ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, ಗೃಹ ಲಕ್ಷ್ಮಿ ಯೋಜನೆಯ ಪ್ರತಿ ಕಂತಿನ ಹಣ ಇನ್ನು ಯಾರಿಗೆ ಬಂದಿಲ್ಲ. ಯಾಕೆ ಬಂದಿಲ್ಲ ಯಾವಾಗ ಬರುವುದು? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳ ಮಳೆಗೆ ಉತ್ತರ ಇಂದಿನ ನಮ್ಮ ಲೇಖನದಲ್ಲಿ ತಿಳಿಸುತ್ತೇವೆ. ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ.
ಮಾಹಿತಿ ತುಂಬಾ ಅವಶ್ಯವಾಗಿದೆ ಹಾಗು ಉಪಯುಕ್ತವಾಗಿದೆ. ಹೌದು ಸ್ನೇಹಿತರೇ, ಈಗಾಗಲೇ ಗೃಹ ಲಕ್ಷ್ಮಿ ಯೋಜನೆಯ 10 ಕಂತಿನ ಹಣ ಪ್ರತಿಯೊಬ್ಬ ಫಲಾನುಭವಿಗೆ ತಲುಪಿದೆ. ಲೋಕ ಸಭಾ ಚುನಾವಣೆಯ ಸಮಯದಲ್ಲಿ ಎರಡು ತಿಂಗಳ ಒಟ್ಟಿಗೆ ಚುನಾವಣೆಗೂ ಮುನ್ನ ಜಮಾ ಮಾಡಿದ್ದರು.
ಗೃಹಲಕ್ಷ್ಮಿ ಯೋಜನೆ ಹಣ ಎಲ್ಲಾ ಫಲಾನುಭವಿಗಳಿಗೆ ತಲುಪಿದೆಯಾ
ಕಾಂಗ್ರೆಸ್ ಸರ್ಕಾರ ಬಂದು ಕಳೆದ ಹತ್ತು ತಿಂಗಳಿಂದ ಮನೆಯ ಒಡತಿಗೆ ಗೃಹಲಕ್ಷ್ಮಿ ಯೋಜನೆಯ ಮೂಲಕ ಫಲಾನುಭವಿಗಳಿಗೆ ತಿಂಗಳಿಗೆ 2,000/- ಗಳ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಲೋಕ ಸಭಾ ಚುನಾವಣೆಯ ಮೊದಲು ಎರಡು ಕಂತಿನ ಹಣವನ್ನು ಒಟ್ಟಿಗೆ ಬೇಗ ಜಮಾ ಮಾಡಲಾಗಿತ್ತು.
ಹಾಗೆ ಲೋಕ ಸಭಾ ಚುನಾವಣೆಯ ಮೊದಲು ಏಪ್ರಿಲ್ ಮತ್ತು ಮೇ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸರ್ಕಾರ ಒಂದು ತಿಂಗಳ ಮುಂಚಿತವಾಗಿ ಬಿಡುಗಡೆ ಮಾಡಿತ್ತು. ಆದರೆ ಈಗ ಜೂನ್ ಮುಗಿದು, ಜುಲೈ ತಿಂಗಳು ಬಂದಿದ್ದರು, ಜೂನ್ ತಿಂಗಳ ಹಣ ಇನ್ನು ಯಾರಿಗೂ ಜಮಾ ಆಗಿಲ್ಲ.
ಒಟ್ಟು ಎಷ್ಟು ಕುಟುಂಬ ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆದಿದೆ
ಈಗಾಗಲೇ ಹಲವಾರು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರು ಗೃಹಲಕ್ಷ್ಮಿ ಯೋಜನೆಯ ಹಣದ ಫಲ ಪಡೆದಿದ್ದಾರೆ. ಒಟ್ಟು 1 ಕೋಟಿ 20 ಲಕ್ಷ ಕುಟುಂಬ 10 ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನೂ ಪಡೆದಿದೆ. ಪ್ರತಿ ತಿಂಗಳು 2000-/ ರೂ.ಗಳ ಹಣವನ್ನು ಫಲಾನುಭವಿಗಳಿಗೆ ನೀಡಲಾಗುತ್ತಿತ್ತು.
ಒಟ್ಟಾರೆ ಒಂದು ತಿಂಗಳಿಗೆ ಎರಡು ಸಾವಿರದ ಮುನ್ನೂರು ಕೋಟಿ ರೂಪಾಯಿ ಹಣವನ್ನು ಈ ಯೋಜನೆಯಡಿಯಲ್ಲಿ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಈಗ ಎಲ್ಲಾ ಫಲಾನುಭವಿಗಳಿಗೆ ಕಾಡುತ್ತಿರುವ ಪ್ರಶ್ನೆ ಇನ್ನು ಜೂನ್ ತಿಂಗಳ ಹಣ ಬಂದಿಲ್ಲ ಯಾಕೆ? ಲೋಕ ಸಭಾ ಚುನಾವಣೆಯ ಫಲಿತಾಂಶದಿಂದ ಯೋಜನೆ ಸಿಗುವುದಿಲ್ಲವ?.
ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಬರುವುದು ಯಾವಾಗ?
ಸದ್ಯಕ್ಕೆ ಹೇಳುವುದಾದರೆ ಜೂನ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದು ಇನ್ನು ತಡವಾಗುವುದು. ಜುಲೈ ತಿಂಗಳ ಕೊನೆಯಲ್ಲಿ ಅಥವಾ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬರುವ ಸಾಧ್ಯತೆ ಇದೆ. ಯಾಕೆಂದರೆ ಮೊದಲು ಅಂದರೆ ಲೋಕ ಸಭಾ ಚುನಾವಣೆಯ ಮುನ್ನ ಸರ್ಕಾರ ಮೂರು ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡುತಿತ್ತು.
ಮೂರು ತಿಂಗಳ ಹಣವನ್ನು ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಗೆ ಗೃಹ ಲಕ್ಷ್ಮಿ ಯೋಜನೆಯ ಅನುದಾನ ವನ್ನೂ ಬಿಡುಗಡೆ ಮಾಡುತಿತ್ತು. ಈಗ ಗೃಹ ಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡಿದರು ಡಿಬಿಟಿ ಮೂಲಕ ಹಣ ರವಾನೆ ಆಗಲು 15 ರಿಂದ 20 ದಿನಗಳ ಸಮಯ ಬೇಕು.
GRUHALAKSHMI MONEY: ಎರಡು ತಿಂಗಳಿನಿಂದ ಫಲಾನುಭವಿಗಳಿಗೆ ಹಣ ಇಲ್ಲ!! ಸರ್ಕಾರ ನೀಡಿದ ಮಾಹಿತಿ ಇದೆ
ಜೂನ್ ತಿಂಗಳ ಹಣ ಯಾವಾಗ ಜಮಾ ಆಗುವುದು:
ಜೂನ್ ತಿಂಗಳ ಹಣ ಜಮಾ ಯಾವಗ ಮಾಡಲಾಗುವುದು ಎಂದು ತಿಳಿಯುವುದಾದಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ತಿಳಿಸಿರುವ ಮಾಹಿತಿಯ ಪ್ರಕಾರ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು. ಅವರು ಅನುದಾನ ಬಿಡುಗಡೆ ಮಾಡಿದ ನಂತರ ಹಣ ಜಮಾ ಮಾಡಲಾಗುವುದು.
ಸರ್ಕಾರ ಅನುದಾನ ಬಿಡುಗಡೆ ಮಾಡಿದ ನಂತರ ಕೆಲವು ದಿನಗಳಲ್ಲಿ ಅಂದರೆ 15 ದಿನದೊಳಗೆ ಗೃಹಲಕ್ಷ್ಮಿ ಯೋಜನೆಯ ಜೂನ್ ತಿಂಗಳ ಹಣವನ್ನು ಫಲಾನುಭವಿಗಳಿಗೆ ಜಮಾ ಮಾಡಲಾಗುವುದು. ಈಗ ಸರ್ಕಾರ ಹಣ ಬಿಡುಗಡೆ ಮಾಡಿದರೆ ಜುಲೈ ತಿಂಗಳ ಕೊನೆಯಲ್ಲಿ ಅಥವಾ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ
ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳಿಗೆ ಹಣ ಜಮಾ ಆಗಿದೆಯಾ
ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಒಟ್ಟು 1 ಕೋಟಿ 23 ಲಕ್ಷ ಜನರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವವರು ಇದ್ದಾರೆ. ಈಗ ಕಳೆದ ಹತ್ತು ತಿಂಗಳಿಂದ 1 ಕೋಟಿ 20 ಲಕ್ಷ ಫಲಾನುಭವಿಗಳಿಗೆ ಹಣ ಜಮಾ ಆಗಿದೆ. ಇನ್ನ ಉಳಿದ 3 ಲಕ್ಷ ಜನ ಫಲಾನುಭವಿಗಳಿಗೆ ಹಣ ಜಮಾ ಆಗಿಲ್ಲ.
ನಮಗೆ ಇನ್ನು ಹಣ ಜಮಾ ಆಗಿಲ್ಲ ಎನ್ನುವವರಿಗೆ ಕಾರಣ ಇಷ್ಟೇ! ನಿಮ್ಮ ಆಧಾರ್ ಕಾರ್ಡ್ ಹಾಗು ರೇಷನ್ ಕಾರ್ಡ್ ನಲ್ಲಿ ಇರುವ ಮಾಹಿತಿಗಳ ಹೊಂದಿಲ್ಲ ಅಥವಾ ಬ್ಯಾಂಕ್ ಹಾಗು ನೀವು ಅರ್ಜಿ ಸಲ್ಲಿಸುವಾಗ ನೀಡಿರುವ ಮಾಹಿತಿ ಹೊಂದಾಣಿಕೆ ಇರುವುದಿಲ್ಲ. ಅಥವಾ ನೀವು EKYC ಮಾಡಿಸಿಲ್ಲ ಎಂದಲ್ಲಿ ಹಣ ಜಮಾ ಆಗಿರುವುದಿಲ್ಲ.