Ration Card Print: ಸುಲಭವಾಗಿ ರೇಷನ್ ಕಾರ್ಡ್ ಅನ್ನು ಪ್ರಿಂಟ್ ಮಾಡಿ!! ಪ್ರಿಂಟ್ ಮಾಡಲು ವಿಧಾನ ಬಳಸಿ

Ration Card Print ಮಾಡಲು ನಿಮ್ಮ ಬಳಿ ಲ್ಯಾಪ್ಟಾಪ್ ಹಾಗು ಪ್ರಿಂಟರ್ ಇರಬೇಕು ಇಲ್ಲವಾದರೆ ನಿಮ್ಮ ಬಳಿ ಲ್ಯಾಪ್ಟಾಪ್ ಇದ್ದರೆ ಸಾಕು. ಅದರಿಂದ ನೀವು ರೇಷನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಂಡು ನಂತರ ಸೈಬರ್ ಗೆ ಹೋಗಿ ಪ್ರಿಂಟ್ ತಗಿಸಬಹುದು ಯಾವ ರೀತಿ ನೀವು ರೇಷನ್ ಕಾರ್ಡ್ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಎಂಬ ವಿಧಾನ ನಾವು ನಿಮಗೆ ಇಲ್ಲಿ ತಿಳಿದಿದ್ದೇವೆ ಈ ರೀತಿ ನೀವು ಮಾಡಿದರೆ ಡೌನ್ಲೋಡ್ ಆಗುತ್ತದೆ ನಂತರ ಪ್ರಿಂಟ್ ಮಾಡಿಸಬಹುದು.

ಮೊದಲಿಗೆ ನೀವು ಆಹಾರ ಇಲಾಖೆಯ ವೆಬ್ ಸೈಟಿಗೆ ಭೇಟಿ ನೀಡಬೇಕು ಅದರ ನೇರವಾದ ಲಿಂಕ್ ಅನ್ನು ಇಲ್ಲಿ ನೀಡಿದ್ದೇವೆ ahara.kar.nic.in/lpg/ ನಂತರ  ರೇಷನ್ ಕಾರ್ಡ್ ಎಂಬ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ ಇದಾದ ಮೇಲೆ ನೀವು ಯಾವ ಜಿಲ್ಲೆಗೆ ಸೇರುತಿರಾ ಅದನ್ನು ಆಯ್ಕೆ ಮಾಡಿ.

Ration Card Print ಹಾಗೂ ಡೌನ್ಲೋಡ್ ಮಾಡುವ ವಿಧಾನ

ನೀವು ಯಾವ ಜಿಲ್ಲೆಗೆ ಸೇರುತ್ತೀರಾ ಇದನ್ನು ಆಯ್ಕೆ ಮಾಡಿದ ನಂತರ ಅಲ್ಲಿ ನಿಮಗೆ “Status Of ಕಾರ್ಡ್ Card” ಎಂಬ ಆಪ್ಷನ್ ಕಾಣ್ತದೆ ಅದನ್ನು ಕ್ಲಿಕ್ ಮಾಡಿ ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಅಲ್ಲಿ ಹಾಕಿದರೆ ರಿಜಿಸ್ಟರ್ ಆದ ಮೊಬೈಲ್ ನಂಬರ್ ಒಟಿಪಿ ಬರುತ್ತದೆ ಅದನ್ನು ಸರಿಯಾಗಿ ಹಾಕಿ ಮುಂದುವರಿಸಿ ಈಗ ನಿಮ್ಮ ಮನೆಯ ಸದಸ್ಯರನ್ನು ಆಯ್ಕೆ ಮಾಡಲು ಕೇಳುತ್ತದೆ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಿ ಮುಂದುವರಿಸಿ.

ಈಗ ಅಲ್ಲಿ ನಿಮಗೆ ನಿಮ್ಮ ಮನೆಯ ಸದಸ್ಯರ ಹೆಸರು ಹಾಗೂ ವಿವರಗಳು ತೋರಿಸುತ್ತದೆ ಅಲ್ಲಿ ಕೆಳಗೆ ಸ್ಕ್ರೋಲ್ ಮಾಡಿದರೆ. ನಿಮಗೆ ಅಲ್ಲಿ ರೇಷನ್ ಕಾರ್ಡ್ ಡೌನ್ಲೋಡ್ ಮಾಡುವ ಆಪ್ಷನ್ ಕಾಣುತ್ತದೆ  ಅದನ್ನು ಕ್ಲಿಕ್ ಮಾಡಿದ ನಂತರ ನಿಮ್ಮ ರೇಷನ್ ಕಾರ್ಡ್ ಚಿತ್ರ ಕಾಣುತ್ತದೆ ಈಗ ಅದನ್ನು ನೀವು ನಿಮ್ಮ ಲ್ಯಾಪ್ಟಾಪಿನಲ್ಲಿ ಅಥವಾ ಕಂಪ್ಯೂಟರ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು.

