Happy Gowri festival wishes in Kannada: ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಇವತ್ತು ಗೌರಿ ಗಣೇಶ ಹಬ್ಬದ ಸಂಪೂರ್ಣ ಮಾಹಿತಿಯನ್ನ ಮತ್ತೆ ಪೂಜಾ ವಿಧಾನವನ್ನ ತಿಳಿಸಿಕೊಡ್ತಾ ಇದೀನಿ ಎರಡು ದಿನದ ಪೂಜೆ ಶುಕ್ರವಾರದ ಗೌರಿ ಪೂಜೆ ಮತ್ತು ಶನಿವಾರದ ಗಣಪತಿ ಪೂಜೆ ಯಾವ ಸಮಯದಲ್ಲಿ ಮಾಡಬೇಕು ಮತ್ತೆ ಯಾವ ರೀತಿ ವಿಸರ್ಜನೆಯನ್ನ ಮಾಡಬೇಕು ಯಾವ ಸಮಯದಲ್ಲಿ ವಿಸರ್ಜನೆ ಮಾಡಬೇಕು ಇದನ್ನ ಸಂಪೂರ್ಣವಾಗಿ ಮಂತ್ರ ಸಹಿತ ಪೂಜೆ ಮಾಡಬೇಕು ಅಂತ ವಿಧಾನವನ್ನ ತಿಳಿಸಿಕೊಡ್ತಾ ಇದೀನಿ.
ಲೇಖನವನ್ನು ಸಂಪೂರ್ಣವಾಗಿ ಓದಿ. ಭಾದ್ರಪದ ಮಾಸ ಶುಕ್ಲ ಪಕ್ಷದ ಚತುರ್ಥಿ ದಿನ ಗಣೇಶ ಹಬ್ಬ ಚತುರ್ಥಿ ತಿಥಿ ಯಾವಾಗ ಪ್ರಾರಂಭ ಆಗುತ್ತೆ ಅಂದ್ರೆ ಆರನೇ ತಾರೀಕು ಸೆಪ್ಟೆಂಬರ್ ಮಧ್ಯಾಹ್ನ ಮೂರು ಗಂಟೆಗೆ ಪ್ರಾರಂಭ ಆಗುತ್ತೆ ಏಳನೇ ತಾರೀಕು ಶನಿವಾರ ಸಂಜೆ 5:30 ನಿಮಿಷಕ್ಕೆ ಕೊನೆಗೊಳ್ಳುತ್ತೆ. ಹಾಗಾಗಿ ಹಿಂದಿನ ದಿನ ಗುರುವಾರ ಸಂಜೆ ಕೂಡ ಗಣಪತಿಯನ್ನು ತಂದು ಇಟ್ಕೋಬಹುದು ಅಥವಾ ಶನಿವಾರ ಬೆಳಗ್ಗೆ ಕೂಡ ಗಣಪತಿಯನ್ನು ತಂದು ಪ್ರತಿಷ್ಠಾಪನೆ ಮಾಡಬಹುದು.
ಗೌರಿ, ಗಣೇಶ ಎರಡನ್ನು ಕೂಡ ಪ್ರತಿಷ್ಠಾಪನೆ
ಇನ್ನು ಗೌರಿ, ಗಣೇಶ ಎರಡನ್ನು ಕೂಡ ಪ್ರತಿಷ್ಠಾಪನೆ ಮಾಡುವಂತವರು ಶುಕ್ರವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಗೌರಿ ಗಣಪತಿಯನ್ನ ತಗೊಂಡು ಬಂದು ಆ ದಿನ ಬೆಳಗ್ಗೆ 5:30 ನಿಮಿಷದಿಂದ 8:00 ಗಂಟೆಯವರೆಗೂ ಗೌರಿಯನ್ನ ಪ್ರತಿಷ್ಠಾಪನೆ ಮಾಡಿ ಗೌರಿ ಪೂಜೆಯನ್ನ ಮಾಡ್ಕೋಬೇಕು
ಪದ್ಧತಿ ಇರುವಂತವರು ನಿಮ್ಮ ನಿಮ್ಮ ಪದ್ಧತಿ ಪ್ರಕಾರ ಗೌರಿ ಪೂಜೆಯನ್ನ ಮಾಡ್ಕೋಬಹುದು ಆದರೆ ಪೂಜೆಯ ಶುಭ ಸಮಯ ಬೆಳಗ್ಗೆ 5:30 ರಿಂದ 8:00 ಗಂಟೆ ಒಳಗಡೆ ಗೌರಿ ಪೂಜೆಯನ್ನ ಮಾಡಿಕೊಳ್ಳಿ ಅದು ಪ್ರಶಸ್ತವಾದ ಸಮಯ ಅಂತ ಹೇಳಬಹುದು ಗಣಪತಿಯನ್ನ ಕೂರಿಸೋದಕ್ಕೆ ಜಾಗ ಮಾಡಿ ಬಿಟ್ಟುಬಿಡಬೇಕು ಮುಂಭಾಗದಲ್ಲಿ ಗೌರಿಯನ್ನ ಪ್ರತಿಷ್ಠಾಪನೆ ಮಾಡ್ಕೋಬೇಕು ಯಾಕಂದ್ರೆ ಮಾರನೇ ದಿನ ಗಣೇಶನನ್ನ ಇಡುವಂತ ಸಮಯದಲ್ಲಿ ಯಾವುದೇ ರೀತಿ ಗೌರಮ್ಮನನ್ನ ಕದಲಿಸೋದಕ್ಕೆ ಹೋಗಬಾರದು ಆ ಕಾರಣದಿಂದ ಹೇಳ್ತಾ ಇದೀನಿ.
