ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, KSRTC – ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ಗಳಲ್ಲಿ ಪ್ರಯಾಣಿಸಲು ಪಾಸ್ ಪಡೆಯಬಹುದು. ಹೇಗೆ ಬಸ್ ಪಾಸ್ ಪಡೆಯುವುದು? ಅರ್ಜಿಯನ್ನು ಹೇಗೆ ಸಲ್ಲಿಸುವುದು? ಎಲ್ಲಿ ಸಲ್ಲಿಸುವುದು ಯಾವ ಯಾವ ದಾಖಲೆಗಳ ಅವಶ್ಯವಿದೆ?
ಇದರ ಕುರಿತು ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಹಾಗಾಗಿ ಈ ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ. ಮಾಹಿತಿ ಉಪಯುಕ್ತವಾಗಿದೆ. ಹಾಗದರೆ ಬಸ್ ಪಾಸ್ ಯಾರು ಪಡೆಯಬಹುದು? ಸದ್ಯಕ್ಕೆ ಬಸ್ ಪಾಸ್ ಗಳನ್ನು ಶಾಲ ಕಾಲೇಜಿನ ವಿದ್ಯಾರ್ಥಿಗಳು ಪಡೆಯಬಹುದು.
ಬಸ್ ಪಾಸ್ ಪಡೆಯಲು ಅರ್ಜಿ ಹೇಗೆ ಸಲ್ಲಿಸುವುದು
ಬಸ್ ಪಾಸ್ ಪಡೆಯಲು ಶಾಲ ಕಾಲೇಜಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅದು ಆನ್ಲೈನ್ ಮೂಲಕ ಸೇವಾ ಸಿಂಧು ವೆಬ್ಸೈಟ್ ನಲ್ಲಿ ಸಲ್ಲಿಸಬಹುದು. ಈ ಸೇವಾ ಸಿಂಧು ಪೋರ್ಟಲ್ ನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಪಾಸ್ ಸೆಕ್ಷನ್ ಅಲ್ಲಿ ಹೋಗಿ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಿ ಬಸ್ ಪಾಸ್ ಪಡೆಯಬಹುದು.
ಬಸ್ ಪಾಸ್ ಪಡೆಯಲು ಅರ್ಜಿಯನ್ನು ನೀವೇ ಮನೆಯಲ್ಲಿ ಇಂಟರ್ನೆಟ್ ಸಹಾಯದಿಂದ ಸಲ್ಲಿಸಬಹುದು. ಅಥವಾ ಸೈಬರ್ ಸೆಂಟರ್ ಗಳಲ್ಲಿ ಹೋಗಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು:
- ಆಧಾರ್ ಕಾರ್ಡ್
- ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್
- ಶಾಲೆ ಕಾಲೇಜಿನ ಪ್ರಿನ್ಸಿಪಾಲ್ ಅವರ ಸಹಿ ಹಾಗು ಸೀಲ್ ಇರುವ ಫಾರ್ಮ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
SC/ST ಆಗಿದ್ದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು. ಇದರಿಂದ ಬಸ್ ಪಾಸ್ ನ ಶುಲ್ಕದಲ್ಲಿ ಕಡಿತ ಸಿಗುವುದು.
KSRTC ಅರ್ಜಿ ಸಲ್ಲಿಸಿದ ನಂತರ ಹೇಗೆ ಬಸ್ ಪಾಸ್ ಪಡೆಯುವುದು
ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ 150/- ಗಳನ್ನು ಅರ್ಜಿ ಸಲ್ಲಿಸುವ ವೇಳೆ ನೀಡಬೇಕು. ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಅರ್ಜಿ ಶುಲ್ಕ ಸಾಮಾನ್ಯ ವರ್ಗಕ್ಕೆ – ಹುಡುಗರಿಗೆ 750/- ಹಾಗು ಹುಡುಗಿಯರಿಗೆ 550/-, ಹಾಗೆ SC/ST ವರ್ಗಕ್ಕೆ 150/- ಬಸ್ ಪಾಸ್ ನ ಶುಲ್ಕ ನೀಡಬೇಕು. ಕಾಲೇಜಿನ ವಿದ್ಯಾರ್ಥಿಗಳು ಸಾಮಾನ್ಯ ವರ್ಗಕ್ಕೆ ಸೇರಿದವರಿಗೆ 1050/- ಹಾಗು SC ST ವರ್ಗಕ್ಕೆ 150/-.
ವೃತ್ತಿ ಪರ ಕೋರ್ಸ್ ಗಳ ವಿಧ್ಯಾರ್ಥಿ ಸಾಮಾನ್ಯ ವರ್ಗಕ್ಕೆ ಸೇರಿದವರಿಗೆ 1500/- SC/ST ವರ್ಗಕ್ಕೆ 150/- ಹಾಗೆ ಐಐಟಿ ಪದವಿ ಪಡೆಯುತ್ತಿರುವರಿಗೆ 1310/- ಹಾಗು SC/ST ವರ್ಗಕ್ಕೆ 160/-. PhD ಪದವಿ ವಿಧ್ಯಾರ್ಥಿಗಳಿಗೆ 1350/- ಹಾಗು SC/ST ಗೆ 150/- ಗಳ ಬಸ್ ಪಾಸ್ ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಅರ್ಜಿ ಶುಲ್ಕ ಪಾವತಿಸಿದ ಅರ್ಜಿ ಸಲ್ಲಿಸಿದ ನಂತರ acknowledgement ಪತ್ರಕ್ಕೆ ಪ್ರಾಂಶುಪಾಲರ ಸಹಿ ಮತ್ತು ಸೀಲ್ ಅಕಿಸಿ, ಕೆಎಸ್ಆರ್ಟಿಸಿ ಡಿಪೋ ನಲ್ಲಿ ನೀಡಿದರೆ ಆಗಲೇ ಅಲ್ಲೇ ಬಸ್ ಪಾಸ್ ನೀಡಲಾಗುವುದು.
ಇದನ್ನೂ ಓದಿ: ಗ್ಯಾರೆಂಟಿ ಯೋಜನೆಗಳ ಹಣ ಸರಿಯಾಗಿ ಬರುತ್ತಿಲ್ಲ!