ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, KCET 2024 ರ ಸಾಲಿನ ಆಪ್ಷನ್ ಎಂಟ್ರಿ ಗೆ ಯಾವ ಯಾವ ದಾಖಲೆಗಳು ಬೇಕು? ಹಾಗೆ ಸೀಟ್ allot ನಂತರ ಕಾಲೇಜಿಗೆ ದಾಖಲೆ ಪಡೆಯಲು ಯಾವ ಯಾವ ದಾಖಲಾತಿಗಳನ್ನು ಸಲ್ಲಿಸಬೇಕು? ಈ ದಾಖಲಾತಿಗಳ ಕುರಿತು ಇಂದಿನ ಈ ನಮ್ಮ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ.
ಹಾಗಾಗಿ ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ, KCET ಪರೀಕ್ಷೆಯ ಆಪ್ಷನ್ ಎಂಟ್ರಿ ಗೆ ಬೇಕಾದ ದಾಖಲೆಗಳನ್ನು ತಿಳಿಸುತ್ತೇವೆ, ಮಾಹಿತಿ ತುಂಬಾ ಉಪಯುಕ್ತವಾಗಿದೆ. KCET 2024 ರ ಕೌನ್ಸೆಲಿಂಗ್ ಪ್ರಕ್ರಿಯೆ ಇನ್ನ ಕೆಲವು ದಿನಗಳಲ್ಲಿ ನಡೆಯಲಿದೆ. ಇದಕ್ಕೆ ಮೊದಲು ಆಪ್ಷನ್ ಎಂಟ್ರಿ ಮಾಡಬೇಕು.
KEA Option Entry ಗೆ ಬೇಕಾದ ಅಗತ್ಯ ದಾಖಲೆಗಳು ಯಾವುವು?
ಈಗ ಡಾಕ್ಯುಮೆಂಟ್ ವೇರಿಫಿಕೇಷನ್ ಸ್ಟೇಟಸ್ ಚೆಕ್ ಮಾಡಲು ತಿಳಿಸಿ , ಕೆಲವು ದಿನಗಳಲ್ಲಿ ದಾಖಲೆ ಪರಿಶೀಲನ ಚೀಟಿ ನೀಡಲಾಗುವುದು. ನಂತರ ನಿಮ್ಮ ಇಚ್ಛೆಯ ಅಥವಾ ನಿಮಗೆ ಆಸಕ್ತಿ ಇರುವ ಕಾಲೇಜಿನಲ್ಲಿ ಇಂತಹ ಪದವಿ ಪಡೆಯಲು ಬಯಸುತ್ತೇವೆ ಎಂದು ತಿಳಿಸಬೇಕು. ನಿಮ್ಮ priority ಮೇಲೆ ಕಾಲೇಜಿನ ಪಟ್ಟಿ ತಯಾರಿಸಿ, ಅದನ್ನು KEA ಅವರ ವೆಬ್ಸೈಟ್ ನಲ್ಲಿ ಹಾಕಬೇಕು.
ಆಪ್ಷನ್ ಎಂಟ್ರಿ ಮಾಡಲು ಬೇರೆ ಯಾವ ದಾಖಲೆಗಳ ಅವಶ್ಯವಿಲ್ಲ. Document verification slip ಇದ್ದಾರೆ ಸಾಕು. ಅದರಲ್ಲಿ ಇರುವ secret key ಮೂಲಕ ನೀವು ನಿಮ್ಮ data portal ಗೆ ಲಾಗಿನ್ ಮಾಡಲು ಸಾಧ್ಯವಾಗುವುದು. ಸೀಕ್ರೆಟ್ ಕೀ ಇದ್ದರೆ ಸಾಕು ಆಪ್ಷನ್ ಎಂಟ್ರಿ ಮಾಡಲು.
ಕಾಲೇಜಿನಲ್ಲಿ ಅಡ್ಮಿಷನ್ ಆಗಲು ಯಾವ ಯಾವ ದಾಖಲೆಗಳನ್ನು ಕೇಳುತ್ತಾರೆ?
KCET ಕೌನ್ಸೆಲಿಂಗ್ ನಲ್ಲಿ ಒಂದು ಕಾಲೇಜು allot ಮಾಡಲಾಗುವುದು, ನಂತರ ನಿಮಗೆ ಒಪ್ಪಿಗೆ ಇದ್ದಲ್ಲಿ ನಿಮಗೆ ಸಿಕ್ಕಿರುವ ಕಾಲೇಜಿನಲ್ಲಿ KEA ಅವರು ನೀಡಿರುವ ಕೊನೆಯ ದಿನಾಂಕದೊಳಗೆ ಅಡ್ಮಿಷನ್ ಮಾಡಿಕೊಳ್ಳಬೇಕು. ಅಂತಹ ಸಮಯದಲ್ಲಿ ಕಾಲೇಜಿನವರು ನಿಮ್ಮ ಬಳಿ ಕೆಲವು ದಾಖಲೆಗಳು ಕೇಳುತ್ತಾರೆ.
KCET ಪ್ರವೇಶ ಪತ್ರ , ಅಡ್ಮಿಷನ್ ಆರ್ಡರ್ ಲೆಟರ್, KEA ಫೀಸ್ ಪೇ ಮಾಡಿರುವ ಸ್ಲಿಪ್, SSLC ಅಂಕ ಪಟ್ಟಿ, ದ್ವಿತೀಯ ಪಿಯುಸಿ ಅಂಕ ಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನೀವು ಓದಿರುವ ಎಲ್ಲಾ ಶಾಲೆಗಳ study certificate, ಹಾಗು ದ್ವಿತೀಯ ಪಿಯುಸಿ ಯ ಟಿಸಿ (Transfer Certificate) ನೀಡಬೇಕು. ಇದರ ಜೊತೆಗೆ ನಿಮ್ಮ ಭಾವಚಿತ್ರವನ್ನು ಕೇಳುತ್ತಾರೆ.
ಇದನ್ನೂ ಓದಿ: Karnataka Post Matric Hostel: ಹಾಸ್ಟೆಲ್ ಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು?