Download Ration Card Online: ಬಹಳಷ್ಟು ಜನರು ರೇಷನ್ ಕಾರ್ಡ್ ಯಾವ ರೀತಿ ನಾವು ಆನ್ಲೈನ್ ಮೂಲಕ ಡೌನ್ಲೋಡ್ ಮಾಡಬಹುದು ಎಂದು ಕೇಳುತ್ತಿದ್ದರು ಅಂತವರಿಗೆ ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದ್ದೇವೆ ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು ನೀವು ನಿಮ್ಮ ರೇಷನ್ ಕಾರ್ಡ್ ಅನ್ನು ಮನೆಯಲ್ಲೇ ಕುಳಿತುಕೊಂಡು ಡೌನ್ಲೋಡ್ ಮಾಡಬಹುದು.
ಬಹಳಷ್ಟು ಜನರು ಹತ್ತಿರದ ಸೈಬರ್ ಸೆಂಟರ್ಗಳಿಗೆ ಹೋಗಿ ಹಣವನ್ನು ಕೊಟ್ಟು ರೇಷನ್ ಕಾರ್ಡನ್ನು ಡೌನ್ಲೋಡ್ (Ration Card Download) ಮಾಡಿಕೊಳ್ಳುತ್ತಿದ್ದರು. ಆದರೆ ಈಗ ನೀವು ನಿಮ್ಮ ಮೊಬೈಲ್ ಫೋನಿನಲ್ಲಿ ಪಿಡಿಎಫ್ (PDF) ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.
ರೇಷನ್ ಕಾರ್ಡ್ Online ಡೌನ್ಲೋಡ್ Kannada 2024
https://ahara.kar.nic.in/lpg/ ಈ ಲಿಂಕ್ ಅನ್ನು ಬಳಸಿಕೊಂಡು ನೀವು ರೇಷನ್ ಕಾರ್ಡನ್ನು ಡೌನ್ಲೋಡ್ ಮಾಡಬಹುದು, ಮೊದಲಿಗೆ ಈ ವೆಬ್ಸೈಟ್ ಅನ್ನು ಭೇಟಿ ಮಾಡಿ ಇದರ ನಮ್ಮ ಕರ್ನಾಟಕದ ಆಹಾರ ಇಲಾಖೆಯ ವೆಬ್ಸೈಟ್. ಈ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ.
ಇಲ್ಲಿ ನೀವು ಈಗ ನೀವು ಯಾವ ಜಿಲ್ಲೆಗೆ ಸೇರುತ್ತೀರಾ ಎಂಬುದನ್ನು ಅಲ್ಲಿ ನೋಡಿಕೊಂಡು. ಆ ಜಿಲ್ಲೆಗೆ ಸಂಬಂಧಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿ ನಂತರ ಮತ್ತೊಂದು ಪೇಜ್ ಓಪನ್ ಆಗುತ್ತದೆ.
Note: ನಿಮಗೆ ಯಾವುದೇ ರೀತಿಯ ಗೊಂದಲ ಆಗಬಾರದು ಎಂದು ಅದಕ್ಕೆ ಸಂಬಂಧಿಸುವ ಎಲ್ಲಾ ಚಿತ್ರಗಳನ್ನು ನಿಮಗೆ ಇಲ್ಲಿ ನೀಡಿದ್ದೇವೆ. ಇದರ ಮೂಲಕ ನೀವು ಸರಿಯಾಗಿ ತಿಳಿದುಕೊಳ್ಳಬಹುದು ಹಾಗೂ ಯಾವುದೇ ರೀತಿಯ ತಪ್ಪು ಮಾಡದೆ ಸರಿಯಾಗಿ ರೇಷನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳ ಬಹುದು
ಈಗ ನೀವು ಅಲ್ಲಿ “Status Of Ration Card” ಎಂದು ಏನು ಕಾಣುತ್ತಿದೆ ಅದನ್ನು ಕ್ಲಿಕ್ ಮಾಡಿ ನಂತರ ಓಟಿಪಿ ವೆರಿಫಿಕೇಶನ್ ಮಾಡಬೇಕಾಗುತ್ತದೆ. ಈಗ ನೀವು ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಅಲ್ಲಿ ಹಾಕಬೇಕು ನಂತರ ಮನೆಯ ಸದಸ್ಯರ ಒಬ್ಬರ ಹೆಸರನ್ನು ಆಯ್ಕೆ ಮಾಡಿ ಮುಂದುವರಿಸಿದರೆ ಅವರ ಮೊಬೈಲ್ ನಂಬರ್ ಏನಿದೆ ಅದಕ್ಕೆ ಒಂದು ಒಟಿಪಿ ಬರುತ್ತದೆ.
