Mask ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವ ವಿಧಾನ 2024!! ಮೊಬೈಲ್ ಬಳಸಿ ಮತ್ತು ಡೌನ್‌ಲೋಡ್ ಮಾಡಿ

Mask ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವುದು ಯಾವ ರೀತಿಯಲ್ಲಿ ಬಹಳಷ್ಟು ಜನರು ಕೇಳುತ್ತಿದ್ದರು ಹಾಗೂ ಇದರಿಂದ ಆಗುವ ಉಪಯೋಗಗಳು ಏನು? ಎಲ್ಲೆಲ್ಲಿ ಇದನ್ನು ಬಳಸಬಹುದು? ಈ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸುತ್ತೇವೆ.

Masked ಆಧಾರ್ ಕಾರ್ಡ್ ಅಂದರೆ ಏನು? ಎಂದು ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಮಾಸ್ಕೇಡ್ (Masked) ಆಧಾರ್ ಕಾರ್ಡ್ ಅಂದರೆ ಇದು ನಿಮ್ಮ Original ಆಧಾರ್ ಕಾರ್ಡ್ ಆಗಿರುತ್ತದೆ. ಬೇರೆ ಯಾವುದೇ ರೀತಿಯ ಒಂದು ಸಪರೇಟ್ ಕಾರ್ಡ್ ಇರುವುದಿಲ್ಲ.

ಈ ಕಾರ್ಡ್ ನಲ್ಲಿ ಏನು ವ್ಯತ್ಯಾಸ ಇರುತ್ತದೆ ಎಂದರೆ ಸಾಮಾನ್ಯವಾಗಿ ಆಧಾರ್ ಕಾರ್ಡ್ ನಲ್ಲಿ 12 ಸಂಖ್ಯೆಗಳು ಇರುತ್ತದೆ ಆದರೆ ಈ Mask ಆಧಾರ್ ಕಾರ್ಡ್ ಏನಿದೆ ಇದರಲ್ಲಿ ಕೇವಲ ಕೊನೆಯ ನಾಲ್ಕು ಸಂಖ್ಯೆಗಳು ಮಾತ್ರ ಕಾಣಿಸುತ್ತದೆ. ಬೇರೆಯಲ್ಲ 8 ಸಂಖ್ಯೆಗಳು ಹೈಡ್ (Hidden) ಆಗಿರುತ್ತದೆ.

Mask ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವ ವಿಧಾನ

myaadhaar.uidai.gov.in/login/ – ಮೊದಲಿಗೆ ಇಲ್ಲಿ ನೀಡಿರುವ ವೆಬ್ಸೈಟನ್ನು ಭೇಟಿ ಮಾಡಿ ಇದು ನಮ್ಮ ಭಾರತ ದೇಶದ ಆಧಾರ್ ಕಾರ್ಡ್ ಪೋರ್ಟಲ್ ಆಗಿದೆ. ಲಿಂಕ್ ಓಪನ್ ಮಾಡಿದ ನಂತರ ಅಲ್ಲಿ ನಿಮಗೆ ಲಾಗಿನ್ ಎಂದು ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ.

Mask ಆಧಾರ್ ಕಾರ್ಡ್ download Kannada login

ಈಗ ಇಲ್ಲಿ ನೀವು ಯಾವ ಆಧಾರ್ ಕಾರ್ಡನ್ನು Masked  ರೀತಿಯಲ್ಲಿ ಡೌನ್ಲೋಡ್ ಮಾಡಬೇಕು ಅದರ ಆಧಾರ ಕಾರ್ಡ್ ಸಂಖ್ಯೆ ಏನಿದೆ ಅದನ್ನು ಹಾಕಬೇಕು. ನಂತರ ಅಲ್ಲಿ ಕಾಣುವ Captcha ಸರಿಯಾಗಿ ಎಂಟ್ರಿ ಮಾಡಿದರೆ. ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ ಅದನ್ನು ಅಲ್ಲಿ ಹಾಕಿ ಮುಂದುವರಿಸಿದರೆ ನೀವು Mask ಆಧಾರ್ ಕಾರ್ಡ್ ಡೌನ್ಲೋಡ್ ಮಾಡಲು ಲಾಗಿನ್ ಆಗುತ್ತೀರಾ.

ಡೌನ್ಲೋಡ್ ಆಧಾರ್ ಕಾರ್ಡ್ ಎಂಬ ಆಪ್ಷನ್ ನೋಡಬಹುದು

ನೀವು ಈಗ ಲೋಗಿನ್ ಆದ ನಂತರ ಅಲ್ಲಿ ಸ್ವಲ್ಪ ಕೆಳಗೆ ಸ್ಕ್ರೋಲ್ ಮಾಡಿದರೆ “Download Aadhaar Card” ಎಂದು ಇಂಗ್ಲೀಷಿನಲ್ಲಿ ಇರುತ್ತದೆ ಅದನ್ನು ಕ್ಲಿಕ್ ಮಾಡಿ ಈಗ ನೀವು ನಿಮ್ಮ ಆಧಾರ್ ಕಾರ್ಡನ್ನು ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.

