ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, ಕರ್ನಾಟಕ ರಾಜ್ಯದ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣದ ಬಿಡುಗಡೆ, ಹಾಗು ಉಳಿದ ಪೆಂಡಿಂಗ್ ಇರುವ ಕಂತಿನ ಹಣದ ಜಮಾ ಕುರಿತು ಇಂದಿನ ಈ ನಮ್ಮ ಲೇಖನದಲ್ಲಿ ಪೂರ್ಣ ಮತ್ತು ಸರಿಯಾದ ಮಾಹಿತಿಯನ್ನು ತಿಳಿಸುತ್ತೇವೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ. ಮಾಹಿತಿ ತುಂಬಾ ಅವಶ್ಯವಾಗಿದೆ ಹಾಗು ಉಪಯುಕ್ತವಾಗಿದೆ.
ಉಳಿದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಯಾವಾಗ ಜಮಾ ಆಗುವುದು?
ಬಾಕಿ ಅಥವಾ ಪೆಂಡಿಂಗ್ ಇರುವ 8 ಮತ್ತು 9 ನೇ ಕಂತಿನ ಹಣ ಕೂಡ ಎಲ್ಲಾ ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಈಗಾಗಲೇ ಸಾಕಷ್ಟು ಜನ ಫಲಾನುಭವಿಗಳಿಗೆ 8 ಮತ್ತು 9 ನೇ ಕಂತಿನ ಹಣ ಜಮಾ ಆಗಿದೆ. ಉಳಿದ ಫಲಾನುಭವಿಗಳಿಗೆ ಆದಷ್ಟು ಬೇಗ ಯಾವುದೇ ಮೇಲೆ ತಿಳಿಸಿದ ಸಮಸ್ಯೆ ಇದ್ದಲ್ಲಿ, ಸರಿ ಪಡಿಸಿ ನಿಮ್ಮ ಬ್ಯಾಂಕ್ ಖಾತೆಗೆ ಎಲ್ಲಾ ಕಂತಿನ ಹಣ ಜಮಾ ಆಗುವುದು.
10 ಮತ್ತು 11ನೇ ಕಂತಿನ ಹಣ ಜಮಾ ಆಗಿದೆಯಾ?
ಗೃಹಲಕ್ಷ್ಮಿ ಯೋಜನೆಯ 10 ನೇ ಕಂತಿನ ಹಣ ಸುಮಾರು 70% ರಷ್ಟು ಫಲಾನುಭವಿಗಳಿಗೆ ಜಮಾ ಮಾಡಲಾಗಿದೆ. ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲ ಎಂದರೆ EKYC ಮಾಡಿಸಿ ಎಲ್ಲರಿಗೂ ಹಣ ಜಮಾ ಆಗುವುದು. ಹತ್ತನೇ ಕಂತಿನ ಹಣ 23 May ಅಥವಾ 31 May ಒಳಗೆ ಬಾಕಿ ಅಥವಾ ಪೆಂಡಿಂಗ್ ಇರುವ ಹಣ ಜಮಾ ಮಾಡಲಾಗುವುದು.
ಹಾಗೆ 11ನೇ ಕಂತಿನ ಹಣವನ್ನು ಸರ್ಕಾರ ಈ ಬಾರಿ ಒಂದು ತಿಂಗಳು ಮುಂಚಿತವಾಗಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. 10 ನೇ ಕಂತಿನ ಪೆಂಡಿಂಗ್ ಇರುವ ಹಣವನ್ನು ಜಮಾ ಮಾಡಿ, 25 May 2024 ರ ನಂತರ ಎಲ್ಲಾ ಕಂತಿನ ಹಣ ಪಡೆದಿರುವವರಿಗೆ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಜಮಾ ಮಾಡಲಾಗುವುದು. ಎಲ್ಲಾ ಫಲಾನುಭವಿಗಳಿಗೆ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಹಣ ಜಮಾ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹಲವಾರು ಕಂತಿನ ಹಣ ಬಂದಿಲ್ಲ ಎಂದರೆ ಏನು ಮಾಡಬೇಕು?
