ಬ್ಯಾಂಕಿನಲ್ಲಿ ಸಾಲ ಪಡೆಯುವುದರಲ್ಲಿ ಗುಡ್ ನ್ಯೂಸ್!! RBI ಮಹತ್ವ ನಿರ್ಧಾರವನ್ನು ಜನರಿಗೆ ತಿಳಿಸಿದ್ದಾರೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಬ್ಯಾಂಕ್ ಗಳಿಂದ ಸಾಲ ಪಡೆಯುವ ಭಾರತದ ಜನರಿಗೆ ಒಂದು ಭರ್ಜರಿ ಗುಡ್ ನ್ಯೂಸ್ ಬಂದಿದೆ. ಇದೀಗ ಭಾರತದ RBI ಒಂದು ಹೊಸ ನಿರ್ಧಾರವನ್ನು ತೆಗೆದುಕೊಂಡಿದೆ. ಹಾಗೂ ಈ ನಿರ್ಧಾರದಿಂದ ಬ್ಯಾಂಕ್ ಗಳಿಂದ ಸಾಲ ಪಡೆಯುವವರಿಗೆ ದೊಡ್ಡ ಅನುಕೂಲ ತಂದುಕೊಟ್ಟಿದೆ. 

ಹಾಗಾದರೆ RBI ತಂದಿರುವ ಹೊಸ ನಿರ್ಧಾರ ಏನು? ಹಾಗೂ ಬ್ಯಾಂಕ್ ಗಳಿಂದ ಸಾಲ ಪಡೆಯುವ ಜನರಿಗೆ ಹೇಗೆ ಉಪಯೋಗವಾಗುತ್ತದೆ? ಈ ಎಲ್ಲಾ ವಿಷಯಗಳ ಬಗ್ಗೆ ವಿವರವಾಗಿ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.

ಬ್ಯಾಂಕಿನಲ್ಲಿ ಸಾಲ ಪಡೆಯುವುದರಲ್ಲಿ ಗುಡ್ ನ್ಯೂಸ್!! RBI ಮಹತ್ವ ನಿರ್ಧಾರವನ್ನು ಜನರಿಗೆ ತಿಳಿಸಿದ್ದಾರೆ

ಭಾರತದ RBI ನಿಂದ ಮಹತ್ವದ ನಿರ್ಧಾರ RBI ಗವರ್ನರ್ ಹೇಳಿಕೆ

ಮಹತ್ವದ ಬೆಳವಣಿಗೆ ಒಂದರಲ್ಲಿ ಭಾರತದ ರಿಸರ್ವ್ ಬ್ಯಾಂಕ್ ಒಂದು ಮುಖ್ಯವಾದ ನಿರ್ಧಾರವನ್ನು ಕೈಗೊಂಡಿದೆ. ಭಾರತದ RBI  ಹೊಸ ನಿರ್ಧಾರೇನೆಂದರೆ RBI ಬ್ಯಾಂಕುಗಳಿಗೆ ವಿಧಿಸುವ ತನ್ನ ರೆಪೋ ದರವನ್ನು ಪರಿಷ್ಕರಿಸಲಾಗಿಲ್ಲ.

ರೆಪೋ ದರವನ್ನು ಯಥಾ ಸ್ಥಿತಿಯ  ಮುಂದುವರಿಸಲು ನಿರ್ಧರಿಸಿದ್ದೇವೆ ಎಂದು ಭಾರತದ RBI ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಇದರಿಂದ ಬ್ಯಾಂಕ್ ಕಡೆಯಿಂದ ಸಾಲ ಪಡೆಯುವವರಿಗೆ ಅನುಕೂಲವಾಗಲಿದೆ.

ಬ್ಯಾಂಕುಗಳಿಗೆ ವಿಧಿಸುವ ರೆಪೋ ದರವನ್ನು RBI  ಪರಿಷ್ಕರಿಸುತ್ತಿಲ್ಲ

ಸ್ನೇಹಿತರೆ ಹಿಂದೆ 2023 ರ ಫೆಬ್ರವರಿಯಲ್ಲಿ  ರೆಪೋ ದರವನ್ನು  ಆರ್‌ಬಿಐ ಪರಿಷ್ಕರಿಸಿತ್ತು ಹಾಗೂ ದರವನ್ನು ಶೇಕಡ 6.5% ಗೆ ತಂದು   ನಿಲ್ಲಿಸಿತ್ತು. ಆ ಸಮಯದಿಂದಲೂ ರೆಪೋ ದರವನ್ನು ಹಾಗೆ ಮುಂದುವರೆಸಿಕೊಂಡು  ಬಂದಿದ್ದಾರೆ. 

ಮಾಧ್ಯಮಗಳಿಗೆ  ಹೇಳಿಕೆಯನ್ನು ನೀಡಿರುವ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಇತ್ತೀಚಿಗೆ  ಸಭೆ ಸೇರಿದ ಆರ್‌ಬಿಐನ ಹಣಕಾಸು ನೀತಿಯ ಸಮಿತಿಯ ನಾಲ್ವರು ಸದಸ್ಯರು ರೆಪೋ ದರ ಹೇಳಿಕೆಯ ಅಥವಾ ಏರಿಕೆ ಪ್ರಸ್ತಾವನೆ ಕುರಿತಂತೆ ತಮ್ಮ ಮತವನ್ನು  ಚಲಾಯಿಸಲಾಯಿತು.

