ಎಲ್ಲರಿಗೂ ನಮಸ್ಕಾರ, ಭಾಗ್ಯಲಕ್ಷ್ಮಿ ಬಾಂಡ್ ಮಾಡಿಸಿದಂತಹ ಫಲಾನುಭವಿಗಳಿಗೆ ಒಂದು ಗುಡ್ ನ್ಯೂಸ್ ಇರುವಂತದ್ದು 2024 ರಲ್ಲಿ ಅಂದ್ರೆ ಅತಿ ಶೀಘ್ರದಲ್ಲೇನೆ ಭಾಗ್ಯಲಕ್ಷ್ಮಿ ಬಾಂಡ್ ಮಾಡಿಸಿದಂತಹ ಹೆಣ್ಣುಮಗುವಿನ ಖಾತೆಗೆ 1 ಲಕ್ಷ ರೂಪಾಯಿ ಹಣವನ್ನು ನೇರವಾಗಿ ಜಮೆ ಮಾಡ್ತಾ ಇದ್ದಾರೆ.
2,30,000 ಕ್ಕಿಂತ ಹೆಚ್ಚಿನ ಫಲಾನುಭವಿಗಳಿಗೆ ಡೈರೆಕ್ಟ್ ಆಗಿ ಅವರ ಬ್ಯಾಂಕ್ ಖಾತೆಗೆ ಅಂದ್ರೆ ಹೆಣ್ಣುಮಗುವಿನ ಬ್ಯಾಂಕ್ ಖಾತೆಗೆ ಒಂದು ಲಕ್ಷ ಭಾಗ್ಯಲಕ್ಷ್ಮಿ ಯೋಜನೆಯ ಹಣವನ್ನು ಜಮೆ ಮಾಡ್ತಾ ಇದೆ ಸರ್ಕಾರ.
ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ 2024
2,30,000 ಕ್ಕಿಂತ ಹೆಚ್ಚಿನ ಫಲಾನುಭವಿಗಳಿಗೆ ಈ ವರ್ಷದಲ್ಲಿ ಅಲ್ಲಿ ಅವರ ಒಂದು ಖಾತೆಗೆ ಹಣ ಜಮೆ ಆಗ್ತಾ ಇದೆ ಅಂದ್ರೆ ಆ ಒಂದು ಮಗುವಿನ ಖಾತೆಗೆ ಮೆಚುರಿಟಿ ಅಮೌಂಟ್ ಒಂದು ಲಕ್ಷ ರೂಪಾಯಿ ಇದೆ ನಾವು ರೌಂಡ್ ಫಿಗರ್ ಅಲ್ಲಿ ಒಂದು ಲಕ್ಷ ರೂಪಾಯಿ ಅಂತ ಅಂದುಕೊಳ್ಳೋಣ ಒಂದು ಲಕ್ಷ ರೂಪಾಯಿ ಮಗುವಿನ ಖಾತೆಗೆ ನೇರವಾಗಿ ಜಮೆ ಆಗುತ್ತೆ.
ಈ ಒಂದು ಯೋಜನೆ ಜಾರಿಗೆ ಆಗಿದ್ದು 2006 ಮತ್ತೆ ಏಳನೇ ವರ್ಷದಲ್ಲಿ ಜಾರಿಗೆ ಬಂದಿದಂತದ್ದು ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಅಂದಿನ ಸಿಎಂ ಆಗಿದಂತಹ ಯಡಿಯೂರಪ್ಪ ಅವರು ಈ ಒಂದು ಯೋಜನೆಯನ್ನ ಜಾರಿಗೆ ತರ್ತಾರೆ ಅವಾಗ ಸಮ್ಮಿಶ್ರ ಸರ್ಕಾರ ಇತ್ತು. ಆ ಒಂದು ಸಂದರ್ಭದಲ್ಲಿ ಅಂದಿನ ಸಿಎಂ ಆಗಿದಂತಹ ಸಿಎಂ ಯಡಿಯೂರಪ್ಪ ಅವರು ಈ ಒಂದು ಯೋಜನೆಯನ್ನ ಜಾರಿಗೆ ತರ್ತಾರೆ.
