ಅನ್ನಭಾಗ್ಯ ಯೋಜನೆ ಹಾಗೂ ಬರ ಪರಿಹಾರದ ಕುರಿತು ಹೊಸ ಮಾಹಿತಿ ಹಾಗೂ ಇನ್ನು ಹಣ ಬಂದಿಲ್ಲವಾದರೆ ಏನು ಮಾಡಬೇಕು?

ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೆ, ಕರ್ನಾಟಕದ ಅನ್ನಭಾಗ್ಯ ಯೋಜನೆಯ ಹಣ ಇನ್ನು ಯಾರಿಗೆ ಬಂದಿಲ್ಲ ಅವರು ಏನು ಮಾಡಬೇಕು? ಹಾಗೆ ಬರ ಪರಿಹಾರದ ಕುರಿತು ಸರ್ಕಾರದಿಂದ ಬಂದಿರುವ ಹೊಸ ಮಾಹಿತಿ ಏನು? ಎಂಬ ಪೂರ್ಣ ಮಾಹಿತಿ ಇಂದಿನ ಲೇಖನದಲ್ಲಿ ತಿಳಿಯೋಣ

ಈಗಾಗಲೇ ಅನ್ನಭಾಗ್ಯ ಯೋಜನೆಯ ಹಣ ಫಲನುಭವಿಗಳಿಗೆ ಜಮಾ ಆಗುತ್ತಿದ್ದು, 9 ಕಂತಿನ ಹಣ ಜಮಾ ಮಾಡಲಾಗಿದೆ. ಮುಂದಿನ ಕಂತಿನ ಹಣ ಈ ತಿಂಗಳ 15 ದಿನದ ಒಳಗೆ ಜಮಾ ಮಾಡಗುವುದು. ಹಾಗಾಗಿ ಇನ್ನು ಹಣ ಬಂದಿಲ್ಲ ಎಂದರೆ ಯೋಚಿಸುವ ಅಗತ್ಯವಿಲ್ಲ. ಆದಷ್ಟು ಬೇಗಾ ನಿಮ್ಮ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.

ಅನ್ನಭಾಗ್ಯ ಯೋಜನೆ ಹಾಗೂ ಬರ ಪರಿಹಾರದ ಕುರಿತು ಹೊಸ ಮಾಹಿತಿ

ಅನ್ನಭಾಗ್ಯ ಯೋಜನೆಯ ಹಣ ನಿಮಗೆ ಬಂದಿಲ್ಲವೇ ಹಾಗಾದರೆ ಹೀಗೆ ಮಾಡಿ:

ಕರ್ನಾಟಕ ಸರ್ಕಾರದಿಂದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಪಡಿತರ ಪಡೆಯುವ ಕುಟುಂಬದ ಯಜಮಾನನಿಗೆ ಹಣ ಬರುತ್ತದೆ. ಆದರೆ ಕೆಲವೊಬ್ಬರಿಗೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಿಂದ ಬಂದಿಲ್ಲ. ಅಂತಹ ಸಮಸ್ಯೆ ಇದ್ದಂಥವರು ಯಾವುದೇ ರೀತಿಯಾಗಿ ಭಯ ಬೀಳುವ ಅವಶ್ಯಕತೆ ಬೇಡ. ಪ್ರತಿ ತಾಲ್ಲೂಕು ಕಚೇರಿಗಳಲ್ಲಿ ಆಹಾರ ಕೇಂದ್ರಗಳು ಇರುತ್ತವೆ ಹಾಗೂ ಅಲ್ಲಿ ನೀವು ಹೋಗಿ ವಿಚಾರಿಸಿ ನಿಮ್ಮ ಸಮಸ್ಯೆಯನ್ನು ಪರಿಹರಿಸಿ ಹಣ ಪಡೆಯಬಹುದು.