Note: ಈಗ ನೀವು ಅಲ್ಲಿ ಆಧಾರ್ ಕಾರ್ಡನ್ನು ಡೌನ್ಲೋಡ್ ಮಾಡುವ ಮುಂಚೆ ನಿಮಗೆ ಒಂದು ಆಪ್ಷನ್ ಕಾಣುತ್ತದೆ “Do You Want Mask Aadhaar Card” ಇಲ್ಲಿರುವ ರೀತಿ ಅಲ್ಲಿ ಒಂದು ಆಪ್ಷನ್ ಕಾಣುತ್ತದೆ. ಅದನ್ನು ನೀವು ಟಿಕ್ (Tick) ಮಾಡಬೇಕು ನಂತರ ಡೌನ್ಲೋಡ್ ಮಾಡಿದರೆ ನಿಮಗೆ ಮಾಸ್ಕ್ ಆಧಾರ್ ಕಾರ್ಡ್ ಪಿಡಿಎಫ್ (PDF) ಮೂಲಕ ನಿಮ್ಮ ಮೊಬೈಲ್ ಫೋನಿನಲ್ಲಿ ಡೌನ್ಲೋಡ್ ಆಗುತ್ತದೆ.

Masked ಆಧಾರ್ ಕಾರ್ಡ್ ಓಪನ್ ಮಾಡುವುದು ಹೇಗೆ?

ಪಿಡಿಎಫ್ ಮೂಲಕ ಡೌನ್ಲೋಡ್ ಆಗಿರುವ ಆಧಾರ್ ಕಾರ್ಡ್ ಏನಿದೆ ಅದನ್ನು ಓಪನ್ ಮಾಡಲು ಸೆಕ್ಯೂರಿಟಿ ಕೋಡ್ (Security Code) ಹಾಕಬೇಕಾಗುತ್ತೆ. ಅದು ಎಲ್ಲಿ ಸಿಗುತ್ತದೆ ಎಂದು ನೋಡುವುದಾದರೆ. ನಿಮ್ಮ ಹೆಸರಿನ ಮೊದಲನೆಯ ನಾಲ್ಕು ಅಕ್ಷರ ಹಾಗೂ ನಿಮ್ಮ ಹುಟ್ಟಿದ ದಿನಾಂಕ ಸೇರಿಸಿ ಅಲ್ಲಿ ಹಾಕಬೇಕು. ಇದೆ ನೋಡಿ ನಿಮ್ಮ ಆಧಾರ್ ಕಾರ್ಡ್ ಓಪನ್ ಮಾಡಲು ಬೇಕಾಗಿರುವ ಸೆಕ್ಯೂರಿಟಿ ಕೋಡ್.

ಉದಾಹರಣೆ:

ಈಗ ನಿಮ್ಮ ಹೆಸರು ಕಿರಣ್ ಅಂತ ಇದ್ದರೆ ನಿಮ್ಮ ಹೆಸರಿನ ನಾಲ್ಕು ಅಕ್ಷರಗಳನ್ನು ತೆಗೆದುಕೊಳ್ಳಿ KIRA ಈ ರೀತಿ ಇರಬೇಕು ಹಾಗೂ ನಿಮ್ಮ ಹುಟ್ಟಿದ ದಿನಾಂಕ 1992 ಅಂತ ಇದ್ದರೆ. 

ಇದೆರಡನ್ನು ಸೇರಿಸಿದರೆ ನಿಮಗೆ ನಿಮ್ಮ ಸೆಕ್ಯೂರಿಟಿ ಕೋಡ್ ಸಿಗುತ್ತದೆ – KIRA1992, ಈ ರೀತಿ ನೀವು ಸುಲಭವಾಗಿ ಮಾಸ್ಕ್ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಬಹುದು

ಮಾಸ್ಕ್ ಆಧಾರ್ ಕಾರ್ಡ್ ಉಪಯೋಗಗಳು

  • ಜನರಿಗೆ ಉತ್ತಮವಾದ ಪ್ರೈವೇಸಿ ಸಿಗುತ್ತದೆ
  • ಮೋಸ ಹೋಗುವ ಸಾಧ್ಯತೆಗಳಿರುವುದಿಲ್ಲ
  • ಸುಲಭವಾಗಿ ಮೊಬೈಲಲ್ಲಿ ಇಟ್ಟುಕೊಳ್ಳಬಹುದು
  • ನಿಮ್ಮ ಬ್ಯಾಂಕ್ ಡೀಟೇಲ್ಸ್ ಸೇಫ್ ಇರುತ್ತದೆ

ಇದನ್ನು ಸಾಮಾನ್ಯವಾಗಿ ಜನರು ಈ ಒಂದು ಕಾರಣಕ್ಕಾಗಿ ಬಳಸುತ್ತಾರೆ. ಹಾಗೂ ಅದೇ ರೀತಿ ಪಬ್ ಗಳಿಗೆ ಭೇಟಿ ನೀಡಿದಾಗ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಕೇಳುವ ಸಾಧ್ಯತೆಗಳಿರುತ್ತದೆ. ಅಲ್ಲಿ ನೀವು ಈ ರೀತಿ Mask ಆಧಾರ್ ಕಾರ್ಡನ್ನು ಅವರಿಗೆ ನೀಡಿದರೆ.

ನಿಮಗೆ ಪ್ರೈವೇಸಿ ಕೂಡ ಇರುತ್ತದೆ ಹಾಗೂ ನಿಮಗೆ ಪಬ್ ಒಳಗೆ ಕೂಡ ಎಂಟ್ರಿ ನೀಡುತ್ತಾರೆ.

ಇದನ್ನೂ ಓದಿ: ರೇಷನ್ ಕಾರ್ಡ್ ಸ್ಟೇಟಸ್ ನೋಡುವ ವಿಧಾನ!! Mobile Number ಹಾಕಿ

Leave a Comment

error: Content is protected !!