ಎಲ್ಲರಿಗೂ ನಮಸ್ಕರಗಳು ಸ್ನೇಹಿತರೆ, ಕೆ ಸಿ ಇ ಟಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಉತ್ತಮವಾದ ಹಾಗೂ ಉಪಯುಕ್ತವಾದ ಕಾರ್ಯವೊಂದನ್ನು ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಲಿಂಕ್ ಅನ್ನು ನೀಡಿದೆ.
KCET ಬರೆದ ವಿದ್ಯಾರ್ಥಿಗಳಿಗೆ ಮರೆತು ಅಥವಾ ತಪ್ಪಿನಿಂದ ಕೆಲವು ವಿಷಯಗಳನ್ನು ಕೆಸಿಇಟಿ ಅಪ್ಲಿಕೇಶನ್ ಹಾಕಿಸುವಾಗ ತಪ್ಪು ಮಾಡಿರುವುದರ ತಿದ್ದುಪಡಿಯ ಬಗೆಗಿನ ಮಾಹಿತಿ ಕೆಳಗಿನ ಸಾಲುಗಳಲ್ಲಿ ಇದೆ.
KCET ಡಾಕ್ಯುಮೆಂಟ್ ವೆರಿಫಿಕೇಷನ್ ಏಕೆ ಮಾಡಬೇಕು?
ಉನ್ನತ ಶಿಕ್ಷಣಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವಿವು ಪ್ರತಿ ವರ್ಷ KCET ಪರೀಕ್ಷೆ ನಡೆಸುತ್ತದೆ. ಆ ಪರೀಕ್ಷೆ ಬರೆಯಲು ಕೆಲವು ಅರ್ಹತೆ ಗಳಿರುತ್ತವೆ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆಗೆ ಮೀಸಲಾತಿ ನೀಡಲು ನಮ್ಮ ಅರ್ಹತೆ ಗಳನ್ನ ನಮೂದಿಸುವ ದಾಖಲಾತಿಗಳನ್ನು ಮಾಡಿಸಿರುವ ಪ್ರತಿಗಳನ್ನು ಕೆ ಇ ಎ ಗೆ ಅಪ್ಲೈ ಮಾಡಬೇಕು.
ಉದಾಹರಣೆಗೆ ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಶಾಲೆಯಲ್ಲಿ, ಗ್ರಾಮೀಣ ಪ್ರದೇಶದಲ್ಲಿ, ಹಾಗೂ ಕುಟುಂಬದ ವಾರ್ಷಿಕ ಆದಾಯ ₹8,00,000 ಕ್ಕಿಂತ ಕಡಿಮೆ ಹೀಗೆ ಇತ್ಯಾದಿ ಮೀಸಲಾತಿ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆಗಳ ಮೂಲಕ ವಿದ್ಯಾಭ್ಯಾಸಕ್ಕೆ ಸಹಾಯವಾಗಲು ಕರ್ನಾಟಕ ಸರ್ಕಾರದ ಆಡಳಿತದ ಕೆ ಇ ಎ ಈ ರೀತಿ ಪ್ರಕ್ರಿಯೆಯನ್ನು ನಡೆಸುತ್ತದೆ.
ಹಾಗಾದರೆ ಈಗ ಬಂದಾಗ ಹೊಸ ಮಾಹಿತಿ ಏನು?
KCET ಮೀಸಲಾತಿಗಳ ಪರೀಕ್ಷೆಗಾಗಿ ಕೆಲಸ ಇ ಎ ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಒಂದು ಹೊಸ ಲಿಂಕ್ ನೀಡಿದೆ. ಆದರೆ ಆ ವೆಬ್ಸೈಟ್ ಅಲ್ಲಿ ವಿದ್ಯಾರ್ಥಿಗಳಿಗೆ ಸರ್ವರ್ ಎರರ್ ಹಾಗೂ ಇನ್ವಾಲಿದ್ ಕ್ಯಾಪ್ಟ ಎಂಬ ತೊಂದರೆ ಕಾಣಿಸುತ್ತಿದ್ದೂ ತಮ್ಮ ವೆರಿಫಿಕೇಷನ್ ಸ್ಥಿತಿ ನೋಡಲು ಸಾಧ್ಯವಿಲ್ಲದೆ ಕಂಗಾಲಾಗಿದ್ದರು. ಈ ಬಗ್ಗೆ KEA ಹೊಸ ಉತ್ತರ ನೀಡಿದೆ.
ಈ ಮೂಲಕ ತಮ್ಮ ಅರ್ಹತ ಪಟ್ಟಿಯಲ್ಲಿನ ಅರ್ಹತೆ ನೋಡಲು ತೊಂದರೆ ಉಂಟಾಗಿರುವವರುKEA ನ ಮಲ್ಲೇಶ್ವರಂ ಶಾಖೆಯಲ್ಲಿ ಹೋಗಿ ಆ ವಿಷಯವನ್ನೆಲ್ಲ ಸರಿ ಮಾಡಿಸಬಹುದಾಗಿದೆ. ಈ ರೀತಿಯಾಗಿ ಮಕ್ಕಳ ವಿಷಯದಲ್ಲಿ ತುಂಬಾ ತೊಂದರೆ ಉಂಟುಮಾಡಿದ್ದ ಕೆ ಇ ಎ ಈಗ ಹೊಸ ರೀತಿಯಾಗಿ ಆ ತೊಂದರೆಗಳಿಗೆಲ್ಲ ತೆರೆ ಎಳೆದಿದೆ. ಈ ಲಿಂಕ್ ಗಾಗಿ kea.kar.nic.in ಭೇಟಿ ಮಾಡಬಹುದು.
ಇದನ್ನೂ ಓದಿ: SSLC Exam 2 Result: ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶ ಈ ದಿನ ಪ್ರಕಟವಾಗುತ್ತದೆ!!