ಬಾಲ ಜೀವನ್ ಬಿಮಾ ಯೋಜನೆ!! ಅರ್ಜಿ ಸಲ್ಲಿಸಲು ಅಂಚೆ ಕಛೇರಿ ಭೇಟಿ ನೀಡಿ!! ಹಾಗೂ ಈ ದಾಖಲೆಗಳು ಕಡ್ಡಾಯ

Bal Jeevan Bima Yojana: ಬಾಲ ಜೀವನ್ ಬಿಮಾ ಯೋಜನೆ ಅಡಿಯಲ್ಲಿ ಮಕ್ಕಳಿಗೆ (Postal Life Insurance) ಎಂಬ ಇನ್ಸೂರೆನ್ಸ್ ಸ್ಕೀಮ್ ಅನ್ನು ಜಾರಿಗೆ ತಂದಿದ್ದಾರೆ.

ಈ ಯೋಜನೆ ನಮ್ಮ ಕರ್ನಾಟಕದಲ್ಲಿ ಜಾರಿಗೆ ಬಂದಿದೆ. ಒಂದು ಕುಟುಂಬದಿಂದ ಎರಡು ಮಕ್ಕಳಿಗೆ ಯೋಜನೆ ಸಿಗುತ್ತದೆ ಅದಕ್ಕಿಂತ ಜಾಸ್ತಿ ಇರುವ ಮಕ್ಕಳಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ.

ಅರ್ಜಿ ಸಲ್ಲಿಸಲು ಮಕ್ಕಳ ವಯಸ್ಸು ಎಷ್ಟು ಇರಬೇಕು ಹಾಗೂ ಪೋಷಕರ ವಯಸ್ಸು ಎಷ್ಟು ಇರಬೇಕು? ಯಾವೆಲ್ಲಾ ದಾಖಲೆಗಳನ್ನು ನೀಡಿ ನೀವು ಈ ಯೋಜನೆಗೆ ಅರ್ಜಿಯನ್ನು ನೀಡಬಹುದು ಎಂಬ ಸಂಪೂರ್ಣ ಮಾಹಿತಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

bal jeevan bima yojana post office Karnataka

ಬಾಲ ಜೀವನ್ ಬಿಮಾ ಯೋಜನೆ 2024

ಹಣವನ್ನು ಹೂಡಿಕೆ ಮಾಡುವುದಕ್ಕೆ ಇರುವ ಒಳ್ಳೆಯ ಸ್ಥಳ ಯಾವುದು ಎಂದರೆ ಅದು ಪೋಸ್ಟ್ ಆಫೀಸ್ ಯಾಕಂದರೆ ಇದರಲ್ಲಿ ಹಣ ಮೋಸ ಆಗುವ ಯಾವುದೇ ರೀತಿಯ ಆತಂಕ ಇರುವುದಿಲ್ಲ ಆದ್ದರಿಂದ ಜನರು ಪೋಸ್ಟ್ ಆಫೀಸ್ ಅಲ್ಲಿ ಹಣ ಹೂಡಿಕೆ ಮಾಡುವುದಕ್ಕೆ ಬಯಸುತ್ತಾರೆ.

ಅದೇ ರೀತಿ ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಲು ನಿಮ್ಮ ಮಕ್ಕಳ ವಯಸ್ಸು 5 ವರ್ಷದಿಂದ ಮೇಲೆ 20 ವರ್ಷದ ಒಳಗೆ ಇರಬೇಕು ಆಗ ಮಾತ್ರ ಆ ಮಕ್ಕಳಿಗೆ ಯೋಜನೆಯ ಲಾಭ ಸಿಗುತ್ತದೆ. ಹಾಗೂ ಪೋಷಕರ ವಯಸ್ಸು 45 ವರ್ಷದ ಒಳಗಿರಬೇಕು. 

