ಎಲ್ಲರಿಗೂ ನಮಸ್ಕಾರ, ರಾಜ್ಯದಲ್ಲಿ ಪಡಿತರ ಚೀಟಿಗೆ ಶೀಘ್ರವೇ ಫಿಲ್ಟರ್ ಮಾಡುವ ಸೌಲಭ್ಯಗಳು ಇದೆ. ಫುಡ್ ಕಿಟ್ ವಿತರಣೆ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ.
ವಿಧಾನಸಭಾ ಚುನಾವಣೆಗೂ ಮುನ್ನ 10 ಕೆಜಿ ಉಚಿತ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಕೇಂದ್ರ ಅಕ್ಕಿ ಕೊಡಲಿಲ್ಲ ಅಂತ 5 kg ಅಕ್ಕಿ ಹಾಗೂ ತಲ ಒಬ್ಬ ವ್ಯಕ್ತಿಗೆ 170 ರೂಪಾಯಿ ನೀಡುವ ನಿರ್ಧಾರಕ್ಕೆ ರಾಜ್ಯ ಕಾಂಗ್ರೆಸ್ ಬಂದಿತ್ತು ಆದರೆ ಇತ್ತೀಚೆಗೆ ನಕಲಿ BPL ಕಾರ್ಡ್ ಸದ್ದು ಮಾಡುತ್ತಿದ್ದು.
ಅದಕ್ಕೆ ಕಡಿವಾಣ ಹಾಕಲು ಕಸರತ್ತನ್ನ ನಡೆಸುತ್ತಿದೆ ಇದರ ಬೆನ್ನಲ್ಲೇ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಬಿಟಿ ಮೂಲಕ ನೀಡಲಾಗುತ್ತಿರುವ ಹಣದ ಬಗ್ಗೆ ಚರ್ಚೆ ನಡೆಸಲಾಗಿದೆ.
ಹಣದ ಬದಲಿಗೆ ಬೇಳೆ ಅಡುಗೆ ಎಣ್ಣೆ ಇತರೆ ಧಾನ್ಯ ಸೇರಿದಂತೆ ಫುಡ್ ಕಿಟ್ ಒದಗಿಸುವಂತಹ ಚರ್ಚೆ ನಡೆದಿದೆ
ಫುಡ್ ಕಿಟ್ ನಲ್ಲಿ ಏನೆಲ್ಲಾ ಸಾಮಗ್ರಿಗಳು ಇರಬೇಕು ಎಂಬುದರ ಕುರಿತು ಸಂಪುಟ ಸಭೆಯಲ್ಲಿ ಆಹಾರ ಸಚಿವ ಕೆ ಎಚ್ ಮುನಿಯಪ್ಪ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ರು ಆದರೆ ಫುಡ್ ಕಿಟ್ ಬೇಡ ಅಂತ ಇತರೆ ಹಿರಿಯ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಕೊಡಲೇಬೇಕು ಅಂತ ಪಟ್ಟು ಹಿಡಿದ ಕೆ ಎಚ್ ಮುನಿಯಪ್ಪ ಸರ್ವೆ ಮಾಡಿದ್ದೇನೆ.
ಕಿಟ್ ಕೊಡಲೇಬೇಕು ಅಂತ ಹೇಳಿದ್ದಾರೆ ಆಗ ಹಿರಿಯ ಸಚಿವರು ಮಧ್ಯಪ್ರವೇಶ ಮಾಡಿ ಒಂದು ವೇಳೆ ಕಿಟ್ ನೀಡಿದರೆ ಅಕ್ಕಿಯ ದರಕ್ಕೆ ಹೆಚ್ಚಾಗಬಹುದು ಯಾವುದೇ ಕಾರಣಕ್ಕೂ ಕೊಡೋದು ಬೇಡ ಮುಂದೆ ನೋಡೋಣ ಅನ್ನೋ ನಿಲುವನ್ನ ವ್ಯಕ್ತಪಡಿಸಿದ್ದಾರೆ.
ಕೆ ಎಚ್ ಮುನಿಯಪ್ಪ ಅವರು ಹೇಳಿರುವ ಮಾತುಗಳು ಏನು
“APL ಇರೋವರೆಲ್ಲ BPL ಅವರು ಇದ್ದಾರೆ ಅದು ನಾವೆಲ್ಲ ಎನ್ಕ್ವೈರಿ ಮಾಡಿಸಿದ್ದೇವೆ. ರಿಪೋರ್ಟ್ ಈಗ ಸದ್ಯಕ್ಕೆ ಬರ್ತಾ ಇದೆ ಆ ರಿಪೋರ್ಟ್ ಬಂದಮೇಲೆ ಅದರ ಬಗ್ಗೆ ಫಸ್ಟ್ ತೀರ್ಮಾನ ತಗೊಂಡು ನೆಕ್ಸ್ಟ್ ಇದನ್ನ ಮಾಡೋಣ”
ಒಟ್ಟಾರೆ ಹಣದ ಬದಲಿಗೆ ಫುಡ್ ಕಿಟ್ ನೀಡುವ ಬಗ್ಗೆ ಕ್ಯಾಬಿನೆಟ್ ಹಗ್ಗ ಜಗ್ಗಾಟ ನಡೆಯಿತು ಸದ್ಯಕ್ಕೆ ಆ ನಿರ್ಧಾರದಿಂದ ಸರ್ಕಾರ ಹೆಜ್ಜೆ ಹಿಂದಿಟ್ಟಿದೆ.
ಇದನ್ನೂ ಓದಿ: ಮನೆಯಲ್ಲಿ ಸುಲಭವಾಗಿ ಹಣ ಮಾಡುವ 5 ವಿಧಾನ!!