Aadhaar Seeding With Bank Account: ರಾಜ್ಯದಲ್ಲಿ ನಮ್ಮ ಜನರು ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಬೇಕು ಅಂದರೆ ಅವರು ತಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆ ಜೊತೆಗೆ ಸೀಡಿಂಗ್ ಮಾಡಿಸಬೇಕು ಇಲ್ಲವಾದರೆ ನಿಮಗೆ ಯಾವುದೇ ಯೋಜನೆಗಳ ಲಾಭ ಸಿಗುವುದಿಲ್ಲ.
ಅನ್ನಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆ ಹಣ ಬರುವುದಿಲ್ಲ ಬಹಳಷ್ಟು ಜನರಿಗೆ ಈ ಸಮಸ್ಯೆ ಬಂದಿದೆ ಸರಿಯಾಗಿ ಯೋಜನೆಗಳ ಹಣ ಫಲ ಅನುಭವಿಗಳ ಬ್ಯಾಂಕ್ ಖಾತೆಗೆ ಬಂದು ತಲುಪುತ್ತಾ ಇಲ್ಲ ಅದಕ್ಕೆ ಮುಖ್ಯವಾದ ಕಾರಣ ನೀವು ಸರಿಯಾಗಿ ಆಧಾರ ಸೀಡಿಂಗ್ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಮಾಡಿಸಿಲ್ಲ.
ಆಧಾರ್ ಸೀಡಿಂಗ್ ಯಾವ ರೀತಿ ಮಾಡುತ್ತಾರೆ ಎಂದರೆ ನಿಮ್ಮ ಆಧಾರ್ ಕಾರ್ಡಿನಲ್ಲಿ 12 ಸಂಖ್ಯೆಯ ನಂಬರ್ ಇರುತ್ತೆ ಅದನ್ನು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡುತ್ತಾರೆ ಇದನ್ನು ಮಾಡಿದರೆ ನಿಮಗೆ ಸರ್ಕಾರ ಯಾವುದೇ ರೀತಿಯ ಯೋಜನೆ ಬಿಡುಗಡೆ ಮಾಡಿದರು ಅದರ ಹಣ ಡೈರೆಕ್ಟಾಗಿ DBT ಇಂದ ನಿಮ್ಮ ಬ್ಯಾಂಕ್ ಖಾತೆಗೆ ಒಂದು ಜಮಾ ಆಗುತ್ತದೆ ಇದಕ್ಕೆ ಆಧಾರ್ ಸೀಡಿಂಗ್ ಎಂದು ಹೇಳುತ್ತಾರೆ.
ಆಧಾರ್ ಸೀಡಿಂಗ್ ಮಾಡಿಸುವ ವಿಧಾನ
ನಿಮ್ಮ ಹತ್ತಿರದ ಬ್ಯಾಂಕ್ಗಳಿಗೆ ಭೇಟಿ ನೀಡಿ ನಂತರ ಅಲ್ಲಿ ಅವರಿಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ನೀಡಿ ಅದರಲ್ಲಿ ಇರುವ 12 ಸಂಖ್ಯೆ ನಂಬರನ್ನು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಸೀಡಿಂಗ್ ಮಾಡಲು ತಿಳಿಸಿ ನಂತರ ಬ್ಯಾಂಕಿನ ಸಿಬ್ಬಂದಿ ನಿಮ್ಮ ಆಧಾರ್ ಕಾರ್ಡನ್ನು ನಿಮ್ಮ ಖಾತೆಯೊಂದಿಗೆ ಜೋಡಿಸುತ್ತಾರೆ ಜೋಡಿಸಿದ ನಂತರ ಲಿಂಕ್ ಆಗಿರುವ ಮೊಬೈಲ್ ಫೋನಿಗೆ SMS ಬರುತ್ತದೆ. SMS ಬಂದ ನಂತರ ನಿಮ್ಮ ಆಧಾರ್ ಕಾರ್ಡ್ ಏನಿದೆ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಸೀಡಿಂಗ್ ಆಗಿರುತ್ತದೆ ನಂತರ ನಿಮಗೆ ಸರ್ಕಾರದ ಎಲ್ಲಾ ಯೋಜನೆಗಳ ಲಾಭ ಸಿಗುತ್ತದೆ.
ಈ ರೀತಿ ಮಾಡಿಸುವುದರಿಂದ ನಿಮಗೆ ಈ ಎಲ್ಲಾ ಸರ್ಕಾರದ ಲಾಭಗಳು ಸಿಗುತ್ತದೆ:
- ಸರ್ಕಾರದ ಯೋಜನೆಗಳು
- ಸಬ್ಸಿಡಿಗಳು
- ಕಲ್ಯಾಣ ಕಾರ್ಯಕ್ರಮಗಳು
ಆಧಾರ್ ಸೀಡಿಂಗ್ ಮಾಡಿರುವುದರಿಂದ ಆಗುವ ಉಪಯೋಗಗಳು
ನೇರ ಲಾಭ ವರ್ಗಾವಣೆಗಳು: DBT ಮೂಲಕ ಸುಲಭವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದು ಜಮಾ ಆಗುತ್ತದೆ.
ಸರಳೀಕೃತ KYC ಪ್ರಕ್ರಿಯೆ: KYC ಪ್ರಕ್ರಿಯೆಗಳು ಏನಿರುತ್ತದೆ? ಇದು ಬಹಳ ಸುಲಭವಾಗಿ ಮುಗಿದು ಹೋಗುತ್ತದೆ.
ಕಡಿಮೆಯಾದ ವಂಚನೆ: ನಿಮ್ಮ ಬ್ಯಾಂಕಿನಿಂದ ಹಾಗೂ ಡುಪ್ಲಿಕೇಟ್ ಆಧಾರ್ ಕಾರ್ಡ್ ಅನ್ನು ಮಾಡಿಸಿ ಹಣ ವಂಚನೆ ಮಾಡುವುದು ಕಡಿಮೆಯಾಗುತ್ತದೆ.
ಸುಲಭ ಪರಿಶೀಲನೆ: ಸರ್ಕಾರಿ ಯೋಜನೆಗಳ ವೇರಿಫಿಕೇಷನ್ ಸಂದರ್ಭದಲ್ಲಿ ಉಪಯೋಗವಾಗುತ್ತದೆ ಹಾಗೂ ಕೇವಲ ಒಂದು ಓಟಿಪಿ (OTP) ಮೂಲಕ ವೆರಿಫಿಕೇಶನ್ ಪೂರ್ಣಗೊಳ್ಳುತ್ತದೆ.
ಆಧಾರ್ ಸೀಡಿಂಗ್ ಪರಿಶೀಲನೆ ಮಾಡುವ ವಿಧಾನ
ನಿಮ್ಮ ಮೊಬೈಲ್ ಫೋನಿಗೆ SMS ಬಂದ ನಂತರ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಆಗಿ ಎಂದು ಪರಿಶೀಲನೆ ಮಾಡಲು ನಾವು ಇಲ್ಲಿ ನಿಮಗೆ ತಿಳಿಸಿರುವ ರೀತಿ ಮಾಡಿ.
https://myaadhaar.uidai.gov.in/ ಇಲ್ಲಿ ಕಾಣುವ ವೆಬ್ಸೈಟ್ ಏನಿದೆ ಅದನ್ನು ಕ್ಲಿಕ್ ಮಾಡಿ ನಂತರ ಅಲ್ಲಿ ನೀವು ಲಾಗಿನ್ ಆಗಬೇಕು ಲಾಗಿನ್ ಆಗುವ ಸಂದರ್ಭದಲ್ಲಿ ವ್ಯಕ್ತಿಯ ಆಧಾರ್ ಕಾರ್ಡ್ ನಂಬರ್ ಹಾಗೂ ಅಲ್ಲಿ ಕಾಣುವ Captcha ಎಂಟ್ರಿ ಮಾಡಿದರೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ. OTP ಸರಿಯಾಗಿ ಹಾಕಿದ ನಂತರ ನೀವು ಲಾಗಿನ್ ಆಗಬಹುದು.
ಅಲ್ಲಿ ಕೆಳಗೆ ನೀವು ನೋಡಬಹುದು Aadhaar Seeding ಎಂಬ ಒಂದು ಆಪ್ಷನ್ ಬರುತ್ತದೆ ಅದನ್ನು ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ಸಬ್ಮಿಟ್ ಮಾಡಿದರೆ ನಿಮ್ಮ ಆಧಾರ್ ಕಾರ್ಡ್ ಸೀಡಿಂಗ್ ಆಗಿದೆಯಾ ಎಂದು ತೋರಿಸುತ್ತದೆ.
ಇದನ್ನೂ ಓದಿ: HSRP ನಂಬರ್ ಪ್ಲೇಟ್ ದಿನಾಂಕ ವಿಸ್ತರಣೆ!! ಸ್ವಂತ ವಾಹನ ಹೊಂದಿರುವವರಿಗೆ ರಾಜ್ಯ ಸರ್ಕಾರ ಒಂದು ಹೊಸ ಶುಭ ಸುದ್ದಿ?!