ಗೌರಿ ಗಣೇಶನನ್ನ ಇಟ್ಟಮೇಲೆ ಎರಡನ್ನು ಒಂದೇ ಸಲನೆ ವಿಸರ್ಜನೆ ಮಾಡ್ಕೋಬೇಕು ಕೆಲವರು ಪ್ರಶ್ನೆ ಕೇಳಿದ್ರಿ ಗೌರಮ್ಮನ ಅದೇ ದಿನ ವಿಸರ್ಜನೆ ಮಾಡಬಹುದಾ ಅಂತ ಖಂಡಿತವಾಗ್ಲೂ ಇಲ್ಲ ಮಾರನೇ ದಿನ ಗಣಪತಿಯನ್ನು ಕೂಡ ಇಟ್ಟು ಪೂಜೆ ಮಾಡಿ ಆನಂತರ ಎರಡನ್ನು ಒಟ್ಟಿಗೆ ವಿಸರ್ಜನೆಯನ್ನ ಮಾಡಬೇಕು.
ಗಣಪತಿಯನ್ನ ಎಷ್ಟು ದಿನ ಇಡಬೇಕು
ಗಣಪತಿಗೆ ಯಾವಾಗಲೂ ಬೆಸ ಸಂಖ್ಯೆ ಅಂದ್ರೆ ಒಂದು, ಮೂರು, ಐದು, ಏಳು ಈ ರೀತಿ ಬೆಸ ಸಂಖ್ಯೆ ಹಾಗಾಗಿ ಒಂದು ದಿನ ನಾವು ಗಣಪತಿಯನ್ನ ಇಡಬಹುದು ಅಥವಾ ಮೂರು ದಿನ ಇಡಬೇಕಾಗುತ್ತೆ ಈಗ ಶನಿವಾರ ನೀವು ಗಣೇಶನನ್ನ ಇಟ್ಟರೆ ಶನಿವಾರ ಭಾನುವಾರ ಭಾನುವಾರ ಸಂಜೆ ಕದಲಿಸಿ ಮತ್ತೆ ಸೋಮವಾರ ಬೆಳಗ್ಗೆ ವಿಸರ್ಜನೆ ಮಾಡಬೇಕಾಗುತ್ತೆ.
ಒಂದೇ ದಿನಕ್ಕೆ ಪೂಜೆ ಮಾಡಿ ವಿಸರ್ಜನೆ ಮಾಡುವಂತವರು ಆದ್ರೆ ಭಾನುವಾರ ಬೆಳಗ್ಗೆ ಗಣಪತಿಯನ್ನ ಪ್ರತಿಷ್ಠಾಪನೆ ಮಾಡಬೇಕು ಬೆಳಗ್ಗೆ ಎಂಟರಿಂದ ಎಂಟುವರೆ ಒಳಗಡೆ ತುಂಬಾನೇ ಶುಭ ಮುಹೂರ್ತ ಇದೆ ಆ ಸಮಯದಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ನೀವು ಸಂಜೆಗೆ ವಿಸರ್ಜನೆ ಮಾಡ್ಕೋಬಹುದು ಬೆಳಗ್ಗೆ 8 ರಿಂದ ಎಂಟುವರೆ ಒಳಗಡೆ ಪೂಜೆ ಮಾಡೋದಕ್ಕೆ ಆಗ್ಲಿಲ್ಲ ಅಂತ ಅಂದ್ರೆ ಮಧ್ಯಾಹ್ನ 11 ಗಂಟೆಯಿಂದ 1:30 ಒಳಗಡೆನು ಕೂಡ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ನೀವು ಪೂಜೆಯನ್ನು ಮಾಡ್ಕೋಬಹುದು ಮತ್ತೆ ಸಂಜೆ ಅದೇ ದಿನ ಸಂಜೆ ಶನಿವಾರ ಸಂಜೆ ಗೂದುಳಿ ಸಮಯದಲ್ಲಿ 5:30ರ ನಂತರ ನೀವು ಗಣಪತಿಯನ್ನ ಕದಲಿಸಬೇಕು ಆನಂತರ ಎಂಟು ಗಂಟೆ ಒಳಗಾಗಿ ವಿಸರ್ಜನೆ ಮಾಡ್ಕೋಬೇಕು.
