ಎಲ್ಲರಿಗೂ ನಮಸ್ಕಾರ, ಮನೇಲೆ ಕೂತ್ಕೊಂಡು ಕೈತುಂಬಾ ಹಣ ಸಂಪಾದನೆ ಮಾಡೋದು ಹೇಗೆ ಅನ್ನೋದರ ಬಗ್ಗೆ ನಾನು ನಿಮಗೆ ಐಡಿಯಾ ಕೊಡ್ತೀನಿ ಇವತ್ತಿನ ಲೇಖನದಲ್ಲಿ ಸ್ಪೆಷಲ್ ಅದೇ ಅಂತ ಹೇಳಬಹುದು ಮನೆನ ನಿಭಾಯಿಸೋದರ ಜೊತೆಗೆ ಮನೇಲೆ ಕೂತ್ಕೊಂಡು ಕೈತುಂಬಾ ಹಣ ಸಂಪಾದನೆ ಮಾಡೋದು ಹೇಗೆ ಅನ್ನೋ ಟಾಪ್ 5 ವಿಧಾನಗಳನ್ನ ನಾನು ನಿಮಗೆ ತಿಳಿಸಿಕೊಡ್ತೀನಿ.
ಮನೆಯಲ್ಲಿರೋ ಹೆಣ್ಣುಮಕ್ಕಳು ಏನ್ ಮಾಡ್ತಾರೆ? ಗಂಡ ಮಕ್ಕಳನ್ನ ರೆಡಿ ಮಾಡೋದರ ಜೊತೆಗೆ ಮನೆ ಕೆಲಸದಲ್ಲೇ ತುಂಬಾ ಬ್ಯುಸಿ ಆಗ್ಬಿಟ್ಟಿರ್ತಾರೆ. ಎಲ್ಲೋ ಸ್ವಲ್ಪ ಸಮಯ ಸಿಕ್ತು ಅಂತ ಅಂದ್ರೆ ಆ ಸಮಯನ ಉಪಯೋಗಿಸಿಕೊಂಡು ಮಾಡ್ಕೊಂಡು ನಾನು ದುಡಿಯೋದ್ರಿಂದ ನನ್ನ ಫ್ಯಾಮಿಲಿನ ಹೇಗೆ ಸಾಕಬಹುದು ಅನ್ನೋದರ ಬಗ್ಗೆನು ಸಹ ಹೆಣ್ಣುಮಕ್ಕಳು ಯಾವಾಗ್ಲೂ ಕೂಡ ಯೋಚನೆ ಮಾಡ್ತಿರ್ತಾರೆ.
ಅದಕ್ಕೆ ನಾನು ನಿಮಗೆ ಹೇಳಿದ್ದು ಮನೇಲೆ ಕೂತ್ಕೊಂಡು ಹಣ ಸಂಪಾದನೆ ಮಾಡೋದರ ಬಗ್ಗೆ ಹೇಗೆ ಅನ್ನೋದನ್ನ ನಾನು ನಿಮಗೆ ತಿಳಿಸಿಕೊಡ್ತೀನಿ ಅಂತ ಸೋ ಸ್ಟೆಪ್ ಬೈ ಸ್ಟೆಪ್ ನೋಡ್ತಾ ಹೋಗೋಣ ಯಾವ ಯಾವ ವಿಧಾನದಲ್ಲಿ ನಾವು ಹಣನ ಸಂಪಾದನೆ ಮಾಡಬಹುದು ಅಂತ.
1. Online Tuition ಮಾಡುವ ಕೆಲಸ
ಆನ್ಲೈನ್ ಅಲ್ಲಿ ನಿಮಗೆ ಗೊತ್ತಿರುವಂತಹ ಭಾಷೆಯಲ್ಲಿ ನೀವು ಟ್ಯೂಷನ್ಸ್ ಗಳನ್ನ ತಗೊಳ್ಳಬಹುದು ಇದು ಎಲ್ಲರಿಗೂ ವರ್ಕ್ ಆಗದೆ ಇರಬಹುದು ಆದರೆ 95% ಹೆಂಗಳೆಯರಿಗೆ ಖಂಡಿತವಾಗ್ಲೂ ಇದು ವರ್ಕ್ ಆಗುತ್ತೆ ನಿಮಗೆ ಒಂದು ಭಾಷೆಯಿಂದ ಅಧಿಕವಾದ ಭಾಷೆಗೆ ಹಿಡ್ತಾ ಇದೆ ಅಂತ ಅಂದ್ರೆ ನೀವು ಮನೆಯಲ್ಲೇ ಕೂತ್ಕೊಂಡು ಟ್ಯೂಷನ್ಸ್ ಅನ್ನ ಬೇರೆ ಸ್ಟೂಡೆಂಟ್ಸ್ ಗೆ ತಗೊಳ್ಳಬಹುದು ತುಂಬಾ ಜನಕ್ಕೆ ಕನ್ನಡ, ತೆಲುಗು, ತಮಿಳು, ಇಂಗ್ಲಿಷನ್ನ ಕಲಿಯುವಂತಹ ಆಸಕ್ತಿ ಇರುತ್ತೆ ಆಗ ಏನು ಮಾಡ್ತಾರೆ ಆನ್ಲೈನ್ ಪ್ಲಾಟ್ಫಾರ್ಮ್ ಗಳಿಗೆ ಬರ್ತಾರೆ.
ತುಂಬಾ ಜನ ವರ್ಕಿಂಗ್ ಪ್ರೊಫೆಷನಲ್ಸ್ ಆಗಿರೋದ್ರಿಂದ ಅವರಿಗೆ ಇನ್ ಪರ್ಸನ್ ಹೋಗಿ ಕಲಿಯುವಂತಹ ಟೈಮ್ ಖಂಡಿತವಾಗ್ಲೂ ಇರೋದಿಲ್ಲ ಇವರು ಆನ್ಲೈನ್ ಪ್ಲಾಟ್ಫಾರ್ಮ್ ಗಳನ್ನ ಚೂಸ್ ಮಾಡೋದ್ರಿಂದ ನಿಮಗೆ ಗೊತ್ತಿರುವಂತಹ ಭಾಷೆಯಲ್ಲಿ ನೀವೇನಾದ್ರು ಟ್ಯೂಷನ್ಸ್ ತಗೊಳ್ತಿದ್ದೀರಾ ಅವರಿಗೆ ಭಾಷೆಯನ್ನ ಕಲಿಸಿ ಕೊಡ್ತಿದ್ದೀರಾ ಅಂತ ಅಂದ್ರೆ ತಿಂಗಳು, ತಿಂಗಳು ನಿಮಗೆ ಇಷ್ಟು ದುಡ್ಡು ಅಂತ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬಂದು ಬೀಳುತ್ತೆ ನಿಮಗೆ ಗೊತ್ತಿರೋ ಭಾಷೆಯಲ್ಲೇ ಪ್ರಾಪರ್ ಆಗಿ ವಿಡಿಯೋ ಮಾಡಿ ಕೋರ್ಸಸ್ ಆಗಿ ಡಿವೈಡ್ ಮಾಡಿ ನೀವು ಅದನ್ನ ಆನ್ಲೈನ್ ಅಲ್ಲಿ ಸೆಲ್ ಮಾಡ್ತಿದ್ದೀರಾ ಅಂತ ಅಂದ್ರೆ ಅದರಲ್ಲೂ ಸಹ ನೀವು ದುಡ್ಡನ್ನ ಮಾಡಬಹುದು.
