ಎಲ್ಲರಿಗೂ ನಮಸ್ಕಾರ, ಉಚಿತ ಡೇಟಾ ನೀಡಿ. ಭಾರತದಲ್ಲಿ ಡೇಟಾ ಕ್ರಾಂತಿ ಮಾಡಿದ ಜಿಯೋ ಈಗ ಕ್ಲೌಡ್ ಸ್ಟೋರೇಜ್ ನಲ್ಲೂ (Cloud Storage) ಕ್ರಾಂತಿ ಮಾಡಲು ಮುಂದಾಗಿದೆ ಈ ಮೂಲಕ ಬಹುರಾಷ್ಟ್ರೀಯ ಕಂಪೆನಿಗಳಾದ ಆಪಲ್ ಮತ್ತು ಗೂಗಲ್ ಗೆ ಟಕ್ಕರ್ ನೀಡಲು ಮುಂದಾಗ್ತಾ ಇದೆ ಹೀಗಾಗಿ ಜಿಯೋ ನೀಡುತ್ತಿರುವ ಆಫರ್ ಹೇಗಿರಬಹುದು ಕಡಿಮೆ ಬೆಲೆಗೆ ಜಿಯೋ ಹೇಗೆ ನೀಡುತ್ತೆ ಮುಕೇಶ್ ಅಂಬಾನಿ ಹೇಳಿದ್ದೇನು ವೆಲ್ಕಮ್ ಆಫರ್ ಹೇಗಿರಬಹುದು.
ಈ ಎಲ್ಲಾ ವಿಷಯಗಳಿಗೆ ನಾನು ಈ ಲೇಖನದಲ್ಲಿ ಉತ್ತರ ನೀಡಿದ್ದೇವೆ ನಿಮಗಾಗಿ ರಿಲಯನ್ಸ್ ಇಂಡಸ್ಟ್ರೀಸ್ ನ 47ನೇ ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ ಅವರು ತನ್ನೆಲ್ಲ ಬಳಕೆದಾರರಿಗೆ ಉಚಿತವಾಗಿ 100 Gb ಕ್ಲೌಡ್ ಸ್ಟೋರೇಜ್ ನೀಡುವುದಾಗಿ ಹೇಳಿದ್ದಾರೆ ಅಷ್ಟೇ ಅಲ್ಲದೆ ಈ ದೀಪಾವಳಿಗೆ ವೆಲ್ಕಮ್ ಆಫರ್ ಅನ್ನು ನಾವು ಘೋಷಣೆ ಮಾಡ್ತೇವೆ ಅಂತ ಘೋಷಿಸಿದ್ದಾರೆ.
ಮುಕೇಶ್ ಅಂಬಾನಿ ವೇದಿಕೆ ಮೇಲೆ ಹೇಳಿರುವ ಮಾತುಗಳು
“I am thrilled to announce The Jio AI cloud Welcome offer. Today, I am announcing that JIO users will get up to 100 GB of free cloud storage to securely store and access all their photos, videos, documents, and all other digital content and data, and we will also have the most affordable prices in the market for those needing even higher storage. We plan to launch the JIO AI cloud welcome offer starting Diwali of this year, bringing a powerful and affordable solution where cloud data storage and data-powered AI services are available to everyone, everywhere.”
Jio Cloud Data ಸ್ಟೋರೇಜ್ ಅಂದರೆ ಏನು
ಹಿಂದೆ ಕಂಪ್ಯೂಟರ್ ನಲ್ಲಿ ಮೆಮೊರಿ ಕಡಿಮೆ ಇತ್ತು ಈ ಸಂದರ್ಭದಲ್ಲಿ ಸಿಡಿ, ಡಿವಿಡಿ, ಪೆನ್ ಡ್ರೈವ್ ನಲ್ಲಿ ಡೇಟಾವನ್ನು ಸಂಗ್ರಹ ಮಾಡಲಾಗ್ತಾ ಇತ್ತು ನಂತರ ಮುಂದುವರೆದು ಎಕ್ಸ್ಟರ್ನಲ್ ಹಾರ್ಡ್ ಡಿಸ್ಕ್ ನಲ್ಲಿ ಡೇಟಾವನ್ನು ಸಂಗ್ರಹ ಮಾಡಲಾಗ್ತಾ ಇದೆ ಆದರೆ ಇಲ್ಲಿ ಒಂದು ಸಮಸ್ಯೆ ಇದೆ ಸಮಸ್ಯೆ ಏನು ಅಂತ ಅಂದ್ರೆ ನಿಮಗೆ ಅಮೆರಿಕಾದಲ್ಲಿರುವ ಕಂಪ್ಯೂಟರ್ ಗೆ ಶೀಘ್ರವಾಗಿ ಡೇಟಾವನ್ನು ಎಕ್ಸ್ಟರ್ನಲ್ ಹಾರ್ಡ್ ಡಿಸ್ಕ್ ಇಂದ ಸೆಂಡ್ ಮಾಡಲು ಸಾಧ್ಯವಾಗಲ್ಲ.