ರಾತ್ರಿ 8:00 ಗಂಟೆ 15 ನಿಮಿಷಕ್ಕೆ ಚಂದ್ರೋದಯ ಆಗುತ್ತೆ ಹಾಗಾಗಿ ಹೇಳ್ತಾ ಇದೀನಿ ಚಂದ್ರೋದಯಕ್ಕಿಂತ ಮೊದಲೇನೆ ಗಣಪತಿಯನ್ನ ವಿಸರ್ಜನೆ ಮಾಡ್ಬಿಟ್ಟು ಬಿಡ್ತಾರೆ ಅಥವಾ ತುಂಬಾ ಜನ ಕದಲಿಸಿ ಹಾಗೆ ಬಿಟ್ಟುಬಿಡ್ತಾರೆ ಭಾನುವಾರ ಬೆಳಗ್ಗೆ ಕೂಡ ವಿಸರ್ಜನೆಯನ್ನ ಮಾಡ್ಕೋತಾರೆ. ಅದು ಅವರವರ ಪದ್ಧತಿ ಹೇಗಿರುತ್ತೋ ಆ ರೀತಿ ನೀವು ಮಾಡ್ಕೋಬಹುದು.
Happy Gowri Ganesha festival wishes in Kannada
“ಕರುನಾಡ ಜನರಿಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.”
“ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು.”
ಎಲ್ಲರೂ ಕೂಡ ಪರಿಸರ ಸ್ನೇಹ ಗಣೇಶನನ್ನು ಬಳಸಿ, ಹಾಗೂ ಒಬ್ಬ ವನ್ನು ಖುಷಿಖುಷಿಯಾಗಿ ಆಚರಿಸಿ
Ganesha Festival ಶುಕ್ರವಾರದ ಪೂಜೆ ತಯಾರಿ ಯಾವ ರೀತಿ
ಶುಕ್ರವಾರ ಬೆಳಗ್ಗೆ 5:30 ರಿಂದ 8:00 ಗಂಟೆ ಒಳಗೆ ಗೌರಿ ಪೂಜೆಯನ್ನ ಮಾಡ್ಕೋಬೇಕು.
ಗೌರಿ ಪೂಜೆಗೆ ಬೇಕಾಗಿರುವ ಎಲ್ಲಾ ವಸ್ತುಗಳನ್ನ ನೀವು ಹಿಂದಿನ ದಿನಾನೇ ಆದಷ್ಟು ಸಿದ್ಧತೆ ಮಾಡಿ ಇಟ್ಕೊಳ್ಳಿ ಹೊಸದಾಗಿ ಒಂದು ಬ್ಲೌಸ್ ಪೀಸ್ ಒಂದು ಡಜನ್ ಬಳೆ ಎಲೆ ಅಡಿಕೆ ಬಾಳೆಹಣ್ಣು ನಿಮಗೆ ಶಕ್ತಿ ಇದ್ರೆ ಇನ್ನು ಐದು ರೀತಿಯ ಹಣ್ಣುಗಳನ್ನು ಕೂಡ ತಂದು ಇಟ್ಕೋಬಹುದು ಆ ಗೌರಿ ಪೂಜೆಗೆ ಮಲ್ಲಿಗೆ ಹೂವು ತಾವರೆ ಹೂವು ಯಾವುದೇ ರೀತಿ ಕೆಂಪು ಹೂಗಳನ್ನು ಕೂಡ ಉಪಯೋಗಿಸಬಹುದು.
ಇನ್ನು ಅರ್ಚನೆ ಮಾಡೋದಕ್ಕೆ ಸ್ವಲ್ಪ ಬಿಳಿ ಹೂಗಳು ಗೆಜ್ಜೆ ವಸ್ತ್ರ ಎಲ್ಲಾನು ಕೂಡ ಹೊಸದಾಗಿನೇ ತಗೋಬೇಕು ಅರಿಶಿನ ಕೊಂಬು ಅರಿಶಿನ, ಕುಂಕುಮ ಪೂಜೆಗೆ ಬೇಕಾಗಿರುವ ಎಲ್ಲಾ ವಸ್ತುಗಳನ್ನು ಆದಷ್ಟು ಹೊಸದಾಗಿ ತಗೊಂಡು ಬನ್ನಿ ಇದನ್ನೆಲ್ಲ ಕೂಡ ರೆಡಿ ಮಾಡಿ ಇಟ್ಕೊಳ್ಳಿ ಪದ್ಧತಿ ಇಲ್ಲದೆ ಸರಳವಾಗಿ ಪೂಜೆ ಮಾಡುವಂತವರು ವ್ರತದ ದಾರನ ಕೈಗೆ ಕಟ್ಟಿಕೊಳ್ಳುವುದು ಏನು ಬೇಕಿಲ್ಲ ಹಾಗೆ ಸರಳವಾಗಿ ಪೂಜೆ ಮಾಡ್ಕೊಂಡ್ರೆ ಸಾಕಾಗುತ್ತೆ.
