ಎಲ್ಲರಿಗೂ ನಮಸ್ಕಾರ, ಬಹಳಷ್ಟು ಜನರು ಆಧಾರ್ ಕಾರ್ಡ್ ಅಡ್ರಸ್ ಚೇಂಜ್ ಮಾಡುವುದು ಹೇಗೆ ಎಂದು ಕೇಳುತ್ತಿದ್ದರು ಅಂತವರಿಗೆ ಈ ಲೇಖನದಲ್ಲಿ ಸುಲಭವಾಗಿ ನಿಮ್ಮ ಮೊಬೈಲ್ ಫೋನಿನಲ್ಲಿ ಹೇಗೆ ಆಧಾರ್ ಕಾರ್ಡ್ ನ ಅಡ್ರೆಸ್ ಬದಲಾವಣೆ ಮಾಡಬಹುದು ಎಂದು ತಿಳಿಸಿಕೊಡುತ್ತೇವೆ.
ಹಾಗೆಯೇ ನಿಮಗೆ ಮೊಬೈಲ್ ಫೋನಿನಲ್ಲಿ ಸುಲಭವಾಗಿ Aadhaar Card ಅಡ್ರೆಸ್ ಚೇಂಜ್ ಮಾಡುವುದು ತಿಳಿದಿಲ್ಲ ಅಂದರೆ ಹತ್ತಿರದ ಸೈಬರ್ ಸೆಂಟರ್ಗಳಿಗೆ ಭೇಟಿ ನೀಡಿ ಯಾಕೆಂದರೆ ನೀವು ಒಂದು ಸಣ್ಣ ತಪ್ಪು ಮಾಡಿದರು ನಿಮ್ಮ ಆಧಾರ್ ಕಾರ್ಡ್ ನಲ್ಲಿ ಅದು ಬದಲಾವಣೆಯಾಗುತ್ತದೆ ಆದ್ದರಿಂದ ಎಚ್ಚರ
Aadhaar Card ಅಡ್ರಸ್ ಚೇಂಜ್ ಮಾಡುವ ವಿಧಾನ
myaadhaar.uidai.gov.in – ಮೊದಲಿಗೆ ಇಲ್ಲಿ ಕಾಣುವ ಲಿಂಕನ್ನು ಕ್ಲಿಕ್ ಮಾಡಿ ನಂತರ ಲಾಗಿನ್ ಪೇಜ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿದರೆ ನೀವು ಯಾವ ಆಧಾರ್ ಕಾರ್ಡ್ ನ ಅಡ್ರೆಸ್ ಚೇಂಜ್ ಮಾಡಬೇಕು ಅದರ ನಂಬರನ್ನು ಅಲ್ಲಿ ಹಾಕಿ Captcha ಸರಿಯಾಗಿ ಎಂಟ್ರಿ ಮಾಡಿ ನಂತರ ನಿಮಗೆ ಒಂದು ಓಟಿಪಿ ಬರುತ್ತದೆ ಅದನ್ನು ಅಲ್ಲಿ ಹಾಕಿ ಮುಂದುವರಿಸಿ. ಈಗ ನಿಮಗೆ ಮತ್ತೊಂದು ಪೇಜ್ ಓಪನ್ ಆಗುತ್ತದೆ.
ಇಲ್ಲಿ ಕಾಣುವ ಭಾವಚಿತ್ರ ಏನಿದೆ, ಅದೇ ರೀತಿಯಲ್ಲಿ ಒಂದು ಆಪ್ಷನ್ ಇರುತ್ತದೆ “Address Update” ಎಂದು ಇರುತ್ತದೆ ಅದನ್ನು ಕ್ಲಿಕ್ ಮಾಡಿ ನಂತರ ಮತ್ತೊಂದು ಪೇಜ್ ಓಪನ್ ಆಗುತ್ತದೆ ಇಲ್ಲಿ ನಿಮಗೆ ಎರಡು ವಿವಿಧ ಆಪ್ಶನ್ ಕಾಣುತ್ತದೆ.
- Update Aadhaar Online
- Head Of Family Based Address Update
ನೀವು ಒಬ್ಬ ವ್ಯಕ್ತಿ ಅಡ್ರೆಸ್ ಚೇಂಜ್ ಮಾಡಬೇಕು ಅಂದರೆ ಮೊದಲನೆಯ ಆಪ್ಷನ್ ಅನ್ನು ಕ್ಲಿಕ್ ಮಾಡಿ “Update Aadhaar Online”
ಈಗ ನಿಮಗೆ ಅಲ್ಲಿ ಕೆಲವೊಂದು ಇನ್ಸ್ಪೆಕ್ಷನ್ ಗಳು ನೀಡಲಾಗಿರುತ್ತದೆ ಅದನ್ನು ಮೊದಲು ಓದಿ ನಂತರ ನೀವು ಮುಂದುವರೆಯಿಸಬಹುದು.
