ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, KCET ಪರೀಕ್ಷೆ ಮುಗಿದಿದೆ, ಇನ್ನ ಕೆಲವು ದಿನಗಳಲ್ಲಿ KEA ಅವರು ಕೌನ್ಸೆಲಿಂಗ್ ಪ್ರಾರಂಭವಾಗಲಿದೆ. ಆದರೆ ಈ SNQ ಕೋಟ ಎಂದರೆ ಏನು ಗೊತ್ತಿಲ್ಲ, ಹೇಗೆ ಅರ್ಜಿ ಸಲ್ಲಿಸುವುದು? ಎಂಬ ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ.
ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ, ಮಾಹಿತಿ ಉಪಯುಕ್ತವಾಗಿದೆ. KCET 2024 ರ ಸಾಲಿನ ಪರೀಕ್ಷೆ ಮುಗಿದು, ಫಲಿತಾಂಶ ಪ್ರಕಟಗೊಂಡಿದ್ದು RE-NEET ಪರೀಕ್ಷೆಯ ಫಲಿತಂಶ ಬಂದ ನಂತರ KEA ಅವರು ಕೌನ್ಸೆಲಿಂಗ್ ಶುರು ಮಾಡುತ್ತಾರೆ. SNQ ಕೋಟ ಎಂದರೆ ಏನು ಎಂದು ತಿಳಿಯೋಣ.
SNQ ಕೋಟ ಎಂದರೆ ಏನು? ಇದು ಯಾರಿಗೆ ಅನ್ವಯಿಸುವುದು?
SNQ – Super Numeracy Quota ಇದು ಕೇವಲ KCET ಪರೀಕ್ಷೆ ಬರೆದು, ಎಂಜಿನಿಯರಿಂಗ್ ಪದವಿ ಪಡೆಯಬೇಕೆಂಬ ವಿದ್ಯಾರ್ಥಿಗಳಿಗೆ ಮಾತ್ರ. ಬೇರೆ ಯಾವ ಪದವಿ ಪಡೆಯುವವರಿಗೆ ಈ SNQ ಕೋಟ ಅನ್ವಯಿಸುವುದಿಲ್ಲ. ಇದು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಮಾತ್ರ.
ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯರ್ಥಿಗಳಿಗೆ ಆರ್ಥಿಕವಾದ ಬೆಂಬಲ ನೀಡಲು, ಈ SNQ ನೀಡಲಾಗುವುದು. ಎಂಜಿನಿಯರಿಂಗ್ ಪದವಿ ಪಡೆಯುವ ವಿದ್ಯಾರ್ಥಿಯ ವಾರ್ಷಿಕ ಆದಾಯ ಎಂಟು ಲಕ್ಷಕ್ಕಿಂತ (8,00,000/-) ಕಡಿಮೆ ಇದ್ದಲ್ಲಿ ಏ SNQ ಕೋಟ ಸಿಗುವುದು.
SNQ ಕೋಟ ಹೇಗೆ ಅರ್ಜಿ ಸಲ್ಲಿಸುವುದು?
SNQ ಕೋಟ ಗೆ ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇದ್ದಲ್ಲಿ SNQ ಕೋಟ ಗೆ ಅರ್ಹತೆ ಇರುವುದು. ನಂತರ KEA ನಡೆಸುವ counselling ನಲ್ಲಿ ಪ್ರತಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 6% ರಷ್ಟು ಸೀಟ್ ಈ ಕೋಟ ಗೆ ನೀಡಲಾಗುವುದು. ಈ ಕೋಟದ ಅಡಿಯಲ್ಲಿ ಸೀಟ್ ಸಿಕ್ಕರೆ ಕಮ್ಮಿ fees ನಲ್ಲಿ ಪದವಿ ಪಡೆಯಬಹುದು.
ಪ್ರತಿ ವರ್ಷ 25,000/- ದಿಂದ 30,000/- ದ ಒಳಗೆ ನಿಮ್ಮ ಎಂಜಿನಿಯರಿಂಗ್ ಪದವಿಯನ್ನು ಪಡೆಯಬಹುದು. SNQ ಕೋಟ ರಾಂಕ್ ನ ಆದರದ ಮೇಲೆ ಕಾಲೇಜ್ allot ಮಾಡಲಾಗುವುದು, ನಂತರ ಆ ಕಾಲೇಜಿನಲ್ಲಿ allot ಆದ ವಿದ್ಯಾರ್ಥಿಗಳ ವಾರ್ಷಿಕ ಆದಾಯದ ಮೇಲೆ 6% ಸೀಟ್ ಗೆ SNQ ಕೋಟ allot ಮಾಡಲಾಗುವುದು.
ಇದನ್ನೂ ಓದಿ: ನಂದಿನಿ ಹಾಲಿನ ಬೆಲೆ ಏರಿಕೆ!! KMF ಅವರು ಏನು ಹೇಳಿದ್ದಾರೆ?