಈಗ ಹಾಲಿನ ದರವನ್ನು ಕೂಡ ಹೆಚ್ಚಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇದರ ಬಗ್ಗೆ KMF ಕೂಡ ಹೇಳಿಕೆಯನ್ನು ನೀಡಿದೆ.
ಹಾಗೂ ರೈತರಿಗೆ ಬರಬೇಕಾಗಿರುವ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡುವುದು ಬಗ್ಗೆ ಕಂದಾಯ ಇಲಾಖೆಯ ಒಂದು ತೀರ್ಮಾನವನ್ನು ಕೈಗೊಂಡಿದೆ.
ಈ ಎಲ್ಲಾ ವಿಚಾರಗಳ ಬಗ್ಗೆ ವಿವರವಾಗಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.
ಕಾಂಗ್ರೆಸ ಸರ್ಕಾರದಿಂದ ನಂದಿನಿ ಹಾಲಿನ ಬೆಲೆ ಏರಿಕೆ
ಗ್ಯಾರಂಟಿ ಯೋಚನೆಗಳನ್ನು ಕರ್ನಾಟಕದಲ್ಲಿ ನಡೆಸಿಕೊಂಡು ಹೋಗಲು ಕಾಂಗ್ರೆಸ್ ಸರ್ಕಾರವು ಬೇರೆ ಎಲ್ಲದರ ದರ ಏರಿಕೆ ಹಾಗೂ ಟ್ಯಾಕ್ಸ್ ಗಳ ಮೇಲೆ ಏರಿಕೆಯನ್ನು ಕರ್ನಾಟಕದಲ್ಲಿ ಮಾಡುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಆದ ನಂತರ ಈಗ ನಂದಿನಿ ಹಾಲಿನ ದರವನ್ನು ಕೂಡ ಹೆಚ್ಚಿಸಲು ಮುಂದಾಗಿದೆ.
ಬೆಲೆ ಏರಿಕೆ ಬಗ್ಗೆ KMF ಅವರು ಏನು ಹೇಳಿದ್ದಾರೆ:
ಬೆಲೆ ಏರಿಕೆಯ ಬಗ್ಗೆ KMF ನಾವು ಬೆಲೆ ಏರಿಕೆ ಮಾಡಿಲ್ಲ, ಹಾಲಿನ ಕ್ವಾಂಟಿಟಿಯನ್ನು ಹೆಚ್ಚಿಸುತ್ತಿದ್ದೇವೆ ಹಾಗೂ ಅದಕ್ಕೆ ಹಣವನ್ನು ಪಡೆಯುತ್ತಿದ್ದೇವೆ ಎಂದು ಹೇಳಿದೆ. ಆದರೆ ಸರ್ಕಾರದ ಕಡೆಯಿಂದ ಬೆಲೆ ಏರಿಕೆ ಮಾಡಲಾಗುತ್ತಿದೆ.
ನಂದಿನಿ ಹಾಲಿನ ಬೆಲೆ ಎರಡು ರೂಪಾಯಿ 10 ಪೈಸೆಯನ್ನು ಜಾಸ್ತಿ ಮಾಡಲಾಗಿದೆ. ಈ ಹಿಂದೆ ಒಂದು ಲೀಟರ್ಗೆ 42 ರೂಪಾಯಿ ಬೆಲೆ ಇತ್ತು ಆದರೆ ಈಗ ಒಂದು ಲೀಟರ್ ಗೆ 44 ರೂಪಾಯಿ ಆಗಿದೆ. ಆದರೆ ಒಂದು ಲೀಟರ್ ಹಾಲಿನ ಪ್ಯಾಕೆಟ್ ಅಲ್ಲಿ ಇನ್ನು ಮುಂದೆ 1000ml ಬರುವುದಿಲ್ಲ ಇದರ ಬದಲು 1050ml ಬರುತ್ತದೆ. ಆದರೆ ಈ 50ml ಹೆಚ್ಚಿಗೆ ನೀಡುವುದಕ್ಕೆ ಎರಡು ರೂಪಾಯಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
ಬರ ಪರಿಹಾರ ಹಣ ರೈತರಿಗೆ ಬಿಡುಗಡೆ
ಸ್ನೇಹಿತರೆ, ಕರ್ನಾಟಕದ 18 ಲಕ್ಷ ರೈತರಿಗೆ ಜೀವನೋಪಾಯ ನಷ್ಟ ಪರಿಹಾರ ಎಂದು ಕಂದಾಯ ಇಲಾಖೆಯು ಹಣವನ್ನು ಬಿಡುಗಡೆ ಮಾಡಲಿದೆ. ಕಳೆದ ವರ್ಷದ ಬರಗಾಲದಿಂದ ಸಾಕಷ್ಟು ಜನ ರೈತರಿಗೆ ಬೆಳೆ ನಷ್ಟ ಆಗಿದೆ. ಬೆಳೆ ನಷ್ಟ ಆಗಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಲು ಕಂದಾಯ ಇಲಾಖೆ ತೀರ್ಮಾನಿಸಿದೆ.
ಸೋಮವಾರ ನಡೆದಂತಹ ಪ್ರಗತಿ ಪರಿಶೀಲನೆ ಸಭೆಯಲ್ಲಿ ಇದನ್ನು ತೀರ್ಮಾನಿಸಲಾಗಿದೆ. ಸ್ನೇಹಿತರೆ ಇದರಿಂದ ಒಂದು ಕುಟುಂಬಕ್ಕೆ ಸುಮಾರು 2,800 ಇಂದ 3000 ರೂಪಾಯಿಯ ವರೆಗೆ ನೀಡಲಾಗುತ್ತದೆ. ಇನ್ನು ಒಂದು ವಾರದಲ್ಲಿ ಬರ ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಮಾಡುತ್ತಿವೆ ಎಂದು ಹೇಳುತ್ತಾರೆ.
ಇದನ್ನೂ ಓದಿ: ರೈತರಿಗೆ ರಾಜ್ಯ ಸರ್ಕಾರದಿಂದ ಉಚಿತ ಟ್ರ್ಯಾಕ್ಟರ್ ಗೆ ಸಹಾಯಧನ