ಮನೇಲೆ ಕೂತ್ಕೊಂಡು ನೀವೇನಾದ್ರು ಟುಟೋರಿಯಲ್ ನ ಸ್ಟಾರ್ಟ್ ಮಾಡ್ತಿದ್ದೀರಾ ಅಂತ ಅಂದ್ರೆ ನಿಮಗೆ ಬೇಕಾಗಿರುವಂತಹ ಇನ್ವೆಸ್ಟ್ಮೆಂಟ್ ಎಷ್ಟಾಗುತ್ತೆ ಅನ್ನೋದನ್ನ ನೋಡೋಣ:
Online Tuition ಮಾಡುವುದಕ್ಕೆ ಬೇಕಾಗಿರುವ ಇನ್ವೆಸ್ಟ್ಮೆಂಟ್ Plan
- ಮೈಕ್ರೋಫೋನ್
- ವೆಬ್ ಕ್ಯಾಮೆರಾ
- ಕಂಪ್ಯೂಟರ್
ಇದರ ಮೇಲೆ ನೀವು ಇನ್ವೆಸ್ಟ್ ಮಾಡ್ತೀರಾ ಅಂತ ಅಂದುಕೊಳ್ಳೋಣ 10 ರಿಂದ 50,000 ವರೆಗೂ ನಿಮಗೆ ಇನ್ವೆಸ್ಟ್ಮೆಂಟ್ ಆಗುತ್ತೆ ಈ ಇನ್ವೆಸ್ಟ್ಮೆಂಟ್ ನಾನು ಎಲ್ಲಿಂದ ತರಲಿ ಅಂತ ಯೋಚನೆ ಮಾಡೋಕೆ ಹೋಗ್ಬೇಡಿ ಇದು ಸ್ಟಾರ್ಟಿಂಗ್ ಇನ್ವೆಸ್ಟ್ಮೆಂಟ್ ಆಗಿರುತ್ತೆ ಆದ್ರೆ ಇದಕ್ಕಿಂತ ನೀವು ಡಬಲ್ ಮತ್ತೆ ಟ್ರಿಪಲ್ ದುಡ್ಡನ್ನ ದುಡಿತಾ ಹೋಗ್ತೀರಾ ಸಾಫ್ಟ್ವೇರ್ ನೀವು ರೆಕಾರ್ಡ್ ಮಾಡುವಂತಹ ವಿಡಿಯೋಗೆ ಎಡಿಟಿಂಗ್ ಮಾಡೋದಕ್ಕೆ ಅಂತಾನೆ ಎಡಿಟಿಂಗ್ ಸಾಫ್ಟ್ವೇರ್ ಬೇಕಾಗುತ್ತೆ ಅದರಲ್ಲಿ ಕೆಲವು ಸಾಫ್ಟ್ವೇರ್ ಏನಾಗುತ್ತೆ ಅಂತ ಅಂದ್ರೆ ಫ್ರೀಯಾಗಿ ಸಿಗುತ್ತೆ.
ಸ್ಕ್ರೀನ್ ರೆಕಾರ್ಡ್ ಮಾಡಿ ನೀವು ಮಾಡೋ ವಿಡಿಯೋನ ಪ್ರೆಸೆಂಟ್ ಮಾಡೋದಕ್ಕೆ ಪ್ರೆಸೆಂಟಿಂಗ್ ಟೂಲ್ ಬೇಕಾಗುತ್ತೆ ಜೊತೆಗೆ ಹೋಸ್ಟಿಂಗ್ ಪ್ಲಾಟ್ಫಾರ್ಮ್. ಪ್ಲಾಟ್ಫಾರ್ಮ್ ನೀವು ವಿಡಿಯೋ ಮಾಡಿ ನಿಮ್ಮ ಹತ್ರ ಇಟ್ಕೊಂಡು ಬಿಟ್ರೆ ಸಾಕಾ ಅದನ್ನ ಜನರು ಸಹ ನೋಡಬೇಕು ಅಲ್ವಾ ಆನ್ಲೈನ್ ಅಲ್ಲಿ ಸೋ ನೀವು ಅದನ್ನ ಫ್ರೀಯಾಗಿ YouTube ಅಲ್ಲಿ ಅಪ್ಲೋಡ್ ಮಾಡಬಹುದು ಇಲ್ಲ ಅಂತಂದ್ರೆ Udemy ಅನ್ನೋ ಒಂದು ಪ್ಲಾಟ್ಫಾರ್ಮ್ ಅಲ್ಲೂ ಸಹ ಪೋಸ್ಟ್ ಮಾಡಬಹುದು ಅವರು ನಿಮಗೆ ಬರುವಂತಹ ಲಾಭದಲ್ಲಿ ಏನ್ ಮಾಡ್ತಾರೆ ಅಂತ ಅಂದ್ರೆ ಪ್ಲಾಟ್ಫಾರ್ಮ್ ಚಾರ್ಜ್ ಅಂತ ಒಂದಿಷ್ಟು ಪರ್ಸೆಂಟೇಜ್ ಅನ್ನ ತಗೊಳ್ತಾರೆ.
ಈ ಕೆಲಸದಿಂದ ಎಷ್ಟು ಹಣ ಸಂಪಾದನೆ ಮಾಡಬಹುದು
ಲಾಭದ ವಿಷಯಕ್ಕೆ ಬರ್ತಿದೀವಿ ಅಂತ ಅಂದ್ರೆ ಒಂದು ಕೋರ್ಸ್ ಗೆ ನಾವು 500 ರೂಪಾಯಿ ಇಂದ 1000 ವರೆಗೂ ಚಾರ್ಜ್ ಮಾಡಬಹುದು ಅಥವಾ ನಿಮ್ಮ ಕೋರ್ಸ್ ತುಂಬಾ ಚೆನ್ನಾಗಿದ್ದು ಡಿಮ್ಯಾಂಡ್ ಅಲ್ಲಿ ಇದೆ ಅಂತ ಅಂದ್ರೆ 10,000 ದಿಂದ ಒಂದು ಲಕ್ಷದವರೆಗೂ ಸಹ ನಿಮಗೆ ಲಾಭ ಸಿಗುತ್ತೆ.
ಗೃಹಲಕ್ಷ್ಮಿ ಯೋಜನೆ 2 ತಿಂಗಳ ಹಣ ಒಟ್ಟಿಗೆ ಜಮಾ!! ಲಕ್ಷ್ಮಿ ಹೆಬ್ಬಾಳ್ಕರ್
2. Cooking Video ಮಾಡುವ ಕೆಲಸ
ಕುಕಿಂಗ್ ಕೋರ್ಸ್ ನೀವು ಸೂಪರ್ ಆಗಿ ಅಡುಗೆ ಮಾಡ್ತೀರಾ ಅಂತ ಅಂದುಕೊಳ್ಳೋಣ!! ಇಂಡಿಯನ್, ಚೈನೀಸ್, ಕಾಂಟಿನೆಂಟಲ್ ಈ ರೀತಿ ಪ್ರತಿಯೊಂದು ವೆರೈಟಿಸ್ ಆದ ಅಡುಗೆಗಳು ನಿಮಗೆ ಬರುತ್ತೆ ನೀವು ಅಡುಗೆ ಮಾಡೋದನ್ನ ತುಂಬಾ ಎಂಜಾಯ್ ಮಾಡ್ತೀರಾ ಅಂತ ಅಂದುಕೊಳ್ಳಿ.
