ಹೊಸ ರೇಷನ್ ಕಾರ್ಡ್ ಅರ್ಜಿಗೆ ಅಪ್ಲಿಕೇಶನ್ ಬಿಡುಗಡೆ ಮಾಡಿಲ್ಲ!! ಈ ಕಾರಣಗಳಿಂದ ರೇಷನ್ ಕಾರ್ಡ್ ಅಪ್ಲಿಕೇಶನ್ ಬಿಡುತ್ತಾ ಇಲ್ಲ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಹೊಸ ರೇಷನ್ ಕಾರ್ಡಿಗೆ ಅಥವಾ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅಥವಾ  ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಿಸಲು ಇಲಾಖೆಯಾವಾಗ ಅವಕಾಶ ಮಾಡಿಕೊಡುತ್ತದೆ ಎಂದು ಸಾಕಷ್ಟು ಜನರು ನಮ್ಮನ್ನು ಕೇಳುತ್ತಿದ್ದರು. ಅದರ ಬಗ್ಗೆ ಈ ಲೇಖನದಲ್ಲಿ ಎಂದು ಪೂರ್ತಿ ಮಾಹಿತಿಯನ್ನು ನೀಡಿದ್ದೇವೆ. 

ಸ್ನೇಹಿತರೆ ನೀವು ಈಗಾಗಲೇ ಅರ್ಜಿ ಸಲ್ಲಿಸಿದ್ದರು ಇನ್ನು ಕೂಡ ಅಪೂರ್ವ ಲಾಗಿಲ್ಲ ಎಂದರೆ  ಅದರ ಬಗ್ಗೆ ಕೂಡ ಕೆಲವೊಂದಿಷ್ಟು ಹೊಸ ಮಾಹಿತಿಗಳು ಬಂದಿದೆ. ಮತ್ತೊಂದು ಮುಖ್ಯವಾದ ಮಾಹಿತಿ ಎಂದರೆ ಇಲಾಖೆಯು ಕೆಲವೊಂದಿಷ್ಟು ಜನರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ಮುಂದಾಗುತ್ತಿದೆ. ಹಾಗಾದರೆ ಈ ಎಲ್ಲ ವಿಷಯಗಳ ಬಗ್ಗೆ ವಿವರವಾಗಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ. 

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಬಿಡುಗಡೆ ಮಾಡುತ್ತಿಲ್ಲ

ಈಗಾಗಲೇ ಲೋಕಸಭೆ ಚುನಾವಣೆ ಮುಗಿದಿದ್ದು ಅದರ ರಿಸಲ್ಟ್ ಕೂಡ ಬಿಡುಗಡೆಯಾಗಿದೆ. ಆದರೂ ಕೂಡ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಇಲಾಖೆಯ ಅಪ್ಲಿಕೇಶನ್ ಬಿಡುಗಡೆ ಮಾಡಿಲ್ಲ. ಇದಕ್ಕೆ ಕೆಲವೊಂದಿಷ್ಟು ಮುಖ್ಯವಾದ ಕಾರಣಗಳಿವೆ ಅವುಗಳೆಂದರೆ:

ಮೊದಲನೇ ಕಾರಣ ಏನೆಂದರೆ: ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯ ಪ್ರಕಾರ ಒಂದು ರಾಜ್ಯದಲ್ಲಿ ಇಂತಿಷ್ಟೇ ರೇಷನ್ ಕಾರ್ಡ್ ಗಳು ಇರಬೇಕು ಎಂದು ನಿಯಮ ಮಾಡಲಾಗಿದೆ.

ರಾಜ್ಯದಲ್ಲಿ  13,28,000 ಬಿಪಿಎಲ್ ಕಾರ್ಡುಗಳನ್ನು ಕೊಡಲಾಗಿದೆ. ಆದ್ದರಿಂದ ಇಲಾಖೆಯ ಹೊಸ ಬಿಪಿಎಲ್ ಕಾರ್ಡ್ ಮಾಡಿಸಲು ಅರ್ಜಿಯನ್ನು ಸಲ್ಲಿಸಲು  ಅಪ್ಲಿಕೇಶನ್ ಬಿಡುಗಡೆ ಮಾಡುತ್ತಿಲ್ಲ. 