ಈ ಯೋಜನೆ ಜಾರಿಯಾಗಿ ಈ ವರ್ಷದ ಅಂದ್ರೆ 2024 ರ ಏಪ್ರಿಲ್ ಮತ್ತೆ ಮೇ ತಿಂಗಳಿಗೆ 18 ವರ್ಷ ಕಂಪ್ಲೀಟ್ ಆಗಿರುವಂತದ್ದು ಈಗ ಇದಕ್ಕೆ 18 ವರ್ಷ ಕಂಪ್ಲೀಟ್ ಆಗಿದೆ 2024 ರಲ್ಲಿ ಅಂದ್ರೆ ಶೀಘ್ರದಲ್ಲೇ 2,30,000 ಕ್ಕಿಂತ ಹೆಚ್ಚಿನ ಫಲಾನುಭವಿಗಳ ಖಾತೆಗೆ ಅಂದ್ರೆ ಹೆಣ್ಣು ಮಗುವಿಗೆ ನೇರವಾಗಿ ಹಣ ಜಮೆ ಆಗ್ತಾ ಇದೆ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಲ್ಲಾ ರೀತಿಯಾದಂತಹ ಸಿದ್ಧತೆಗಳನ್ನ ಮಾಡ್ಕೊಂತಾ ಇದೆ.
ಭಾಗ್ಯಲಕ್ಷ್ಮಿ ಯೋಜನೆ ಹಣಪಡೆಯುವುದಕ್ಕೆ ಯಾರು ಅರ್ಹರು
ಈ ಒಂದು ಹಣವನ್ನು ಪಡಿಬೇಕು ಅಂತಂದ್ರೆ:
- BPL ಕಾರ್ಡ್ ಇರಬೇಕು ಅದು ಕಡ್ಡಾಯವಾಗಿ ಬಿಪಿಎಲ್ ಕಾರ್ಡ್ ಇರಲೇಬೇಕು. ಬಡವರಿಗೆ ಸಿಕ್ತಾ ಇರುವಂತಹ ಯೋಜನೆ ಆಗಿರೋದ್ರಿಂದ ಇದು ಬಿಪಿಎಲ್ ಕಾರ್ಡ್ ಇರೋದು ಕಡ್ಡಾಯ ಆಗಿರುತ್ತೆ.
- ಮೊದಲ ಇಬ್ಬರು ಮಕ್ಕಳಿಗೆ ಸಿಗುತ್ತೆ ಅಂದ್ರೆ ಇಬ್ಬರಿಗೆ ಮಾಡ್ಸಿದರೆ ನೀವು ಇಬ್ಬರಿಗೂ ಸಿಗುತ್ತೆ ನೀವೇನಾದ್ರೂ ಒಬ್ಬರಿಗೆ ಮಾತ್ರ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯನ್ನ ಮಾಡ್ಸಿದ್ದೀರಾ ಇನ್ನೊಂದು ಹೆಣ್ಣು ಮಗುವಿಗೆ ಮಾಡ್ಸಿಲ್ಲ ಅಂತಂದ್ರೆ ನಿಮಗೆ ಸಿಗೋದಿಲ್ಲ ಇಬ್ಬರಿಗೂ ಬಾಂಡ್ ಮಾಡ್ಸಿರಬೇಕಾಗುತ್ತೆ.
- ಮೆಚುರಿಟಿ ಹಣವನ್ನ ಮೆಚುರಿಟಿ ಅಮೌಂಟ್ ಅನ್ನ ಪಡಿಬೇಕು ಅಂತ ಅಂದ್ರೆ ಆ ಒಂದು ಹೆಣ್ಣುಮಗು ಎಂಟನೇ ತರಗತಿ ಓದಿರಬೇಕು ಕನಿಷ್ಠ ಅಂತ ಅಂದ್ರು ಎಂಟನೇ ತರಗತಿ ಓದಿರಬೇಕಾಗುತ್ತೆ.
- ಬಾಲಕಾರ್ಮಿಕರಾಗಿರಬಾರದು
- ಬಾಲ್ಯ ವಿವಾಹ ಆಗಿರಬಾರದು ಅಂದ್ರೆ 18 ವರ್ಷಕ್ಕಿಂತ ವಯಸ್ಸಿನ ಒಳಗಡೆ ಯಾವುದೇ ರೀತಿಯಾದಂತಹ ವಿವಾಹ ಅಂದ್ರೆ ಮದುವೆ ಆಗಿರಬಾರದು.
ಈ ಒಂದು ಯೋಜನೆ ಅಡಿಯಲ್ಲಿ ಹಣ ಸಿಗೋದಿಲ್ಲ ಇದಿಷ್ಟು ಈ ಒಂದು ಹಣವನ್ನು ಪಡೆಯುವುದಕ್ಕೆ ಯಾರು ಅರ್ಹರು ಅನ್ನೋದರ ಬಗ್ಗೆ ಆಯ್ತು.
ಇದನ್ನೂ ಓದಿ: ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದಕ್ಕೆ ಕೊನೆಯ ದಿನಾಂಕ ನಿಗದಿ!!