ಎಲ್ಲರಿಗೂ ನಮಸ್ಕರಗಳು ಸ್ನೇಹಿತರೆ, ಆಧಾರ್ ಕಾರ್ಡ್ ಇಲ್ಲದೆ ಭಾರತ ದೇಶದಲ್ಲಿ ಉಳಿಯೋದೆ ಕಷ್ಟ. ಆಧಾರ್ ಒಂದು ಗುರುತಿನ ಚೀಟಿ. ಇದಿಲ್ಲದೆ ನಮ್ಮ ದೇಶದಲ್ಲಿ ಸರ್ಕಾರದ ಯಾವುದೇ ಯೋಜನೆಗೆ ಅರ್ಹರಾಗಲು ಸಾಧ್ಯವಿಲ್ಲ. ಹಾಗಾಗಿ ಆಧಾರ್ ಕುರಿತಿನ ಮಾಹಿತಿಗಾಗಿ ಈ ಲೇಖನವನ್ನು ಓದಿ.
ಮಾಹಿತಿ ಉಪಯುಕ್ತವಾಗಿದೆ. ಆಧಾರ್ ಕಾರ್ಡ್ : ಶ್ರೀ ಸಾಮಾನ್ಯನ ಅಧಿಕಾರ. ಈ ಆಧಾರ್ ನಮ್ಮ ದೇಶದ ಯಾವುದೇ ಒಂದು ವಹಿವಾಟುಗಳಿಗೆ ಬೇಕೇ ಬೇಕು.ಆದರೆ ಇದೀಗ ಸರ್ಕಾರ ಆಧಾರ್ ಅನುತಂತ್ರದ ಬಗ್ಗೆ ಹೊಸ ರೂಲ್ಸ್ ತಂದಿದೆ.ಈ ಆಧಾರ್ ಅಪಡೇಟ್ ಬಗೆಗಿನ ಮಾಹಿತಿ ಕೆಳಗಿನ ಸಾಲುಗಳಲ್ಲಿ ಇದೆ.
ಆಧಾರ್ ಅಪ್ಡೇಟ್ ಬಗ್ಗೆ ಇದ್ದ ಹಳೆ ಮಾಹಿತಿ ಏನು?
ನಮ್ಮ ಸರ್ಕಾರವು ಆಧಾರ್ ಅಪಡೇಟ್ ಮಾಡಿಸುವ ಆಜ್ಞೆಯನ್ನ ತುಂಬಾ ದಿನಗಳ ಹಿಂದೆಯೇ ಕೊಟ್ಟಿತ್ತು. ಅಪ್ಡೇಟ್ ಅನ್ನು ಉಚಿತವಾಗಿ ಪಡೆಯಲು ಎಷ್ಟೋ ಬಾರಿ ಗಡುವನ್ನು ಸಹ ನೀಡಿತ್ತು. ಆ ಗಡುವು ಜೂನ್ 14 ರ ಮಧ್ಯಾರಾತ್ರಿ 12.00 ಗಂಟೆಗೆ ಮುಗಿದು ಹೋಗಿದೆ. ಇದರ ಜೊತೆಗೆ ಸರ್ಕಾರವು ಗಡುವು ಮುಗಿದ ನಂತರ ಅಪ್ಡೇಟ್ ಮಾಡಿಸಲು ₹1,000 ದಂಡ ಹಾಕುವುದಾಗಿ ಹೇಳಿತ್ತು.
ಆಧಾರ್ ಅಪ್ಡೇಟ್ಗೆ ಕಡೆ ದಿನ ಯಾವುದು?
ಈ ಕಾರ್ಯಕ್ರಮದ ಮೂಲಕ ಜನರಿಗೆ ಉಚಿತವಾಗಿ ಆಧಾರ್ ಅಪ್ಡೇಟ್ಗೆ ಅವಕಾಶ ನೀಡಿತ್ತು ಸರ್ಕಾರ. ಆದರೆ ಶೇಕಡಾ 50 ರಷ್ಟು ಜನ ಇಲ್ಲಿಯವರೆಗೆ ಯಾವುದೇ ರೀತಿಯಾಗಿ ಅಪ್ಡೇಟ್ ಮಾಡಿಸಿಲ್ಲ. ಈ ಕಾರಣದಿಂದ ಸರ್ಕಾರವು ಮತ್ತೆ ಜನ ಹಿತಕ್ಕಾಗಿ ಈ ಗಡುವನ್ನು ವಿಸ್ತರಿಸಿ 14 ಸೆಪ್ಟೆಂಬರ್ 2024 ರ ವರೆಗೆ ಖಾಯಂಗೊಳಿಸಿದೆ.
ಆಧಾರ್ ಅಪಡೇಟ್ ಯಾರು ಯಾರು ಮಾಡಿಸಬೇಕು?
ಆಧಾರ್ ಕಾರ್ಡ್ ನಮ್ಮ ದೇಶದ ಗುರುತಿನ ಚೀಟಿ. ಇದಿಲ್ಲದೆ ತಾವು ಯಾವುದೇ ಸರ್ಕಾರಿ ಸೌಲಭ್ಯವಾಗಿರಲಿ, ಅಥವಾ ಖಾಸಗಿ ಸೌಲಭ್ಯವಾಗಲಿ ಸಿಗದು. ಈಗ ಜನರ ಹಣ ಕದ್ದು ಸೈಬರ್ ಕ್ರೈಂ ನಡೆಯುವ ಹಾವಳಿ ಹೆಚ್ಚಾಗಿದ್ದು, ಅದರ ನಿರ್ನಾಮಕ್ಕಾಗಿ ಸರ್ಕಾರ ಈ ಆದೇಶ ಹೊರಡಿಸಿ ಜನರ ಹಣ ದೋಚುವ ಕ್ರೈಂ ತಪ್ಪಿಸಲು ಇದೆ.
ಇನ್ನು ಈ ಆಧಾರ್ ಅಪ್ಡೇಟ್ ಅನ್ನು ಎಲ್ಲರೂ ಮಾಡಿಸುವುದು ಉತ್ತಮ ಇಲ್ಲದಿದ್ದಲ್ಲಿ ಕನಿಷ್ಠ ಪಕ್ಷಕ್ಕೆ ಆಧಾರ್ ಕಾರ್ಡ್ ಅಪಡೇಟ್ ಮಾಡಿಸಿ 10 ಅಥವಾ 10 ಕ್ಕಿಂತ ಹೆಚ್ಚು ವರ್ಷದ ಸಮಯ ಮೀರಿರುವವರು ಮಾಡಿಸಲೇಬೇಕು.
ಇಲ್ಲದಿದ್ದರೆ ಸರ್ಕಾರದ ಯಾವುದೇ ಸೌಲಭ್ಯ ಸಿಗದೇ ಆಧಾರ್ ಕಾರ್ಡ್ ರದ್ದಾಗುತ್ತದೆ.ಇದರಿಂದ ಯಾವುದೇ ಲಾಭವೂ ಇಲ್ಲ ಹಾಗಾಗಿ ಆಧಾರ್ ಅಪ್ಡೇಟ್ ಮಾಡಿಸಿ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ 2 ಹೊಸ ರೂಲ್ಸ್!!