ಗೃಹಲಕ್ಷ್ಮಿ ಯೋಜನೆ 2 ತಿಂಗಳ ಹಣ ಒಟ್ಟಿಗೆ ಜಮಾ!! ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ ಮಾತುಗಳು ಇಲ್ಲಿದೆ

ಎಲ್ಲರಿಗೂ ನಮಸ್ಕಾರ, ಈ ಒಂದು ವರ್ಷದಲ್ಲಿ ಇಲ್ಲಿಯವರೆಗೆ ಏನು ಗೃಹಲಕ್ಷ್ಮಿ ಯೋಜನೆ ಶುರುವಾಯಿತು ಅಲ್ಲಿಂದ ಇಲ್ಲಿಯವರೆಗೆ ಸುಮಾರು 25,288 ಕೋಟಿ. ಇದು ಸಣ್ಣ ಅಮೌಂಟ್ ಅಲ್ಲ 25,288 ಕೋಟಿಯನ್ನ ಮಹಿಳೆಯರಿಗೋಸ್ಕರ ಹಾಕಿದ್ದೀವಿ. ಇದು ಸರ್ಕಾರದ ದೊಡ್ಡ ಸಾಧನೆ ಅಂತ ಇದನ್ನ ಹೇಳಲಿಕ್ಕೆ ಬಯಸುತ್ತೇನೆ.

ಈ ಗೃಹಲಕ್ಷ್ಮಿಯವರಿಗೆ ಒಂದು ಮಾತನ್ನ ಹೇಳಲಿಕ್ಕೆ ಬಯಸುತ್ತೇನೆ. ತಿಂಗಳಿಗೆ ಸುಮಾರು ಎರಡುವರೆ ಸಾವಿರ ಕೋಟಿ ರೂಪಾಯಿ ಹಾಕುವಂತಹ ಸಂದರ್ಭದಲ್ಲಿ ಬಹಳಷ್ಟು ಕಡೆ ತಾಂತ್ರಿಕ ದೋಷಗಳಾಗುತ್ತವೆ. ಇದು ಒಂದು ಬ್ಯಾಂಕ್ ಒಂದು ಬ್ಯಾಂಕ್, ಎರಡು ಬ್ಯಾಂಕ್, ಮೂರು ಬ್ಯಾಂಕ್ ಇನ್ವಾಲ್ವ್ ಇರೋದಿಲ್ಲ.

ಪ್ರತಿಯೊಂದು ಹಳ್ಳಿಯಲ್ಲಿರುವ ಬ್ಯಾಂಕುಗಳು ಇದರಲ್ಲಿ ಇನ್ವಾಲ್ವ್ ಇರ್ತವೆ ಅದು ಕೋ ಆಪರೇಟಿವ್ ಆಗಿರಬಹುದು ನ್ಯಾಷನಲೈಸ್ಡ್ Bank ಆಗಿರಬಹುದು ಸೊಸೈಟಿಗಳಾಗಿರಬಹುದು ಬಹಳಷ್ಟು ತಾಂತ್ರಿಕ ದೋಷಗಳು ಹೇಗೆ ಅಂತಂದ್ರೆ ಎರಡುವರೆ ಸಾವಿರ ಕೋಟಿಯನ್ನ ಬಿಡುಗಡೆ ಮಾಡಿದ ತಕ್ಷಣ ಅನೇಕ ಸ್ಟೆಪ್ಸ್ ಗಳು ಇರ್ತವೆ.

ಮೊದಲಿಗೆ ಹಣ ಇಲಾಖೆಗೆ ಬರಬೇಕು ನಮ್ಮ ಇಲಾಖೆಯಿಂದ:

  • ಟ್ರೆಜರಿಗೆ ಹೋಗ್ಬೇಕು
  • ಟ್ರೆಜರಿ ಇಂದ ಡಿಡಿ ಗಳಿಗೆ ಹೋಗ್ಬೇಕು
  • ಡಿಡಿ ಗಳಿಂದ ಎಲ್ಲಾ ಬ್ಯಾಂಕ್ ಅಕೌಂಟ್ ಗಳಿಗೆ ಸರ್ಕ್ಯುಲೇಟ್ ಆಗಬೇಕು

