PENDING GRUHALAKSHMI: ಜೂನ್ 30ರ ಒಳಗೆ ಪೆಂಡಿಂಗ್ ಗೃಹಲಕ್ಷ್ಮಿ ಹಣ ಬಿಡುಗಡೆ!! 6 ಲಕ್ಷ ಮಹಿಳೆಯರಿಗೆ ಹಣ ಬಿಡುಗಡೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯು ರಾಜ್ಯದ ಎಲ್ಲಾ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ಸ್ನೇಹಿತರೆ ಇದೀಗ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ವಿಚಾರವಾಗಿ ಕೆಲವೊಂದಷ್ಟು ಮುಖ್ಯವಾದ ಅಪ್ಡೇಟ್ ಅನ್ನು ಬಿಡುಗಡೆ ಮಾಡಿದ್ದಾರೆ. 

ಬಹಳಷ್ಟು ಜನರಿಗೆ ಸಾಕಷ್ಟು ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗಿಲ್ಲ ಹಾಗೂ ಪೆಂಡಿಂಗ್ ನಲ್ಲೆ ಇದೆ. ಇದರ ಬಗ್ಗೆ ಇತ್ತೀಚಿಗೆ ಇಲಾಖೆಯು ಎಲ್ಲಾ ಅಧಿಕಾರಿಗಳ ಜೊತೆ  ಒಂದು ಸಭೆಯನ್ನು ನಡೆಸಿದ್ದು ಇದೀಗ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಕಡೆಯಿಂದ ಅಪ್ಡೇಟ್ ಬಿಡುಗಡೆ ಆಗಿದೆ. 

ಇದರ ಬಗ್ಗೆ ವಿವರವಾಗಿ ತಿಳಿಯಲು ಈ ಲೇಖನೆಯನ್ನು ಪೂರ್ತಿಯಾಗಿ ಓದಿ. 

pending gruhalakshmi money

ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಿಡುಗಡೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ: ಗೃಹಲಕ್ಷ್ಮಿ ಮಿಯೋಜನೆಯ ವಿಚಾರವಾಗಿ ಇತ್ತೀಚೆಗೆ ಒಂದು ಮುಖ್ಯವಾದ ಸಭೆಯನ್ನು ಇಲಾಖೆಯ ನಡೆಸಿತು. ಸಭೆಯ ನಂತರ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ರವರು ಪೆಂಡಿಂಗ್ ಇರುವ ಹಣವನ್ನು  ಫಲಾನುಭವಿಗಳಿಗೆ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿಕೆಯನ್ನು ನೀಡಿದ್ದಾರೆ. ಈಗಾಗಲೇ ಸುಮಾರು 6 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣವನ್ನು ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದ್ದಾರೆ. 

ಸ್ನೇಹಿತರೆ ಲೋಕಸಭೆ ಚುನಾವಣೆ ಫಲಿತಾಂಶದ  ಮುಂಚೆಯೇ ಬಿಡುಗಡೆ  ಆಗಬೇಕಿದ್ದ ಗೃಹಲಕ್ಷ್ಮಿ ಯೋಜನೆಯ  11ನೇ ಕಂತಿನ ಹಣ ಬಹಳಷ್ಟು ಜನರಿಗೆ  ಖಾತೆಗೆ ಜಮಾ  ಆಗಿಲ್ಲ. ಇತ್ತೀಚಿಗೆ ನಡೆದ ಸಭೆಯ ನಂತರ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಇದರ ಬಗ್ಗೆ ಕ್ರಮ ಕೈಗೊಂಡಿದೆ. ಯೋಜನೆಯ 11ನೇ ಕಂತಿನ ಹಣವನ್ನು  ಪೆಂಡಿಂಗ್ ಇರುವ ಎಲ್ಲಾ ಮಹಿಳೆಯರಿಗೆ ಬಿಡುಗಡೆ ಮಾಡಿದ್ದಾರೆ. 

ಜೂನ್ 30ರ ಒಳಗೆ ಪೆಂಡಿಂಗ್ ಇರುವ ಎಲ್ಲಾ ಗೃಹಲಕ್ಷ್ಮಿ ಹಣ ಬಿಡುಗಡೆ

ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯು  ಜೂನ್ 30ನೇ ತಾರೀಕಿನ ಒಳಗೆ  ಪೆಂಡಿಂಗ್ ಇರುವ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡುತ್ತಿವೆ ಎಂದು ಹೇಳಿದ್ದಾರೆ. 

ಆದರೆ ಎಲ್ಲರಿಗೂ ಅಷ್ಟರಲ್ಲಿ ಹಣ ಬರುವುದು ಸಾಧ್ಯವಿಲ್ಲ. ಎಲ್ಲ ಮಹಿಳೆಯರಿಗೂ ಗೃಹಲಕ್ಷ್ಮಿ ಯೋಜನೆಯ ಹಣ  ತಲುಪಲು ಜುಲೈ 10 ರವರೆಗೂ ಸಮಯ ಬೇಕಾಗುತ್ತದೆ. 

ಗ್ಯಾರೆಂಟಿ ಯೋಜನೆಗಳಿಂದ ಕರ್ನಾಟಕದಲ್ಲಿ ಬೆಲೆ ಏರಿಕೆ

ಸ್ನೇಹಿತರೆ ಈಗಾಗಲೇ ನಿಮಗೆ ತಿಳಿದಿರುವ ಹಾಗೆ ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾಕಷ್ಟು ಏರಿಕೆಯಾಗಿದೆ.  ಹಾಗೂ ಇದರಿಂದ ಬಹಳಷ್ಟು  ಜನರಿಗೆ ತುಂಬಾ ತೊಂದರೆಯಾಗುತ್ತದೆ ಹಾಗೂ ಸಾಕಷ್ಟು ಕಡೆ ಇದನ್ನು  ವಿರೋಧಿಸುತ್ತಿದ್ದಾರೆ.  

ಗ್ಯಾರೆಂಟಿ ಯೋಜನೆಗಳನ್ನು ನಡೆಸಿಕೊಂಡು ಹೋಗಲು ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ತೆರಿಗೆಗಳನ್ನು ಹೆಚ್ಚಿಸುತ್ತಿದ್ದಾರೆ.  ಇನ್ನೇನು ಕೆಲವೇ ದಿನಗಳಲ್ಲಿ ಹಾಲಿನ ಬೆಲೆ ಕೂಡ ಇನ್ನೂ ಏರಿಕೆ ಆಗಲಿದೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವು ಜನರಿಂದ ಲೂಟಿ ಮಾಡಿ ಜನರಿಗೆ ಮತ್ತೆ ಗ್ಯಾರಂಟಿ ಯೋಜನೆ ಎಂಬ ರೀತಿಯಲ್ಲಿ ನೀಡುತ್ತಿದ್ದಾರೆ. 

ಇದನ್ನೂ ಓದಿ: RRB Bank Recruitment: ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ನೇಮಕಾತಿ!! ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ

Leave a Comment

error: Content is protected !!