ಆಧಾರ್ ಕಾರ್ಡ್ ಅಡ್ರಸ್ ಚೇಂಜ್ ಮಾಡುವ ಕಾರ್ಯ ಹೇಗೆ ಇರುತ್ತದೆ
ನೀವು ಮೊದಲನೇ ಆಪ್ಷನ್ ಕ್ಲಿಕ್ ಮಾಡಿದ ನಂತರ ಮತ್ತೊಂದು ಪೇಜ್ ಓಪನ್ ಆಗುತ್ತದೆ ಅಲ್ಲಿ ನೀವು ನಿಮ್ಮ ಅಡ್ರೆಸ್ ಅನ್ನು ಬದಲಾವಣೆ ಮಾಡಬಹುದು ಮೊದಲಿಗೆ ಯಾವ ಅಡ್ರೆಸ್ ಬದಲಾಯಿಸಬೇಕು ಎಂಬುದನ್ನು ಆಯ್ಕೆ ಮಾಡಿ ಆ ಜಾಗದಲ್ಲಿ ನಿಮ್ಮ ಹೊಸ ಅಡ್ರೆಸ್ ಅನ್ನು ಹಾಕಬೇಕಾಗುತ್ತದೆ .ಬಹಳ ಎಚ್ಚರಿಕೆಯಿಂದ ಇದನ್ನು ನೀವು ಮಾಡಬೇಕು ತಪ್ಪು ಮಾಡಿದರೆ ಆಧಾರ್ ಕಾರ್ಡಿನಲ್ಲಿ ಅದೇ ಅಡ್ರೆಸ್ ಬರುತ್ತದೆ.
ಅಡ್ರೆಸ್ ಅನ್ನು ಸರಿಯಾಗಿ ಹಾಕಿದ ನಂತರ ಮುಂದುವರಿಸಬಹುದು ಈಗ ನೀವು ಅಲ್ಲಿ 50Rs ಫೀಸನ್ನು ಕಟ್ಟಬೇಕಾಗುತ್ತದೆ ಇದನ್ನು ನೀವು ಆನ್ಲೈನ್ ಮೂಲಕ ಪಾವತಿಸಬಹುದು.
ಅಮೌಂಟನ್ನು ಪಾವತಿಸಿದ ನಂತರ ನಿಮಗೆ ಒಂದು Enrolment ID ಜನರೇಟ್ ಆಗುತ್ತದೆ ಅದು ನಿಮ್ಮ ಮೊಬೈಲ್ ಫೋನಿಗೆ ಎಸ್ಎಂಎಸ್ ಮೂಲಕ ಬರುತ್ತದೆ. ಇದಾದ ನಂತರ ಕೆಲವು ಸಮಯ ತೆಗೆದುಕೊಳ್ಳುತ್ತದೆ ಕಾರ್ಯಪೂರ್ತಿ ಆಗಲು, ನಂತರ ನಿಮ್ಮ ಮೊಬೈಲಿಗೆ ಒಂದು ಮೆಸೇಜ್ ಬರುತ್ತದೆ ಪೂರ್ತಿ ಕಾರ್ಯ ಮುಗಿದ ನಂತರ.
ಅಡ್ರೆಸ್ ಚೇಂಜ್ ಆಗಲು ಎಷ್ಟು ದಿನ ತೆಗೆದುಕೊಳ್ಳುತ್ತದೆ
ಸರ್ಕಾರ ಮಾಹಿತಿ ತಿಳಿದಿರ ಪ್ರಕಾರ 30 ದಿನಗಳ ಕಾಲ ಅವಕಾಶ ತೆಗೆದುಕೊಳ್ಳುತ್ತದೆ ನಿಮ್ಮ ಆಧಾರ್ ಕಾರ್ಡಿನಲ್ಲಿ ಅಡ್ರೆಸ್ ಬದಲಾವಣೆಯಾಗಲಿ ಆದರೆ ಸರ್ಕಾರ ಏನೆಂದು ತಿಳಿದಿದೆ ಅಂದರೆ ಈ ಸಮಯದ ಒಳಗೆ ನಿಮ್ಮ ಆಧಾರ್ ಕಾರ್ಡಿನಲ್ಲಿ ಅಡ್ರೆಸ್ ಬದಲಾವಣೆ ಆಗುತ್ತದೆ ಎಂದು ತಿಳಿಸಿದ್ದಾರೆ.
ಈ ರೀತಿಯ ಸುಲಭವಾದ ವಿಧಾನವನ್ನು ಬಳಸಿಕೊಂಡು ನಿಮ್ಮ ಆಧಾರ್ ಕಾರ್ಡಿನಲ್ಲಿ Address ಬದಲಾವಣೆ ಮಾಡಬಹುದು ನಿಮಗೆ ಈ ವಿಧಾನ ಸುಲಭವಾಗಿ ಮಾಡಲು ಆಗಿಲ್ಲ ಅಂದರೆ ಹತ್ತಿರದ ಆಧಾರ್ ಕೇಂದ್ರ ಗಳಿಗೆ ಭೇಟಿ ನೀಡಿ ಅವರು ನಿಮಗೆ ಅಡ್ರೆಸ್ ಚೇಂಜ್ ಮಾಡಿಕೊಳ್ಳುತ್ತಾರೆ.
ಇದನ್ನೂ ಓದಿ: KCET 2024 Option Entry: ಯಾವ ದಾಖಲೆಗಳ ಅವಶ್ಯವಿದೆ?ಈ ದಿನದಿಂದ ಆಪ್ಶನ್ ಎಂಟ್ರಿ ಪ್ರಾರಂಭ!!