ಎಲ್ಲರಿಗೂ ನಮಸ್ಕಾರ, ಕರ್ನಾಟಕ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರವು ಈಗ ಒಂದು ಭರ್ಜರಿ ಗುಡ್ ನ್ಯೂಸ್ ಅನ್ನು ನೀಡಿದೆ. ಸುಮಾರು ದಿನಗಳ ಕಾಲ ಜನರು ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣಕ್ಕೆ ಕಾಯುತ್ತಿದ್ದರು. ಆದರೆ ಈಗ ಇಲಾಖೆಯ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣದ ಬಿಡುಗಡೆ ಬಗ್ಗೆ ಅಪ್ ಡೇಟ್ ಅನ್ನು ನೀಡಿದೆ. ಇತರ ಜೊತೆ ಗೃಹಲಕ್ಷ್ಮಿ ಯೋಜನೆಯನ್ನು ರದ್ದು ಮಾಡುವ ವಿಷಯವಾಗಿ ಕೂಡ ಕೆಲವೊಂದು ಅಪ್ಡೇಟ್ಗಳು ಬಂದಿವೆ.
ಸ್ನೇಹಿತರೆ ಕರ್ನಾಟಕದ ಸರ್ಕಾರವು ಗೃಹಲಕ್ಷ್ಮಿ ಯೋಜನೆ 11ನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ಶುರು ಮಾಡಿದೆ. ಪ್ರತಿದಿನವೂ ಕರ್ನಾಟಕದ ಜಿಲ್ಲೆಗಳ ಸಾಕಷ್ಟು ಫಲಾನುಭವಿಗಳಿಗೆ ಹಣವನ್ನು ಇಲಾಖೆಯ ಬಿಡುಗಡೆ ಮಾಡುತ್ತಿದೆ ಹಾಗೂ ಇಂದು ಕೂಡ ಕೆಲವೊಂದು ಜಿಲ್ಲೆಯ ಫಲಾನುಭವಿಗಳಿಗೆ 11ನೇ ಕಂತಿನ ಹಣ ಬಿಡುಗಡೆಯಾಗುತ್ತಿದೆ. ಇದರ ಬಗ್ಗೆ ವಿವರವಾಗಿ ತಿಳಿಯಲು ಲೇಖನೆಯನ್ನು ಪೂರ್ತಿಯಾಗಿ ಓದಿ.
ಈ ಜಿಲ್ಲೆಗಳಿಗೆ ಇಂದು ಮತ್ತು ನಾಳೆ 11ನೇ ಕಂತಿನ ಹಣ ಬಿಡುಗಡೆ
- ಕೋಲಾರ
- ಬೆಳಗಾವಿ
- ಕೊಪ್ಪಳ
- ಬಿಜಾಪುರ
- ಚಾಮರಾಜನಗರ
- ಮಂಡ್ಯ
- ಬಾಗಲಕೋಟೆ
- ಹಾವೇರಿ
- ಕೊಡಗುಕಂತಿನ
- ಮೈಸೂರು
- ಚಿಕ್ಕಬಳ್ಳಾಪುರ
- ವಿಜಯನಗರ
- ರಾಮನಗರ
- ಧಾರವಾಡ
- ಶಿವಮೊಗ್ಗ
- ಕಲಬುರಗಿ
- ರಾಯಚೂರು
- ಗದಗ
- ಬೀದರ್
- ಬೆಂಗಳೂರು ನಗರ
- ಬೆಂಗಳೂರು ಗ್ರಾಮಾಂತರ
ಮುಖ್ಯವಾದ ವಿಷಯವೇನೆಂದರೆ ನಿಮಗೆ ಇಲ್ಲಿಯವರೆಗೂ 10 ಕಂತಿನ ಗೃಹಲಕ್ಷ್ಮಿ ಹಣ ಬಂದಿದ್ದರೆ ಮಾತ್ರ 11ನೇ ಕಂತಿನ ಹಣ ಜಮಾ ಆಗುತ್ತದೆ. ಅಲ್ಲಿವರೆಗೂ ನಿಮಗೆ ಹಣ ಬಂದಿಲ್ಲ ಎಂದರೆ ಸ್ವಲ್ಪ ದಿನಗಳ ಕಾಲ ಕಾಯಬೇಕಾಗುತ್ತೆ ಅಥವಾ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು.
ಗೃಹಲಕ್ಷ್ಮಿ ಯೋಜನೆಯನ್ನು ರದ್ದು ಮಾಡಲಾಗುತ್ತದೆ?
ಲೋಕಸಭೆ ಚುನಾವಣೆಯ ನಂತರ . ಕಾಂಗ್ರೆಸ್ ಪಕ್ಷಕ್ಕೆ ಅಂದುಕೊಂಡಷ್ಟು ಸೀಟ್ಗಳು ದೊರಕಿಲ್ಲ ಎಂದು ಕಾಂಗ್ರೆಸ್ ಪಕ್ಷದ ಶಾಸಕರು ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಬಂದು ಮಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದರು. ಇದರ ಜೊತೆ ಸಾಕಷ್ಟು ಕಡೆಯಿಂದ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡಬಹುದಾಗಿ ಉತ್ತರ ಬರುತ್ತಿತ್ತು.
ಕೆಲವು ಸಭೆಗಳ ನಂತರ ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರವು ನಮಗೆ ಕರ್ನಾಟಕ ರಾಜ್ಯದಲ್ಲಿ ಹಿಂದಿನ ಬಾರಿಗಿಂತ ಹೆಚ್ಚಿನ ಸೀಟುಗಳು ಈ ಬಾರಿಯ ಲೋಕಸಭಾ ಎಲೆಕ್ಷನ್ ನಲ್ಲಿ ದೊರಕಿವೆ. ಆಗಿದ್ದರೆ ನಮ್ಮ ಗ್ಯಾರೆಂಟಿ ಯೋಜನೆಗಳು ಜನರಿಗೆ ತಲುಪುತ್ತಿದೆ ಎಂದು ಅರ್ಥ. ಆದ್ದರಿಂದ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುವುದಿಲ್ಲ ಎಂದು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಯ ರದ್ದು ಮಾಡುವ ವಿಷಯವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ:
ಕೆಲವು ದಿನಗಳ ಹಿಂದೆ ಗೃಹಲಕ್ಷ್ಮಿಯವಜನೆಯನ್ನು ರದ್ದು ಮಾಡಬೇಕು ಎಂದು ಬಹಳಷ್ಟು ಕಡೆ ಮನವಿ ಬರುತ್ತಿತ್ತು. ಇದರ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರತಿಗ್ರಹಿಸಿದ್ದು
ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ರದ್ದು ಮಾಡುವುದಿಲ್ಲ. ಪ್ರತಿ ತಿಂಗಳಿನಂತೆ ಈ ತಿಂಗಳು ಕೂಡ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣವನ್ನು ಜಮಾ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ರೈತರಿಗೆ ಬರ ಪರಿಹಾರದ ಹಣ ಬಿಡುಗಡೆಯಾಗುತ್ತದೆ!!