ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಯಾವಾಗ ಜಮಾ ಆಗುವುದು? ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುವುದು? ನಿಜಾನಾ? ಲೋಕ ಸಭಾ ಚುನಾವಣೆಯ ನಂತರದ ಕಂತಿನ ಹಣ ಯಾಕೆ ಬಂದಿಲ್ಲ? ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪಡೆಯಲು ಇಂದಿನ ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ ಮಾಹಿತಿ ಉಪಯುಕ್ತವಾಗಿದೆ.
ಲೋಕ ಸಭಾ ಚುನಾವಣೆಯ ನಂತರದ ಕಂತಿನ ಹಣ ಇದು ವರೆಗು ಜಮಾ ಆಗಿಲ್ಲ. ಜೂನ್ ಮತ್ತು ಜುಲೈ ತಿಂಗಳ ಗೃಹಲಕ್ಷ್ಮಿ ಯೋಜನೆಯ 4,000/- ರೂ.ಗಳ ಹಣ ಜುಲೈ ಮುಗಿದು ಆಗಸ್ಟ್ ತಿಂಗಳತ್ತ ತೆರಳುತ್ತಿದ್ದರು, ಹಣ ಜಮಾ ಆಗಿಲ್ಲ. ಯಾವಾಗ ಗೃಹಲಕ್ಷ್ಮಿ ಯೋಜನೆಯ ಹನ್ನೊಂದನೇ ಮತ್ತು ಹನ್ನೆರಡನೇ ಕಂತಿನ ಹಣ ಯಾವಾಗ ಜಮಾ ಆಗುವುದು ಎಂಬ ಆತಂಕ ಫಲಾನುಭವಿಗಳಿಗೆ ಕಾಡುತ್ತಿದೆ.
ಗೃಹಲಕ್ಷ್ಮಿ ಯೋಜನೆ 11 ಮತ್ತು 12ನೇ ಕಂತಿನ ಹಣ ಜಮಾ ಮಾಡಲಾಗುವುದಾ?
ಲೋಕ ಸಭಾ ಚುನಾವಣೆಯ ನಂತರದ ಕಂತಿನ ಹಣ ಇನ್ನು ಕೂಡ ಜಮಾ ಆಗದ ಕಾರಣ ಎಲ್ಲಾ ಫಲಾನುಭವಿಗಳಿಗೆ ಒಂದು ಆತಂಕ ಕಲ್ಪಿಸಿದೆ. ಹಾಗೆ ಲೋಕ ಸಭಾ ಚುನಾವಣೆಯ ಫಲಿತಾಂಶದಿಂದ ಕಂಗೆಟ್ಟಿರುವ ಸಚಿವರು ಎಲ್ಲಾ ಯೋಜನೆಗಳನ್ನು ಪರಿಶೀಲಿಸಿ ಕಡಿತ ಗೊಳಿಸಬೇಕು ಎಂದು ಸಿಎಂ ಸಿದ್ಧರಾಮಯ್ಯ ಅವರ ಬಳಿ ಕೇಳುತ್ತಿದ್ದರು.
ಅದಕ್ಕೆ ಉತ್ತರವನ್ನು ಸಿಎಂ ಸಿದ್ಧರಾಮಯ್ಯ ನವರೆ ಖುದ್ದಾಗಿ ತಿಳಿಸಿದ್ದಿದರು. ಯಾವುದೇ ಕಾರಣದಲ್ಲಿ ಸಹ ಗೃಹಲಕ್ಷ್ಮಿ ಯೋಜನೆಯ ಅಥವಾ ಇತರ ಯೋಜನೆ ಸ್ಥಗಿತ ಗೊಳಿಸುವುದಿಲ್ಲ. ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಎಲ್ಲಾ ಯೋಜನೆಗಳು ಜಾರಿಯಲ್ಲಿ ಇರುತ್ತದೆ. ಯಾವುದನ್ನು ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಚುನಾವಣೆಯ ನಂತರದ ಹಣ ಯಾವಾಗ ಜಮಾ ಮಾಡಲಾಗುವುದು?
ಚುನಾವಣೆಗೆ ಮುನ್ನ ಎರಡೂ ಕಂತಿನ ಹಣ ಅಂದರೆ ಮೇ ತಿಂಗಳ ಹಣವನ್ನು ಒಟ್ಟಿಗೆ ತಿಂಗಳ ಮುಂಚಿತವಾಗಿ ಜಮಾ ಮಾಡಿದ್ದರು. ಈಗ ಹನ್ನೊಂದು ಮತ್ತು ಹನ್ನೆರಡನೇ ಕಂತಿನ ಹಣವನ್ನು ಒಟ್ಟಿಗೆ 4000/- ರೂ. ಗಳನ್ನು ಒಂದೇ ಬಾರಿ ಜಮಾ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಎರಡು ತಿಂಗಳ ಹಣವನ್ನು ಜುಲೈ 20, 2024 ರ ಒಳಗೆ ಜಮಾ ಮಾಡಲಾಗುವುದು, ಚುನಾವಣೆ ಇದ್ದ ಕಾರಣ ಇದರ ಕಡೆ ಗಮನವಹಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಜೂನ್ ಮತ್ತು ಜುಲೈ ತಿಂಗಳ ಹಣ ಬಿಡುಗಡೆ ಮಾಡುವುದು ತಡವಾಗಿದೆ. ಈಗ ಹಣ ಬಿಡುಗಡೆ ಮಾಡಲಾಗಿದೆ ಜುಲೈ 20 ರ ಒಳಗೆ ಎರಡು ಕಂತಿನ ಹಣ ಜಮಾ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: BPL Card Ban: ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್ ಸುದ್ದಿ!!