ಈ ರೀತಿ ನೀವು ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡು ಶುಕ್ರವಾರ ಬೆಳಗ್ಗೆ 5:30ಕ್ಕೆ ಪೂಜೆನ ಪ್ರಾರಂಭ ಮಾಡಿಕೊಳ್ಳಿ ನಿಮ್ಮ ಮನೆಯಲ್ಲಿ ಶಿವ ಪಾರ್ವತಿ ಫೋಟೋ ಇದ್ರೆ ಆ ಫೋಟೋ ಮುಂದೆ ಈಗ ಹೇಳಿರುವ ವಸ್ತುಗಳನ್ನ ತಟ್ಟೆಗಳಲ್ಲಿ ಎಲ್ಲಾ ಕೂಡ ಜೋಡಿಸಿ ಆ ಫೋಟೋ ಮುಂದೆ ಇಟ್ಟು ತುಪ್ಪದ ದೀಪಗಳನ್ನು ಹಚ್ಚಿ ಪೂಜೆನ ಪ್ರಾರಂಭ ಮಾಡಬಹುದು ಶಿವ ಪಾರ್ವತಿ ಫೋಟೋ ಇಲ್ಲ ಅಂತ ಅಂದ್ರೆ ಕಳಸದ ಪಕ್ಕದಲ್ಲೂ ಕೂಡ ಇದನ್ನೆಲ್ಲ ಇಟ್ಟು ಪೂಜೆನ ಪ್ರಾರಂಭ ಮಾಡಿಕೊಳ್ಳಿ ಮೊದಲು ಗಣಪತಿ ಪ್ರಾರ್ಥನೆ ಆನಂತರ ಮನೆ ದೇವರ ಪ್ರಾರ್ಥನೆ ಶಿವ ಪಾರ್ವತಿಯನ್ನ ಸ್ಮರಣೆ ಮಾಡಿ ಲಕ್ಷ್ಮೀನಾರಾಯಣನ ಸ್ಮರಣೆ ಮಾಡಿ ಗೌರಿ ಪೂಜೆನ ಶುರುಮಾಡಿಕೊಳ್ಳಿ.
Happy Teachers Day In Kannada!! ಶಿಕ್ಷಕರ ದಿನಾಚರಣೆ ಭಾಷಣ ನೋಡೋಣ
Gowri habbada ಶಿವ ಪಾರ್ವತಿಯ ಫೋಟೋಗೆ ಪೂಜೆ
ಆ ದಿನ ಕಳಸಕ್ಕೆ ಅಥವಾ ಶಿವ ಪಾರ್ವತಿಯ ಫೋಟೋಗೆ ಮೂರು ಅಥವಾ ಐದು ಎಳೆ ಗೆಜ್ಜೆ ವಸ್ತ್ರನ ಏರಿಸಿ ಹೂಗಳಿಂದ ಅಲಂಕಾರ ಮಾಡಿ ಪೂಜೆಯನ್ನು ಪ್ರಾರಂಭ ಮಾಡಿಕೊಳ್ಳಿ ಗೌರಿ ಅಷ್ಟೋತ್ತರನ ಹೇಳ್ತಾ ಕುಂಕುಮಾರ್ಚನೆಯನ್ನ ಮಾಡಿಕೊಳ್ಳಿ ಅರ್ಚನೆ ಎಲ್ಲಾ ಮುಗಿದ ಮೇಲೆ ಸ್ವರ್ಣ ಗೌರಿಯ ವ್ರತ ಕಥೆಯನ್ನು ಓದಬೇಕು
ಕೊನೆಯಲ್ಲಿ ಮಹಾಮಂಗಳಾರತಿಯನ್ನ ಮಾಡಿ ಮನೆಯವರೆಲ್ಲರಿಗೂ ಕೂಡ ಮಂಗಳಾರತಿಯನ್ನ ಕೊಟ್ಟು ನಮಸ್ಕಾರ ಮಾಡಿಕೊಳ್ಳಿ ಇನ್ನು ಮಧ್ಯಾಹ್ನ ಹಬ್ಬದ ಅಡುಗೆಯನ್ನ ಮಾಡಿ ನೈವೇದ್ಯಕ್ಕೆ ಇಡಬೇಕು ಮನೆ ಹೆಣ್ಣು ಮಕ್ಕಳಿಗೆ ಮೊದಲು ಊಟನ ಬಡಿಸಬೇಕು. ಅದೇ ದಿನ ಸಂಜೆ ಹೊಸಲಿಗೆ ದೀಪಗಳನ್ನೆಲ್ಲ ಹಚ್ಚಿ ತುಳಸಿ ಮುಂದೆ ಕೂಡ ತುಪ್ಪದ ದೀಪನ ಹಚ್ಚಿ ಮತ್ತೆ ಸಂಜೆ ದೇವಿ ಮುಂದೆ ದೀಪ ಹಚ್ಚಿ ಪೂಜೆನ ಮಾಡಿಕೊಳ್ಳಿ.