OTP ಸರಿಯಾಗಿ ಎಂಟರ್ ಮಾಡಿ ಮುಂದುವರಿಸಿದರೆ ನಿಮಗೆ ಮತ್ತೊಂದು ಪೇಜ್ ಓಪನ್ ಆಗುತ್ತದೆ ಅಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು. ಒಂದು ವೇಳೆ ನೀವು ಮೊಬೈಲ್ ಬಳಸುತ್ತಿದ್ದರೆ ಡೌನ್ಲೋಡ್ ಮಾಡುವ ಆಪ್ಷನ್ ಕೆಳಗೆ ಇರುತ್ತದೆ.
“View Ration Card Details” ಎಂದು ಒಂದು ಲಿಂಕ್ ಕಾಣುತ್ತದ ಅದನ್ನು ಕ್ಲಿಕ್ ಮಾಡಿ.
ನಂತರ, Ration Card Online ಮೂಲಕ ಮೊಬೈಲ್ ಬಳಸಿಕೊಂಡು ಡೌನ್ಲೋಡ್ ಮಾಡಬಹುದು
Specimen Copy ಇರದೇ Ration Card Online ಡೌನ್ಲೋಡ್ ಮಾಡುವುದು ಹೇಗೆ
ಒಂದು ವೇಳೆ ನೀವು ಮೊಬೈಲ್ ಬಳಸಿದರೆ ನಿಮಗೆ ಸ್ವಲ್ಪ ಕಷ್ಟವಾಗಬಹುದು ಆದರೆ ನೀವು ಲ್ಯಾಪ್ಟಾಪ್ ಮೂಲಕ ಡೌನ್ಲೋಡ್ ಮಾಡಿದರೆ Specimen copy ಏನು ನಿಮ್ಮ ರೇಷನ್ ಕಾರ್ಡ್ ಮೇಲೆ ಇರುತ್ತದೆ ಅದನ್ನು ಸುಲಭವಾಗಿ ರೀಮೂವ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು.
ರಿಮೂವ್ ಮಾಡೋ ವಿಧಾನ ಯಾವ ರೀತಿ ಎಂದರೆ ಮೊದಲಿಗೆ ನೀವು “Ctrl+shift+I” ಒತ್ತಿದರೆ ನಿಮಗೆ ಒಂದು ಸೈಡ್ ಬಾರ್ ಪೇಜ್ ಓಪನ್ ಆಗುತ್ತದೆ.
ಅಲ್ಲಿ ನೀವು Specimen Copy ವಾಟರ್ ಮಾರ್ಕ್ ಏನಿದೆ ಅದರ ಮೇಲೆ ಕ್ಲಿಕ್ ಮಾಡಿದರೆ ಇದರ ಹೆಸರು ನಿಮಗೆ ಅಲ್ಲಿ ಕಾಣುತ್ತದೆ ನಂತರ ಅದನ್ನು ಡಿಲೀಟ್ ಮಾಡಿದರೆ ಈ ವಾಟರ್ ಮಾರ್ಕ್ ರೇಷನ್ ಕಾರ್ಡ್ ನಲ್ಲಿ ಹೋಗುತ್ತದೆ.
ಈಗ ನೀವು ಸುಲಭವಾಗಿ ನಿಮ್ಮ ರೇಷನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.