ನೀವು ನಿಮ್ಮ ಒಂದು ಡಿಶ್ ಗೆ ಪ್ರಿಪೇರ್ ಮಾಡಿರುವಂತಹ ಕುಕಿಂಗ್ ರೆಸಿಪಿಗಳು ಏನಿರುತ್ತೆ ಅದು ಲಿಸ್ಟ್ ಮಾಡ್ಕೊಂಡು ಅಥವಾ ಕುಕಿಂಗ್ ಕೋರ್ಸಸ್ ಅನ್ನ ನೀವು ಸ್ಟಾರ್ಟ್ ಮಾಡ್ತೀರಾ ಅಂತ ಅಂದುಕೊಳ್ಳಿ ಆಗ ನಿಮ್ಮ ಅಡುಗೆನ ಕಲಿತುಕೊಳ್ಳಬೇಕು ಅಂತ ಅನ್ಕೊಂಡಿರೋ ಸುಮಾರು ಜನ ಏನು ಮಾಡ್ತಾರೆ ಅಂತ ಅಂದ್ರೆ ನಿಮಗೆ ದುಡ್ಡನ್ನ ಕೊಟ್ಟುಬಿಟ್ಟು ನಿಮ್ಮ ಕೋರ್ಸ್ ಗೆ ಜಾಯಿನ್ ಆಗ್ತಾರೆ.
ಈಗ ತುಂಬಾ ಕಡೆ ಮನೆ ಊಟ ಆರ್ಗ್ಯಾನಿಕ್ ಹೆಲ್ತ್ ಕಾನ್ಶಿಯಸ್ ಅಂತ ತುಂಬಾ ಜನ ಯೋಚನೆ ಮಾಡ್ತಿರ್ತಾರೆ ಅಲ್ವಾ ನಿಮ್ಮ ವಿಡಿಯೋಸ್ ನ ನೋಡ್ಕೊಂಡು ಅಡುಗೆ ಮಾಡೋದರ ಜೊತೆಗೆ ನೀವೇನಾದ್ರು ಆ ವಿಡಿಯೋಸ್ ಗಳನ್ನ YouTube ಗೆ ಪೋಸ್ಟ್ ಮಾಡ್ತಿದ್ದೀರಾ ಅಂತ ಅಂದ್ರೆ ಅಲ್ಲಿ ಫಾಲೋವರ್ಸ್ ಕೂಡ ಜಾಸ್ತಿ ಆಗ್ತಾರೆ ಹಾಗೆ ನಿಮ್ಮನ್ನ ಅಪ್ರೋಚ್ ಮಾಡುವಂತಹ ಬ್ರಾಂಡ್ಸ್ ನಂಬರ್ ಸಹ ಅಧಿಕವಾಗಿ ಇರುತ್ತೆ.
ಈ ಎಲ್ಲಾ ಸೋರ್ಸಸ್ ಇಂದ ನೀವು ಇನ್ಕಮ್ ನ ಜನರೇಟ್ ಮಾಡ್ತಾ ಹೋಗಬಹುದು. ಇಲ್ಲಿ ನಿಮ್ಮ ಅಡುಗೆಗೆ ಅವಶ್ಯಕತೆ ಇರುವಂತಹ ಐಟಮ್ಸ್ ಮೇಲೆ ನೀವು ಇನ್ವೆಸ್ಟ್ ಮಾಡಬೇಕಾಗುತ್ತೆ:
Cooking Video ಮಾಡುವುದಕ್ಕೆ ಬೇಕಾಗಿರುವ ಇನ್ವೆಸ್ಟ್ಮೆಂಟ್ Plan
- ಕ್ಯಾಮೆರಾ
- Spot ಲೈಟ್
- Smart ಫೋನ್
ಸಹ ನೀವು ವಿಡಿಯೋಸ್ ಮಾಡಿ ಪೋಸ್ಟ್ ಮಾಡಬಹುದು ಇನ್ನು ನೀವು ರೆಕಾರ್ಡ್ ಮಾಡಿರುವಂತಹ ವಿಡಿಯೋನ ನೀವು ಎಡಿಟಿಂಗ್ ಮಾಡಬೇಕು ಅಂತ ಅಂದ್ರೆ ಬೇಕಾದಷ್ಟು ಸಾಫ್ಟ್ವೇರ್ ಗಳು ಆನ್ಲೈನ್ ಅಲ್ಲಿ ಫ್ರೀಯಾಗಿ ಸಿಗುತ್ತೆ ಅಥವಾ ನಿಮ್ಮ ಕೋರ್ಸಸ್ ಅನ್ನ ನೀವು ಪಬ್ಲಿಷ್ ಮಾಡ್ತೀರಾ ಅಂತ ಅಂದ್ರೆ ಮೈಕ್ರೋಸಾಫ್ಟ್ ವರ್ಡ್ ಸಾಕು ಹಾಗೆ ಕ್ಯಾನ್ವಾ ಅಂತ ಬೇಕಾದಷ್ಟು ಸಾಫ್ಟ್ವೇರ್ ಗಳು ಇರೋದ್ರಿಂದ ನಿಮ್ಮ ಕೋರ್ಸಸ್ ಜೊತೆಗೆ ನಿಮ್ಮ ರೆಸಿಪಿಗಳನ್ನು ಸಹ ನೀವು ಪೋಸ್ಟ್ ಮಾಡಬಹುದು
ನೀವು ನಿಮ್ಮ ರೆಸಿಪಿಗಳನ್ನ ಬುಕ್ ಮಾಡ್ತೀರಾ ಅಂತ ಅಂದುಕೊಳ್ಳಿ ಅದನ್ನ Amazon ಕಿಂಡಲ್ ಡೈರೆಕ್ಟ್ ಪಬ್ಲಿಷಿಂಗ್ ನಲ್ಲಿ ಡೈರೆಕ್ಟ್ ಆಗಿ ಪಬ್ಲಿಷ್ ಮಾಡಬಹುದು ಇದು ಯಾವುದು ಆಗಿಲ್ಲ ಅಂತಂದ್ರೆ ಲೋಕಲ್ ಪಬ್ಲಿಷರ್ ಅಂತೂ ಖಂಡಿತವಾಗ್ಲೂ ಇರ್ತಾರೆ ಅವರನ್ನ ಕಾಂಟ್ಯಾಕ್ಟ್ ಮಾಡಿದ್ರಿ ಅಂತಂದ್ರೆ ನಿಮಗೆ ಪಬ್ಲಿಷ್ ಮಾಡೋದಕ್ಕೆ ಅವರು ಸಹಾಯ ಮಾಡ್ತಾರೆ.
