Ration Card DBT Status: ಈ ರೀತಿ ಮೊಬೈಲ್ ಫೋನಿನಲ್ಲಿ ಪರಿಶೀಲನೆ ಮಾಡಿ!! ಹಣ ಜಮಾ ಆದರೆ Status ಆಕ್ಟಿವ್ ಇರುತ್ತದೆ

ಎಲ್ಲರಿಗೂ ನಮಸ್ಕಾರ, ಇಂದು ಈ ನಮ್ಮ ಲೇಖನದಲ್ಲಿ ಯಾವ ರೀತಿ ಸುಲಭವಾಗಿ ನಿಮ್ಮ Ration Card DBT ಸ್ಟೇಟಸ್ ಪರಿಶೀಲನೆ ಮಾಡುವುದು ಎಂದು ತಿಳಿಸುತ್ತೇವೆ, ಯಾಕೆಂದರೆ ನೀವು ಈಗಾಗಲೇ ಸರ್ಕಾರದಿಂದ ಬಂದಿರುವ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 10 ಕೆಜಿ ಅಕ್ಕಿ ಬದಲು ಐದು ಕೆಜಿ ಅಕ್ಕಿ ಮತ್ತು ಮಿಕ್ಕಿದ 5 ಕೆಜಿಗೆ ಹಣ ಪಡೆಯುತ್ತಿದ್ದೀರಾ.

ಆದರೆ ಬಹಳಷ್ಟು ಜನರಿಗೆ ಈ ಹಣ ಯಾವ ರೀತಿ ಬರುತ್ತದೆ ಹಾಗೂ ಎಷ್ಟು ಕಂತಿನ ಹಣ ಈಗಾಗಲೇ ಬಿಡುಗಡೆಯಾಗಿದೆ ಎಂದು ಸರಿಯಾಗಿ ತಿಳಿದಿಲ್ಲ ಹಾಗೂ ಬಹಳಷ್ಟು ಜನರಿಗೆ ಕೆಲವು ತಿಂಗಳಿನ ಅಕ್ಕಿ ಹಣ ಬಿಡುಗಡೆಯಾಗಿಲ್ಲ ಇದಕ್ಕೆ ಕಾರಣ ಏನೆಂದರೆ ನಿಮ್ಮ ರೇಷನ್ ಕಾರ್ಡ್ DBT ಸ್ಟೇಟಸ್, ಇದು ಆಕ್ಟಿವ್ ಇದ್ದರೆ ಮಾತ್ರ ನಿಮಗೆ ಪ್ರತಿ ತಿಂಗಳು ಅಕ್ಕಿ ಹಣ ಬರುತ್ತದೆ. ಇಲ್ಲವಾದರೆ ನಿಮಗೆ ಹಣ ಬರುವುದಿಲ್ಲ

Ration Card DBT Status ನೋಡುವ ವಿಧಾನ

ahara.kar.nic.in/lpg/ – ಮೊದಲಿಗೆ ಇಲ್ಲಿ ಕಾಣುವ ಲಿಂಕ್ ಅನ್ನು ಕ್ಲಿಕ್ ಮಾಡಿ. ಆಗ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಈಗ ಇಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ನಂತರ ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ಮತ್ತೊಂದು ಪುಟ ಓಪನ್ ಆಗುತ್ತದೆ ಈಗ ಅದರಿಂದ ನಿಮ್ಮ ರೇಷನ್ ಕಾರ್ಡ್ DBT ಸ್ಥಿತಿ ಪರಿಶೀಲನೆ ಮಾಡಬಹುದು ಅಲ್ಲೇ ಸ್ವಲ್ಪ ಕೆಳಗೆ ನೀವು ನೋಡಿದರೆ ನಿಮಗೆ “ನೇರ ನಗದು ವರ್ಗಾವಣೆ ಸ್ಥಿತಿ” ಎಂಬ Link ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿ.

ಈಗ ನಿಮಗೆ ಇಲ್ಲಿ ರೇಷನ್ ಕಾರ್ಡ್ DBT ಸ್ಥಿತಿ ಪರಿಶೀಲನೆ ಮಾಡಬಹುದು ಮೊದಲಿಗೆ ನೀವು 2024 ವರುಷ ಆಯ್ಕೆ ಮಾಡಿ ನಂತರ ಯಾವ ತಿಂಗಳಿನ ಹಣ ಬಂದಿಲ್ಲ ಆ ತಿಂಗಳನ್ನು ಆಯ್ಕೆ ಮಾಡಿ, ನಂತರ ನಿಮ್ಮ ರೇಷನ್ ಕಾರ್ಡ್ ನಂಬರನ್ನು ಅಲ್ಲಿ ಹಾಕಿ ಅಲ್ಲಿ ಕಾಣುವ Captcha ನಂಬರ್ ಸರಿಯಾಗಿ ಎಂಟ್ರಿ ಮಾಡಿ ಮುಂದುವರಿಸಿ.

ರೇಷನ್ ಕಾರ್ಡ್ DBT ಸ್ಥಿತಿ ಆಕ್ಟಿವ್ ಇರಬೇಕು

ನಿಮ್ಮ ಸ್ಟೇಟಸ್ ಆಕ್ಟಿವ್ ಇದ್ದರೆ ನಿಮಗೆ ಪ್ರತಿ ತಿಂಗಳು ಸರಿಯಾಗಿ ಹಣ ಬರುತ್ತದೆ ಹಾಗೂ ಯಾವ ತಿಂಗಳಿನ ಹಣ ಬಂದಿಲ್ಲ ಎಂದು ಕೂಡ ನಿಮಗೆ ಅಲ್ಲಿ ತೋರಿಸುತ್ತದೆ ಭಾರೀ ಸುಲಭವಾಗಿ ನಿಮ್ಮ ಬಳಿ ಮೊಬೈಲ್ ಫೋನ್ ಇದ್ದರೆ ಈ ಕೂಡಲೇ ಇದನ್ನು ಪರಿಶೀಲನೆ ಮಾಡಿ ಸುಮ್ಮನೆ ವ್ಯರ್ಥ ಮಾಡಬೇಡಿ.

ಅದೇ ರೀತಿ DBT Karnataka ಎಂಬ ಪ್ಲೇ ಸ್ಟೋರಿನಲ್ಲಿ ಒಂದು ಅಪ್ಲಿಕೇಶನ್ ಇದೆ ಇದು ನಮ್ಮ ಸರ್ಕಾರದ ಅಪ್ಲಿಕೇಶನ್ ಆಗಿದೆ ಇದರ ಮೂಲಕ ನೀವು ನಿಮಗೆ ಪ್ರತಿ ತಿಂಗಳು ಯಾವ ಯೋಜನೆಯ ಹಣ ಬಿಡುಗಡೆಯಾಗಿದೆ ಹಾಗೂ ಇಷ್ಟು ಹಣ ಬಿಡುಗಡೆಯಾಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿ ನಿಮಗೆ ತೋರಿಸುತ್ತದೆ. ಧನ್ಯವಾದಗಳು

ಇದನ್ನೂ ಓದಿ: Ration Card Application Status: ಹೊಸ ರೇಷನ್ ಕಾರ್ಡ್ ಅಪ್ಲಿಕೇಶನ್ ಸ್ಟೇಟಸ್ ನೋಡುವ ವಿಧಾನ!!

 

Leave a Comment

error: Content is protected !!