ರಾಜ್ಯದಲ್ಲಿ ಬಹಳಷ್ಟು ಜನರು, ತಮ್ಮ ರೇಷನ್ ಕಾರ್ಡ್ ಸ್ಟೇಟಸ್ ಏನಾಗಿದೆ ಎಂದು ತಿಳಿದುಕೊಳ್ಳಲು ಕಷ್ಟ ಪಡುತ್ತಿದ್ದಾರೆ ಹಾಗೂ ಅವರಿಗೆ ಯಾವ ರೀತಿ ಸುಲಭವಾಗಿ ತಮ್ಮ ಮೊಬೈಲ್ ನಂಬರ್ ಬಳಸಿಕೊಂಡು ಅವರ ರೇಷನ್ ಕಾರ್ಡ್ ಸ್ಟೇಟಸ್ ನೋಡುವುದು ಹೇಗೆ ಎಂದು ತಿಳಿದಿಲ್ಲ. ಅಂತವರಿಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುತ್ತೇವೆ.
ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಅಂದರೆ (ಸ್ಥಿತಿ) ಇದು ಆಕ್ಟಿವ್ (Active) ಇದ್ದರೆ ಮಾತ್ರ ನಿಮಗೆ ಸರ್ಕಾರದ ಕಡೆಯಿಂದ ಬರಬೇಕಾಗಿರುವ ಹಣ ಹಾಗೂ ಯೋಜನೆಗಳ ಲಾಭ ಸಿಗುತ್ತದೆ. ಇಲ್ಲವಾದರೆ ನಿಮಗೆ ಸರ್ಕಾರದ ಯಾವುದೇ ರೀತಿಯ ಲಾಭ ದೊರೆಯುವುದಿಲ್ಲ. ಹಾಗಾದರೆ ಬನ್ನಿ ಯಾವ ರೀತಿ ಸ್ಟೇಟಸ್ ನೋಡುವುದು ಎಂದು ತಿಳಿದುಕೊಳ್ಳೋಣ.
ರೇಷನ್ ಕಾರ್ಡ್ Status ನೋಡುವ ವಿಧಾನ
https://ahara.kar.nic.in/lpg/ ಈ ಲಿಂಕ್ ಅನ್ನು ಬಳಸಿಕೊಂಡು ನೀವು ರೇಷನ್ ಕಾರ್ಡನ್ನು ಸ್ಟೇಟಸ್ ಏನಾಗಿದೆ ಎಂದು ತಿಳಿದುಕೊಳ್ಳಬಹುದು. ಈ ಲಿಂಕ್ ಏನಿದೆ ಇದು ಓಪನ್ ಆದ ನಂತರ ನೀವು ಯಾವ ಜಿಲ್ಲೆಗೆ ಸೇರುತ್ತೀರಾ ಆ ಜಿಲ್ಲೆಯ ಲಿಂಕನ್ನು ಕ್ಲಿಕ್ ಮಾಡಿ ಈಗ ಇಲ್ಲಿ ನಿಮಗೆ “Status of Ration Card” ಎಂಬ ಒಂದು ಲಿಂಕ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ. ಈಗ ನೀವು ಓಟಿಪಿ ಮೂಲಕ ಪರಿಶೀಲನೆ ಮಾಡಬಹುದು.
ಈಗ ನೀವು ನಿಮ್ಮ ರೇಷನ್ ಕಾರ್ಡ್ ನಂಬರ್ ಅಲ್ಲಿ ಹಾಕಬೇಕು ನಂತರ ಮನೆಯ ಯಾರಾದರೂ ಒಬ್ಬ ಸದಸ್ಯರ ಹೆಸರನ್ನು ಆಯ್ಕೆ ಮಾಡಿ. ಈಗ ಆಯ್ಕೆ ಮಾಡಿದ ಸದಸ್ಯರ ಮೊಬೈಲ್ ನಂಬರ್ ಏನಿದೆ ಆ ಫೋನಿಗೆ ಒಂದು ಒಟಿಪಿ ಬರುತ್ತದೆ ಅದನ್ನು ನೀವು ಅಲ್ಲಿ ಹಾಕಿ ಮುಂದುವರಿಸಬಹುದು.
Note: ಇಲ್ಲಿ ನೀವು ಯಾವುದೇ ರೀತಿಯ ಮೊಬೈಲ್ ನಂಬರ್ ಹಾಕುವ ಅವಶ್ಯಕತೆ ಇರುವುದಿಲ್ಲ ನಿಮ್ಮ ರೇಷನ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಏನಿದೆ ಅದಕ್ಕೆ ಡೈರೆಕ್ಟಾಗಿ ಮೆಸೇಜ್ ಬರುತ್ತದೆ ಅಂದರೆ ಒಟಿಪಿ ಬರುತ್ತದೆ!
ರೇಷನ್ ಕಾರ್ಡ್ Status ಎಲ್ಲಿರುತ್ತದೆ
ಓಟಿಪಿಯನ್ನು ಹಾಕಿ ಮುಂದುವರಿಸಿದ ನಂತರ ನಿಮಗೆ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮಗೆ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಎಂಬ ಆಪ್ಷನ್ ಇರುತ್ತದೆ ಅಲ್ಲಿ ಈ ಮಾಹಿತಿಗಳು ನಿಮಗೆ ತೋರಿಸುತ್ತದೆ ಅದು ಯಾವುದೆಂದರೆ:
- RC No/ಪ.ಚೀಟಿ
- RC Taluk/ಪ.ತಾಲ್ಲೂಕು
- RC Area/ಸ್ಥಳ
- RC Status/ಪ.ಸ್ಥಿತಿ
- Remarks & Reasons/ಕಾರಣ
- RC Type/ಪ.ವಿಧ
ಇಲ್ಲಿ ನೀವು ನೋಡಬಹುದು ನಾಲ್ಕನೇ ಪಟ್ಟಿಯಲ್ಲಿ ರೇಷನ್ ಕಾರ್ಡ್ ಸ್ಥಿತಿ ಎಂಬ ಆಪ್ಷನ್ ಇದೆ ಅಲ್ಲಿ Active ಅಂತ ಇದ್ದರೆ ನಿಮ್ಮ ರೇಷನ್ ಕಾರ್ಡ್ ಸುರಕ್ಷಿತವಾಗಿದೆ ಎಂದು ಅರ್ಥ. ಇಲ್ಲವಾದರೆ ನಿಮ್ಮ ರೇಷನ್ ಕಾರ್ಡ್ ಏನಿದೆ ಅದರಲ್ಲಿ ಕೆಲವು ಮಾಹಿತಿ ಸರಿ ಇರುವುದಿಲ್ಲ.
ಅದೇ ರೀತಿ ನಿಮ್ಮ ಮನೆ ಸದಸ್ಯರ ರೇಷನ್ ಕಾರ್ಡಿನ E-KYC ಸ್ಟೇಟಸ್ ಏನಿದೆ ಎಂದು ಕೂಡ ತೋರಿಸುತ್ತದೆ. ಮನೆಯ ಎಲ್ಲಾ ಸದಸ್ಯರ ಸ್ಟೇಟಸ್ ಕೂಡ ನೀವು ಅಲ್ಲೇ ನೋಡಬಹುದು.
ಯಾವುದೇ ರೀತಿಯ ಸೈಬರ್ ಸೆಂಟರ್ಗಳಿಗೆ ಹೋಗದೆ ಮೊಬೈಲ್ ಬಳಸಿಕೊಂಡು ಪರಿಶೀಲನೆ ಮಾಡಬಹುದು ಈ ಸುಲಭವಾದ ವಿಧಾನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರಿಗೆ ಕೂಡ ಶೇರ್ ಮಾಡಿ.
ಇದನ್ನೂ ಓದಿ: ರೇಷನ್ ಕಾರ್ಡ್ ಆನ್ಲೈನ್ ಡೌನ್ಲೋಡ್ ಮಾಡುವ ವಿಧಾನ!!