ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, ಇಂದಿನ ನಮ್ಮ ಈ ಲೇಖನದಲ್ಲಿ ಆಧಾರ್ ಕಾರ್ಡ್ ಕುರಿತು ಹರಿದಾಡುತ್ತಿರುವ ವರದಿಗಳ ಕುರಿತು ಅದು ನಿಜಾನ ಎಂಬ ಪೂರ್ಣ ಮಾಹಿತಿಯನ್ನು ತಿಳಿಯೋಣ ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ ಹಾಗೂ ಮಾಹಿತಿ ಉಪಯುಕ್ತವಾಗಿದೆ.
ಹೌದು ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಹಾಗು ಮಾದ್ಯಮಗಳಲ್ಲಿ ಆಧಾರ್ ಕಾರ್ಡ್ ಅನ್ನು ಹತ್ತು ವರ್ಷದಿಂದ ಅಪ್ಡೇಟ್ ಮಾಡಿಸಿಲ್ಲವಾದರೆ ಜೂನ್ 14, 2024 ರ ಒಳಗೆ ಮಾಡಿಸಿಲ್ಲ ಎಂದರೆ ಆಧಾರ್ ಕಾರ್ಡ್ ಅಮಾನ್ಯವಾಗುವುದು ಎಂದು ಮಾಹಿತಿ ತಿಳಿದುಬರುತ್ತಿದೆ.
ಆಧಾರ್ ಕಾರ್ಡ್ ಅಮಾನ್ಯ ಆಗುವುದಾ? ಯಾಕೇ?
ಕಳೆದ ಹತ್ತು ವರ್ಷದಿಂದ ಆಧಾರ್ ಕಾರ್ಡ್ ನ ಮಾಹಿತಿಗಳನ್ನು ಅಪ್ಡೇಟ್ ಮಾಡಿಸಿಲ್ಲ ಎಂದರೆ ಜೂನ್ 14, 2024 ರ ಒಳಗೆ ಅಪ್ಡೇಟ್ ಮಾಡಿಸಬೇಕು ಇಲ್ಲವಾದರೆ ಆಧಾರ್ ಅಮಾನ್ಯ ಆಗುವುದು ಎಂದು ಹರಿದಾಡುತ್ತಿರುವ ಮಾಹಿತಿ ಅಥವಾ ಇದರ ಕುರಿತು ಇರುವ ವರದಿಗಳು ಸುಳ್ಳು.
ಈ ವರದಿ ಸುಳ್ಳು ಆಗಿದೆ. ಯಾವುದೇ ರೀತಿಯ ಆಧಾರ್ ಕಾರ್ಡ್ ಅಮಾನ್ಯ ಮಾಡುವುದರ ಕುರಿತು ಮಾಹಿತಿ ಇಲ್ಲ. ಹಾಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಅಥವಾ UIDAI ಅವರು ಕೂಡ ಇದರ ಕುರಿತು ಸ್ಪಷ್ಟನೆ ನೀಡಿದ್ದಾರೆ. ಹಾಗೆ ಜೂನ್ 14, 2024 ರ ಒಳಗೆ ಅಪ್ಡೇಟ್ ಮಾಡಿಸಬೇಕು ಎಂದು ತಿಳಿಸಿದ್ದಾರೆ.
ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು? ಆಧಾರ್ ಕಾರ್ಡ್ ಇದ್ದರೆ 10,000/- ಸಿಗುತ್ತಾ?
Aadhaar Card ಅನ್ನು ಅಪ್ಡೇಟ್ ಮಾಡಿಸಿಲ್ಲ ಎಂದಲ್ಲಿ ಆಧಾರ್ ಕಾರ್ಡ್ ಅಮಾನ್ಯ ಆಗುವುದಿಲ್ಲ. UIDAI ವೆಬ್ಸೈಟ್ ನಲ್ಲಿ ಆನ್ಲೈನ್ ಅಥವಾ ಆಫ್ಲೈನ್ ನ ಮೂಲಕ ಅಪ್ಡೇಟ್ ಮಾಡಿಸಬೇಕು. ಜೂನ್ 14,2024 ರ ವರೆಗೆ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲಾಗುವುದು.
ಜೂನ್ 14,2024 ರ ನಂತರ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬಹುದು. ಆದರೆ ಶುಲ್ಕ ಪಾವತಿ ಮಾಡಬೇಕಾಗುವುದು. ಹಾಗೆ ಆಧಾರ್ ಕಾರ್ಡ್ ಇದ್ದರೆ 10,000/- ರೂ.ಗಳು ಸಿಗುವ ಮಾಹಿತಿ ಸುಳ್ಳು ಮಾಹಿತಿಯಾಗಿದೆ. ಮಾದ್ಯಮ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವೊಮ್ಮೆ ಮಾಹಿತಿ ತಪ್ಪಿರುತ್ತದೆ.
ಇದನ್ನೂ ಓದಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅರ್ಹತೆ!!