ಈ ಕಾರಣಕ್ಕಾಗಿ ಈಗ ಹಲವು ಮಂದಿ ಕ್ಲೌಡ್ ಸ್ಟೋರೇಜ್ ನಲ್ಲಿ ಡೇಟಾವನ್ನು ಸಂಗ್ರಹ ಮಾಡಲು ಆರಂಭಿಸಿದ್ದಾರೆ ವಿಶ್ವದ ಯಾವುದೇ ಮೂಲೆಯಲ್ಲಿ ಇಂಟರ್ನೆಟ್ ಲಭ್ಯವಿದೆ. ಈ ಕಾರಣಕ್ಕಾಗಿ ಸುಲಭವಾಗಿ ಕ್ಲೌಡ್ ಸ್ಟೋರೇಜ್ ನಲ್ಲಿ ಡೇಟಾ ಸಂಗ್ರಹವಾದರೆ ಯಾವುದೇ ಕಾರಣಕ್ಕಾಗಿ ಡೇಟಾ ಮಿಸ್ ಆಗಲ್ಲ ಆಮೇಲೆ ಸುಲಭವಾಗಿ ಎಲ್ಲರಿಗೂ ಲಭ್ಯವಾಗುವ ಕಾರಣ ಬಹುತೇಕ ಮಂದಿ ಈಗ ಕ್ಲೌಡ್ ಸ್ಟೋರೇಜ್ ನಲ್ಲಿ ಡೇಟಾವನ್ನು ಸಂಗ್ರಹ ಮಾಡಲು ಆರಂಭಿಸಿದ್ದಾರೆ.
Amazon Job Kannada: ವರ್ಚುವಲ್ ಕಸ್ಟಮರ್ ಸರ್ವಿಸ್ ಅಸೋಸಿಯೇಟ್!!
ಗೂಗಲ್ ಒನ್ ಗ್ರಾಹಕರಿಗೆ ಎಷ್ಟು Gb Cloud ನೀಡುತ್ತದೆ
ಸದ್ಯ ಗೂಗಲ್ ಒನ್ ನಲ್ಲಿ 15 Gb ವರೆಗೆ ನೀವು ಉಚಿತವಾಗಿ ಡೇಟಾವನ್ನು ಸಂಗ್ರಹ ಮಾಡಬಹುದು ಈ ಮಿತಿಯನ್ನು ದಾಟಿದ ನಂತರ ಹೆಚ್ಚಿನ ಮೆಮೊರಿಯನ್ನು ನೀವು ಸೇವ್ ಮಾಡಬೇಕು ಅಂತ ಅಂದ್ರೆ ನೀವು ಹಣವನ್ನು ಪಾವತಿ ಮಾಡಬೇಕು ಅದರಲ್ಲೂ ನೀವು ಆಟೋ ಸೇವ್ ಮೋಡ್ ಹಾಕಿದ್ರೆ ಕ್ಷಣ ಮಾತ್ರ ಅಥವಾ ಕೆಲವೇ ತಿಂಗಳಲ್ಲಿ 15 Gb ಭರ್ತಿಯಾಗುತ್ತೆ ಇದು ಯಾಕೆ ಭರ್ತಿಯಾಗುತ್ತೆ ಅನ್ನೋದು ಕಾರಣವಿದೆ.