ಈ ಕೆಲಸಕ್ಕೆ ನಿಮ್ಮ ಸಮಯ ಬೇಕಾಗುತ್ತದೆ
ನಿಮಗೆ ಬೇಕಾಗಿರುವಂತಹ ಟೈಮ್ ಇನ್ವೆಸ್ಟ್ಮೆಂಟ್ ಏನು ಅಂತ ಅಂದ್ರೆ ಹೊಸ ಹೊಸ ರೆಸಿಪಿಗಳನ್ನ ಕಲಿತುಕೊಳ್ಳುವುದಕ್ಕೆ ನಿಮ್ಮ ಸಮಯನ ಕೊಡಬೇಕಾಗುತ್ತೆ ವಿಡಿಯೋ ಎಡಿಟಿಂಗ್ ವಿಡಿಯೋ ರೆಕಾರ್ಡಿಂಗ್. ನೀವು ಅದನ್ನ ಪೋಸ್ಟ್ ಮಾಡ್ತೀರಾ ಅಂತ ಅಂದ್ರೆ ಸೋಶಿಯಲ್ ಮೀಡಿಯಾ ಸ್ಕಿಲ್ಸ್ ಗಳನ್ನ ಡೆವಲಪ್ ಮಾಡ್ಕೊಳೋದು. ಈ ಪ್ರತಿಯೊಂದಕ್ಕೂ ನಿಮ್ಮ ಟೈಮ್ ನ ನೀವು ಕೊಡ್ತಿದ್ದೀರಾ ಅಂತ ಅಂದ್ರೆ ನಿಮ್ಮ ಟೈಮ್ ಜೊತೆಗೆ ನಿಮ್ಮ ಇನ್ಕಮ್ ಸಹ ಜೊತೆಗೆನೇ ಜನರೇಟ್ ಆಗುತ್ತೆ.
ನೀವು ಯಾವುದೇ ಕೆಲಸನ ನೋಡಿ ಈಸಿಯಾಗಿ ಯಾವುದು ಕೂಡ ಸಿಕ್ಕಲ್ಲ. ನಿಮ್ಮ ಟೈಮ್ ಮತ್ತೆ ಎಫರ್ಟ್ಸ್ ನ ನೀವು ಅಧಿಕವಾಗಿ ಹಾಕ್ತಿದ್ದೀರಾ ಅಂತಂದ್ರೆ ಒನ್ಸ್ ಫಾರ್ ಆಲ್ ನಿಮ್ಮ ಇನ್ಕಮ್ ಅಧಿಕವಾಗಿ ನಿಮ್ಮ ಅಕೌಂಟ್ ಗೆ ಬರುತ್ತೆ.
5 KG ಅಕ್ಕಿ ಹಣ ಬದಲು ದಿನಸಿ ಕಿಟ್!! ಸರ್ಕಾರ ಜನರಿಗೆ ದಿನಸಿ ಕಿಟ್
ಈ ಕೆಲಸದಿಂದ ಎಷ್ಟು ಹಣ ಸಂಪಾದನೆ ಮಾಡಬಹುದು
ಪ್ರಾಫಿಟ್ ಮಾರ್ಜಿನ್ ಅನ್ನ ನೋಡೋಣ ನಾರ್ಮಲ್ ಬುಕ್ ಆದ್ರೆ 100 ಇಂದ 200 ವರೆಗೂ ಸೇಲ್ ಆಗುತ್ತೆ ಇನ್ನು ಪ್ರಿಂಟೆಡ್ ಬುಕ್ ಆದ್ರೆ 200 ಇಂದ 1000 ವರೆಗೂ ಕೂಡ ಬೆಲೆ ಇದೆ ಅಥವಾ ನೀವೇ ವಿಡಿಯೋ ಮಾಡಿ ಅದನ್ನ ಕೋರ್ಸ್ ತರ ಏನಾದ್ರು ಸೇಲ್ ಮಾಡ್ತಿದ್ದೀರಾ ಅಂತಂದ್ರೆ 500 ಇಂದ 5,000 ವರೆಗೂ ಕೂಡ ನಿಮಗೆ ಲಾಭ ಸಿಗುತ್ತೆ.
3. YouTube Channel ಮಾಡುವ ಕೆಲಸ
YouTube ಚಾನೆಲ್ ಅಂತ ಹೇಳಬಹುದು ಇವತ್ತಿನ ಡಿಜಿಟಲ್ ಪ್ಲಾಟ್ಫಾರ್ಮ್ ಅನ್ನ ನಾವು ನೋಡಿದಾಗ YouTube ಇಂದ ಪ್ರತಿ ತಿಂಗಳು 50,000 ದಿಂದ 5 ಲಕ್ಷ 20 ಲಕ್ಷ ವರೆಗೂ ಸಹ ದುಡ್ಡನ್ನ ಸಂಪಾದನೆ ಮಾಡೋವರು ಇದ್ದಾರೆ. ಅದರಲ್ಲೂ ನಮ್ಮ ಕನ್ನಡದವರೇ ಎಷ್ಟೋ ಯೂಟ್ಯೂಬರ್ಸ್ ಗಳು ಗಳು ಈ ರೀತಿ ಹಣವನ್ನು ದುಡಿಯುತ್ತಿದ್ದಾರೆ. ಅದು ಸಹ ಮನೇಲೆ ಕೂತ್ಕೊಂಡು ಇದು ಸಿಕ್ಕಾಪಟ್ಟೆ ಟ್ರೆಂಡಿಂಗ್ ಅಲ್ಲಿ ಇದೆ ಅಂತಾನೆ ಹೇಳಬಹುದು.
ನಿಮಗೇನಾದ್ರು ಒಂದು ಪರ್ಟಿಕ್ಯುಲರ್ ವಿಷಯ ಮೇಲೆ ಇಂಟರೆಸ್ಟ್ ಇದೆ ಅಂತ ಅಂದ್ರೆ ಅಲ್ಲಿ ನೀವು YouTube ಅನ್ನ ಸ್ಟಾರ್ಟ್ ಮಾಡ್ತೀರಾ ಅಂತ ಅಂದುಕೊಳ್ಳೋಣ ಅದು
- ಫ್ಯಾಶನ್
- ಲೈಫ್ ಸ್ಟೈಲ್
- ಅಡುಗೆ
- ಫಿಟ್ನೆಸ್
- ಟ್ರಾವೆಲಿಂಗ್
ನಿಮಗೆ ಯಾವ ವಿಷಯದಲ್ಲಿ ಇಂಟರೆಸ್ಟ್ ಇರುತ್ತೋ ಅದರ ಮೇಲೆ ನೀವು ವಿಡಿಯೋಸ್ ನ ರೆಕಾರ್ಡ್ ಮಾಡಿ ಪೋಸ್ಟ್ ಮಾಡ್ತಿದ್ದೀರಾ ಅಂತಂದ್ರೆ ನಿಮಗೆ ಫಾಲೋವರ್ಸ್ ಜಾಸ್ತಿ ಆಗೋದರ ಜೊತೆಗೆ, ನಿಮ್ಮ ಅಕೌಂಟ್ ಏನಾದ್ರು ಮೊನಿಟೈಸ್ ಆಯ್ತು ಅಂತಂದ್ರೆ ನಿಮಗೆ YouTube ಇಂದ ಪ್ರತಿ ತಿಂಗಳು ಇಷ್ಟು ದುಡ್ಡು ಅಂತ ಬರುತ್ತೆ
ಬರಿ YouTube ಮಾತ್ರ ಅಲ್ಲ ನಿಮ್ಮ ಚಾನೆಲ್ ನಲ್ಲಿ ಯಾವುದಾದರೂ ಒಂದು ವಿಡಿಯೋ ಮೇಲೆ ಗೂಗಲ್ ಆಡ್ ಗಳು ರನ್ ಆಗ್ತಿರುತ್ತೆ ಅಂತ ಅಂದುಕೊಳ್ಳೋಣ ಅದರಿಂದನು ಸಹ ನೀವು ದುಡ್ಡನ್ನ ಜನರೇಟ್ ಮಾಡಬಹುದು ಇದಕ್ಕೆ ಬೇಕಾಗಿರುವ ಎಕ್ವಿಪ್ಮೆಂಟ್ಸ್ ಏನು ಅಂತ ನೋಡೋಣ:
YouTube ಮಾಡುವುದಕ್ಕೆ ಬೇಕಾಗಿರುವ ಇನ್ವೆಸ್ಟ್ಮೆಂಟ್ Plan
ನೀವೇನಾದ್ರು ನ್ಯೂ ಕಮರ್ಸ್ ಆಗಿದ್ದೀರಾ ಅಂತ ಅಂದ್ರೆ ಜಾಸ್ತಿ ಇನ್ವೆಸ್ಟ್ ಮಾಡುವಂತ ಅವಶ್ಯಕತೆ ಇಲ್ಲ ನಾರ್ಮಲ್ ಲೈಟ್ ಮತ್ತೆ ಕ್ಯಾಮೆರಾನ ತಗೊಂಡು ವಿಡಿಯೋನ ರೆಕಾರ್ಡಿಂಗ್ ಮಾಡಿ ಪೋಸ್ಟ್ ಮಾಡಬಹುದು.
ಇನ್ ಕೇಸ್ ನೀವು ಆಲ್ರೆಡಿ ಇದರಲ್ಲಿ ಪ್ರೊ (ತಜ್ಞರಾಗಿದ್ದೀರಾ) ಆಗಿದ್ದೀರಾ ನಾನು ಇದನ್ನ ಇನ್ನು ನೆಕ್ಸ್ಟ್ ಲೆವೆಲ್ ಗೆ ತಗೊಂಡು ಹೋಗ್ಬೇಕಿದ್ದೀನಿ ಅಂತ ನೀವು ಅನ್ಕೊಂಡ್ರೆ ನಿಮಗೆ ಬೇಕಾಗಿರುವಂತಹ ಇನ್ವೆಸ್ಟ್ಮೆಂಟ್ ದುಡ್ಡು ಬಂದು 10,000 ದಿಂದ 50,000 ವರೆಗೂ ಆಗುತ್ತೆ.
ಅದೇ ಫ್ರೆಶರ್ಸ್ ಏನಾದ್ರು ಆಗಿದ್ದೀರಾ ಅಂತ ಅಂದ್ರೆ ನೀವು ವಿಡಿಯೋ ಮಾಡ್ತಾ ಮಾಡ್ತಾ ಕನಿಷ್ಠ ಪಕ್ಷ ಆರರಿಂದ ಒಂದು ವರ್ಷ ಆದ್ಮೇಲೆ ಅದರಲ್ಲಿ ಬಂದಿರುವಂತಹ ಇನ್ಕಮ್ ಅಲ್ಲಿ ಆಮೇಲೆ ನೀವು ನಿಮ್ಮ ಎಕ್ವಿಪ್ಮೆಂಟ್ಸ್ ಗೆ ಇನ್ವೆಸ್ಟ್ ಮಾಡ್ತಾ ಹೋಗಬಹುದು.
ಈ ಕೆಲಸಕ್ಕೆ ನಿಮ್ಮ ಸಮಯ ಬೇಕಾಗುತ್ತದೆ
ಇದರಲ್ಲಿ ಬೇಕಾಗಿರುವ ಟೈಮ್ ಇನ್ವೆಸ್ಟ್ಮೆಂಟ್ ಅಂತ ಅಂದ್ರೆ ಪ್ರತಿದಿನ ನೀವು ಯಾವ ವಿಡಿಯೋಸ್ ನ ರೆಕಾರ್ಡ್ ಮಾಡಬೇಕು ಅಂತ ಅನ್ಕೊಂಡಿದ್ದೀರಾ ಯಾವ ಜಾಗಕ್ಕೆ ನೀವು ಹೋಗ್ಬೇಕು ಇದೆಲ್ಲಾನು ಕೂಡ ಪ್ರಾಪರ್ ಆಗಿ ನೀವು ಪ್ಲಾನಿಂಗ್ ಮಾಡ್ಕೊಳ್ಬೇಕಾಗುತ್ತೆ ಸೋ ಪ್ರತಿ ದಿನನು ಕೂಡ ನೀವು ವಿಡಿಯೋಸ್ ನ ಕನ್ಸಿಸ್ಟೆನ್ಸಿ ಇಂದ ಪೋಸ್ಟ್ ಮಾಡ್ತಾನೆ ಇರಬೇಕಾಗುತ್ತೆ ಆಗ್ಲೇ ನೀವು ನಿಮ್ಮ ಆಡಿಯನ್ಸ್ ನ ಎಂಗೇಜ್ ಮಾಡೋದಕ್ಕೆ ಸಾಧ್ಯ.
ಈ ಕೆಲಸದಿಂದ ಎಷ್ಟು ಹಣ ಸಂಪಾದನೆ ಮಾಡಬಹುದು
ಪ್ರಾಫಿಟ್ ಮಾರ್ಜಿನ್ ಯಾವ ರೀತಿ ಇರುತ್ತೆ ಇದರಲ್ಲಿ? ಅಂತ ನೋಡೋಣ ಮೊದಲನೇದಾಗಿ ರೆವಿನ್ಯೂ ಆಡ್ ರೆವಿನ್ಯೂ ಅಂತ ನೋಡಿದಾಗ YouTube ಏನ್ ಮಾಡುತ್ತೆ ಅಂತಂದ್ರೆ 150rs ಇಂದ 500rs ಪರ್ 1000 ಆಡ್ ವ್ಯೂವ್ಸ್ ಅಂತ ಮಾಡುತ್ತೆ ಡಿಪೆಂಡಿಂಗ್ ಆನ್ ದಿ ಕಂಟೆಂಟ್ ಇದರಲ್ಲಿ ಸ್ಪಾನ್ಸರ್ಡ್ ಕಂಟೆಂಟ್ ಅಂತ ಇರುತ್ತೆ ಅಫಿಲಿಯೇಟ್ ಮಾರ್ಕೆಟಿಂಗ್ ಅಂತ ಇರುತ್ತೆ. ಇದನ್ನೆಲ್ಲಾನು ಸೇರಿಕೊಂಡು ನಿಮಗೆ ಸಪರೇಟ್ ಆಗಿ ರೆವಿನ್ಯೂ ಬರುತ್ತೆ.