ಎರಡನೆಯ ಕಾರಣ ಏನೆಂದರೆ: ಆಹಾರ ಇಲಾಖೆಯು 2017 – 21 ರವರೆಗೆ  ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ರಾಜ್ಯದಂತೆ ಎಲ್ಲರಿಗೂ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದರು. ಸಮಯದಲ್ಲಿ ಸುಮಾರು ಮೂರು ಲಕ್ಷ ಕಾರ್ಡುಗಳನ್ನು ಇನ್ನು ಕೂಡ ಅಪ್ರುವಲ್ ಮಾಡಲು ಪೆಂಡಿಂಗ್ ನಲ್ಲಿ ಇಟ್ಟುಕೊಂಡಿದ್ದು.

ಇದಾದ ನಂತರ 2023ರ ಮೇ ತಿಂಗಳಿನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಬಂತು ಹಾಗೂ ಅದೇ ಸಮಯದಲ್ಲಿ ನೀತಿ ಸಮಿತಿ ಜಾರಿಗೆ ಬಂದ ಕಾರಣದಿಂದ ಮತ್ತೆ ಅಲ್ಲಿ ಸ್ಥಗಿತ ಆಯಿತು. 

BPL ಅಪ್ಲಿಕೇಶನ್ ಬಿಡುಗಡೆ ಮಾಡಲು ಆಹಾರ ಇಲಾಖೆ ಕಡೆಯಿಂದ ಸರ್ಕಾರಕ್ಕೆ ಮನವಿ

ಈಗಾಗಲೇ  ತಿಳಿಸಿರುವ ಕಾರಣಗಳಿಂದ ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ರೇಷನ್ ಕಾರ್ಡ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿರಲಿಲ್ಲ. 

ಆದರೆ ಈಗ ಆಹಾರ ಇಲಾಖೆಯು ಸರ್ಕಾರಕ್ಕೆ ಹೃದಯ ಸಂಬಂಧಿ ಕಾಯಿಲೆ ಅಥವಾ ಇನ್ನಿತರ ಖಾಯಿಲೆಗಳಿಂದ  ಬಲಳುತ್ತಿರುವ ಹಾಗೂ ಆಸ್ಪತ್ರೆಗಳಲ್ಲಿ ಅಡ್ಮಿಟ್ ಆಗಿರುವವರಿಗೆ ತುರ್ತಾಗಿ ರೇಷನ್ ಕಾರ್ಡ್ ಅಪೂರ್ವ ನೀಡಲು ಆಪ್ಷನ್ ಅನ್ನು ನೀಡಿ ಎಂದು  ಮನವಿ ಮಾಡಿದ್ದಾರೆ. 

ರಾಜ್ಯದಲ್ಲಿ ರೇಷನ್ ಕಾರ್ಡ್ ಹೊಂದಿರುವವರ ಸಂಖ್ಯೆ ಜಾಸ್ತಿಯಾಗಿರುವ ಕಾರಣ ಸರ್ಕಾರ ಈಗ ಹೊಸ ರೂಲ್ಸ್ ಅನ್ನು ಜಾರಿಗೆ ತಂದಿದೆ. ಯಾರ್ಯಾರು  ರೇಷನ್ ಕಾರ್ಡ್ ಹೊಂದಿದ್ದು ಕೂಡ ಮೂರು ತಿಂಗಳಿಂದ ಬೆಲೆ ಅಂಗಡಿಯಲ್ಲಿ ರೇಷನ್ ಅನ್ನು ಪಡೆಯುತ್ತಿಲ್ಲವೋ ಅಂತವರ ಬಿಪಿಎಲ್ ಕಾರ್ಡನ್ನು ರದ್ದು ಮಾಡಲಾಗುತ್ತದೆ ಹಾಗೂ ಈ ರೂಲ್ಸ್ ಈಗಾಗಲೇ ಎಲ್ಲಾ ಕಡೆ ಜಾರಿಯಲ್ಲಿದೆ. 

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ನಿಲ್ಲುವಿಕೆಗೆ ಪಕ್ಷದ ಶಾಸಕರು ಮನವಿ 

Leave a Comment

error: Content is protected !!