ಸಾಧಾರಣವಾಗಿ ಇಂಡಿಯಾದವರ ಮೈಂಡ್ ಸೆಟ್ ಹೇಗೆ ಅಂತಂದ್ರೆ ನೀವು ಒಂದು ಫೋಟೋ ತೆಗಿತೀರಾ ಒಂದು ಫೋಟೋ ತೆಗಿತೀರಾ ಇಲ್ಲ ಒಂದು 15, 20 ಫೋಟೋಗಳನ್ನ ಕ್ಲಿಕ್ ಮಾಡ್ತೀರಾ ಅದರಲ್ಲಿ ಒಂದು ಫೋಟೋ ಮಾತ್ರ ಬಹಳ ಚೆನ್ನಾಗಿ ಬಂದಿರುತ್ತೆ ಈ 20 ಫೋಟೋಗಳ ಪೈಕಿ 20 ಫೋಟೋವನ್ನು ಡಿಲೀಟ್ ಮಾಡಲ್ಲ ಅದು ಮೆಮೊರಿಯಲ್ಲಿ ಸೇವ್ ಆಗುತ್ತೆ ನೀವು ಅದರಲ್ಲೂ ಆಟೋ ಸೇವ್ ಹಾಕಿದ್ರೆ ಗೂಗಲ್ ನಲ್ಲಿ ಆಟೋಮ್ಯಾಟಿಕ್ ಆಗಿ ಸೇವ್ ಆಗುತ್ತೆ ಈ ಮೂಲಕ ಕೆಲವೇ ದಿನಗಳಲ್ಲಿ ಈ ಕ್ಲೌಡ್ ಸ್ಟೋರೇಜ್ ಭರ್ತಿಯಾಗುತ್ತೆ.
ಗೂಗಲ್ ಒನ್ Cloud Storage ದರ
ಇನ್ನು ಗೂಗಲ್ ಒನ್ ಕ್ಲೌಡ್ ಸ್ಟೋರೇಜ್ ಅಲ್ಲಿ ಎಷ್ಟು ದರ ಇದೆ ಅಂತ ಹೇಳುವುದಾದರೆ
100 Gb ಡೇಟಾಗೆ ತಿಂಗಳಿಗೆ 130Rs ಇದ್ರೆ
200 Gb ಡೇಟಾಗೆ ತಿಂಗಳಿಗೆ 210 ರೂಪಾಯಿ ದರವನ್ನು ನಿಗದಿ ಮಾಡಿದ್ದಾರೆ
ಇನ್ನು ಆಪಲ್ ಕ್ಲೌಡ್ ನಲ್ಲಿ 50 Gb ಡೇಟಾಗೆ ತಿಂಗಳಿಗೆ 75Rs ಇದ್ರೆ
200 Gb ಡೇಟಾಗೆ 219 ದರವನ್ನು ನಿಗದಿ ಮಾಡಿದೆ
ಈಗ Jio ತನ್ನ ಎಲ್ಲಾ ಬಳಕೆದಾರರಿಗೆ ಉಚಿತವಾಗಿ 100 Gb ಘೋಷಣೆ ಮಾಡಿದ್ದರಿಂದ ಮುಂದಿನ ದಿನಗಳಲ್ಲಿ ಕ್ಲೌಡ್ ಸ್ಟೋರೇಜ್ ನಲ್ಲೂ ದರ ಸಮಸ್ಯೆ ಆರಂಭವಾಗುವ ಸಾಧ್ಯತೆ ಇದೆ
ಜಿಯೋ ದೀಪಾವಳಿಗೆ 100Gb Cloud Data Welcome Offer ಬಿಡುಗಡೆ
Jio ದೀಪಾವಳಿಗೆ ವೆಲ್ಕಮ್ ಆಫರ್ ಅನ್ನು ನೀಡುವುದಾಗಿ ಹೇಳಿದೆ ಹೀಗಾಗಿ ನಾವು ಈಗಲೇ ಈ ಪ್ಲಾನ್ ಬಗ್ಗೆ ಏನೇ ಹೇಳಿದ್ರು ಅದು ತಪ್ಪಾಗಬಹುದು ಆದರೆ ಈ ಹಿಂದೆ ಜಿಯೋ ನೀಡಿದ ಪ್ಲಾನ್ ಗಳನ್ನು ನೋಡಿ ಊಹನೆ ಮಾಡಬಹುದು ಈ ಹಿಂದೆ ಜಿಯೋ ಲಾಂಚ್ ಆದಾಗ ಮೂರು ತಿಂಗಳು ಉಚಿತ ಡೇಟಾ ಆಫರ್ ನೀಡಿತ್ತು ನಂತರ ಹಂತಹಂತವಾಗಿ ದರವನ್ನು ಏರಿಕೆ ಮಾಡಿತ್ತು ಹೀಗಾಗಿ 100 Gb ಆರಂಭದಲ್ಲಿ ಫ್ರೀಯಾಗಿ ನೀಡಿ ಹೇಳಿದ್ರು.