ಅನ್ನಭಾಗ್ಯದ ಮಾರ್ಚ್, ಏಪ್ರಿಲ್ ತಿಂಗಳ ಕಂತುಗಳಲ್ಲಿ ಸುಮಾರು ಜನರಿಗೆ ಹಣ ಬಂದಿಲ್ಲ. ಹಾಗಾಗಿ ನಿಮ್ಮ ಪಡಿತರ ಚೀಟಿಯೊಂದಿಗೆ ಹಾಗೂ ಅಕ್ಕಿ ಪಡೆಯಲು ಹೋದಾಗ ಒಟಿಪಿ ಪಡೆಯುವ ಫೋನ್ ನಂಬರ್ ಹೊಂದಿದ ಮೊಬೈಲ್ ಅನ್ನು ತೆಗೆದುಕೊಂಡು ಹೋಗಿ ನಿಮಗೆ ಸರಿ ಮಾಡಿಸಿಕೊಳ್ಳಬಹುದು. ಇದಲ್ಲದೆ ಬೇಕಾದರೆ ಮನೆಯಲ್ಲಿ ಕುಳಿತು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಸಹ ನೋಡಬಹುದಾಗಿದೆ.

ಬರ ಪರಿಹಾರ ನಿಧಿ ಸಿಕ್ಕಿಲ್ಲವೆಂದರೆ ಅದನ್ನು ಹೇಗೆ ಪಡೆಯಬಹುದು

2023-24 ನೇ ಸಾಲಿನಲ್ಲಿ ನಿಮ್ಮ ತಾಲ್ಲೂಕು ಬರ ಪೀಡಿತ ಪ್ರದೇಶ ಆಗಿದ್ದಲ್ಲಿ ನಿಮ್ಮ ಪ್ರದೇಶದ ರೈತರಿಗೆ ಈಗಾಗಲೇ ಪರಿಹಾರ ನಿಧಿ ಬಂದಿರುತ್ತದೆ. ಅದಕ್ಕೆ ಮುಖ್ಯವಾಗಿ FID ನಂಬರ್ ಅನ್ನು ಹೊಂದಿದವರು ಮಾತ್ರ ಅರ್ಹರಾಗಿದ್ದಾರೆ. ಈ ಬಗ್ಗೆ ನಿಮಗೆ ಚಿಂತೆ ಬೇಡ. ನೀವು ನಿಮ್ಮ ತಾಲ್ಲೂಕು ಕಚೇರಿಗೆ ಭೇಟಿ ನೀಡಿದರೆ ಅವರು ನಿಮ್ಮ ಜಮೀನಿಗೆ ಬಂದು ಸರ್ವೇ ಮಾಡಿ ಹೋಗುತ್ತಾರೆ. ಆದರೆ ನಿಮಗೆ ಹಣ ಬರಲು ನೀವು ನಿಮ್ಮ ಜಮೀನಿನಲ್ಲಿ ಏನಾದರು ಬೆಳೆ ಮಾಡಿರಬೇಕು ಅಥವಾ ಬೆಳೆ ನಾಶದ ಕುರುಹು ಇರಬೇಕು.

ಬರ ಪರಿಹಾರ ನಿಧಿಯನ್ನು FID ನಂಬರ್ ಇಲ್ಲದೆ ಪಡೆಯಲು ಅಸಾಧ್ಯವಾಗಿದ್ದು ಹಾಗೆ ಆ ನಂಬರ್ ಅನ್ನು ನೀಡಲು ಆಹಾರ ಇಲಾಖೆ ಅಧಿಕಾರಿಗಳು ನಿಮ್ಮ ಜಮೀನು ವೀಕ್ಷಣೆ ಮಾಡಲು ಬಂದಾಗ ಅಲ್ಲಿ ಒಣಗಿದ ಅಥವಾ ನಾಶ ಹೊಂದಿದ ಗಿಡಗಳು ಇದ್ದಲ್ಲಿ ಮಾತ್ರ ನಿಮಗೆ FID ನಂಬರ್ ನೀಡಿ ಬರ ಪರಿಹಾರ ನಿಧಿಯ ಹಣ ಪಡೆಯಲು ಅವಕಾಶ ನೀಡುತ್ತಾರೆ. ಇಲ್ಲದಿದ್ದರೆ ಯಾವುದೇ ರೀತಿಯ ಪರಿಹಾರ ನೀಡಲಾಗುವುದಿಲ್ಲ.

ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ಮಾಡಿಸಲು ಸರ್ಕಾರ ಹೊರಡಿಸಿರುವ ಹೊಸ ಸೂಚನೆ ಏನು?

Leave a Comment

error: Content is protected !!