ಗಣಪತಿ ಪೂಜೆ Habbada Shubhashayagalu
ಮಾರನೇ ದಿನ ಗಣಪತಿ ಪೂಜೆ ಅವತ್ತು ಕೂಡ ಅಷ್ಟೇ ಬೆಳಗ್ಗೆ ಎಂಟರಿಂದ 8:30 ಪೂಜೆಗೆ ಶುಭ ಸಮಯ ಅಂತಾನೆ ಹೇಳಬಹುದು ಆ ಸಮಯದಲ್ಲಿ ಪೂಜೆ ಮಾಡೋದಕ್ಕೆ ಆಗ್ಲಿಲ್ಲ ಅಂದ್ರೆ ಮಧ್ಯಾಹ್ನ 11:00 ಗಂಟೆಯಿಂದ ಒಂದು ಗಂಟೆ ಒಳಗೂ ಕೂಡ ಗಣಪತಿ ಪೂಜೆಯನ್ನ ಮಾಡ್ಕೋಬಹುದು ಗಣಪತಿ ವಿಗ್ರಹ ನಿಮ್ಮ ಮನೆಯಲ್ಲಿ ಇದ್ದರೆ ಹಾಲಿನ ಅಭಿಷೇಕವನ್ನ ಮಾಡಿಕೊಳ್ಳಿ ಹಾಲಿನ ಅಭಿಷೇಕ ಮಾಡಿ ಓಂ ಗಂ ಗಣಪತಿಯೇ ನಮಃ ಅಂತ 108 ಸಲ ಹೇಳ್ಕೊಳ್ತಾ ಹಾಲಿನ ಅಭಿಷೇಕವನ್ನ ಮಾಡಿಕೊಳ್ಳಿ ಹಸಿ ಹಾಲಿನ ಅಭಿಷೇಕನೆ ಮಾಡಬೇಕು.
ಅದಾದ ನಂತರ ಶುದ್ಧವಾದ ನೀರಿನಲ್ಲಿ ತೊಳೆದು ಗಂಧ ಅರಿಶಿನ ಕುಂಕುಮನ ಹಚ್ಚಿ ಗಣಪತಿಯನ್ನ ಒಂದು ಪೀಠದ ಮೇಲೆ ಪ್ರತಿಷ್ಠಾಪನೆ ಮಾಡಿಕೊಳ್ಳಿ ಒಂದು ಪೀಠನ ಇಟ್ಟು ಅದರ ಮೇಲೆ ಅಷ್ಟದಳ ಪದ್ಮವನ್ನ ಬರೀಬೇಕು ಅದರ ಮೇಲೆ ಗರಿಕೆಗಳನ್ನ ಇಟ್ಟು ಅರಿಶಿನ ಕುಂಕುಮ ಅಕ್ಷತೆ ಎಲ್ಲಾನು ಕೂಡ ಹಾಕಿ ಗರಿಕೆಗಳನ್ನ ಇಟ್ಟು ಅಲ್ಲಿ ಗಣಪತಿ ವಿಗ್ರಹನ ಪ್ರತಿಷ್ಠಾಪನೆ ಮಾಡಬೇಕು ಎರಡು ಎಳೆ ಗೆಜ್ಜೆ ವಸ್ತ್ರನ ಏರಿಸಿ, 21 ಗರಿಕೆಗಳನ್ನು ಕೂಡ ಇಟ್ಟು ಎಕ್ಕದ ಹೂವಿನ ಹಾರ ಅಂದ್ರೆ ಬಿಳಿ ಎಕ್ಕದ ಹೂವಿನ ಹಾರನೆ ಹಾಕ್ಬೇಕು ಮತ್ತೆ ಕೆಂಪು ಹೂಗಳಿಂದ ಅಲಂಕಾರ ಮಾಡಿಕೊಳ್ಳಿ ತಾವರೆ, ಹೂವು ಬಾಳ ಅಥವಾ ಕೆಂಪು ಕಣಗಲೆ ಹೂವು, ಮಲ್ಲಿಗೆ ಹೂವು ಈ ರೀತಿ ಸುಗಂಧಭರಿತವಾದಂತಹ ಹೂಗಳಿಂದ ಅಲಂಕಾರವನ್ನು ಮಾಡಿಕೊಂಡು ಎರಡು ತುಪ್ಪದ ದೀಪಗಳನ್ನು ಹಚ್ಚಿ