ಪೊಟೆನ್ಶಿಯಲ್ ಅರ್ನಿಂಗ್ಸ್ ಇದರಲ್ಲಿ ನಿಮ್ಮ ಚಾನೆಲ್ ಇನಿಷಿಯಲ್ ಡೇಸ್ ಅಲ್ಲಿ 5,000 ಇಂದ 10,000 ವರೆಗೂ ಪರ್ ಡೇ ಅರ್ನ್ ಮಾಡ್ತಿದೆ ಅಂತ ಅಂದುಕೊಳ್ಳೋಣ ಅನ್ನು ನೀವಿನ್ನು ನ್ಯೂ ಕಮರ್ ಆಗಿದ್ದೀರಾ ಹೋಗ್ತಾ ಹೋಗ್ತಾ ಇದು 50,000 ದಿಂದ 5 ಲಕ್ಷ ವರೆಗೂ ಸಹ ಅರ್ನ್ ಮಾಡಬಹುದು ಆ ರೀತಿ ಅರ್ನ್ ಮಾಡ್ತಿರುವಂತಹ ಬೇಕಾದಷ್ಟು ಇನ್ಫ್ಲುಯೆನ್ಸರ್ಸ್ ವಿಡಿಯೋ ಕ್ರಿಯೇಟರ್ಸ್ ನಮ್ಮ ಕರ್ನಾಟಕದಲ್ಲೇ ಇದ್ದಾರೆ.
4. Art and Craft ಮಾಡುವ ಕೆಲಸ
ಹೋಂ ಮೇಡ್ ಕ್ರಾಫ್ಟ್ ಅಂಡ್ ಆರ್ಟ್ ನಿಮಗೆ ಪೇಪರ್ ಕ್ರಾಫ್ಟ್ ಮತ್ತೆ ಹ್ಯಾಂಡ್ ಮೇಡ್ ಪ್ರಾಡಕ್ಟ್ಸ್ ನ ಮನೆಯಲ್ಲೇ ಕೂತ್ಕೊಂಡು ಮಾಡ್ತಿದ್ದೀರಾ ಅಂತ ಅಂದ್ರೆ ನಿಮಗೆ ಬೇಕಾದಷ್ಟು ಡಿಮ್ಯಾಂಡ್ ಇದೆ ಯಾಕೆ ಅಂತಂದ್ರೆ ಸುಮಾರು ಜನಕ್ಕೆ ಇದರ ಮೇಲೆ ಇಂಟರೆಸ್ಟ್ ಇದೆ ಯಾಕೆ ಅಂತ ಅಂದ್ರೆ ಹ್ಯಾಂಡ್ ಮೇಡ್ ವಸ್ತುಗಳಿಗೆ ಜನಗಳಿಗೆ ತುಂಬಾ ಇಂಟರೆಸ್ಟ್ ಇರೋದ್ರಿಂದ ಇದಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.
Art and Craft ಮಾಡುವುದಕ್ಕೆ ಬೇಕಾಗಿರುವ ಇನ್ವೆಸ್ಟ್ಮೆಂಟ್ Plan
ಆನ್ಲೈನ್ ಅಲ್ಲೇ ಆರ್ಡರ್ ಮಾಡಿ ನಿಮ್ಮ ವಸ್ತುಗಳನ್ನ ಕೊಂಡುಕೊಳ್ಳುತ್ತಾರೆ. ಇದಕ್ಕೆ ಬೇಕಾಗಿರುವ ಇನ್ವೆಸ್ಟ್ಮೆಂಟ್ ಅಂತ ಅಂದ್ರೆ ಇನಿಷಿಯಲಿ ನಾವು ಇದನ್ನ ಪರ್ಚೇಸ್ ಮಾಡ್ತಿದೀವಿ ಅಂದ್ರೆ ಹ್ಯಾಂಡ್ ಮೇಡ್ ಪ್ರಾಡಕ್ಟ್ಸ್ ನ ನಾವು ತಗೊಳ್ತಿದೀವಿ ಅಂತ ಅಂದ್ರೆ 5,000 ಇಂದ 10,000 ವರೆಗೂ ನಿಮಗೆ ಇನ್ವೆಸ್ಟ್ಮೆಂಟ್ ಆಗಿ ಬರುತ್ತೆ.
ಇನ್ನು ಇಕ್ವಿಪ್ಮೆಂಟ್ಸ್ ಬಗ್ಗೆ ಮಾತಾಡೋದಾದ್ರೆ ಬೇಕಾಗಿರೋದು ಬೇಸಿಕ್ ಟೂಲ್ಸ್ ಅಷ್ಟೇ ಆದ್ರೆ ನೀವು ಮಾಡಿರುವಂತಹ ಪ್ರಾಡಕ್ಟ್ಸ್ ನ ನೀವು ಕ್ಯಾಪ್ಚರ್ ಮಾಡಬೇಕು ಅಂತ ಅಂದ್ರೆ ನಿಮಗೆ ಕ್ಯಾಮೆರಾ ಬೇಕಾಗುತ್ತೆ. ಅದನ್ನ ವಿಡಿಯೋಗ್ರಾಫಿ ಮಾಡಿ ನೀವು ಸೋಶಿಯಲ್ ಮೀಡಿಯಾ ಅಲ್ಲಿ ಪೋಸ್ಟ್ ಮಾಡಬಹುದು
ಈ ಕೆಲಸಕ್ಕೆ ನಿಮ್ಮ ಸಮಯ ಬೇಕಾಗುತ್ತದೆ
ಇದರಲ್ಲಿ ಬೇಕಾಗಿರೋದು ನಿಮಗೆ ಟೈಮ್ ಇನ್ವೆಸ್ಟ್ಮೆಂಟ್ ಅಂತ ಅಂದ್ರೆ ನೀವು ಯಾವ ಯಾವ ಪ್ರಾಡಕ್ಟ್ಸ್ ನ ಕ್ರಿಯೇಟ್ ಮಾಡಬೇಕು ಅನ್ಕೊಂಡಿದ್ದೀರಾ ಅದನ್ನ ಲಿಸ್ಟ್ ಮಾಡ್ಕೊಳ್ಳಿ ಆ ಪ್ರಾಡಕ್ಟ್ ನ ಕ್ರಿಯೇಟ್ ಆದ್ಮೇಲೆ ಇದಕ್ಕೆ ಬೇಕಾಗಿರುವಂತಹ ಮಾರ್ಕೆಟಿಂಗ್ ನ ನೀವು ಖಂಡಿತವಾಗ್ಲೂ ಸೋಶಿಯಲ್ ಮೀಡಿಯಾದಲ್ಲಿ ಮಾಡಬೇಕಾಗುತ್ತೆ.
ಈ ಕೆಲಸದಿಂದ ಎಷ್ಟು ಹಣ ಸಂಪಾದನೆ ಮಾಡಬಹುದು
ಇನ್ನು ಇದರಲ್ಲಿ ಪ್ರಾಫಿಟ್ ಮಾರ್ಜಿನ್ ಬಗ್ಗೆ ನೋಡೋದಾದ್ರೆ ತುಂಬಾ ಸಣ್ಣದಾದ ಪ್ರಾಡಕ್ಟ್ ಅದರಲ್ಲಿ ಬೇಸಿಕ್ ಡಿಸೈನ್ಸ್ ಇದೆ ಅಂತ ಅಂದ್ರೆ 500rs ಇಂದ ಸ್ಟಾರ್ಟ್ ಆಗುತ್ತೆ ಹಾಗೆ ಹೋಗ್ತಾ ಹೋಗ್ತಾ ನೀವು ಪ್ರೊ ಆಗಿದ್ದೀರಾ ನಿಮ್ಮ ಒಂದು ಪ್ರಾಡಕ್ಟ್ಸ್ ಗೆ ತುಂಬಾ ಡಿಮ್ಯಾಂಡ್ ಇದೆ ಅಂತ ಅಂದ್ರೆ ಈ ಒಂದು ಹ್ಯಾಂಡ್ ಮೇಡ್ ಕ್ರಾಫ್ಟ್ ಪ್ರಾಡಕ್ಟ್ಸ್ ಏನಿರುತ್ತೆ ಇದಕ್ಕೆ 5,000 ದಿಂದ ಬರೋಬರಿ 50,000 ವರೆಗೂ ಕೂಡ ಡಿಮ್ಯಾಂಡ್ ಇದೆ.
