ಕಾಂಗ್ರೆಸ್ ಸರ್ಕಾರ ಬಂದಿರುವಂತದ್ದು ಗ್ಯಾರಂಟಿಗಳ ಸಹಾಯದಿಂದ ಆದರೆ ಇತ್ತೀಚಿನ ಕೆಲ ತಿಂಗಳಿಂದ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜಾರಿ ಆಗ್ತಾ ಇಲ್ಲ ಅನ್ನುವಂತಹ ಪ್ರಶ್ನೆಗಳು, ಅನ್ನುವಂತಹ ದೂರುಗಳು ನೇರವಾಗಿ ಕೇಳಿ ಬಂದಿದ್ವು ಅದರಲ್ಲೂ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಕಳೆದ ಎರಡು ತಿಂಗಳಿಂದ ಹಣ ಬರ್ತಾ ಇಲ್ಲ ಅಂತ ಮಹಿಳೆಯರು ನೇರಾನೇರ ಕಂಪ್ಲೇಂಟ್ ಮಾಡಿದ್ರು.!
ಇವತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಮಾತನಾಡಿದ್ದಾರೆ ಇಷ್ಟು ದಿನ ತಾಂತ್ರಿಕ ಕಾರಣಗಳಿಂದ ಹಣ ಬರ್ತಾ ಇರಲ್ಲ ಆದರೆ ಇವತ್ತಿನಿಂದ ಎಲ್ಲಾ ಮಹಿಳೆಯರ ಅಕೌಂಟ್ ಗೆ ಎಂದಿನಂತೆ 2000 ಬರುತ್ತೆ ಅಂತ ಭರವಸೆಯನ್ನು ಕೊಟ್ಟಿದ್ದಾರೆ. “ಕೆಲವು ತಾಂತ್ರಿಕ ದೋಷದಿಂದ ಜೂನ್ ಮತ್ತು ಜುಲೈ ಅವರಿಗೆ ಹಾಕಿಲ್ಲ” ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ.
ಇವತ್ತಿನಿಂದ ತಮ್ಮ ಅಕೌಂಟ್ಗೆ ಗೃಹಲಕ್ಷ್ಮಿ ದುಡ್ಡು ಬರ್ತಾ ಇದೆ
ಗೃಹಲಕ್ಷ್ಮಿ ಯೋಜನೆಯಿಂದ ಅದೆಷ್ಟೋ ತಾಯಂದಿರು ಖುಷಿಯಾಗಿದ್ದರು 2000 ಹಣ ಅದೆಷ್ಟೋ ಬಡವರಿಗೆ ಆಸರೆಯಾಗಿತ್ತು ಹಾಲು ಕುಡಿದಷ್ಟು ಸಂತೋಷವನ್ನು ತಂದಿತ್ತು ನುಡಿದಂತೆ ನಡೆದಿದ್ದೇವೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಅಂತ ಸಿಎಂ ಸಿದ್ದರಾಮಯ್ಯ ಹೋದಲ್ಲಿ ಬಂದಲ್ಲಿ ಹೇಳ್ತಾ ಇದ್ರು.
ಗ್ಯಾರಂಟಿಯಿಂದಲೇ ಸರ್ಕಾರ ಅಧಿಕಾರಕ್ಕೆ ಬಂದ ಬಂದಿತ್ತು ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ ಸೀಟ್ ಗೆದ್ದು ಅಧಿಕಾರದ ಗದ್ದುಗೆಯನ್ನೇ ಹಿಡಿದಿದ್ದರು ಆದರೆ ಇಷ್ಟು ದಿನ ಸಿಎಂ ನುಡಿದಂತೆ ನಡೆದಿಲ್ಲ ಅನ್ನೋ ಆಕ್ರೋಶ ಕೇಳಿ ಬಂದಿತ್ತು ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಹಾಕದೆ ಇದ್ದದ್ದಕ್ಕೆ ಸರ್ಕಾರದ ವಿರುದ್ಧ ನಾರಿ ಶಕ್ತಿ ರೊಚ್ಚಿಗೆದ್ದಿತ್ತು ಆದರೆ ಇದೀಗ ರಾಜ್ಯದ ಮಹಿಳೆಯರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ.
“ಇಂದಿನಿಂದಲೇ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ”.
ಲಕ್ಷ್ಮಿ ಹೆಬ್ಬಾಳ್ಕರ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇವತ್ತಿನಿಂದ ನಿಮ್ಮ ಅಕೌಂಟ್ ಗೆ ದುಡ್ಡು ಬರುತ್ತೆ ಕೆಲ ತಾಂತ್ರಿಕ ದೋಷದಿಂದ ಜೂನ್ ಜುಲೈನ ಹಣ ಬಂದಿರಲಿಲ್ಲ ಇವತ್ತಿನಿಂದಲೇ ಹಣ ಬರುತ್ತೆ ಅಂತ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಇದನ್ನೂ ಓದಿ: BPL ಕಾರ್ಡ್ ರದ್ದು ಮಾಡುವುದು ಖಚಿತ!!