ಗಣಪತಿ ಭೋಜನ ಪ್ರಿಯ
ಗಣಪತಿಗೆ ಇಷ್ಟವಾದ ಮೋದಕ ಕಡುಬು ಕಡ್ಲೆಕಾಳು ಉಸ್ಲಿ ಈ ರೀತಿ ಗಣಪತಿ ಭೋಜನ ಪ್ರಿಯ ಅಂತ ಎಲ್ಲರಿಗೂ ಕೂಡ ಗೊತ್ತು ಹಾಗಾಗಿ ನಿಮ್ಮ ಶಕ್ತಿ ಅನುಸಾರ ಯಥೇಚ್ಛವಾಗಿ ನೈವೇದ್ಯವನ್ನ ಅರ್ಪಣೆ ಮಾಡಬೇಕು ಕಬ್ಬು ಏನಾದರೂ ಸಿಕ್ಕಿದ್ರೆ ಖಂಡಿತ ಅದನ್ನು ಕೂಡ ನೈವೇದ್ಯಕ್ಕೆ ಇಡಿ ಯಾಕಂದ್ರೆ ಗಣಪತಿಗೆ ಕಬ್ಬು ಕೂಡ ತುಂಬಾನೇ ಇಷ್ಟ ಆಗುತ್ತೆ ಹಾಗಾಗಿ ಐದು ರೀತಿ ಹಣ್ಣುಗಳು ಪ್ರತಿ ಪ್ರತಿಯೊಂದನ್ನು ಕೂಡ ತಟ್ಟೆಯಲ್ಲಿ ಜೋಡಿಸಿ ನೈವೇದ್ಯವನ್ನ ಅರ್ಪಣೆ ಮಾಡಿ ಗಣಪತಿಯ ಸ್ತೋತ್ರನ ಹೇಳ್ಕೊಳ್ತಾ ಅಷ್ಟೋತ್ತರವನ್ನ ಮಾಡಿಕೊಳ್ಳುತ್ತಾ ಗಣಪತಿಗೆ ಗರಿಕೆಯಿಂದ ಅಷ್ಟೋತ್ತರನ ಮಾಡಿಕೊಳ್ಳಿ ನಿಮಗೆ ಅಷ್ಟೋತ್ತರ ಹೇಳೋದಕ್ಕೆ ಬರಲ್ಲ ಅಂತ ಅಂದ್ರೆ ಓಂ ಗಂ ಗಣಪತಯೇ ನಮಃ ಅಂತ 108 ಸಲ ಹೇಳ್ತಾ ಗರಿಕೆಯಿಂದ ಅರ್ಚನೆ ಮಾಡ್ಕೋಬೇಕು.
ಇದನ್ನ ದೂರ್ವಾರ್ಚನೆ ಅಂತ ಕೂಡ ಕರೀತಾರೆ ಹಾಗಾಗಿ ಗರಿಕೆಯಿಂದ ಅರ್ಚನೆಯನ್ನ ಮಾಡಿಕೊಳ್ಳಿ ಅದಾದ ನಂತರ ಮಹಾಮಂಗಳಾರತಿಯನ್ನ ಮಾಡ್ತಾ ಮನೆಯವರೆಲ್ಲರಿಗೂ ಕೂಡ ಮಹಾಮಂಗಳಾರತಿ ಕೊಡಿ ಆದಷ್ಟು ಪೂಜೆ ಸಮಯಕ್ಕೆ ಮನೆಯವರೆಲ್ಲರೂ ಸ್ನಾನ ಮಾಡಿ ಹೊಸ ಬಟ್ಟೆಗಳನ್ನ ಹಾಕೊಂಡು ಪೂಜೆಗೆ ಭಾಗವಹಿಸೋದು ತುಂಬಾನೇ ಒಳ್ಳೆಯದು ಇದಿಷ್ಟು ಕೂಡ ಬೆಳಗಿನ ಪೂಜೆ ಆಗಿರುತ್ತೆ ಇನ್ನು ಆ ಮನೆಯಲ್ಲಿ ಪೂಜೆ ಆದ ನಂತರ ಸಾಕಷ್ಟು ಜನ ಹುತ್ತಕ್ಕೆ ಹೋಗಿ ತನಿ ಎರ್ಕೊಂಡು ಬರ್ತಾರೆ ಅಥವಾ ಮನೆಯಲ್ಲೇ ಹಬ್ಬದ ಅಡುಗೆಯನ್ನ ಮಾಡಿ.