ನಮ್ಮ ತರದ ದಿನಗಳಲ್ಲಿ ದರವನ್ನು ಹಾಕುವಂತಹ ಸಾಧ್ಯತೆ ಇದೆ ಅದರ ಜೊತೆ ಇನ್ನೊಂದು ಇದೆ ಸಾಧ್ಯತೆ ಇದೆ ಏನು ಅಂತ ಅಂದ್ರೆ ಗೂಗಲ್ ರೀತಿ 15 Gb ಡೇಟಾ ಕಟ್ ಆಫ್ ತರ 100 Gb ಡೇಟಾ ಕಟ್ ಆಫ್ ಮಾಡಬಹುದು ನಮ್ಮ ತರ 100 Gb ಗಿಂತ ಹೆಚ್ಚಿನ ಡೇಟಾವನ್ನು ಬಳಕೆ ಮಾಡಿದ್ರೆ ಅದಕ್ಕೆ ಮಾತ್ರ ದರವನ್ನು ವಿಧಿಸುವಂತಹ ಸಾಧ್ಯತೆ ಸಹ ಇದೆ.
ವೈರ್ ಬ್ರಾಡ್ ಬ್ಯಾಂಡ್ ಮತ್ತು ವೈರ್ಲೆಸ್ ಬ್ರಾಡ್ ಬ್ಯಾಂಡ್
ಭಾರತದ ವೈರ್ ಬ್ರಾಡ್ ಬ್ಯಾಂಡ್ ಮತ್ತು ವೈರ್ಲೆಸ್ ಬ್ರಾಡ್ ಬ್ಯಾಂಡ್ ನಲ್ಲಿ ಜಿಯೋ ನಂಬರ್ ಒನ್ ಸ್ಥಾನದಲ್ಲಿದೆ ಭಾರತದ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ರಿಲೀಸ್ ಮಾಡುವ ಡೇಟಾ ಪ್ರಕಾರ ಜಿಯೋ ಮೊದಲ ಸ್ಥಾನದಲ್ಲಿದ್ದರೆ ಏರ್ಟೆಲ್ ಎರಡನೇ ಸ್ಥಾನದಲ್ಲಿದೆ. ವೈರ್ಲೆಸ್ ಬ್ರಾಡ್ಬ್ಯಾಂಡ್ ನಲ್ಲಿ ರಿಲಯನ್ಸ್ ಜಿಯೋ ಗೆ 47 ಕೋಟಿ ಗ್ರಾಹಕರಿದ್ದರೆ.
ಏರ್ಟೆಲ್ ಗೆ 27 ಕೋಟಿ ಗ್ರಾಹಕರಿದ್ದಾರೆ ಇನ್ನು Vodafone idea (VI) ಗೆ 12 ಕೋಟಿ ಗ್ರಾಹಕರಿದ್ದರೆ BSNL ಗೆ ಎರಡು ಕೋಟಿ ಗ್ರಾಹಕರನ್ನು ಹೊಂದಿದೆ ಅತಿ ಹೆಚ್ಚು ಸಂಖ್ಯೆಯಲ್ಲಿ ಗ್ರಾಹಕರು ಜಿಯೋ ಗೆ ಇದ್ದಾರೆ ಈಗ ಕ್ಲೌಡ್ ಸ್ಟೋರೇಜ್ ನಲ್ಲಿ ಫ್ರೀ ನೀಡಿದರೆ ಮತ್ತಷ್ಟು ಸಂಖ್ಯೆಯ ಗ್ರಾಹಕರು ಸೇರ್ಪಡೆಯಾದರೆ ಜಿಯೋ ಗೆ ಲಾಭವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ
ಜಿಯೋ ಕಂಪನಿಯ ಆರಂಭದ ದಿನಗಳು 2007
