ರೈತರಿಗೆ ಬರ ಪರಿಹಾರದ ಹಣ ಬಿಡುಗಡೆಯಾಗುತ್ತದೆ!! ಕೃಷ್ಣ ಬೈರೇಗೌಡರವರು ರೈತರಿಗೆ ಹೇಳಿದ್ದಾರೆ

ಎಲ್ಲರಿಗೂ ನಮಸ್ಕಾರ, ಕರ್ನಾಟಕ ರಾಜ್ಯದ ರೈತರಿಗೆ  ಕರ್ನಾಟಕ ಸರ್ಕಾರದ ಕಡೆಯಿಂದ ಒಂದು ಭರ್ಜರಿ ಗುಡ್ ನ್ಯೂಸ್ ಬಂದಿದೆ. ಸ್ನೇಹಿತರೆ ಸಾಕಷ್ಟು ರೈತರು ಬೆಳೆ ಪರಿಹಾರದ ಹಣಕ್ಕಾಗಿ ಬಹಳಷ್ಟು ದಿನಗಳಿಂದ ಕಾಯುತ್ತಿದ್ದರು.  ಈಗ ಬೆಳೆ ಪರಿಹಾರದ ಹಣದ ಬಗ್ಗೆ ಸರ್ಕಾರದ ಕಡೆಯಿಂದ ಮಹತ್ವದ ಅಪ್ಡೇಟ್ ಬಂದಿದೆ. 

ರಾಜ್ಯದ ರೈತರಿಗೆ ಸಚಿವರಾದ ಕೃಷ್ಣ ಭೈರೇಗೌಡರವರು ಒಂದು ಭರ್ಜರಿ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ಸಿಎಂ  ಗೃಹ ಕಚೇರಿ ಭೇಟಿ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ರವರ ನೇತೃತ್ವದಲ್ಲಿ ನಡೆದ ಸಭೆಯ ನಂತರ ಸಚಿವರು ಕೃಷ್ಣ ಬೈರೇಗೌಡರವರು ಹೇಳಿಕೆಯನ್ನು ನೀಡಿದ್ದಾರೆ. ಇದರ ಬಗ್ಗೆ ವಿವರವಾಗಿ ತಿಳಿಯಲು ಪೂರ್ತಿಯಾಗಿ ನೀಡಿ.

drought relief fund released karnataka

ಕರ್ನಾಟಕದ ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ

ಕೆಲವು ದಿನಗಳ ಹಿಂದೆ ಸಿಎಂ ಗೃಹ ಕಚೇರಿಯಲ್ಲಿ ಒಂದು ಸಭೆಯನ್ನು ಮಾಡಲಾಗಿತ್ತು ಹಾಗೂ ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ರವರು ಕೂಡ ಭಾಗಿಯಾಗಿದ್ದರು. ಸಭೆ ಮುಗಿದ ನಂತರ ಕೃಷ್ಣ ಭೈರ ಗೌಡರವರು ಬರ ಪರಿಹಾರದ ಹಣದ ಬಿಡುಗಡೆ ಬಗ್ಗೆ ಒಂದು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. 

ಈ ಬಾರಿ ಹೆಚ್ಚುವರಿಗಾಗಿ 7 ಲಕ್ಷ ರೈತರಿಗೆ ಉಳಿದ ಬರ ಪರಿಹಾರ ಹಣವನ್ನು ನೀಡುವುದಕ್ಕೆ ಅನುಮೋದನೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ. ಬರ ಪರಿಹಾರದ ಹಣವನ್ನು ಆದಷ್ಟು ಬೇಗ ರೈತರಿಗೆ ಬಿಡುಗಡೆ ಮಾಡಲು ಸರ್ಕಾರವು ಈಗ ತೀರ್ಮಾನಿಸಿದೆ. ಈ ಕುರಿತು ಅಧಿಕೃತವಾಗಿ ಕಂದಾಯ ಸಚಿವರಾಗಿರುವ ಕೃಷ್ಣ ಭೈರೇಗೌಡರವರು ತಿಳಿಸಿದ್ದಾರೆ. 

ಒಂದು ವಾರದಲ್ಲಿ ರೈತರಿಗೆ ಬರ ಪರಿಹಾರದ ಹಣ..!

ಸ್ನೇಹಿತರೆ ಕರ್ನಾಟಕ ರಾಜ್ಯದ ರೈತರಿಗೆ ಬರ ಪರಿಹಾರದ ಹಣವನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು ಎಂದು ಇತ್ತೀಚಿಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬರ ಪರಿಹಾರದ ವಿತರಣೆ ಕುರಿತು ಎಲ್ಲಾ ಅಧಿಕಾರಿಗಳು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ ಹಾಗೂ ಇನ್ನೊಂದು ವಾರದಲ್ಲಿ ರೈತರಿಗೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. 

ಈ ಬಾರಿ ಒಟ್ಟು 41 ಲಕ್ಷ ಕರ್ನಾಟಕದ ರೈತರಿಗೆ ಬರ ಪರಿಹಾರದ ಹಣ ತಲುಪಲಿದೆ. ಈ ಹಿಂದೆ ಬರಿ 25 ಲಕ್ಷ ರೈತರಿಗೆ ಮಾತ್ರ ಬರ ಪರಿಹಾರ ಹಣ ಜಮಾ ಆಗಿದ್ದು. 2023-24ರ ಸಾಲಿನ ಮುಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆ ಹಾನಿಗೆ SDRF ಮತ್ತು NDRF ಸೂಚನೆಯಂತೆ ಅರ್ಹತೆಯ ಅನುಗುಣನಾಗಿ ಬರ ಪರಿಹಾರದ ಹಣವನ್ನು ರೈತರ ಖಾತೆಗೆ ಜಮ್ಮ ಮಾಡಲಾಗುತ್ತಿದೆ. 

ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ!! ಅರ್ಜಿ ಸಲ್ಲಿಸಿದ ಜನರಿಗೆ ರೇಷನ್ ಕಾರ್ಡ್ ಬಿಡುಗಡೆಯಾಗಿದೆ

Leave a Comment

error: Content is protected !!