Aadhaar Card Link To RTC: ಎಲ್ಲರಿಗೂ ನಮಸ್ಕಾರ, ಈ ಒಂದು ಲೇಖನದಲ್ಲಿ ನಿಮ್ಮ ಒಂದು ಜಮೀನಿನ ಪಹಣಿ ಆಧಾರ್ ಕಾರ್ಡ್ ನೊಂದಿಗೆ ಯಾವ ರೀತಿ ಲಿಂಕ್ ಮಾಡಬೇಕು ಲಿಂಕ್ ಮಾಡುವುದರಿಂದ ಏನೇನು ಉಪಯೋಗ ಅಂತಂದ್ರೆ ಸಾಮಾನ್ಯವಾಗಿ.
ಈ ಒಂದು ನಿಮ್ಮ ಜಮೀನಿನ ಪಹಣಿ ನಿಮ್ಮ ಒಂದು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿದ್ರೆ ನಿಮಗೆ ಒಂದು ಬೆಳೆ ಪರಿಹಾರ ಸರ್ಕಾರದಿಂದ ಬರಬೇಕಾದರೆ ತುಂಬಾನೇ ಸರಳ ಆಗುತ್ತೆ. ಹಾಗೆ ಸರ್ಕಾರದ ಕೆಲವೊಂದು ಯೋಜನೆಗಳ ಫಲಾನುಭವಿ ನೀವಾಗಬೇಕಾದರೆ, ನಿಮ್ಮ ಒಂದು ಜಮೀನಿನ ಪಹಣಿ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ನೀವೇ ಸ್ವತಃ ನಿಮ್ಮ ಮೊಬೈಲ್ನಲ್ಲಿ ಆಗಲಿ ಅಥವಾ ನಿಮ್ಮ ಒಂದು ಈ ಒಂದು Computer ನಲ್ಲಿ ನೀವೇ ಸ್ವತಃ ಮೊಬೈಲ್ನಲ್ಲಿ ಲಿಂಕ್ ಮಾಡಬಹುದು ನಿಮ್ಮ ಜಮೀನಿನ ಪಹಣಿ ಜೊತೆಗೆ ನಿಮ್ಮ ಒಂದು ಆಧಾರ್ ಕಾರ್ಡ್
Aadhaar Card Link To RTC ಮಾಡುವ ವಿಧಾನ
ಯಾವ ರೀತಿ ಲಿಂಕ್ ಮಾಡಬೇಕು ಅದನ್ನು ಹೇಳುತ್ತೇವೆ ನೋಡಿ. ನಿಮ್ಮ ಮೊಬೈಲ್ ಬ್ರೌಸರ್ ನಲ್ಲಿ ಆಗಲಿ ಅಥವಾ computer ಬ್ರೌಸರ್ ನಲ್ಲಿ landrecords.karnataka.gov.in ಈ ಒಂದು ವೆಬ್ಸೈಟ್ ಓಪನ್ ಮಾಡಿಕೊಳ್ಳಿ ಈ ಒಂದು ವೆಬ್ಸೈಟ್ ಕರ್ನಾಟಕ ಸರ್ಕಾರದ ವೆಬ್ಸೈಟ್ ಆಗಿದ್ದು ನೀವು ಹೀಗೆ ಸ್ಕ್ರೋಲ್ ಮಾಡ್ತಾ ಕೆಳಗಡೆ ಬರಬೇಕು.
ಕೆಳಗಡೆ ಬಂದ್ರೆ ಸಿಟಿಜನ್ ರಿಜಿಸ್ಟ್ರೇಷನ್ ಅಂತ ಕಾಣಿಸ್ತಾ ಇರುತ್ತೆ ಲೆಫ್ಟ್ ಸೈಡ್ ನಲ್ಲಿ ನೀವು ನೋಡಬಹುದು ಸಿಟಿಜನ್ ರಿಜಿಸ್ಟ್ರೇಷನ್ (Citizen Registration) ಮೇಲೆ ನೀವು ಕ್ಲಿಕ್ ಮಾಡಿ ಮೊಬೈಲ್ನಲ್ಲೂ ಸಹ ಸೇಮ್ ಇದ್ದಿರುತ್ತೆ ಡೌನ್ ಬಂದ್ರೆ ಗೊತ್ತಾಗುತ್ತೆ. ಇಲ್ಲಿ ಲಿಂಕ್ ಕ್ಲಿಕ್ ಮಾಡಿದ ನಂತರ ನಿಮಗೆ ಮತ್ತೊಂದು ಪೇಜ್ ಓಪನ್ ಆಗುತ್ತದೆ.