ಜಿಯೋ ಕಂಪೆನಿ 2016 ರಲ್ಲಿ ತನ್ನ ಸೇವೆಯನ್ನು ಆರಂಭಿಸಿದರು ಜಿಯೋ ಕಂಪೆನಿಯ ಬಗ್ಗೆ ತಿಳಿದುಕೊಳ್ಳಬೇಕು ಅಂತ ಅಂದ್ರೆ 2007 ಕ್ಕೆ ನಾವು ಹೋಗಬೇಕು 2007 ರಲ್ಲಿ ಇನ್ಫೋಟೆಲ್ ಬ್ರಾಡ್ಬ್ಯಾಂಡ್ ಸರ್ವಿಸ್ ಲಿಮಿಟೆಡ್ ಹೆಸರಿನಲ್ಲಿ ಒಂದು ಕಂಪೆನಿ ರಿಜಿಸ್ಟರ್ ಆಗುತ್ತೆ. ಈ ಕಂಪೆನಿ 2010 ರಲ್ಲಿ ಯುಪಿಎ ಸರ್ಕಾರ ನಡೆಸಿದಂತಹ 4g ಸ್ಪೆಕ್ಟ್ರಮ್ ಹರಾಜಿನಲ್ಲಿ ಎಲ್ಲಾ 22 ಸರ್ಕಲ್ನಲ್ಲಿ ಬ್ರಾಡ್ ಬ್ಯಾಂಡ್ ಸ್ಪೆಕ್ಟ್ರಮ್ ಅನ್ನು ಖರೀದಿ ಮಾಡುತ್ತೆ. 2010 ರಲ್ಲಿ ಈ ಕಂಪೆನಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಖರೀದಿಸುತ್ತೆ ನಂತರ 2013 ರಲ್ಲಿ ಇನ್ಫೋಟೆಲ್ ಬ್ರಾಡ್ಬ್ಯಾಂಡ್ ಸರ್ವಿಸ್ ಲಿಮಿಟೆಡ್ ಕಂಪೆನಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಆಗಿ ಬದಲಾಗುತ್ತೆ.
2015ರ ಡಿಸೆಂಬರ್ ನಲ್ಲಿ ರಿಲಯನ್ಸ್ ಜಿಯೋ ಬೀಟಾ ಆವೃತ್ತಿ ಆರಂಭಗೊಂಡರೆ 2016 ಸೆಪ್ಟೆಂಬರ್ ನಲ್ಲಿ ಅಧಿಕೃತವಾಗಿ ರಿಲಯನ್ಸ್ ತನ್ನ ಸೇವೆಯನ್ನು ಆರಂಭಿಸುತ್ತೆ. ರಿಲಯನ್ಸ್ ಜಿಯೋ ಕ್ಲಿಕ್ ಆಗಿದ್ದು ಹೇಗೆ ಅಂತ ನಿಮಗೆ ಗೊತ್ತಿದೆ ಆರಂಭದಲ್ಲಿ ಜಿಯೋ ಉಚಿತ ಆಫರ್ ಗಳನ್ನು ನೀಡಿತ್ತು ಇದು ಜನರ ಮನಗೆದ್ದಿತ್ತು ಅಷ್ಟೇ ಅಲ್ಲದೆ ರಿಲಯನ್ಸ್ ಸ್ಟೋರ್ ಗಳ ಮುಂದೆ 100, 200 ಮೀಟರ್ ಉದ್ದದ ಕ್ಯೂ ಸಹ ನಿಂತುಕೊಂಡು ಜನ ಸಿಮ್ ಖರೀದಿಸಲು ಮುಂದಾಗ್ತಾ ಇದ್ರು ನಂತರ ಬಹಳ ಇಂಪಾರ್ಟೆಂಟ್ ಏನು ಅಂತ ಅಂದ್ರೆ ಮೊದಲೆಲ್ಲ ಒಂದು ಸಿಮ್ ಅನ್ನು ಖರೀದಿಸಬೇಕು ಅಂತ ಅಂದ್ರೆ ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕಾಗಿತ್ತು ಆದರೆ ರಿಲಯನ್ಸ್ ಜಿಯೋ ಸಿಮ್ ಅನ್ನು ಸುಲಭ ವಾಗಿ ಖರೀದಿಸಬೇಕಾಗಿತ್ತು ಹೇಗೆ ಅಂತಂದ್ರೆ ಆಧಾರ್ ಒಂದಿದ್ರೆ ಬಹಳ ಸುಲಭವಾಗಿ ಸಿಮ್ ಆಕ್ಟಿವೇಷನ್ ಆಗ್ತಾ ಇತ್ತು ಅಷ್ಟೇ ಅಲ್ಲದೆ ಜಿಯೋ ಪ್ರತಿನಿಧಿಗಳು ಕಂಪೆನಿಗಳ ಮುಂದೆ ಬಂದು ಸಿಮ್ ಅನ್ನು ಆಕ್ಟಿವೇಷನ್ ಮಾಡಿ ಕೊಡ್ತಾ ಇದ್ರು
ಕೊನೆಯ ಮಾತುಗಳು
ಈ ಎಲ್ಲಾ ಕಾರಣದಿಂದ ಜಿಯೋ ಸುಲಭವಾಗಿ ಜನರ ಮನಗೆಲ್ಲುವಲ್ಲಿ ಸಫಲವಾಯಿತು ಜಿಯೋ ದಿಂದ ಏನಾಯ್ತು ಅಂತ ಅಂದ್ರೆ ಜಿಯೋ ಬರುವ ಮೊದಲು 1 Gb, 3 Gb ಡಾಟಾಗೆ 250 ಇದ್ರೆ 4 Gb ಡಾಟಾಗೆ 350rs ಇತ್ತು ಈಗ Jio ದಿಂದ ದರಸಮರ ಆರಂಭವಾಗಿ ಸದ್ಯ ಈಗ 1 Gb ಡಾಟಾಗೆ 14 ರೂಪಾಯಿ ಇದೆ ಇನ್ನು ಜಿಯೋ ಬರುವ ಮೊದಲು ಮೊಬೈಲ್ ಇಂಟರ್ನೆಟ್ ಬಳಕೆ ಮಾಡುವ ದೇಶಗಳ ಪೈಕಿ ಭಾರತಕ್ಕೆ 150ನೇ ಸ್ಥಾನದಲ್ಲಿದ್ದರೆ.
ಜಿಯೋ ಬಂದ ನಂತರ ವಿಶ್ವದಲ್ಲೇ ಭಾರತ ಮೊದಲ ಸ್ಥಾನಕ್ಕೆ ಬಂದಿದೆ ಸದ್ಯ ಕ್ಲೌಡ್ ಸ್ಟೋರೇಜ್ ನಲ್ಲಿ ವಿದೇಶಿ ಟೆಕ್ ಕಂಪೆನಿಗಳ ಪ್ರಾಬಲ್ಯವೇ ಹೆಚ್ಚಿದೆ ಅದರಲ್ಲೂ ಅಮೆರಿಕನ್ ಟೆಕ್ ಕಂಪೆನಿಗಳು ಆ ದೇಶದ ಜನರ ಆದಾಯವನ್ನು ನೋಡಿಕೊಂಡು ದರವನ್ನು ಫಿಕ್ಸ್ ಮಾಡ್ತಾ ಇವೆ.
ಇದು ಭಾರತದಂತ ಅಭಿವೃದ್ಧಿ ಹೊಂದಿದ ದೇಶಗಳಿಗೆ ದುಬಾರಿಯಾಗುತ್ತೆ ಈಗ ಜಿಯೋ ಫ್ರೀಯಾಗಿ ಕ್ಲೌಡ್ ಸ್ಟೋರೇಜ್ ನೀಡುವುದಾಗಿ ಘೋಷಣೆ ಮಾಡಿದೆ ಈಗ ಅಮೆರಿಕಾದ ಕಂಪೆನಿಗಳು ಭಾರತದಲ್ಲಿ ಇರಬೇಕು ಅಂತ ಅಂದ್ರೆ ಕ್ಲೌಡ್ ಸ್ಟೋರೇಜ್ ದರವನ್ನು ಇಳಿಕೆ ಮಾಡಬೇಕಾಗುತ್ತೆ ಸದ್ಯಕ್ಕೆ ಜಿಯೋ ಆಫರ್ ಏನು ಮುಖ್ಯವಾಗಿ ಶರತ್ತು ಏನಿರುತ್ತೆ ಎನ್ನುವುದರ ಮೇಲೆ ಭಾರತದಲ್ಲಿ ದರಸಮರ ಆರಂಭವಾಗುವ ಸಾಧ್ಯತೆ ಇದೆ ಧನ್ಯವಾದಗಳು.