ನಿಮ್ಮ ತಾಯಿಯ ವಯಸ್ಸು 45 ವರ್ಷದ ಕೆಳಗೆ ಇದ್ದರೆ ಮತ್ತು ನಿಮ್ಮ ತಂದೆಯ ವಯಸ್ಸು 45 ವರ್ಷದ ಮೇಲೆ ಇದ್ದರೆ ನಿಮ್ಮ ತಾಯಿಯ ಹೆಸರಿನಲ್ಲಿ ಅರ್ಜಿಯನ್ನು ಸಲ್ಲಿಸಬಹುದು, ಯಾರ ಒಬ್ಬರ ವಯಸ್ಸು ಮಾತ್ರ 45 ವರ್ಷದ ಕೆಳಗೆ ಇರಬೇಕು. ಆವಾಗ ಮಾತ್ರ ನಿಮ್ಮ ಅರ್ಜಿ ಪೋಸ್ಟ್ ಆಫೀಸಿನಲ್ಲಿ ಸ್ವೀಕಾರವಾಗುತ್ತದೆ.

ಬಾಲ ಜೀವನ್ ಬಿಮಾ ಯೋಜನೆ ದಾಖಲೆಗಳು

  • ಜನನ ಪ್ರಮಾಣಪತ್ರ
  • ಗುರುತಿನ ಪುರಾವೆ
  • ವಿಳಾಸ ಪುರಾವೆ

ಎಷ್ಟು ತಿಂಗಳು, ಎಷ್ಟು ಹಣ ಹೂಡಿಕೆ ಮಾಡಬಹುದು

ಪ್ರೀಮಿಯಂ ಪಾವತಿ ಅವಧಿಯು ತಿಂಗಳು, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕವಾಗಿರಬಹುದು, 20 ವರ್ಷಗಳ ಪಾಲಿಸಿ ಅವಧಿಗೆ ಕನಿಷ್ಠ 5.92 ರೂಪಾಯಿ ಪ್ರೀಮಿಯಂ ಮತ್ತು 5 ವರ್ಷಗಳ ಪಾಲಿಸಿ ಅವಧಿಗೆ ಗರಿಷ್ಠ 18.88 ರೂಪಾಯಿ ಪ್ರೀಮಿಯಂ.

ಗರಿಷ್ಠ ವಿಮಾ ಮೊತ್ತ ರೂ. 3 ಲಕ್ಷ ಅಥವಾ ಮುಖ್ಯ ಪಾಲಿಸಿದಾರರ ವಿಮಾ ಮೊತ್ತಕ್ಕೆ ಸಮನಾಗಿರುತ್ತದೆ, ಯಾವುದು ಕಡಿಮೆಯೋ ಅದು. ಪಾಲಿಸಿಯ ಮೇಲಿನ ಸಾಲಗಳು ಲಭ್ಯವಿಲ್ಲ.

ಅಲ್ಲಿಯವರೆಗೆ ಎಲ್ಲಾ ಪ್ರೀಮಿಯಂಗಳನ್ನು ಪಾವತಿಸಿದರೆ 5 ವರ್ಷಗಳ ನಂತರ ಮಧ್ಯಂತರ ಹಿಂಪಡೆಯುವಿಕೆಯನ್ನು ಅನುಮತಿಸಲಾಗುತ್ತದೆ. ಬೋನಸ್ ಪಾವತಿಗಳು ಎಂಡೋಮೆಂಟ್ ನೀತಿಯಂತೆಯೇ ಇರುತ್ತವೆ. ಪಾಲಿಸಿಯನ್ನು 60 ತಿಂಗಳ ನಂತರ (5 ವರ್ಷಗಳು) ಸರೆಂಡರ್ ಮಾಡಬಹುದು.

ಇದನ್ನೂ ಓದಿ: 7ನೇ ವೇತನ ಆಯೋಗ ಕರ್ನಾಟಕ 2024!! ಈ ಎಲ್ಲಾ ವರ್ಗದವರಿಗೆ ವೇತನ ಹೆಚ್ಚಳ ಸಾಧ್ಯತೆಗಳು ಇದೆ

Leave a Comment

error: Content is protected !!