ಭೂಮಿ ನಾಗರಿಕ ಸೇವೆಗಳು ಹೌದು ಕರ್ನಾಟಕ ಸರ್ಕಾರದ ಈ ಒಂದು ಕಂದಾ ಇಲಾಖೆ ವೆಬ್ಸೈಟ್ ಆಗಿದೆ ಇಲ್ಲಿ ಏನಾಗಬೇಕು ನೀವು ನಿಮ್ಮ ಮೊಬೈಲ್ ಮುಖಾಂತರ ನೀವಿಲ್ಲಿ ಈ ಒಂದು ವೆಬ್ಸೈಟ್ ನಲ್ಲಿ ಲಾಗಿನ್ ಆಗ್ಬೇಕಾಗುತ್ತೆ ಲಾಗಿನ್ ಆಗೋಕ್ಕಿಂತ ಮುಂಚೆ ನಿಮ್ಮ ಪಹಣಿ ಆಧಾರ್ ಕಾರ್ಡ್ ನೊಂದಿಗೆ ಯಾಕೆ ಲಿಂಕ್ ಮಾಡಬೇಕು ಅನ್ನೋದು ಇಲ್ಲಿ ಒಂದು ಸಂಕ್ಷಿಪ್ತವಾಗಿ ಕೊಟ್ಟಿದ್ದಾರೆ.
“ಸಂಬಂಧಿತ ಫಲಾನುಭವಿ ಯೋಜನೆ ಅಡಿಯಲ್ಲಿ ಸೌಲಭ್ಯಗಳು ಪಡೆಯಬೇಕಾದರೆ ಸ್ವಯಂ ಪ್ರೇರಣೆಯಿಂದ”
ಅಂದ್ರೆ ನಿಮ್ಮ ಒಂದು ಸ್ವಯಂ ಇಚ್ಛೆಯಿಂದ ನಿಮ್ಮ RTC ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಬಹುದು ಇಲ್ಲಿ ಹೇಳಿಕೆ ಕೊಟ್ಟಿದ್ದಾರೆ ಇಂಪಾರ್ಟೆಂಟ್ ನೋಟ್ ನಲ್ಲಿ ಸರ್ಕಾರದವರು ಮೊಬೈಲ್ ನಂಬರ್ ಹಾಕಿ ಇಲ್ಲಿ ಮೊಬೈಲ್ ನಂಬರ್ ಹಾಕಿದ ತಕ್ಷಣ ಇಲ್ಲಿ ಕ್ಯಾಪ್ಚಾ ಕೋಡ್ ಹಾಕ್ಬೇಕಾಗುತ್ತೆ. ಕ್ಯಾಪ್ಚಾ ಕೋಡ್ ಇದರ ಒಳಗಡೆ ಎಂಟ್ರಿ ಮಾಡಿ ಕ್ಯಾಪ್ಚಾ ಕೋಡ್ ಎಂಟ್ರಿ ಮಾಡಿದ ತಕ್ಷಣ ಸೆಂಡ್ ಓಟಿಪಿ ಮೇಲೆ ನೀವು ಕ್ಲಿಕ್ ಮಾಡಬೇಕಾಗುತ್ತೆ.
ಭೂಮಿ ನಾಗರಿಕ ಸೇವೆಗಳ ಡ್ಯಾಶ್ ಬೋರ್ಡ್
ನಿಮ್ಮ ಒಂದು ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತೆ. ಇಲ್ಲಿ ನೀವಿಲ್ಲಿ ಬಂದಿರುವ ಓಟಿಪಿ ಹಾಕ್ಬೇಕು ಓಟಿಪಿ ಹಾಕಿದ ನಂತರ ನೀವಿಲ್ಲಿ ಲಾಗಿನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗುತ್ತೆ. ಲಾಗಿನ್ ಆದ ನಂತರ ನೀವಿಲ್ಲಿ ನೋಡಬಹುದು ಈ ಒಂದು ಡ್ಯಾಶ್ ಬೋರ್ಡ್ ಓಪನ್ ಆಗಿದೆ ಡ್ಯಾಶ್ ಬೋರ್ಡ್ ನಲ್ಲಿ ಲೆಫ್ಟ್ ಸೈಡ್ ನೀವು ಒಂದು ಪ್ರೊಫೈಲ್ (Profile) ಅಂತ ಕಾಣಿಸ್ತಾ ಇದೆ ಪ್ರೊಫೈಲ್ ನ ಕೆಳಗಡೆ ಲಿಂಕ್ ಆಧಾರ್ ಅಂತ ಇಂಗ್ಲಿಷ್ ನಲ್ಲಿ ನೋಡಬಹುದು ಕನ್ನಡದಲ್ಲೂ ನೋಡಬಹುದು ಲಿಂಕ್ ಇದರ ಮೇಲೆ ಕ್ಲಿಕ್ ಮಾಡಿ.
