ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, ಕರ್ನಾಟಕ ರಾಜ್ಯದ ಪೋಸ್ಟ್ ಮೆಟ್ರಿಕ್ ಅಂದರೆ 10 ನೇ ತರಗತಿಯ ನಂತರದ ಎಲ್ಲಾ ವಿಧ್ಯಾಭ್ಯಾಸಕ್ಕೆ ಪೋಸ್ಟ್ ಮೆಟ್ರಿಕ್ ಎಂದು ಕರೆಯಲಾಗುವುದು. ಕರ್ನಾಟಕ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್ ಗೆ ಅರ್ಜಿ ಸಲ್ಲಿಸುವುದು ಹೇಗೆ? ಏನು ಏನು ಅರ್ಹತೆ ಇರಬೇಕು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಇದರ ಕುರಿತು ಪೂರ್ಣ ಮಾಹಿತಿಯನ್ನು ಇಂದಿನ ನಮ್ಮ ಈ ಲೇಖನದಲ್ಲಿ ತಿಳಿಯೋಣ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ. ಮಾಹಿತಿ ಉಪಯುಕ್ತವಾಗಿದೆ. ಇದು SC ST ವರ್ಗ 1, 2A, 2B ವರ್ಗಕ್ಕೆ ಸೇರಿದ ವಿಧ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಹಾಗಾಗೀ ಲೇಖನವನ್ನು ಸಂಪೂರ್ಣವಾಗಿ ಓದಿ.
Karnataka Post Matric Hostel ಅರ್ಜಿ ಹೇಗೆ ಸಲ್ಲಿಸುವುದು? ಯಾರು ಅರ್ಹರು?
ಕರ್ನಾಟಕ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್ 2024 ರ ಸಾಲಿನ ಹತ್ತನೇ ತರಗತಿ ನಂತರ ಮಾಡುವ ಎಲ್ಲಾ ವಿಧ್ಯಾಭ್ಯಾಸಕ್ಕೆ ಹಾಸ್ಟೆಲ್ ನಲ್ಲಿ ನಿಮಗೆ ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಸಲು ಪ್ರಾರಂಭವಾಗಿದ್ದು, 28 ಜೂನ್ 2024 ರಿಂದ ಅರ್ಜಿ ಸಲ್ಲಿಸಲು ಶುರು ವಾಗಿದೆ. ಈ ಹಾಸ್ಟೆಲ್ ಗೆ ಅಡ್ಮಿಷನ್ ಪಡೆಯಲು SC ST ವರ್ಗದವರು ಅರ್ಹರು.
SC ST ಜೊತೆಗೆ ವರ್ಗ 1, 2A, 2B, 3A ,3B ವರ್ಗಕ್ಕೆ ಒಳಪಡುವ ಎಲ್ಲಾ ವಿಧ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ಅಡ್ಮಿಷನ್ ಪಡೆಯಲು ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ ಯಾವುದು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20 ಜುಲೈ 2024 ಕೊನೆಯ ದಿನಾಂಕ ವಾಗಿದೆ. ಅರ್ಜಿಯನ್ನು ಆನ್ಲೈನ್ ಮೂಲಕ shp.Karnataka.gov.in ವೆಬ್ಸೈಟ್ ನಲ್ಲಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಇರುವ criteria ಏನು? ಅಡ್ಮಿಷನ್ ಕುರಿತು ಯಾವ ದಿನಾಂಕ ಕೊನೆಯಾದಾಗಿದೆ?
ಅರ್ಜಿ ಸಲ್ಲಿಸುವ ವಿಧ್ಯಾರ್ಥಿಗಳ ಆದಾಯದ ಮಿತಿ ಎಷ್ಟು ಇರಬೇಕು. ಪವರ್ಗ 1, SC ST ವರ್ಗಕ್ಕೆ ಸೇರಿದವರ ಕುಟುಂಬದ ವಾರ್ಷಿಕ ಆದಾಯ 2 ಲಕ್ಷ 50 ಸಾವಿರ ರೂ. ಅಥವಾ ಅದಕ್ಕಿಂತ ಕಮ್ಮಿ ಇರಬೇಕು.
ಹಾಗೆ ಉಳಿದ ಎಲ್ಲ ವರ್ಗ ಅಂದರೆ 2A, 2B, 3A, 3B ವರ್ಗಕ್ಕೆ ಸೇರಿದವರ ಕುಟುಂಬದ ವಾರ್ಷಿಕ ಆದಾಯ ಒಂದು ಲಕ್ಷ ಅಥವಾ ಅದಕ್ಕಿಂತ ಕಮ್ಮಿ ಇರಬೇಕು.
ಹಾಗೆ ಜುಲೈ 29,2024 ರಂದು ಹಾಸ್ಟೆಲ್ ಗೆ ಸೆಲೆಕ್ಟ್ ಆಗಿರುವ ವಿಧ್ಯಾರ್ಥಿಗಳ ಪಟ್ಟಿಯನ್ನು ನೀಡಲಾಗುವುದು. ಪಟ್ಟಿ ನೀಡಿದ ನಂತರ ವಿಧ್ಯಾರ್ಥಿಗಳು ಹಾಸ್ಟೆಲ್ ಗೆ ಅಡ್ಮಿಷನ್ ಮಾಡಿಸಬಹುದು. ಅಡ್ಮಿಷನ್ ಮಾಡಿಸಲು ಕೊನೆಯ ದಿನಾಂಕ ತಿಳಿಸಲಾಗಿದೆ. 31 ಜುಲೈ 2024 ಕೊನೆಯ ದಿನಾಂಕ ವಾಗಿದೆ. ಅರ್ಹ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.
ಇದನ್ನೂ ಓದಿ: KCET 2024 ಡಾಕ್ಯುಮೆಂಟ್ ವೇರಿಫಿಕೇಶನ್ ಚೀಟಿ ಅಥವಾ ಅದರ ಸ್ಟೇಟಸ್ ಹೇಗೆ ಚೆಕ್ ಮಾಡುವುದು!!