ಈ ಸಭೆಯಲ್ಲಿ ರೆಪೋತರವನ್ನು ಯಥಾ ಸ್ಥಿತಿ ನಡೆಸುವಂತೆ ಮೂರು ಸದಸ್ಯರು ಮತವನ್ನು  ಚಲಾಯಿಸಿದರು. ಆದ್ದರಿಂದ ಬ್ಯಾಂಕುಗಳ ರೆಪೋ ದರವನ್ನು ಯಥಾ ಸ್ಥಿತಿ ನಡೆಸುವಂತೆ ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ. 

ರೆಪೋ ದರವನ್ನು ಯಥಾ ಸ್ಥಿತಿ ನಡೆಸಲು ಕಾರಣವೇನು

ಬ್ಯಾಂಕುಗಳ ಮೇಲೆ ವಿಧಿಸುವ ರೆಪೋ ದರವನ್ನು ಬದಲಾಯಿಸದಿರಲು ಕಾರಣವನ್ನು RBI ಗವರ್ನರ್ ಬಿಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಗತ್ತಿನ ನಾನಾ ದೇಶಗಳ ಆರ್ಥಿಕತೆಯು ವಿವಿಧ ರೀತಿಯಲ್ಲಿ ಭಾದಿಸಲ್ಪಟ್ಟಿದ್ದು ಭಾರತದ ಆರ್ಥಿಕತೆಯ ಏರುಗತಿಯಲ್ಲಿ ಸಾಗುತ್ತಿದೆ.

ದೇಶದ ಆರ್ಥಿಕ ಬೆಳವಣಿಗೆಯು ಉತ್ತಮ ಸ್ಥಿರತೆಯನ್ನು ಕಾಯ್ದುಕೊಂಡಿರುವ  ಹಿನ್ನಲೆಯಲ್ಲಿ ಶೇಕಡ ನಾಲ್ಕರಷ್ಟಿರುವ ಹಣದುಬ್ಬರದ ದರವನ್ನು  ಬದಲಾಯಿಸದೆ ಯಥಾ ಸ್ಥಿತಿಯಲ್ಲಿ ಹಾಗೆ ಮುಂದುವರಿಸಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ. 

ರೆಪೋ ದರ ಎಂದರೇನು? RBI ನಿರ್ಧಾರದಿಂದ ಜನರಿಗೆ ಹೇಗೆ ಅನುಕೂಲವಾಗುತ್ತದೆ?

ಸ್ನೇಹಿತರೆ  ಜನಸಾಮಾನ್ಯರಿಗೆ ಸಾಲವನ್ನು ನೀಡುವ ಬ್ಯಾಂಕ್ಗಳು ಕೋಟಿಗಟ್ಟಲೆ ಹಣವನ್ನು RBI  ನಿಂದ ಸಾಲದ ರೂಪದಲ್ಲಿ ಪಡೆಯುತ್ತದೆ.

RBI ನಿಂದ ಸಾಲವನ್ನು ಪಡೆದು ಜನರಿಗೆ ಸಾಲವನ್ನು ಕೊಡುತ್ತದೆ. ಬ್ಯಾಂಕುಗಳಿಗೆ ನೀಡುವ ಸಾಲದ ಮೇಲೆ ಆರ್ ಬಿ ಐ ಇಂತಿಷ್ಟು ಇಂಟರೆಸ್ಟ್ ಅನ್ನು ಹಾಕುತ್ತದೆ. ಆ ಬಡ್ಡಿಯ ದರವನ್ನೇ ರೆಪೋ ದರ ಎಂದು ಕರೆಯಲಾಗುತ್ತದೆ. 

REPO – Repurchasing Option

ಹೀಗೆ ಒಂದು ವೇಳೆ RBI  ಬ್ಯಾಂಕ್ ಗಳ ಮೇಲೆ ನೀಡಿರುವ ಸಾಲಕ್ಕೆ  ರೆಪವನ್ನು ಹೆಚ್ಚಿಸಿದರೆ ಬ್ಯಾಂಕ್ ಗಳು ಜನಸಾಮಾನ್ಯರ ಮೇಲೆ ಬಡ್ಡಿಯನ್ನು ಹೆಚ್ಚಿಸಬೇಕಾಗುತ್ತದೆ. ಬಡ್ಡಿದರ ಹೆಚ್ಚಾದರೆ ಜನರಿಗೆ ಸಾಲದ ಮೇಲಿನ  ಪ್ರತಿ ತಿಂಗಳ EMI ಕೂಡ ಹೆಚ್ಚಾಗುತ್ತದೆ.

ಆದ್ದರಿಂದ ಆರ್‌ಬಿಐ ನಿರ್ಧಾರದಿಂದ ಬ್ಯಾಂಕ್ ಗಳಿಂದ ಸಾಲ ಪಡೆಯುವ ಜನರಿಗೆ ಬಹಳಷ್ಟು ಅನುಕೂಲವಾಗಿದೆ. 

ಇದನ್ನೂ ಓದಿ: ಗ್ಯಾರಂಟಿ ಯೋಜನೆ ರದ್ದು ಮಾಡಲು ಮನವಿ!! ಇದರ ಬಗ್ಗೆ ಸಿಎಂ ಸಿದ್ದರಾಮಯ್ಯನವರು ರಾಜ್ಯದ ಜನರಿಗೆ ಸ್ಪಷ್ಟಣೆ ನೀಡಿದ್ದಾರೆ

Leave a Comment

error: Content is protected !!