ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, ಇಂದಿನ ನಮ್ಮ ಈ ಲೇಖನದಲ್ಲಿ KCET 2024 ರ ಪರೀಕ್ಷೆಯ ಮುಂದಿನ ಹಂತಗಳೇನು ಹೇಗೆ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದು ಎಂಬ ಎಲ್ಲಾ ಮಾಹಿತಿಗಳನ್ನು ತಿಳಿಯೋಣ. ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ, ಮಾಹಿತಿ ಉಪಯುಕ್ತವಾಗಿದೆ.
ಈಗಾಗಲೇ ತಿಳಿದಿರುವ ಹಾಗೆ KCET ಪರೀಕ್ಷೆಯು ಮುಗಿದಿದ್ದು, ಅದರ ಫಲಿತಾಂಶವನ್ನು ಕೂಡ ಪ್ರಕಟಿಸಲಾಗಿದೆ. ಫಲಿತಾಂಶದ ನಂತರ ನಿಮ್ಮ ಡಿಗ್ರೀ ಕೋರ್ಸ್ ಮಾಡಲು ಕೌನ್ಸೆಲಿಂಗ್ (Counselling) ನಲ್ಲಿ ಭಾಗವಹಿಸಬೇಕು. ಇದರ ಕುರಿತು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯೋಣ.
KCET Cut-off ನಲ್ಲಿ ಇರುವ ಮಾಹಿತಿಗಳ ಕುರಿತು ಇಲ್ಲಿದೆ ಮಾಹಿತಿ!
KCET 2023 ರ cutoff ಅಂದರೆ ಯಾವ ರಾಂಕ್ ಗಳಿಗೆ ಯಾವ ಯಾವ ಕಾಲೇಜಿನಲ್ಲಿ ಯಾವ ಯಾವ branch ಗಳಲ್ಲಿ ಸಿಗುತ್ತದೆ ಎಂಬ ಪಟ್ಟಿ. ಈ ಪಟ್ಟಿಯಲ್ಲಿ ಎಲ್ಲಾ ಎಂಜಿನಿಯರಿಂಗ್ ಕಾಲೇಜುಗಳ ಹೆಸರಿನ ಪಟ್ಟಿ ಹಾಗು ಯಾವ ರಾಂಕ್ ನ ವರೆಗು ಆ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದು.
ಇದರ ಜೊತೆಗೆ ಯಾವ ಯಾವ ವರ್ಗಕ್ಕೆ ಎಷ್ಟು ರಾಂಕ್ ಎಂದು ಮಾಹಿತಿ ಇರುತ್ತದೆ. ಇದರಲ್ಲಿ G ಎಂಬ ಅಕ್ಷರ ಇದ್ದಲ್ಲಿ general ಎಂದು ಅರ್ಥ. ಇದರಲ್ಲಿ ಯಾವುದೇ ಕನ್ನಡ ಮೀಡಿಯಂ ಕೋಟ ಹಾಗು ಗ್ರಾಮೀಣ ಕೋಟ ಎರಡು ಸೇರುವುದಿಲ್ಲ. K ಎಂಬ ಅಕ್ಷರ ಇದ್ದಲ್ಲಿ ಅದು 1 ರಿಂದ 10 ನೇ ತರಗತಿಯ ವರೆಗು ಕನ್ನಡ ಮೀಡಿಯಂ ನಲ್ಲಿ ಓದಿರುವರಿಗೆ ಈ ಕೋಟ ಸಿಗುವುದು.
R ಎಂಬ ಅಕ್ಷರ ಇದ್ದಲ್ಲಿ ಅದು ಗ್ರಾಮೀಣ ಪ್ರದೇಶದಲ್ಲಿ ಇರುವ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿ ವರೆಗು ಓದಿರುವವರಿಗೆ ಈ ಕೋಟ ಸಿಗುವುದು. ಹಾಗೆ 1G ಎಂದರೆ 1 ನೇ ವರ್ಗಕ್ಕೆ ಸೇರಿದ ವಿಧ್ಯಾರ್ಥಿಗಳು ಜನರಲ್ ಮೆರಿಟ್ ಎಂಬ ಮೀಸಲಾತಿ ಸಿಗುವುದು. ಅದೇ ರೀತಿ 1K, 1R, 2AG, 2AR, 2AK ಇದೆ ರೀತಿ 2B, 3A, 3B, SC ಮತ್ತು ST ವರ್ಗಕ್ಕೆ ಇದೇ ತರಹ ಮೀಸಲಾತಿ ಇರುವುದು.
KCET ಪರೀಕ್ಷೆಯ ನಂತರ ಏನು ಹಂತಗಳು ಇದೇ:
KCET ಫಲಿತಾಂಶದ ನಂತರ ನಿಮ್ಮ ದಾಖಲೆಗಳ ಪರಿಶೀಲನೆಯ ಒಂದು ಡಾಕ್ಯುಮೆಂಟ್ Verification ಸ್ಲಿಪ್ ನೀಡಲಾಗುವುದು. ನಂತರ ಈ ವರ್ಷದ ಸೀಟ್ ಮ್ಯಾಟ್ರಿಕ್ ನೀಡಲಾಗುವುದು, ನಂತರ mock allotment, first round , second round ಹಾಗು third round ಹಂತಗಳಲ್ಲಿ ಸೀಟ್ ನೀಡಲಾಗುವುದು.
ಇದನ್ನೂ ಓದಿ: NEET 2024: National Eligibility Entrance Test Scam