KCET 2025 ಲಾಂಗ್ ಟರ್ಮ್ ತೆಗೆದುಕೊಳ್ಳಬೇಕು ಎಂದು ಅಂದುಕೊಂಡಿದ್ದೀರಾ? KCET ಗೆ ಲಾಂಗ್ ಟರ್ಮ್ ಅವಶ್ಯ ಇದೆಯಾ!!

ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, KCET 2025 ರ ಪರೀಕ್ಷೆಗೆ ಲಾಂಗ್ ಟರ್ಮ್ ತೆಗೆದುಕೊಳ್ಳಬೇಕು ಎಂದು ಇರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಲಾಂಗ್ ಟರ್ಮ್ ನ ಅವಶ್ಯಕತೆ ಇದೆಯಾ? ಮತ್ತು ನಿಮ್ಮ ಇತರ ಪ್ರಶ್ನೆಗಳಿಗೆ ಇಂದಿನ ಲೇಖನದಲ್ಲಿ ಉತ್ತರ ತಿಳಿಸುತ್ತೇವೆ!

ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ ಮಾಹಿತಿ ಉಪಯುಕ್ತವಾಗಿದೆ. ಈಗ long term ಎಂದರೆ ಏನು ? ಯಾವ ಯಾವ ವಿಧ್ಯಾರ್ಥಿಗಳು ನಮಗೆ ಒಳ್ಳೆಯ ರಾಂಕ್ ಬಂದಿಲ್ಲ, ನಮಗೆ ಎಂಜಿನಿಯರಿಂಗ್ ಮತ್ತು ಇತರ ಪದವಿ ಪಡೆಯಲು ಬೇಕಾದ ಅಂಕ ಬಂದಿಲ್ಲ, ಹಾಗಾಗಿ ಮುಂದಿನ ವರ್ಷ ಮತ್ತೆ KCET ಬರೆದು ನಮಗೆ ಬೇಕಾದಾಗ ಸೀಟ್ ಗಳಿಸುವುದು.

KCET 2025 ರ ಪರೀಕ್ಷೆಗೆ ತಯಾರಿ ಹೇಗೆ ನಡೆಸಬೇಕು?

ಈಗ ನೀವು ಲಾಂಗ್ ಟರ್ಮ್ ತೆಗೆದುಕೊಳ್ಳಬೇಕು ಎಂದು ತೀರ್ಮಾನ ಮಾಡಿದ್ದಲ್ಲಿ, ನಿಮ್ಮ ಮುಂದಿನ ವರ್ಷದ ಪರೀಕ್ಷೆಗೆ ಅತಿ ಹೆಚ್ಚು ಅಂಕ ಪಡೆಯುವಲ್ಲಿ ನಿಮ್ಮ ಗಮನ ವಹಿಸಬೇಕು. ಮೊದಲಿಗೆ ಈಗಲೇ ನಿನ್ನ ಮುಂದಿನ ವರ್ಷದ ಪರೀಕ್ಷೆಗೆ ತಯಾರಿ ನಡೆಸಬೇಕು. ಇನ್ನು ಸಮಯ ಇದೇ ಎಂದು ಸಮಯ ಕಳೆಯಬಾರದು.

Long Term ನಿಂದಾ ಕಷ್ಟ ಏನು ಆಗುವುದು:

ನಿಮಗೆ ಅವಶ್ಯವಿದ್ದರೆ ಆನ್ಲೈನ್ ಮೂಲಕ ಕೋಚಿಂಗ್ ಗೆ ಸೇರಬಹುದು. ಅಥವಾ ಆಫ್ಲೈನ್ ನಲ್ಲಿ ನಿಮಗೆ ಹತ್ತಿರವಿರುವ ಯಾವುದೇ ಕೋಚಿಂಗ್ ಸೆಂಟರ್ ನಲ್ಲಿ ಸೇರಿ ನಿಮ್ಮ ಮುಂದಿನ ವರ್ಷದ KCET ಗೆ ತಯಾರಿ ನಡೆಸಬೇಕು. ಅಥವಾ ನಮಗೆ ಅಷ್ಟು ಹಣ ಕೊಟ್ಟು ಸೇರಲು ಕಷ್ಟ ಆಗುವುದು ಎಂದರೆ ನೀವೇ ಸೆಲ್ಫ್ ಸ್ಟಡಿ ಶುರು ಮಾಡಬೇಕು. ಹಾಗೆ ಯು- ಟ್ಯೂಬ್ ಗಳಲ್ಲಿ ವಿಡಿಯೋ ನೋಡಿ ಕಲಿಯಬೇಕು.

