ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೆ, ಇಂದಿನ ಈ ನಮ್ಮ ಲೇಖನದಲ್ಲಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಕುರಿತು ಸರ್ಕಾರದಿಂದ ಬಂದಿರುವ ಹೊಸ ಮಾಹಿತಿ, ಅರ್ಜಿ ಹೇಗೆ ಸಲ್ಲಿಸುವುದು? ಎಲ್ಲಿ ಸಲ್ಲಿಸುವುದು ?
ಯಾವ ದಾಖಲೆಗಳು ಬೇಕು? ಎಂಬ ಪೂರ್ಣ ಮಾಹಿತಿ ತಿಳಿಸುತ್ತೇವೆ. ಹಾಗಾಗಿ ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ, ಮಾಹಿತಿ ಉಪಯುಕ್ತವಾಗಿದೆ.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹೇಗೆ ಸಲ್ಲಿಸುವುದು
ಸರ್ಕಾರದಿಂದ ಸಿಗುವ ಪಡಿತರವನ್ನು ಪಡೆಯಲು ರೇಷನ್ ಕಾರ್ಡ್ ಬೇಕೇ ಬೇಕು. ಈ ರೇಷನ್ ಕಾರ್ಡ್ ಪಡೆಯಲು ಅರ್ಜಿಯನ್ನು ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಎಲ್ಲಾ ಸೈಬರ್, ಸಿ ಎಸ್ ಸಿ ಸೆಂಟರ್ ಹಾಗೂ ಆಹಾರ ಕಚೇರಿಗಳಲ್ಲಿ ಸಲ್ಲಿಸಬಹುದು.ಈ ಅರ್ಜಿಯನ್ನು ಪಡಿತರ ಚೀಟಿಗೆ ಕುಟುಂಬ ಸದಸ್ಯರ ಸೇರ್ಪಡೆ ಹಾಗೂ ಡಿಲೀಟ್ ಮಾಡಲು ಹಾಗೂ ಯಾವುದೇ ರೀತಿಯ ವಿಳಾಸ ಬದಲಾವಣೆ ಮಾಡಲೂ ಸಹ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಯಾವ ಯಾವ ದಾಖಲಾತಿಗಳು ಬೇಕಾಗಿದೆ ಎಂದು ನೋಡುವುದಾದರೆ:
- ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
- ಆದಾಯ ಮತ್ತು ಜಾತಿ ಪ್ರಮಾಣ ಪತ್ರ
- ಆರು ವರ್ಷದ ಒಳಗಿನ ಮಗುವನ್ನು ಸೇರಿಸಲು ಆ ಮಗುವಿನ ಜನ್ಮ ಪ್ರಮಾಣ ಪತ್ರ
- ಮರಣ ಹೊಂದಿದವರನ್ನು ಡಿಲೀಟ್ ಮಾಡಲು ಅವರ ಮರಣ ಪ್ರಮಾಣ ಪತ್ರ
- ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ.
ಮದುವೆಯಾದ ಹೆಂಗಸರನ್ನು ಸೇರಿಸಲು ವಿವಾಹ ಪ್ರಮಾಣ ಪತ್ರಗಳನ್ನೆಲ್ಲವನ್ನು ಅಗತ್ಯಕ್ಕೆ ತಕ್ಕಂತೆ ಸಲ್ಲಿಸಿ ರೇಷನ್ ಕಾರ್ಡ್ ಪಡೆಯಬಹುದಾಗಿದೆ. ಹೊಸ ಹಾಗೂ ತಿದ್ದುಪಡಿಯ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಲು ಕರ್ನಾಟಕ ಸರ್ಕಾರವು ಮುಂದಿನ ತಿಂಗಳಿನಿಂದ ಅವಕಾಶ ಕಲ್ಪಿಸುವುದಾಗಿ ಹೇಳಿದೆ.
ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಸರ್ಕಾರ ನೀಡಿರುವ ಹೊಸ ಸೂಚನೆ
ಇತ್ತೀಚಿನ ದಿನಪತ್ರಿಕೆಯಲ್ಲಿ ಸರ್ಕಾರ ಇನ್ನು ಮುಂದೆ ಅರ್ಜಿ ಸಲ್ಲಿಸುವವರು ಯಾವುದೇ ರೀತಿಯ ಖಾಸಗಿ ಸೈಬರ್ ಗಳ್ಳಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲವೆಂದು ತಿಳಿಸಿದ್ದು
ಕೇವಲ ಸರ್ಕಾರಿ ಸೈಬರ್ ಕೇಂದ್ರಗಳಾದ ಕರ್ನಾಟಕ ಒನ್, ಬೆಂಗಳೂರು ಒನ್,ಸಿ ಜಿ ಎಸ್ ಸರ್ವಿಸ್ ಸೆಂಟರ್ ಹಾಗೂ ಗ್ರಾಮ ಒನ್ ಗಳಲ್ಲಿ ಮಾತ್ರ ಅವಕಾಶ ಕಲ್ಪಿಸುವುದಾಗಿ ಹೇಳಿದೆ. ಇದರ ಬಗ್ಗೆ ಘನ ಸರ್ಕಾರವು ಯಾವುದೇ ರೀತಿಯಾಗಿ ಅಧಿಕೃತ ಮಾಹಿತಿ ನೀಡಿಲ್ಲ ಹಾಗೂ ಮುಂದಿನ ದಿನಗಳಲ್ಲಿ ನೀಡುವ ವಿಶ್ವಾಸವನ್ನು ಪತ್ರಿಕಾ ಮಾಧ್ಯಮ ನೀಡಿದೆ. ಒಟ್ಟಿನಲ್ಲಿ ಮುಂದಿನ ತಿಂಗಳಿನಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ 11ನೇ ಕಂತಿನ ಹಣ ಬಿಡುಗಡೆ ಶುರುವಾಗಿದೆ?