5. Content Writing ಮಾಡುವ ಕೆಲಸ
ಕಂಟೆಂಟ್ ರೈಟಿಂಗ್ ಜಾಬ್ಸ್ ಕಂಟೆಂಟ್ ರೈಟಿಂಗ್ ಅಂತೂ ತುಂಬಾ ಸುಲಭ ನೀವೆಲ್ಲ ಎಲ್ಲಿ ಬೇಕಾದರೂ ಕೂತ್ಕೊಂಡು ಕೆಲಸ ಮಾಡಬಹುದು ಇದಕ್ಕೆ ಬೇಕಾಗಿರೋದು ನಿಮ್ಮ ನಾಲೆಡ್ಜ್ ಹಾಗೂ ರಿಸರ್ಚ್ ನೀವು ಯಾವ ರೀತಿ ಮಾಡ್ತೀರಾ ಅಂತ ಅದು ಅಲ್ಲದೆ ನಿಮ್ಮ ಕಂಟೆಂಟ್ ಏನಾದ್ರು ಇಷ್ಟ ಆಗ್ತಿದೆ ಅಂತಂದ್ರೆ ತುಂಬಾ ಜನ ಇದಕ್ಕೆ ಸಾವಿರ ರೂಪಾಯಿ ಕೊಟ್ಟು ನಿಮ್ಮನ್ನ ಹೈಯರ್ ಮಾಡ್ಕೊಳ್ತಾರೆ.
ಇದಕ್ಕೆ ನೀವು ಎಕ್ಸಾಕ್ಟ್ಲಿ ಆಫೀಸ್ ಗೆ ಹೋಗಿ ಕೆಲಸ ಮಾಡಬೇಕು ಅನ್ನೋ ಅವಶ್ಯಕತೆ ಏನು ಇಲ್ಲ ಮನೆಯಲ್ಲೇ ಕೂತ್ಕೊಂಡು ನೀವು ಕಂಟೆಂಟ್ ರೈಟಿಂಗ್ ಮಾಡೋದ್ರಿಂದ ನಿಮ್ಮ ಒಂದು ನಾರ್ಮಲ್ ಕೆಲಸದ ಜೊತೆಗೆ ಇದನ್ನ ಪಾರ್ಟ್ ಟೈಮ್ ಕೆಲಸ ಆಗು ಸಹ ಆಪ್ಟ್ ಮಾಡಿಕೊಳ್ಳಬಹುದು ನಿಮಗೆ ನಿಮ್ಮ ಬರವಣಿಗೆಯಲ್ಲಿ ಹಾಗೂ ಭಾಷೆ ಮೇಲೆ ಹಿಡ್ತಾ ಇದೆ ಅಂತಂದ್ರೆ ಈ ಕೆಲಸ ನಿಮಗೆ ಪ್ರಾಪರ್ ಆಗಿ ಸೂಟ್ ಆಗುತ್ತೆ.
Content Writing ಮಾಡುವುದಕ್ಕೆ ಬೇಕಾಗಿರುವ ಇನ್ವೆಸ್ಟ್ಮೆಂಟ್ Plan
ಇದಕ್ಕೆ ಬೇಕಾಗಿರೋ ಅಂತ ಅಂದ್ರೆ ನಿಮ್ಮ ಕಂಟೆಂಟ್ ರೈಟಿಂಗ್ ಗೆ ಯಾವ ಟೆಕ್ನಾಲಜಿ ಸೂಟ್ ಆಗುತ್ತೆ ಅನ್ನೋದನ್ನ ನೀವು ನೋಡಿಕೊಳ್ಳಬೇಕಾಗುತ್ತೆ ಹಾಗೆ YouTube ಆಗಿರಬಹುದು SEO ಆಗಿರಬಹುದು ಇಂಟರ್ನೆಟ್ ಕನೆಕ್ಷನ್ಸ್ ಆಗಿರಬಹುದು ನೀವು ಯಾವ ಒಂದು ಸಬ್ಜೆಕ್ಟ್ ಬಗ್ಗೆ ಕಂಟೆಂಟ್ ನ ಬರಿತಿದ್ದೀರಾ ಅನ್ನೋದರ ಬಗ್ಗೆ ನಿಮಗೆ ಪ್ರಾಪರ್ ನಾಲೆಡ್ಜ್ ಇರಬೇಕಾಗುತ್ತೆ ಹಾಗೆ ಯಾವುದಾದರೂ ವಿಡಿಯೋನ ಪೋಸ್ಟ್ ಮಾಡ್ತಿದೀನಿ ಅಥವಾ ಯಾವುದಾದರೂ ಕಂಟೆಂಟ್ ನ ನಾನು ತಗೊಂಡಿದೀನಿ ಅಂತ ಅಂದ್ರೆ ಕಾಪಿರೈಟ್ ಇಶ್ಯೂ ಎಲ್ಲಿ ಬರುತ್ತೆ ಅನ್ನೋದರ ಬಗ್ಗೆ ನಿಮಗೆ ಗೊತ್ತಾಗಬೇಕಾಗುತ್ತೆ
ಈ ಕೆಲಸಕ್ಕೆ ನಿಮ್ಮ ಸಮಯ ಬೇಕಾಗುತ್ತದೆ
ಟೈಮ್ ಇನ್ವೆಸ್ಟ್ಮೆಂಟ್ ಅಂತ ಅಂದ್ರೆ ನಾನು ಒಂದು ಪರ್ಟಿಕ್ಯುಲರ್ ಸಬ್ಜೆಕ್ಟ್ ನ ತಗೊಂಡು ಅದರ ಬಗ್ಗೆ ಬರಿತಿದ್ದೀನಿ ಅಂತ ಅಂದ್ರೆ ಪ್ರಾಪರ್ ರಿಸರ್ಚ್ ಬೇಕಾಗುತ್ತೆ ಅದರ ಬಗ್ಗೆ ಬರವಣಿಗೆ ಚೆನ್ನಾಗಿರಬೇಕು ಮತ್ತೆ ಎಡಿಟಿಂಗ್ ಕೂಡ ಚೆನ್ನಾಗಿ ಮಾಡಬೇಕು ಮೋಸ್ಟ್ ಇಂಪಾರ್ಟೆಂಟ್ಲಿ ನೀವು ಬರೆಯುವಂತಹ ಕಂಟೆಂಟ್ ಒರಿಜಿನಲ್ ಆಗಿರಬೇಕು ಎಲ್ಲೂ ಸಹ ನೀವು ಇದನ್ನ ಕಾಪಿ ಮಾಡಿರಬಾರದು ತುಂಬಾ ಜನ ಏನ್ ಮಾಡ್ತಾರೆ ಕಂಟೆಂಟ್ ರೈಟಿಂಗ್ ಅಂತ ಬಂದ ತಕ್ಷಣ ಗೂಗಲ್ ಅಲ್ಲಿ ಪ್ರತಿಯೊಂದು ವಿಷಯವನ್ನು ತಗೊಂಡು ಅದನ್ನ ಇಲ್ಲಿ ಕಾಪಿ ಅಂಡ್ ಪೇಸ್ಟ್ ಮಾಡ್ತಾರೆ.