ಇಲ್ಲಿ ಭೂಮಿ ವಿವರಗಳು ಮತ್ತೆ ಡೀಟೇಲ್ಸ್ ಆಗಿ ಒಂದೊಂದು ಸ್ಟೆಪ್ ಬೈ ಸ್ಟೆಪ್ ನೋಡ್ಕೊಂತಾ ಕೆಳಗಡೆ ಬನ್ನಿ ನಾಗರಿಕ ಸೇವೆಗಳಲ್ಲಿ ಇಲ್ಲಿ ನೀವು ಇಲ್ಲಿ ಸೆಲೆಕ್ಟ್ ಮಾಡ್ಕೋಬೇಕು ಇದೊಂದು ಚೆಕ್ ಬಾಕ್ಸ್ (Check Box) ಮೇಲೆ ಟಿಕ್ ಬಾಕ್ಸ್ ಮೇಲೆ ಟಿಕ್ ಮಾಡಿ ಟಿಕ್ ಮಾಡಿದ್ರೆ “ಪಹಣಿಯಲ್ಲಿರುವ ಹೆಸರು ಆಧಾರ್ ಹೆಸರಿನೊಂದಿಗೆ ಹೊಂದಾಣಿಕೆ ಆಗುತ್ತದೆ”.
ಅಂದ್ರೆ ಇಲ್ಲಿ ನೀವು ಅತಿ ಮುಖ್ಯವಾಗಿ ನಿಮಗೆ ನೆನಪಿರಬೇಕು ಪಹಣಿಯಲ್ಲಿ ಮತ್ತು ಆಧಾರ್ ಕಾರ್ಡ್ ನಲ್ಲಿ ಹೆಸರು ಸ್ಪೆಲ್ಲಿಂಗ್ ಆಗ್ಲಿ ಅಥವಾ ಕೆಲವೊಂದು ಹೆಸರು ಮಿಸ್ಟೇಕ್ ಇದ್ರೆ ಇದು ಹೊಂದಾಣಿಕೆ ಆಗೋದಿಲ್ಲ ಅದಕ್ಕೂ ಮತ್ತು ಪಹಣಿಯಲ್ಲಿರೋ ಹೆಸರು ಮತ್ತು ಆಧಾರ್ ಕಾರ್ಡ್ ನಲ್ಲಿರೋ ಹೆಸರು ಎರಡು ಒಂದಕ್ಕೊಂದು ತಾಳೆ ಆಗಬೇಕು.
ಅವಾಗ ಮಾತ್ರ ಇದು ಡನ್ ಅಂತ ಬರುತ್ತೆ ಒಂದು ವೇಳೆ ಹೊಂದಾಣಿಕೆ ಆಗಿಲ್ಲದಿದ್ದಾಗ ಇಲ್ಲಿ ಹೊಂದಾಣಿಕೆ ಆಗುತ್ತಿಲ್ಲ ಎಂದು ಹೇಳುತ್ತೆ. ಅಲ್ಲಿ ನೀವು ನೋಡಬಹುದು ಲಿಂಕ್ ಎಂದು ಒಂದು ಆಪ್ಷನ್ ಕಾಣುತ್ತದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಒಂದು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಓಟಿಪಿ ಹೋಗುತ್ತೆ.
- ನಿಮ್ಮ ಮೊಬೈಲ್ ನಂಬರ್ ಗೆ ಬಂದಿರುವ ಓಟಿಪಿ ಪುನಃ ನೀವಿಲ್ಲಿ ಹಾಕ್ಬೇಕಾಗುತ್ತೆ.
- ಓಟಿಪಿ ಆದ ನಂತರ ವೆರಿಫೈ ಓಟಿಪಿ ಮೇಲೆ ಕ್ಲಿಕ್ ಮಾಡಿ.
“ಪಹಣಿಯೊಂದಿಗೆ ನಿಮ್ಮ ಆಧಾರನ್ನು ಲಿಂಕ್ ಮಾಡಲು ನೀವು ಬಯಸುವಿರಾ ಎಂದು ಇನ್ನೊಂದು ಬಾರಿ ಕೇಳುತ್ತೆ ಹೌದು ಮೇಲೆ ಅಂದ್ರೆ Yes ಮೇಲೆ ಕ್ಲಿಕ್ ಮಾಡಿ.
ನಿಮ್ಮ ಪಹಣಿಯನ್ನು ಆಧಾರ್ ನೊಂದಿಗೆ ಸಕ್ಸಸ್ಫುಲ್ಲಿ ಲಿಂಕ್ ಮಾಡಲಾಗಿದೆ” ಈ ರೀತಿಯಾಗಿ Message ಬರುತ್ತೆ ನಿಮ್ಮ ಒಂದು ಜಮೀನಿನ ಪಹಣಿ ನಿಮ್ಮ ಒಂದು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಬಹುದು.
ಇದನ್ನೂ ಓದಿ: ಫುಡ್ ಕಿಟ್ ಕೊಡುವುದಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದ್ದಾರೆ