ಗಣಪತಿಗೆ ನೈವೇದ್ಯನ ಅರ್ಪಿಸುತ್ತಾರೆ ಇನ್ನು ಮಧ್ಯಾಹ್ನ ಏನು ನೀವು ಅಡುಗೆ ಮಾಡಿರ್ತೀರೋ ಅದನ್ನು ಕೂಡ ಅದೇ ರೀತಿ ಬಾಳೆ ಎಲೆ ಆಗ್ಲಿ ಅಡಿಕೆ ತಟ್ಟೆ ಆಗ್ಲಿ ಅದನ್ನ ಇಟ್ಟು ಅದರ ಮೇಲೆ ಮಾಡಿರೋ ಅಡುಗೆ ಎಲ್ಲಾ ಬಡಿಸಿ ಗಣಪತಿಗೆ ನೈವೇದ್ಯನ ಮಾಡ್ಕೋಬೇಕು ಮಾಡಿರೋ ಅಡುಗೆನ ಸ್ವಲ್ಪ ಸ್ವಲ್ಪನೇ ಬಡಿಸಿ ಅಥವಾ ಮುತ್ತುಗದ ಎಲೆ ಆಗಿರಲಿ ಯಾವುದೇ ಊಟದ ಎಲೆ ಆಗಿರಲಿ ಪೇಪರ್ ಎಲೆ ಒಂದು ಬಿಟ್ಟು ಬೇರೆದನ್ನ ನೋಡ್ಕೊಂಡು ನೀವು ಅದರಲ್ಲಿ ನೈವೇದ್ಯನ ಬಡಿಸಿ ಮಧ್ಯಾಹ್ನನು ಕೂಡ ಪೂಜೆ ಮಾಡಿ ಆ ಪ್ರಸಾದನ ತಗೊಂಡು ಮನೆಯವರು ಯಾರಾದ್ರೂ ಊಟನ ಮಾಡ್ಕೋಬಹುದು
ಗೌರಿ ಗಣೇಶ ಹಬ್ಬದ ದಿನ ಸಂಜೆ ಮಾಡಬೇಕಾಗಿರುವ ಕ್ರಿಯೆಗಳು
ಇನ್ನು ಸಂಜೆ ತುಂಬಾನೇ ಮುಖ್ಯ ಇದನ್ನಂತೂ ಮರಿಬೇಡಿ ಸಂಜೆ 5:30 ನಿಮಿಷಕ್ಕೆ ಕೈ ಕಾಲು ಮುಖ ಎಲ್ಲ ತೊಳ್ಕೊಂಡು ಮತ್ತೆ ದೇವರ ಮುಂದೆ ದೀಪನ ಹಚ್ಚಿ ನೀವೇನು ಗಣಪತಿನ ಪ್ರತಿಷ್ಠಾಪನೆ ಮಾಡಿರ್ತೀರಲ್ಲ ಕೆಂಪಾರತಿಯನ್ನ ಮಾಡ್ಬೇಡಿ ಹಿಂದಿನ ದಿನ ಶುಕ್ರವಾರ ಗೌರಿ ಪೂಜೆ ಮಾಡಿರ್ತೀರಾ ಮಾರನೇ ದಿನ ಗಣಪತಿ ಪೂಜೆ ಮಾಡಿರ್ತೀರಾ ಇಬ್ಬರಿಗೂ ಸೇರಿಸಿ ಭಾನುವಾರ ಸಂಜೆ ಕೆಂಪಾರತಿನ ಮಾಡಿ ಹೊರಗಡೆ ಹಾಕ್ಬಿಡಿ ಆ ಗಣಪತಿಯನ್ನ 5:30ರ ನಂತರ ಕದಲಿಸಬೇಕು ಕದಲಿಸಿ ಹಾಗೆ ಬಿಟ್ಟುಬಿಡಿ ಅಂದ್ರೆ ಗಣಪತಿಯ ಮೇಲೆ ಇಟ್ಟಿರುವಂತಹ ಗರಿಕೆ ಆಗಿರಲಿ ಬಲಭಾಗದಲ್ಲಿ ಇಟ್ಟಿರುವಂತಹ ಹೂಗಳನ್ನಾಗಿರಲಿ ಅದನ್ನೆಲ್ಲ ತೆಗೆದು ನೀವು ಪಕ್ಕಕ್ಕಿಟ್ಟು ಆ ಪೀಠನ ಅಲುಗಾಡಿಸಬೇಕು ಅಷ್ಟೇನೆ ಆ ರೀತಿ ಅಲುಗಾಡಿಸಿ ಹಾಗೆ ಬಿಟ್ಟುಬಿಡಿ.