ನಿಮಗೆ ವಿಷಯ ಗೊತ್ತಿರಲಿ ಟೆಕ್ನಾಲಜಿ ತುಂಬಾ ಫಾಸ್ಟ್ ಆಗಿರೋದ್ರಿಂದ ನೀವು ಯಾವುದೇ ಕಂಟೆಂಟ್ ತಗೊಂಡಿದ್ರು ಸಹ ಅದನ್ನ ನಾವು ಒಂದು ಸಲಿ ಬೇರೆ ಕಡೆ ಪೋಸ್ಟ್ ಮಾಡಿದ್ರೆ ಇದೇ ಜಾಗದಿಂದ ಈ ಕಂಟೆಂಟ್ ನ ಕಾಪಿ ಮಾಡಿದೆ ಅಂತ ಗೊತ್ತಾಗೋಗ್ಬಿಡುತ್ತೆ ನೀವು ಯಾವುದೇ ಕಂಟೆಂಟ್ ನ ತಗೊಳ್ಳಿ ನೀವು ಒರಿಜಿನಲ್ ಆಗಿ ನಿಮ್ಮ ಒಂದು ಮರವಣಿಗೆಯನ್ನ ಬೇರೆ ಸೆಕ್ಟರ್ ಗೆ ಕೊಡ್ತಿದ್ದೀರಾ ಅಂತಂದ್ರೆ ನಿಮ್ಮ ಒಂದು ಡಿಮ್ಯಾಂಡ್ ಎವ್ರಿ ಡೇ ಇನ್ಕ್ರೀಸ್ ಆಗ್ತಾ ಹೋಗುತ್ತೆ
ಈ ಕೆಲಸದಿಂದ ಎಷ್ಟು ಹಣ ಸಂಪಾದನೆ ಮಾಡಬಹುದು
ಇದರಲ್ಲಿ ಪ್ರಾಫಿಟ್ ಮಾರ್ಜಿನ್ ಅಂತ ನೋಡಿದಾಗ ರೆವಿನ್ಯೂ ವಿಷಯಕ್ಕೆ ಬಂದ್ರೆ ಏನಾಗುತ್ತೆ ಅಂತಂದ್ರೆ ಈ ಬ್ಲಾಗರ್ಸ್ ಮತ್ತೆ ಇನ್ಫ್ಲುಯೆನ್ಸರ್ಸ್ ಮತ್ತೆ ಕಂಪನಿಗಳಿಗೆ ಬರೆಯುವಂತಹ ಕಂಟೆಂಟ್ ರೈಟರ್ಸ್ ಇರ್ತಾರೆ ಗೊತ್ತಾ 50 ಪೈಸೆ ಇಂದ ಫೈವ್ ರುಪೀಸ್ ವರೆಗೂ ಚಾರ್ಜ್ ಮಾಡ್ತಾರೆ ಪರ್ ವರ್ಡ್ ಗೆ ಅಥವಾ ಒಂದು ಪ್ರಾಜೆಕ್ಟ್ ಗೆ ರೆಗ್ಯುಲರ್ ಆಗಿ ಯಾರೆಲ್ಲ ಬ್ಲಾಗಿಂಗ್ ಮಾಡ್ತಿರ್ತಾರೆ ಅವರಿಗಂತೂ ಇದು ಕಾನ್ಸ್ಟೆಂಟ್ ಆಗಿ ಇನ್ಕಮ್ ನ ತಗೊಂಡು ಬಂದು ಕೊಡ್ತಿರುತ್ತೆ.
ಈ ಪೊಟೆನ್ಶಿಯಲ್ ಅರ್ನಿಂಗ್ಸ್ ಅಂತ ಏನಿರುತ್ತೆ ಇದು ನಿಮ್ಮ ಎಕ್ಸ್ಪೀರಿಯನ್ಸ್ ಮೇಲೆ ಡಿಪೆಂಡ್ ಆಗಿರುತ್ತೆ ಆದರೆ ಕನಿಷ್ಠ ಪಕ್ಷ 10,000 ದಿಂದ ಒಂದು ಲಕ್ಷದವರೆಗೂ ಸಹ ನೀವು ನಿಮ್ಮ ಕಂಟೆಂಟ್ ಬರವಣಿಗೆಯಲ್ಲಿ ದುಡ್ಡನ್ನ ಸಂಪಾದನೆ ಮಾಡಬಹುದು ಈ ಎಲ್ಲಾ ವಿಷಯಗಳನ್ನ ತಿಳ್ಕೊಳೋದರ ಜೊತೆಗೆ ನಿಮಗೆ ಇಂಗ್ಲಿಷ್ ಅಲ್ಲೂ ಹಿಡ್ತಾ ಬರಬೇಕಾ ನಮಗೆ ಕನ್ನಡ ತುಂಬಾ ಫ್ಲುಯೆಂಟ್ ಆಗಿ ಮಾತಾಡ್ತೀವಿ ಅಂತಂದ್ರೆ ಇಂಗ್ಲಿಷ್ ಸಹ ನಮಗೆ ಫ್ಲುಯೆಂಟ್ ಆಗಿ ಬರಬೇಕು ಯಾಕೆ ಅಂತಂದ್ರೆ ಇಂಗ್ಲಿಷ್ ಒಂದು ಗ್ಲೋಬಲ್ ಲ್ಯಾಂಗ್ವೇಜ್ ಆಗಿರುತ್ತೆ.
ಕೊನೆಯ ಮಾತುಗಳು
ಈ 5 ವಿಷಯದಲ್ಲಿ ನಿಮಗೆ ಯಾವುದರ ಮೇಲೆ ಇಂಟರೆಸ್ಟ್ ಇರುತ್ತೋ ಅದನ್ನ ಚೂಸ್ ಮಾಡ್ಕೊಂಡು ಆದಷ್ಟು ಬೇಗ ಮನೇಲೆ ಕೂತು ಈ ಕೆಲಸನ ಮಾಡೋದನ್ನ ಸ್ಟಾರ್ಟ್ ಮಾಡಿ.
5 ವಿಷಯದ ಮೇಲು ನೀವು ಕಾನ್ಸಂಟ್ರೇಟ್ ಮಾಡಿದ್ರೆ ಖಂಡಿತವಾಗ್ಲೂ ಆಗೋದಿಲ್ಲ ಈ ಐದು ವಿಷಯದಲ್ಲಿ ಯಾವುದು ನಿಮಗೆ ತುಂಬಾ ಸೂಕ್ತ ಅಂತ ಅನ್ಸುತ್ತೋ ಅದನ್ನ ನೀವು ಅಳವಡಿಸಿಕೊಳ್ಳಬಹುದು.
ಧನ್ಯವಾದಗಳು..