ಹಾಗೆ ಮುಂದಿನ ವರ್ಷದಲ್ಲಿ ನಮ್ಮ ದ್ವಿತೀಯ ಪಿಯುಸಿ ಅಂಕ ಪರಿಗಣಿಸಲಾಗುವುದಾ ? ಇಲ್ಲವಾ? ಎಂಬ ಪ್ರಶ್ನೆ ಇದ್ದಲ್ಲಿ, ಹೇಗೆ ಈ ವರ್ಷ ನಿಮ್ಮ 50% ರಷ್ಟು KCET ಅಂಕ ಉಳಿದ 50% ದ್ವಿತೀಯ ಪಿಯುಸಿ ಅಂಕ ಪರಿಗಣಿಸಲಾಗಿತ್ತು, ಅಡೆ ರೀತಿ ಮುಂದಿನ ವರ್ಷ ಕೂಡ ನಿಮ್ಮ ದ್ವಿತೀಯ ಪಿಯುಸಿ ಅಂಕ ಹಾಗು KCET ಎರಡು ಪರಿಗಣಿಸಲಾಗುವುದು.

KCET 2024 ರ ಪರೀಕ್ಷೆಯ ಕೌನ್ಸೆಲಿಂಗ್ ಯಾವಾಗ ಪ್ರಾರಂಭವಾಗುವುದು?

KCET 2024 ರ ಡಾಕ್ಯುಮೆಂಟ್ verification status ನೀಡಿದ್ದಾರೆ. ಇತರ clause ಗಳ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಇದರ ನಂತರ ಡಾಕ್ಯುಮೆಂಟ್ verification slip ನೀಡಲಾಗುವುದು. ನಂತರ ಸೀಟ್ ಮ್ಯಾಟ್ರಿಕ್ ನೀಡಲಾಗುವುದು. ಇದರ ನಂತರ ಕೌನ್ಸೆಲಿಂಗ್ ನ ಆಪ್ಷನ್ ಎಂಟ್ರಿ ಶುರು ಮಾಡಲಾಗುವುದು.

ಹಾಗಾಗಿ ಎಲ್ಲಾ ವಿಧ್ಯಾರ್ಥಿಗಳು ನಿಮ್ಮ ಇಚ್ಛೆಯ ಕಾಲೇಜಿನ ಪಟ್ಟಿ ತಯಾರಿಸಿ, ಎಲ್ಲಾ ರೀತಿಯ ಮಾಹಿತಿಯನ್ನು ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಮಾಡುವ ಈ ಎಲ್ಲಾ ಕೌನ್ಸೆಲಿಂಗ್ ನ ಸಾಲುಗಳಲ್ಲಿ ಭಾಗವಹಿಸಿ, ನಿಮ್ಮ ಇಚ್ಛೆಯ ಕಾಲೇಜಿನಲ್ಲಿ ಅಡ್ಮಿಷನ್ ಪಡೆದುಕೊಳ್ಳಬೇಕು. ನಿಮ್ಮ ರಾಂಕ್ ನ ಆದರದ ಮೇಲೆ ಕಾಲೇಜ್ allot ಆಗುವುದು.

ಇದನ್ನೂ ಓದಿ: Document Verification: KEA ಕಡೆಯಿಂದ ಈಗಾಗಲೇ ಪ್ರಾರಂಭವಾಗಿದೆ!! ವಿದ್ಯಾರ್ಥಿಗಳು ಕಾಲೇಜ್ ಆಯ್ಕೆ ಮಾಡಿ

Leave a Comment

error: Content is protected !!