ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ ಎಂದು ಬಹಳಷ್ಟು ಜನರು ನಮ್ಮ ಬಳಿ ಕೇಳುತ್ತಿದ್ದರು ಆದ್ದರಿಂದ ಅಂತವರಿಗೆ ಈ ಲೇಖನದಲ್ಲಿ ಸುಲಭವಾಗಿ ನಿಮ್ಮ ಬಳಿ ಇರುವ ಸ್ಮಾರ್ಟ್ ಫೋನ್ ಬಳಸಿಕೊಂಡು ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಂಡು ವಿಧಾನ ತಿಳಿಸಿಕೊಡುತ್ತೇವೆ ಪಿಡಿಎಫ್ (PDF) ಮೂಲಕ ನಿಮ್ಮ ಮೊಬೈಲ್ ಫೋನಿನಲ್ಲಿ ಡೌನ್ಲೋಡ್ ಆಗುತ್ತದೆ.
ಮೊದಲನೆಯದಾಗಿ myaadhaar.uidai.gov.in ಈ ಲಿಂಕ್ ಬಳಸಿಕೊಂಡು ವೆಬ್ ಸೈಟಿಗೆ ಭೇಟಿ ನೀಡಿ ಇದು ಆಧಾರ್ ಕಾರ್ಡ್ ವಿಚಾರವಾಗಿ ಇರುವ ಗೌರ್ಮೆಂಟ್ ವೆಬ್ಸೈಟ್ ಮೊದಲು ನೀವು ಈ ವೆಬ್ಸೈಟ್ನಲ್ಲಿ ಲಾಗಿನ್ ಆಗಬೇಕಾಗುತ್ತದೆ ಯಾವ ರೀತಿ ಲಾಗಿನ್ ಆಗಬೇಕು ಹಾಗೂ ಯಾವ ರೀತಿ Aadhaar Card ಡೌನ್ಲೋಡ್ ಮಾಡಿಕೊಳ್ಳಬೇಕೆಂಬ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
Aadhaar Card Download ಮಾಡುವ ವಿಧಾನ
ಲಿಂಕ್ ಅನ್ನು ಓಪನ್ ಮಾಡಿದ ನಂತರ ನಿಮಗೆ ಒಂದು ಲಾಗಿನ್ ಪೇಜ್ ಕಾಣುತ್ತದೆ. “Login with Aadhaar and OTP” ಎಂದು ಬರೆದಿರುತ್ತದೆ ಅದನ್ನು ಕ್ಲಿಕ್ ಮಾಡಿ. ಈಗ ನೀವು ನಿಮ್ಮ 12 ಸಂಖ್ಯೆಯ ಆಧಾರ್ ಕಾರ್ಡ್ ನಂಬರ್ ಅನ್ನು ಅಲ್ಲಿ ಹಾಕಬೇಕು. ಯಾವ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಬೇಕು ಆದರೆ ನಂಬರನ್ನು ಹಾಕಿ ಅಲ್ಲಿ ಕಾಣುವ Captcha ಸರಿಯಾಗಿ ಎಂಟ್ರಿ ಮಾಡಿ ಮುಂದುವರಿಸಿ.
ನಂತರ ನಿಮಗೆ ಮತ್ತೊಂದು ಪೇಜ್ ಓಪನ್ ಆಗುತ್ತದೆ ಆ ಪೇಜ್ ನಲ್ಲಿ “Download Aadhaar Card” ಎಂಬ ಒಂದು ಸಣ್ಣ ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ ನಂತರ ನಿಮ್ಮ ಆಧಾರ್ ಕಾರ್ಡ್ ಸಂಪೂರ್ಣವಾದ ವಿವರ ತೋರಿಸುತ್ತದೆ ಅದರ ಕೆಳಗೆ ಡೌನ್ಲೋಡ್ ಬಟನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಕಾರ್ಡ್ ಪಿಡಿಎಫ್ ಮೂಲಕ ನಿಮ್ಮ ಮೊಬೈಲ್ ಫೋನಿನಲ್ಲಿ ಡೌನ್ಲೋಡ್ ಆಗುತ್ತದೆ.
ಡೌನ್ಲೋಡ್ ಆದ ಆಧಾರ್ ಕಾರ್ಡನ್ನು ಓಪನ್ ಮಾಡುವ ವಿಧಾನ
ಆಧಾರ್ ಕಾರ್ಡ್ ಡೌನ್ಲೋಡ್ ಆದ ನಂತರ ಅದನ್ನು ಓಪನ್ ಮಾಡಲು ಸೆಕ್ಯೂರಿಟಿ ಕೋಡ್ ಕೇಳುತ್ತದೆ ಅಂದರೆ ಪಾಸ್ವರ್ಡ್ ಯಾಕಂದರೆ ಬಹಳಷ್ಟು ಜನರು ಮೋಸ ಮಾಡುವ ಕಾರಣದಿಂದ ಈ ರೀತಿಯ ಒಂದು ಸೆಕ್ಯೂರಿಟಿ ಕೋಡನ್ನು ಸರ್ಕಾರ ಜಾರಿಗೆ ತಂದಿದೆ ಈಗ ಯಾವ ರೀತಿ ನಿಮ್ಮ ಡೌನ್ಲೋಡ್ ಆದ ಆಧಾರ್ ಕಾರ್ಡ್ ಓಪನ್ ಮಾಡುವುದು ಎಂದು ನೋಡುವುದಾದರೆ.
ಉದಾಹರಣೆಗೆ: ಆಧಾರ್ ಕಾರ್ಡಿನಲ್ಲಿ ನಿಮ್ಮ ಹೆಸರು “KUMAR” ಅಂತ ಇದ್ದು ಹಾಗೂ ನೀವು ಹುಟ್ಟಿದ ದಿನಾಂಕ ಬಂದು “1973” ಅಂತ ಇದ್ದರೆ ಮೊದಲಿಗೆ ನೀವು ನಿಮ್ಮ ಹೆಸರಿನ ನಾಲ್ಕು ಅಕ್ಷರ ನಂತರ ನಿಮ್ಮ ಹುಟ್ಟಿದ ದಿನಾಂಕವನ್ನು ಅಲ್ಲಿ ಹಾಕಿದರೆ (KUMA1973) ಅದೇ ಪಾಸ್ವರ್ಡ್ ಆಗಿರುತ್ತದೆ ನಂತರ ನಿಮ್ಮ ಆಧಾರ್ ಕಾರ್ಡ್ ಪಿಡಿಎಫ್ ಏನಿದೆ ಅದು ಓಪನ್ ಆಗುತ್ತದೆ. ಈ ಸುಲಭವಾದ ವಿಧಾನ ಬಳಸಿಕೊಂಡು ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿ
ಇದನ್ನೂ ಓದಿ: Ration Card Application Status: ಹೊಸ ರೇಷನ್ ಕಾರ್ಡ್ ಅಪ್ಲಿಕೇಶನ್ ಸ್ಟೇಟಸ್ ನೋಡುವ ವಿಧಾನ!!