Holiday Dakshina Kannada: ಮಳೆ ಆರ್ಭಟದಿಂದ ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ!!

ಎಲ್ಲರಿಗೂ ನಮಸ್ಕಾರ, ದಕ್ಷಿಣ ಕನ್ನಡ ಭಾಗದಲ್ಲಿ ಭಾರಿ ಮಳೆ ಆಗುತ್ತಾ ಇದೆ ಹಾಗೂ ಇದರ ಜೊತೆ ಸುಂಟರಗಾಳಿಯು ಕೂಡ ಬರುತ್ತಿದೆ ಇದರಿಂದ ಭಾರೀ ಹಾನಿಗಳು ಹೆಚ್ಚಾಗುತ್ತಾ ಇದೆ. ಅಡಿಕೆ ತೋಟಗಳು ಮನೆಗಳು ಎಲ್ಲಾ ನೀರು ಪಾಲಾಗಿದೆ. ಉಡುಪಿ ನಗರದ ಮಣಿಪಾಲಿನ ಆಸುಪಾಸಿನಲ್ಲಿ ಭಾರಿ ಮಳೆ ಆಗುತ್ತಾ ಇದೆ. ಇಂದು ಸತತ ಮೂರು ಗಂಟೆ ಕಾಲ ಮಳೆ ಬಿಡದೆ ಬಂದಿದೆ.

ನಾಟಿ ಮಾಡಿದ ಗದ್ದೆಗಳಲ್ಲಿ ಇದೀಗ ಮಳೆ ನೀರು ಬಂದಿದೆ ಎಲ್ಲಾ ಸಸಿಗಳು ನಾಶವಾಗಿದೆ. ಕೆಲವರು ರಸ್ತೆಗಳಲ್ಲಿ ಜಲದಂತೆ ನೀರುಗಳು ಹರಿಯುತ್ತಿದ್ದ ಮತ್ತು ಈಗ ಅಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ಜೋರು ಮಳೆ ವಾಹನಗಳಿಗೆ ಈಗ ಬಾರಿ ಅಡ್ಡ ತಡೆಗಳು ಬಂದಿದೆ ಸರಿಯಾಗಿ ರಸ್ತೆ ಮೇಲೆ ಚಲಿಸಲು ಆಗುತ್ತಾ ಇಲ್ಲ.

Dakshina Kannada ದಲ್ಲಿ ಶಾಲಾ ಕಾಲೇಜುಗಳಿಗೆ ರಜೆ

ವಾಹನಗಳು ಓಡಾಡಲು ಸಾಧ್ಯವಾಗದ ಕಾರಣಗಳಿಂದ ಶಾಲಾ ಮಕ್ಕಳಿಗೆ ರಜೆ ನೀಡಲಾಗಿದೆ ದಕ್ಷಿಣ ಕನ್ನಡದಲ್ಲಿ ಇರುವ ಶಾಲಾ ಕಾಲೇಜುಗಳು ಇಂದು ರಜೆ ಘೋಷಿಸಲಾಗಿದೆ ಮಕ್ಕಳಿಗೆ ಪ್ರಯಾಣ ಮಾಡಲು ಬಹಳ ತೊಂದರೆಯಾಗುವ ಸಲುವಾಗಿ ಈ ಒಂದು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಒಂದು ಗಂಟೆ ಕಾಲ ಮಳೆ ಅಥವಾ ಹತ್ತು ನಿಮಿಷಗಳ ಕಾಲ ಮಳೆ ಬಂದು ಹೋಗುತ್ತಾ ಇಲ್ಲ ಎಡಬಿಡದೆ 3 ರಿಂದ 4 ಗಂಟೆಗಳ ಕಾಲ ಮಳೆರಾಯ ಆರ್ಭಟಿಸುತ್ತಿದ್ದಾನೆ ದಕ್ಷಿಣಾ ಜಿಲ್ಲೆಗಳಲ್ಲಿ, ಉಡುಪಿಯ ಜನರು ಒಂದು ಬೇಸತ್ತು ಹೋಗಿದ್ದಾರೆ ಈ ರೀತಿ ಮಳೆ ಬಂದರೆ ಮುಂದೆ ಅವರ ಮನೆಗಳು ಕೂಡ ಮುಳುಗಿಹೋಗುವ ಸಾಧ್ಯತೆಗಳು ಇದೆ ಎಂದು ಹೇಳುತ್ತಿದ್ದಾರೆ.

ಅದೇ ರೀತಿ ಬೈಂದೂರು ತಾಲೂಕಿನ ಸುಮಾರು 40 ಶಾಲೆಗಳಿಗೆ ರಜೆ ನೀಡಲಾಗಿದೆ. ಕುಂದಾಪುರ ತಾಲೂಕಿನ 10 ಹೆಚ್ಚು ಶಾಲೆಗಳಿಗೂ ಕೂಡ ರಜೆಯನ್ನು ನೀಡಿದ್ದಾರೆ. ಮಕ್ಕಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಯಾವ ರೀತಿ ರಜೆಯನ್ನು ನೀಡಿದ್ದಾರೆ ಎಂದರೆ ಯಾವ ಜಾಗದಲ್ಲಿ ರಸ್ತೆಯ ಸಂಚಾರ ಸರಿಯಾಗಿ ಇಲ್ಲ ಅಂತಹ ಜಾಗಗಳನ್ನು ನೋಡಿ ರಜೆಯನ್ನು ನೀಡಿದ್ದಾರೆ.

ಮಂಗಳೂರು ತಹಶಿಲ್ದಾರವರು ರಜೆ ನೀಡಲು ಆದೇಶ ನೀಡಿದ್ದಾರೆ.

ಇದನ್ನೂ ಓದಿ: Latest Government Jobs Karnataka: ಮೈಸೂರು ಸಿಟಿ ಕಾರ್ಪೊರೇಷನ್ ನೇಮಕಾತಿ 2024!!

Leave a Comment

error: Content is protected !!