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ ಮಾತುಗಳು

ಒಂದು ಮಾತನ್ನ ಹೇಳಲಿಕ್ಕೆ ಬಯಸುತ್ತೇನೆ, ಯಾವುದೋ ಒಂದು ಬೆಳೆ ಹಾನಿ ಆದಾಗ ಯಾವುದೋ ಒಂದು ಪರಿಹಾರವನ್ನ ಘೋಷಣೆ ಮಾಡಿದಾಗ ಆ ಘೋಷಣೆ ಆದಂತಹ ಹಣ 2,000, 3,000 ಪ್ರತಿಯೊಬ್ಬರಿಗೂ ಹೋಗಲಿಕ್ಕೆ ಸುಮಾರು ಮೂರು ತಿಂಗಳು ತಗೊಳ್ಳುತ್ತೆ ಆದ್ರೆ ಗೃಹಲಕ್ಷ್ಮಿಯನ್ನ ನಾವು ಆ ರೀತಿ ಯಾವತ್ತೂ ಕೂಡ ನಾವು ಹಿಡಿದಿಲ್ಲ ಆದ್ರೆ ಮೇ (May) ನಂತರ ಜೂನ್ ಹಾಕೋದು ಸ್ವಲ್ಪ ಲೇಟ್ ಆಗಿದ್ದು ಇದೇ ಒಂದು ಕಾರಣಕ್ಕೆ

ಈಗ ಕೂಡ ನಾವು ಹಾಕ್ತಾ ಇದ್ದೀವಿ ಈಗ ಎರಡು ತಿಂಗಳದ್ದು ಯಾಕಂತಂದ್ರೆ ಸೆಪ್ಟೆಂಬರ್ ಈಗ ಶುರುವಾಗಿದೆ ಒಂದೇ ಸಲಕ್ಕೆ ಎರಡು ತಿಂಗಳದ್ದು ಸೇರಿಸಿ ಹಾಕ್ತಾ ಇದ್ದೀವಿ. ಜುಲೈ ಆಗಸ್ಟ್ ಮತ್ತು ಜುಲೈ ಮತ್ತು ಆಗಸ್ಟ್ ದು ಸೇರಿಸಿ 4,000 ಈಗ ಹುವಗಳನ್ನು ಹಾಕ್ತಾ ಇದ್ದೀವಿ.

ಗೃಹಲಕ್ಷ್ಮಿ ಯೋಜನೆಯಿಂದ ಫಲಾನುಭವಿಗಳನ್ನು ಡಿಲೀಟ್ ಮಾಡುತ್ತಿದ್ದಾರೆ?

ಈಗ ಒಟ್ಟು ಫಲಾನುಭವಿಗಳು ಸಂಖ್ಯೆಯ ವಿಚಾರದಲ್ಲಿದೆ ಕೆಲವೊಬ್ಬರು ಅದರಲ್ಲಿ ನಿಜವಾದಂತಹ ಅರ್ಹರಲ್ಲದ ಫಲಾನುಭವಿಗಳು ಅದರಲ್ಲಿ ಇದ್ದಾರೆ ಅನ್ನುವಂತದ್ದು ಒಂದಿಷ್ಟು ಇದ್ದಿತ್ತು.