Specimen ವಾಟರ್ ಮಾರ್ಕ್ ಡಿಲೀಟ್ ಮಾಡುವ ವಿಧಾನ

ರೇಷನ್ ಕಾರ್ಡ್ ಚಿತ್ರ ಅಲ್ಲಿ ಬಂದ ನಂತರ ಅದರ ಮೇಲ್ಗಡೆ ಒಂದು “specimen” ಎಂದು ವಾಟರ್ ಮಾರ್ಕ್ ಕಾಣುತ್ತದೆ ಅದನ್ನು ಮೊದಲು ನೀವು ಡಿಲೀಟ್ ಮಾಡಬೇಕು ಈಗ ನೀವು ಅದನ್ನು ಯಾವ ರೀತಿ ಡಿಲೀಟ್ ಮಾಡಬೇಕು ಎಂದರೆ ಮೊದಲಿಗೆ ನಿಮ್ಮ ಲ್ಯಾಪ್ಟಾಪಿನಲ್ಲಿ “Ctrl+ Shift+ I” ಬಟನ್ ಕ್ಲಿಕ್ ಮಾಡಿದರೆ. ನಿಮಗೆ ಅಲ್ಲಿ ಮತ್ತೊಂದು ಪೇಜ್ ಓಪನ್ ಆಗುತ್ತದೆ ಈಗ ಅಲ್ಲಿ ನೀವು Specimen ಎಂಬ ಆಪ್ಷನ್ ಏನು ಇದೆ ಅದರ ಮೇಲೆ ಕ್ಲಿಕ್ ಮಾಡಿ.

ನಿಮಗೆ ಅಲ್ಲಿ ಮತ್ತೊಂದು ಪೇಜಿನಲ್ಲಿ ಅದರ HTML ಫಾರ್ಮೆಟ್ ತೋರಿಸುತ್ತದೆ. ಅದನ್ನ ಈಗ ನೀವು ಡಿಲೀಟ್ ಮಾಡಬೇಕು ಡಿಲೀಟ್ ಮಾಡುವುದು ಬಹಳ ಸುಲಭವಾದ ವಿಧಾನ Right Click ಮಾಡಿ ಡಿಲೀಟ್ ಆಪ್ಷನ್ ಕಾಣುತ್ತದೆ, ಡಿಲೀಟ್ ಮಾಡಿ ಇದಾದ ನಂತರ ನೀವು ಈಗ ಸುಲಭವಾಗಿ ಯಾವುದೇ ರೀತಿಯ ವಾಟರ್ ಮಾರ್ಕ್ ಇಲ್ಲದೆ ನಿಮ್ಮ ರೇಷನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಡೌನ್ಲೋಡ್ ಆದ ರೇಷನ್ ಕಾರ್ಡನ್ನು ನಿಮ್ಮ ಬಳಿ ಪ್ರಿಂಟರ್ ಇದ್ದರೆ ನೀವೇ ಪ್ರಿಂಟ್ ಮಾಡಿಕೊಳ್ಳಬಹುದು. ಇಲ್ಲವಾದರೆ ಅದನ್ನು ಹತ್ತಿರದ ಸೈಬರ್ ಸೆಂಟರ್ಗಳಿಗೆ ನೀಡಿದರೆ ಅವರು ಅದನ್ನು ಪ್ರಿಂಟ್ ತೆಗೆದುಕೊಳ್ಳುತ್ತಾರೆ.

ಇದನ್ನೂ ಓದಿ: KCET 2024 SNQ ಕೋಟ: (Super Numeracy Quota) ಯಾರಿಗೆ ಸಿಗುವುದು ? ಹೇಗೆ SNQ ಕೋಟ ಗೆ ಅರ್ಜಿ ಸಲ್ಲಿಸುವುದು?

Leave a Comment

error: Content is protected !!