ಯಾರಾದ್ರೂ ಮನೆಗೆ ಬರೋವರಿದ್ರೆ ಅವರಿಗೆ ಆ ದಿನ ಅರಿಶಿನ ಕುಂಕುಮ ಎಲ್ಲ ಕೊಡಿ ಹಬ್ಬದ ದಿನ ತಾವಾಗೆ ಯಾರಾದ್ರೂ ಹೆಣ್ಣುಮಕ್ಕಳು ಮನೆಗೆ ಬಂದ್ರೆ ಹಾಗೆ ಕಳಿಸೋಕೆ ಹೋಗ್ಬೇಡಿ ಮಾಡಿರೋ ಪ್ರಸಾದ ಏನಾದರೂ ಸ್ವಲ್ಪ ಕೊಟ್ಟು ಅವರಿಗೆ ಅರಿಶಿನ ಕುಂಕುಮ ಫಲ ತಾಂಬೂಲಗಳನ್ನು ಕೊಟ್ಟು ಕಳಿಸಿಕೊಡಿ ಯಾವುದೇ ಕಾರಣಕ್ಕೂ ಸಂಜೆ 7:00 ಗಂಟೆ ನಂತರ ಹೊರಗಡೆ ಹೋಗೋದನ್ನ ಅವಾಯ್ಡ್ ಮಾಡಿ ಚಂದ್ರ ದರ್ಶನವನ್ನ ಮಾಡಬಾರದು ಗೊತ್ತಿಲ್ದೆ ಮಾಡಿದ್ರು ಕೂಡ ಅದರ ಒಂದು ಪ್ರತಿಫಲನ ಅನುಭವಿಸಲೇ ಬೇಕಾಗುತ್ತೆ
ಒಂದು ವರ್ಷದವರೆಗೂನು ಹಾಗಾಗಿ ಹೇಳ್ತಾ ಇದೀನಿ ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು ಅಲ್ವಾ ಭಾನುವಾರ ಬೆಳಗ್ಗೆ ಎದ್ದು ಸ್ನಾನ ಮಾಡ್ಕೊಂಡು ಮನೆಯಲ್ಲ ಗುಡಿಸಿ ಒರೆಸಿ ಹಿಂದಿನ ದಿನ ಕದಲಿಸಿ ಹಾಗೆ ಇಟ್ಟಿರ್ತೀರಲ್ಲ ಗಣಪತಿ ಮೂರ್ತಿಯನ್ನ ಅದನ್ನೆಲ್ಲ ತೆಗೆದು ಹಿಂದಿನ ದಿನ ಹಾಕಿರೋ ಹೂವು ನೀವೇನು ಹಣ್ಣುಗಳೆಲ್ಲ ಇಟ್ಟಿರ್ತೀರಾ ಅದನ್ನೆಲ್ಲಾನು ಕೂಡ ತೆಗೆದು ದೇವರ ಮನೆಯನ್ನ ಸಿಂಪಲ್ ಆಗಿ ಹಾಗೆ ಕ್ಲೀನ್ ಮಾಡ್ಕೊಳಿ ಪ್ರತಿಯೊಂದನ್ನು ತೆಗೆದು ತೊಳಿಬೇಕು ಅಂತ ಏನಿಲ್ಲ ಗಣಪತಿ ಮೂರ್ತಿ ಮತ್ತೆ ದೀಪಗಳು ಇದಿಷ್ಟನ್ನು ಮಾತ್ರ ತೊಳೆದು ಆ ದಿನ ಮತ್ತೆ ಬೇರೆ ಹೂಗಳನ್ನು ಇಟ್ಟು ನೀವು ದೀಪ ಹಚ್ಚಿ ಪೂಜೆ ಮಾಡಿಕೊಳ್ಳಿ
ಒಂದು ಹಣ್ಣನ್ನ ನೈವೇದ್ಯಕ್ಕೆ ಇಟ್ಟರು ಕೂಡ ಸಾಕಾಗುತ್ತೆ ಭಾನುವಾರ ಬೆಳಗ್ಗೆ ಈ ರೀತಿ ಮಾಡಲೇಬೇಕು ಗಣೇಶ ಹಬ್ಬದ ದಿನ ತುಂಬಾ ಜನ ನಾಗರಕಲ್ಲು ಪೂಜೆ ಮಾಡಿ ಹುತ್ತಕ್ಕೆ ಅಥವಾ ನಾಗರಕಲ್ಗೆ ತನಿ ಎರಿತಾರೆ.