ಅದನ್ನ ತೆಗೆಯುವಂತಹ ಪ್ರಯತ್ನವನ್ನ ಮಾಡ್ತಾ ಇದೆ ಸರ್ಕಾರ ಅದಕ್ಕಾಗಿ ತಡೆ ಹಿಡಿದಿದ್ದಾರೆ ಒಂದು ತಿಂಗಳು ಎರಡು ತಿಂಗಳು ಮೂರು ತಿಂಗಳಿಂದ ಅದಕ್ಕಾಗಿ ತಡೆ ಹಿಡಿದಿದ್ದಾರೆ ಸ್ಕ್ರೂಟಿನಿ ಮಾಡ್ತಾ ಇದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ ಇದರ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟಣೆ ನೀಡಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟಣೆ: “ಇಂತಹ ಊಹಾಪೋಹಗಳಿಗೆ ಯಾರು ಕಿವಿ ಕೊಡಬಾರದು ಇದು ನನ್ನ ರಿಕ್ವೆಸ್ಟ್ ನಾನು ಹೇಳ್ತಾ ಇದ್ದೀನಿ ಒಬ್ಬ ಇಲಾಖೆಯ ಮಂತ್ರಿಯಾಗಿ ನನ್ನ ಗಮನಕ್ಕೆ ಬಾರದೆ ಯಾವುದೇ ಕೆಲಸಗಳು ಆಗೋದಿಲ್ಲ ಅದು ಜನರಿಗೆ ಅದು ನನ್ನ ಮನೆ ಯಜಮಾನಿಗಳಿಗೂ ಹೇಳಲಿಕ್ಕೆ ಬಯಸುತ್ತೇನೆ ಆ ರೀತಿಯಾದಂತಹ ಏನೇ ಕಾರಣ ಕೊಟ್ಟು ನಾವು ಯಾರನ್ನು ಕೂಡ ತೆಗಿತಾ ಇಲ್ಲ”

“ಈಗ ಸದ್ಯಕ್ಕೆ ಒಂದು ಕೋಟಿ 23 ಲಕ್ಷ ಮನೆ ಯಜಮಾನಿಗಳಿಗೆ ಗೃಹಲಕ್ಷ್ಮಿ ಯೋಜನೆ ಲಾಭ ಹೋಗ್ತಾ ಇದೆ ಪಡಿತಾ ಇದ್ದಾರೆ ನಾವು ಏನು ಅಪ್ಲೋಡ್ ಮಾಡ್ಲಿಕ್ಕೆ ಅರ್ಜಿಯನ್ನು ಅಪ್ಲೋಡ್ ಮಾಡುವಂತಹ ಸಂದರ್ಭದಲ್ಲೇನೆ ಅವರು ರಿಜೆಕ್ಟ್ ಆಗ್ತಾರೆ ಆ ರೀತಿ ಯಾರಾದ್ರೂ GST ಮತ್ತು ಇನ್ಕಮ್ ಟ್ಯಾಕ್ಸ್ ಇದ್ರೆ ಆ ರೀತಿ ಇದ್ದು ಅವರ ಅಪ್ಲೋಡ್ ಆಗಿದೆ ಅಂತಂದ್ರೆ ಅದು ತಪ್ಪು”

“ಯಾಕಂದ್ರೆ ಸಾಫ್ಟ್ವೇರ್ ಅನ್ನೇ ಆ ರೀತಿ ನಾವು ಡೆವಲಪ್ ಮಾಡಿದ್ದೀವಿ ಡಿಸೈನ್ ಮಾಡಿದ್ದೀವಿ ಯಾರೇ ಕೂಡ ಐಟಿ ರಿಟರ್ನ್ಸ್ ಇದ್ರೆ ಅಥವಾ GST ಕಟ್ಟೋವರು ಇದ್ರೆ ನಮ್ಮ ಸಾಫ್ಟ್ವೇರ್ ನಲ್ಲಿ ಅವರ ಅರ್ಜಿ ಅಪ್ಲೋಡ್ ಆಗೋದೇ ಇಲ್ಲ ಸೋ ಈಗೇನು ಒಂದು ಕೋಟಿ 23 ಲಕ್ಷ ಜನ ಗೃಹಲಕ್ಷ್ಮಿಗಳಿಗೆ ಹಣ ಹೋಗ್ತಾ ಇದೆ ಅದು ಕಂಟಿನ್ಯೂ ಆಗುತ್ತೆ”.

ಇದನ್ನೂ ಓದಿ: 5 KG ಅಕ್ಕಿ ಹಣ ಬದಲು ದಿನಸಿ ಕಿಟ್!! ಸರ್ಕಾರ ಜನರಿಗೆ ದಿನಸಿ ಕಿಟ್ ಯಾವ ರೀತಿ ಕೊಡುತ್ತದೆ!

Leave a Comment

error: Content is protected !!