Check New Ration Card Status: ಎಲ್ಲರಿಗೂ ನಮಸ್ಕಾರ, ರೇಷನ್ ಕಾರ್ಡ್ ಸ್ಥಿತಿ ಪರಿಶೀಲನೆ ಮಾಡುವುದು ಹೇಗೆ ಎಂದು ಬಹಳಷ್ಟು ಜನರು ಕೇಳುತ್ತಿದ್ದರು ಆದ್ದರಿಂದ ಈ ಲೇಖನದಲ್ಲಿ ನೀವು ಯಾವ ರೀತಿ ನಿಮ್ಮ ಪಡಿತರ ಚೀಟಿ ಸ್ಥಿತಿ ತಿಳಿದುಕೊಳ್ಳುವುದು ಎಂದು ತಿಳಿಸಿದ್ದೇವೆ ಬಹಳಷ್ಟು ಜನರು ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿಯನ್ನು ಸಲ್ಲಿಸಿದರು ಆದರೆ ಅವರಿಗೆ ಅದರ ಸ್ಥಿತಿ ಏನಾಗಿದೆ ಎಂದು ಸರಿಯಾಗಿ ತಿಳಿದಿಲ್ಲ.
ಆದ್ದರಿಂದ ನೀವು ಸುಲಭವಾಗಿ ಯಾವುದೇ ರೀತಿಯ ಕೇಂದ್ರಗಳಿಗೆ ಭೇಟಿ ಮಾಡದೆ ನಿಮ್ಮ ಮೊಬೈಲ್ ಬಳಸಿಕೊಂಡು ನಿಮ್ಮ ಹೊಸ Ration Card Status ಏನಾಗಿದೆ ಎಂದು ತಿಳಿದುಕೊಳ್ಳಬಹುದು ನಾವು ತೋರಿಸುವ ಈ ವಿಧಾನವನ್ನು ಬಳಸಿಕೊಂಡು ಸುಲಭವಾಗಿ ಪರಿಶೀಲನೆ ಮಾಡಿ.
Ration Card Application Status ನೋಡುವ ವಿಧಾನ
https://ahara.kar.nic.in/lpg/ – ಮೊದಲಿಗೆ ಇಲ್ಲಿ ಕಾಣುವ ಲಿಂಕ್ ಅನ್ನು ಕ್ಲಿಕ್ ಮಾಡಿ ನಂತರ ನಿಮಗೆ ಮತ್ತೊಂದು ಪೇಜ್ ಓಪನ್ ಆಗುತ್ತದೆ ಅಲ್ಲಿ ನೀವು ಯಾವ ಜಿಲ್ಲೆಗೆ ಸೇರುತ್ತೀರಾ ಆ ಜಿಲ್ಲೆಯ ಲಿಂಕ್ ಅಲ್ಲಿ ಇರುತ್ತದೆ ಅದನ್ನು ಕ್ಲಿಕ್ ಮಾಡಿ ನಂತರ ಮತ್ತೊಂದು ಪೇಜ್ ಓಪನ್ ಆಗುತ್ತದೆ ಈಗ ಇಲ್ಲಿ ನಿಮಗೆ ವಿವಿಧವಾದ ಕಾರ್ಯಗಳನ್ನು ಮಾಡಲು ಲಿಂಕನ್ನು ನೀಡಿದ್ದಾರೆ.
ಈಗ ಅಲ್ಲಿ ನೀವು ನೋಡಬಹುದು ಮೊದಲನೆಯ ಲಿಂಕ್ ಈ ಹೆಸರಿನಲ್ಲಿ ಇರುತ್ತದೆ ”ಹೊಸ ಪಡಿತರ ಚೀಟಿ ಸಲ್ಲಿಸಲಾದ ಅರ್ಜಿ ಸ್ಥಿತಿ” ಎಂಬ ಲಿಂಕ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ. ಈಗ ಇಲ್ಲಿ ನೀವು ಯಾವ ಜಾಗಕ್ಕೆ ಸೇರುತ್ತಿರ ಎಂದು ಆಯ್ಕೆ ಮಾಡಬೇಕು “Urban/Rural” ಇದರಲ್ಲಿ ನೀವು ಯಾವ ಭಾಗಕ್ಕೆ ಸೇರುತ್ತಿರ ಎಂದು ಸರಿಯಾಗಿ ಆಯ್ಕೆ ಮಾಡಿ ನಂತರ ನೀವು ಹೊಸ ಅರ್ಜಿಯನ್ನು ಸಲ್ಲಿಸುವಾಗ ನಿಮಗೆ ಒಂದು Acknowledgment Number ನೀಡಿರುತ್ತಾರೆ ಎಂದರೆ ಸ್ವೀಕೃತಿ ಸಂಖ್ಯೆ ಇದನ್ನು ನೀವು ಅಲ್ಲಿ ಹಾಕಬೇಕು.
Ration Card Application Status Active
ಈಗ ನೀವು ನಿಮ್ಮ ಸ್ವೀಕೃತಿ ಸಂಖ್ಯೆ ಹಾಕಿದ ನಂತರ ಮುಂದುವರಿಕೆ ಮಾಡಿದರೆ ನಿಮಗೆ ನಿಮ್ಮ ಹೊಸ ರೇಷನ್ ಕಾರ್ಡ್ ಅಪ್ಲಿಕೇಶನ್ ಸ್ಟೇಟಸ್ ಏನಾಗಿದೆ ಎಂದು ತೋರಿಸುತ್ತದೆ ನಿಮ್ಮ ಸ್ಟೇಟಸ್ ಆಕ್ಟಿವ್ ಇದ್ದರೆ ನಿಮ್ಮ ಹಾಗೆ ಹೊಸ ಪಡಿತರ ಚೀಟಿ ಸದ್ಯದಲ್ಲೇ ಪ್ರಿಂಟ್ ಆಗಿ ಸರ್ಕಾರದ ಕಡೆಯಿಂದ ಬರುತ್ತದೆ ಬೇರೆ ರೀತಿಯ ಸಮಸ್ಯೆ ಇದ್ದರೆ ನಿಮಗೆ ತೋರಿಸುತ್ತದೆ ಅದನ್ನು ನೀವು ಈ ಕೂಡಲೇ ಸರಿಪಡಿಸಿಕೊಳ್ಳಿ.
ಇಲ್ಲವಾದರೆ ನಿಮಗೆ ಹೊಸ ರೇಷನ್ ಕಾರ್ಡ್ ಸಿಗುವುದಿಲ್ಲ ಆದ್ದರಿಂದ ಈ ಸುಲಭವಾದ ವಿಧಾನವನ್ನು ಇಂದೇ ಮಾಡಿ ಹಾಗೂ ತಿಳಿದುಕೊಳ್ಳಿ ಇಲ್ಲವಾದರೆ ಮುಂದೆ ನಿಮಗೆ ಬಹಳ ತೊಂದರೆ ಆಗುತ್ತದೆ. ರೇಷನ್ ಕಾರ್ಡ್ ಇಂದ ಎಷ್ಟು ಸೌಲಭ್ಯಗಳು ಇದೆ ಎಂದು ನಿಮಗೆ ತಿಳಿದಿದೆ ಆದ್ದರಿಂದ ಈ ಸುಲಭವಾದ ವಿಧಾನದಿಂದ ಇಂದೇ ಪರಿಶೀಲನೆ ಮಾಡಿ.
ಇದನ್ನೂ ಓದಿ: HSRP Date Extended: ಈ ದಿನದೊಳಗೆ ಎಲ್ಲಾ ಗಾಡಿಗಳು, HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು