Anganwadi Job Recruitment Karnataka: ಎಲ್ಲರಿಗೂ ನಮಸ್ಕಾರ, ನಮ್ಮ ಒಂದು ಕರ್ನಾಟಕದಲ್ಲಿ ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿಗಳು ಏನಿರುತ್ತೆ ಅಂಗನವಾಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೆ ಅಂಗನವಾಡಿಗೆ ಸಹಾಯಕಿಯರ ಹುದ್ದೆಗಳಿಗೆ ಕಾಲನ್ನ ಮಾಡಿದ್ರು.
ಅಂಗನವಾಡಿ ಉದ್ಯೋಗ ನೇಮಕಾತಿ ಅರ್ಹತೆ:
ಈ ಒಂದು ಜಾಬ್ ಗಳಿಗೆ ಯಾವುದೇ ರೀತಿಯಾದಂತಹ ಎಕ್ಸಾಮ್ಸ್ ನಡೆಯುವುದಿಲ್ಲ:
- ಸಹಾಯಕ್ಕೆ ಕಾರ್ಯಕರ್ತ ಜಾಬ್ ಗೆ ಪಿಯುಸಿ ಆಗಿದ್ರೆ ಸಾಕು
- ಸಹಾಯಕಿಯರ ಜಾಬ್ ಗೆ 10th ಆಗಿದ್ರೆ ಸಾಕು
- ನೀವು ಇರೋ ಜಾಗದಲ್ಲೇ ಕೆಲಸವನ್ನ ತಗೋಬಹುದು
ಯಾವ ಜಿಲ್ಲೆಗಳಲ್ಲಿ ಕೆಲಸಕ್ಕೆ ನೇಮಕಾತಿ ಕರೆದಿದ್ದಾರೆ:
ಇದು ಅಂಗನವಾಡಿ ಉದ್ಯೋಗ ನೇಮಕಾತಿ ಎಲ್ಲಾ ಜಿಲ್ಲೆಗಳನ್ನು ಒಟ್ಟಿಗೆ ಕಾಲ್ ಮಾಡಿಲ್ಲ ಹಂತಹಂತವಾಗಿ ಕಾಲ್ ಮಾಡ್ತಾ ಇದ್ದಾರೆ ಒಂದಷ್ಟು ಜಿಲ್ಲೆಗಳ ನೋಟಿಫಿಕೇಶನ್ ನನಗೆ ಸಿಕ್ತು ಇನ್ನೊಂದಷ್ಟು ಜಿಲ್ಲೆಗಳದು ಸಿಕ್ಕಿಲ್ಲ.
- ಮಂಡ್ಯ
- ದಕ್ಷಿಣ ಕನ್ನಡ
- ರಾಯಚೂರು
- ರಾಮನಗರ
- ಉಡುಪಿ
- ಗದಗ
- ದಾವಣಗೆರೆ
ಇನ್ನು ಒಂದಷ್ಟು ಸಾಕಷ್ಟು ಜಿಲ್ಲೆಗಳದು ಕಾಲ್ ಮಾಡಿದ್ದಾರೆ.
ಒಂದು ಐದು, ಐದು ಜಿಲ್ಲೆ ಒಂದು ಸ್ವಲ್ಪ ದಿನಗಳ ಗ್ಯಾಪ್ ಕೊಟ್ಟು ಹಂತಹಂತವಾಗಿ ಕಾಲನ್ನ ಕೂಡ ಮಾಡ್ತಾ ಇದ್ದಾರೆ ಆಲ್ಮೋಸ್ಟ್ ಒಂದು ಒಂದೊಂದು ಜಿಲ್ಲೆಯಲ್ಲೇನೆ 300, 400 ಅಂಗನವಾಡಿ ಜಾಬ್ ಗಳಿಗೆ ಕಾಲನ್ನ ಮಾಡಿರುವಂತದ್ದು.
ಆಸಕ್ತಿ ಇರೋವರು ಉಪಯೋಗಿಸಿಕೊಳ್ಳಿ ನಿಮ್ಮ ಜಿಲ್ಲೆಯಲ್ಲಿ ಕಾಲ್ ಆಗಿದೆಯೋ ಇಲ್ವೋ ಅಂತ ಅಂದುಬಿಟ್ಟು ಹೇಗೆ ಚೆಕ್ ಮಾಡಿಕೊಳ್ಳುವುದು ಅಂತ ಕೂಡ ತಿಳಿಸ್ತೀನಿ ಅಲ್ಲೇ ನೀವು ಚೆಕ್ ಮಾಡ್ಕೊಂಡು ನಿಮ್ಮ ಜಿಲ್ಲೆಯಲ್ಲಿ ಕಾಲ್ ಆಗಿದ್ರೆ ನೀವು ನೇರವಾಗಿ ಅಪ್ಲೈನ ಮಾಡಬಹುದು.
ಅಂಗನವಾಡಿ ಉದ್ಯೋಗಕ್ಕೆ ಸಿಗುವ ಸಂಬಳ:
ಈ ಒಂದು ಜಾಬ್ ಗೆ ಒಂದು ಸಂಬಳ ಬಂದು ಇದನ್ನ ಗೌರವಧನ ಅಂತ ಹೇಳ್ತೀವಿ ಈ ಅಂಗನವಾಡಿ ಕಾರ್ಯಕರ್ತರಿಗೆ ಆಲ್ಮೋಸ್ಟ್ ಒಂದು 12,000 ದಿಂದ 15,000 ವರೆಗೂ ಗೌರವಧನ ಬರುತ್ತೆ
ಶೈಕ್ಷಣಿಕ ಅರ್ಹತೆ ನೇಮಕಾತಿ:
ಯಾರೆಲ್ಲ ಪಿಯುಸಿ ಮಾಡಿದ್ದೀರಾ SSLC ಮಾಡಿದ್ದೀರಾ SSLC ಮಾಡಿರೋವರು ಸಹಾಯಕಿ ಜಾಬ್ ಗೆ ಅಪ್ಲೈ ಮಾಡಿ ಪಿಯುಸಿ ಮಾಡಿರೋವರು ಕಾರ್ಯಕರ್ತೆ ಇರೋ ಜಾಬ್ ಗೆ ಅಪ್ಲೈ ಅನ್ನ ಮಾಡಬಹುದು.
ಪಿಯುಸಿ ಜೊತೆಗೆ ಡಿಪ್ಲೋಮಾ ಮಾಡಿರೋವರು ಕೂಡ ಹಾಕಬಹುದು ಹಾಗೇನೇ ಆ ಅದರ ತತ್ಸಮಾನ ಪಿಯುಸಿ ಗೆ ಸಮಾನ ಆಗಿರುವಂತಹ ಡಿಪ್ಲೋಮಾ ಆಗಿರಬಹುದು ಐಟಿ ಆಗಿರಬಹುದು. ಈ ರೀತಿ ಬೇರೆ ಕೋರ್ಸ್ ಮಾಡಿರುವಂತವರು ಸಹ ಕಾರ್ಯಕರ್ತೆಯರ ಜಾಬ್ ಗೆ ಅಪ್ಲೈ ಅನ್ನ ಮಾಡಬಹುದಾಗಿದೆ.
ಇನ್ನು SSLC ಗೆ ಎಸ್ಎಲ್ಸಿ ನೇ ಆಗಿರಬೇಕು ಎಸ್ಎಲ್ಸಿ ಆಗಿರುವರು ಸಹಾಯಕಿ ಹುದ್ದೆಗೆ ಅಪ್ಲೈ ಅನ್ನ ಮಾಡಬಹುದು
ಅಭ್ಯರ್ಥಿಗಳ ವಯಸ್ಸಿನ ಮಿತಿ:
ಇನ್ನ ವಯಸ್ಸು ಬಂದು ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 35 ವರ್ಷ.
ಅಷ್ಟೇ ಇದು ಜೊತೆಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ ಒನ್ ಅಂದ್ರೆ ಕ್ಯಾಟಗರಿ ಒನ್ ಅಂತ ಏನು ಹೇಳ್ತಿವಿ ಅವರಿಗೆ ಐದು ವರ್ಷ ವಯಸ್ಸು ವಯಸ್ಸಿನ ಸಡಿಲಿಕೆ ಇರುತ್ತೆ.
ಇದರ ಜೊತೆಗೆ ಹಿಂದುಳಿದ ವರ್ಗಗಳಿಗೆ ಮೂರು ವರ್ಷ ವಯಸ್ಸಿನ ಸಡಿಲಿಕೆ ಇರುತ್ತೆ ಇವರು ಹಿಂದುಳಿದ ವರ್ಗದವರು 38 ವರ್ಷದವರೆಗೂ ಕೂಡ ಅಪ್ಲೈ ಅನ್ನ ಮಾಡಬಹುದು.
SC/ST ಹಾಗೆ ಕ್ಯಾಟಗರಿ ಒನ್ ಅಂತ ಏನು ಬರ್ತಾರೆ ಅವರು ಐದು ವರ್ಷ ಸಡಿಲಿಕೆ ಇದೆ. ಅವರು 40 ವರ್ಷದವರೆಗೂ ಕೂಡ ಅಪ್ಲೈ ಅನ್ನ ಮಾಡಬಹುದಾಗಿದೆ.
ಜನರಲ್ ಅವರು 35 ವರ್ಷದವರೆಗೆ ಅಪ್ಲೈ ಅನ್ನ ಮಾಡಬಹುದು.
ಅಂಗನವಾಡಿ ಉದ್ಯೋಗ ಆಯ್ಕೆ ವಿಧಾನ:
ಆಯ್ಕೆ ವಿಧಾನ ಹೇಗೆ ನಡೆಯುತ್ತೆ ಅಂತಂದ್ರೆ ನೀವು ಅರ್ಜಿಯನ್ನ ಹಾಕಿರ್ತೀರ ಅಲ್ವಾ ಅದರಲ್ಲಿ ಖಾಲಿ ಇರುವಂತಹ ಕೇಂದ್ರಕ್ಕೆ ಹತ್ತಿರದ ಅಭ್ಯರ್ಥಿಗಳು ಯಾರ್ಯಾರೆಲ್ಲ ಅಪ್ಲೈ ಅನ್ನ ಮಾಡಿರ್ತಾರೆ ಅವರ ಒಂದು ಒಂದು ವಿದ್ಯಾರ್ಹತೆಯನ್ನ ನೋಡ್ತಾರೆ ಜೊತೆಗೆ ಮೀಸಲಾತಿ ಏನಿರುತ್ತೆ ಸರ್ಕಾರಿ ಕೆಲಸಗಳಿಗೆ ಹೇಗೆ ಮೀಸಲಾತಿ ಇರುತ್ತೋ ಇದಕ್ಕೂ ಹಾಗೆ ಸೇಮ್ ಎಲ್ಲಾ ಮೀಸಲಾತಿಯನ್ನ ಕಡ್ಡಾಯವಾಗಿ ಪಾಲನೆ ಮಾಡ್ತಾರೆ.
ಮೀಸಲಾತಿ ಆಧಾರದಲ್ಲಿ ಒಂದು ಶಾರ್ಟ್ ಲಿಸ್ಟ್ ಅನ್ನ ಮಾಡ್ತಾರೆ ಶಾರ್ಟ್ ಲಿಸ್ಟ್ ಅನ್ನ ಮಾಡಿ ನಿಮ್ಮನ್ನ ಒಂದು ನೇರವಾಗಿ ಸಂದರ್ಶನಕ್ಕೆ ಕರೀತಾರೆ ಸಂದರ್ಶನ ನಡೆಸಿ ಆಯ್ಕೆಯನ್ನ ಮಾಡ್ತಾರೆ. ಇದಿಷ್ಟೇ ಬೇರೆ ಯಾವುದೇ ರೀತಿಯಾದಂತಹ ಎಕ್ಸಾಮ್ ಏನು ಕೂಡ ನಡೆಯುವುದಿಲ್ಲ
ಅಂಗನವಾಡಿ ಉದ್ಯೋಗ ಅರ್ಜಿ ಸಲ್ಲಿಸುವ ಲಿಂಕ್:
ಈ ಒಂದು ಜಾಬ್ ಗೆ ಅಪ್ಲೈ ಮಾಡಬೇಕು ಅಂದ್ರೆ ನೀವು ಆನ್ಲೈನ್ ಅಲ್ಲೇ ಅಪ್ಲೈ ಮಾಡಬೇಕು. – karnemakaone.kar.nic.in
ಇದನ್ನೂ ಓದಿ: ಅಭ್ಯರ್ಥಿಗಳಿಗೆ Railway Recruitment 2024!!