ಕೆಲವು ಫಲಾನುಭವಿಗಳು ಪ್ರತಿ ತಿಂಗಳು ಯಾವುದೇ ತೊಂದರೆ ಇಲ್ಲದೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಮಾಡಲಾಗುತ್ತಿದೆ. ಆದರೆ ಕೆಲವು ಫಲಾನುಭಿವಿಗಳಿಗೆ ಸರಿಯಾಗಿ ಎಲ್ಲಾ ಕಂತಿನ ಹಣ ಜಮಾ ಆಗುತ್ತಿಲ್ಲ. ಇದರ ಕರಣದ ಕುರಿತು ತಿಳಿಯುವುದಾದರೆ ಅಥವಾ ಇದರ ಕಾರಣಗಳು ಏನೆಂದರೆ , ಮೊದಲಿಗೆ ಬ್ಯಾಂಕ್ ಗಳಲ್ಲಿ ಹಣ ಜಮಾ ಮಾಡಲು ಸರ್ವರ್ error ಅಥವಾ ಬ್ಯಾಂಕ್ ನ ಕಡೆಯಿಂದ ಆಗುತ್ತಿರುತ್ತದೆ. ಅಥವಾ ನೀವು ನಿಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಬದಲಾವಣೆ ಮಾಡಿದ್ದಲ್ಲಿ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಸಮಯದಲ್ಲಿ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇಲ್ಲ ಎಂದು ಇರುತ್ತದೆ.
ಅಥವಾ ಎಲ್ಲರ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರುತ್ತದೆ, ಆದರೆ ಬ್ಯಾಂಕ್ ಖಾತೆಯಲ್ಲಿನ ಹೆಸರು ಇತರ ಮಾಹಿತಿಗಳು ಹಾಗು ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರು ಅಥವಾ ಮಾಹಿತಿ ಹೊಂದದ ಕಾರಣ ಹೆಸರು ಮಿಸ್ ಮ್ಯಾಚ್ ಆಗಿದ್ದಲ್ಲಿ ಹಣ ಜಮಾ ಮಾಡಲು ಆಗುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು E-KYC ಯನ್ನು ಅಪ್ಡೇಟ್ ಮಾಡಿಸುವುದು ಕಡ್ಡಾಯ, ಪ್ರತಿ 2 ಅಥವಾ 3 ತಿಂಗಳಿಗೊಮ್ಮೆ E-KYC ಅಪ್ಡೇಟ್ ಮಾಡಿಸುವುದು ಕಡ್ಡಾಯ. ಈ ಕಾರಣಗಳಿಂದ ನಿಮ್ಮ ಖಾತೆಗೆ ಹಣ ಜಮಾ ಆಗುತ್ತಿರುವುದಿಲ್ಲ. ಹಾಗಾಗಿ ಸಮಸ್ಯೆಗಳನ್ನು ಈ ಕೂಡಲೇ ಸರಿ ಪಡಿಸಿ ನಿಮ್ಮ ಹಣ ನೀವು ಪಡೆಯಿರಿ.
ಇದೇ ರೀತಿ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ನಮ್ಮ ಲೇಖನವನ್ನು ಓದಿ ಹಾಗೂ ನಿಮಗೆ ಈ ಎಲ್ಲಾ ಮಾಹಿತಿಗಳು ಸಹಾಯವಾಗಿದೆ ಎಂದರೆ ನಿಮ್ಮ ಗೆಳೆಯರೊಂದಿಗೆ ಶೇರ್ ಮಾಡಿ.
ಇದನ್ನೂ ಓದಿ: 5 ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಮುಂದುವರೆಯುತ್ತದೆ!! – CM ಸಿದ್ದರಾಮಯ್ಯ