NEET 2024: National Eligibility Entrance Test Scam ಕುರಿತು ನಡೆದ  ಹಿಯರಿಂಗ್ ನಲ್ಲಿ ಸುಪ್ರೀಮ್ ಕೋರ್ಟ್ ಆದೇಶ ಏನು!!

ಸಮಸ್ತ ಕನ್ನಡ ಓದುಗರಿಗೆ ಹಾಗೂ ಕರ್ನಾಟಕದ ಜನತೆಗೆ ನಮಸ್ಕಾರಗಳು, NEET ಪರೀಕ್ಷೆಯು ಯಾವುದೇ ವಿಧ್ಯಾರ್ಥಿ ಡಾಕ್ಟರ್, MBBS ಓದಬೇಕು ಎಂದಲ್ಲಿ ಈ ಪ್ರವೇಶ ಪರೀಕ್ಷೆ ಬರೆಯುವುದು ಕಡ್ಡಾಯ. ಈ ಪರೀಕ್ಷೆ ಬರೆಯದೇ MBBS/Medical/BAMS/BDS ಮಾಡಲು ಸಾಧ್ಯವಾಗುವುದಿಲ್ಲ.

ಆದರೆ ಈ 2023-24 ನೇ ಸಾಲಿನ NEET ಪರೀಕ್ಷೆಯು ಮೇ ತಿಂಗಳ ಮೊದಲ ಭಾನುವಾರದಂದು ಅಂದರೆ ಮೇ 5 , 2024 ರಂದು ನಡೆದಿತ್ತು. ಇದರ ಫಲಿತಾಂಶವೂ ಜೂನ್ 4, 2024 ರಂದು ಪ್ರಕಟಗೊಂಡಿದ್ದು, NEET ನಡೆಸಿದ NTA National test agency ಅವರ ಮೇಲೆ ಸರಿಯಾಗಿ ಪರೀಕ್ಷೆ ನಡೆಸಿಲ್ಲ ಎಂಬ ದೂರು ಇತ್ತು.

NEET 2024 National Eligibility Scam

NEET 2024 ರಲ್ಲಿ ಸೃಷ್ಟಿ ಆಗಿರುವ ಗೊಂದಲಗಳು ಏನು?

NEET 2024 ರ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವುದಾಗಿ ಹಾಗು ಗ್ರೇಸ್ ಮಾರ್ಕ್ ಯಾವ ರೀತಿಯಲ್ಲಿ ನೀಡಿದ್ದಾರೆ ಎಂಬ ಸಂಶಯ ಎಲ್ಲಾ ವಿಧ್ಯಾರ್ಥಿಗಳಿಗೆ ಇತ್ತು. ಹಾಗು ಈ ಬಾರಿ 67 ವಿಧ್ಯಾರ್ಥಿಗಳು 720 ಕ್ಕೆ 720 ಅಂಕ ಗಳಿಸಿರುವುದು ವಿಚಿತ್ರವಾಗಿದೆ. ಪ್ರತಿ ಬಾರಿ ಐದು ವಿಧ್ಯಾರ್ಥಿಗಳು 720 ಕ್ಕೇ 720 ತಗಿಯುವುದು ಕಷ್ಟಕರವಾಗಿತ್ತು.

ಹಾಗೆ ಈ ಬಾರಿಯ 67 ವಿದ್ಯಾರ್ಥಿಗಳಲ್ಲಿ 10 ಜನ ವಿಧ್ಯಾರ್ಥಿ ಒಂದೇ ಪರೀಕ್ಷಾ ಕೇಂದ್ರದವರಾಗಿರುವುದು ಅನುಮಾನ ಸೃಷ್ಟಿಸುತ್ತಿದೆ. ಇದರ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಗ್ರೇಸ್ ಅಂಕಗಳನ್ನು ಹೇಗೆ ನೀಡಿದ್ದಾರೆ ಹಾಗು ಪ್ರಶ್ನೆ ಪತ್ರ ಲೀಕ್ ಕುರಿತು ಕೇಸ್ ಅನ್ನು ಮಂಜೂರು ಮಾಡಲಾಗಿತ್ತು.

ಸುಪ್ರೀಮ್ ಕೋರ್ಟ್ ನ ಆದೇಶ ಏನು? NEET Counselling ನಡೆಸುತ್ತಾರ?

ಕೇಸ್ ದಾಖಲಾದ ನಂತರ 11 ಜೂನ್ 2024 ರಂದು ಹಿಯರಿಂಗ್ ಆಗಿದ್ದು, ಇದರಲ್ಲಿ ಸುಪ್ರೀಮ್ ಕೋರ್ಟ್ NTA ಗೆ ಪ್ರಶ್ನೆ ಪತ್ರ ಲೀಕ್ ಕುರಿತು ಹಾಗು ಗ್ರೇಸ್ ಅಂಕಗಳ ಕುರಿತು ಸ್ಪಷ್ಟನೆ ನೀಡಬೇಕು ಎಂದು ನೋಟಿಸ್ ಕಳುಹಿಸಲಾಗಿದೆ. ಹಾಗೆ ಇದರ ಕುರಿತು ಆದಷ್ಟು ಬೇಗ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ.

ಹಾಗೆ NEET Counselling ನಡೆಸಲು ಯಾವುದೇ ಅಡೆ ತಡೆಗಳು ನೀಡಿಲ್ಲ. ಕೌನ್ಸೆಲಿಂಗ್ ನಡೆಸಲು ಅವಕಾಶ ನೀಡಲಾಗಿದೆ. ಹಾಗೆ ಕರ್ನಾಟಕದ KEA ಅವರ ಮಿಶ್ರಿತ ಕೌನ್ಸೆಲಿಂಗ್ ಅನ್ನು ಕೂಡ ಸ್ವಲ್ಪ ದಿನಗಳಲ್ಲಿ ಪ್ರಾರಂಭಿಸಲಾಗುವುದು. ಇದರ ಕುರಿತು ಮುಂದಿನ ದಿನಗಳಲ್ಲಿ ಮಾಹಿತಿ ತಿಳಿಸುತ್ತೇವೆ.

ಇದನ್ನೂ ಓದಿ: KCET Mock Allotment, Option Entry ಎಂದರೆ ಏನು? ಇದಕ್ಕೆ ಯಾವಾಗ ಸಮಯ ನೀಡಲಾಗುವುದು?

Leave a Comment

error: Content is protected !!