ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಅಂದರೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಕ್ಯಾನ್ಸಲ್ ಮಾಡುವುದಾಗಿ ಹಾಗೆ ಬಸ್ ಟಿಕೆಟ್ ಹೆಚ್ಚಿಸುವುದಾಗಿ ಮಾಹಿತಿ ಹರೆದಾಡುತ್ತಿದೆ. ಇದರ ಕುರಿತು ಇಂದಿನ ಲೇಖನದಲ್ಲಿ ಪೂರ್ಣ ಮಾಹಿತಿ ತಿಳಿಯೋಣ.
ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ ಮಾಹಿತಿ ಉಪಯುಕ್ತವಾಗಿದೆ. ಹಾಗಾದರೆ ಬನ್ನಿ ಸ್ನೇಹಿತರೆ , ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಫಲಿತಾಂಶದಿಂದ ಬೇಸರಗೊಂಡು ಶಾಸಕರು ಸಿಎಂ ಸಿದ್ಧರಾಮಯ್ಯ ನವರ ಬಳಿ ಗ್ಯಾರಂಟೀ ಯೋಜನೆಗಳನ್ನು ನಿಲ್ಲಿಸಲು ಮನವಿ ಮಾಡಿದ್ದರು.
ಉಚಿತ ಬಸ್ ಪ್ರಯಾಣ ಯೋಜನೆಯನ್ನು ನಿಲ್ಲಿಸುತಾರ?
ಉಚಿತ ಬಸ್ ಪ್ರಯಾಣ ಯೋಜನೆಯನ್ನು ನಿಲ್ಲಿಸಲು ಹಾಗೆ ಬಸ್ ಟಿಕೆಟ್ ನ ಶುಲ್ಕವನ್ನು ಹೆಚ್ಚಿಸುವ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಹಾಗು ಮಾದ್ಯಮಗಳಲ್ಲಿ ಮಾಹಿತಿ ಬರುತ್ತಿತ್ತು. ಈ ಮಾಹಿತಿ ಸುಳ್ಳು ಅಥವಾ ನಿಜ ಎಂದು ತಿಳಿಯೋಣ. ಹೌದು ಸ್ನೇಹಿತರೇ, ಉಚಿತ ಬಸ್ ಪ್ರಯಾಣ ಯೋಜನೆಯನ್ನು ಅಂದರೆ ಶಕ್ತಿ ಯೋಜನೆಯನ್ನು ನಿಲ್ಲಿಸುತ್ತಿಲ್ಲ. ಆ ಮಾಹಿತಿ ಎಲ್ಲಾ ಸುಳ್ಳು ಮಾಹಿತಿಯಾಗಿದೆ. ಸ್ವತಃ ಸಿಎಂ ಸಿದ್ಧರಾಮಯ್ಯ ಅವರು ತಿಳಿಸಿದ್ದಾರೆ.
ಬಹುಶಃ ಬಸ್ ಟಿಕೆಟ್ ನ ಶುಲ್ಕ ಹೆಚ್ಚಾಗಬಹುದು. ಸಾರಿಗೆ ಇಲಾಖೆ ನಷ್ಟದಲ್ಲಿ ಇರುವುದರಿಂದ ಹಾಗೆ ಪ್ರತಿ ವರ್ಷ ಬಸ್ ಚಾಲಕರು ಮತ್ತು ಕಂಡಕ್ಟರ್ ಗಳಿಗೆ ಸಂಬಳ ಹೆಚ್ಚಿಸಬೇಕು ಹಾಗೆ ಇಲಾಖೆ ನಷ್ಟದಲ್ಲಿ ಇರುವುದರಿಗೆ ಇದರ ಕುರಿತು ಪರಿಶೀಲನೆ ಮಾಡಿ ಮುಂದುವರೆಸುವುದಾಗಿ ಸಚಿವ ರಾಮಲಿಂಗ ರೆಡ್ಡಿ ಅವರು ತಿಳಿಸಿದ್ದಾರೆ.
ಸದ್ಯಕ್ಕೆ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆಯ ನೀಳ್ಳುವಿಕೆಯ ಮಾಹಿತಿ ಸುಳ್ಳು ಹಾಗು ಟಿಕೆಟ್ ದರ ಹೆಚ್ಚಿಸುವ ಮಾಹಿತಿ ಬಗ್ಗೆ ಚರ್ಚಿಸಿ ಸೂಕ್ತ ಆಯ್ಕೆ ಮಾಡಲಾಗುವುದು.
ಉಳಿದ 5 ಗ್ಯಾರಂಟೀ ಯೋಜನೆಗಳನ್ನು ನಿಲ್ಲಿಸುತ್ತಾರ?
ಮೊನ್ನೆ ರಾಹುಲ್ ಗಾಂಧಿಯವರ ಜೊತೆ ಸಿಎಂ ಸಿದ್ಧರಾಮಯ್ಯ ಹಾಗು ಡಿಸಿಎಂ ಡಿ ಕೆ ಶಿವಕುಮಾರ್ ಅವರ ಜೊತೆ ಮಾತು ಕತೆ ನಡೆಸಿ, ಲೋಕ ಸಭಾ ಚುನಾವಣೆಯ ಫಲಿತಾಂಶದ ಕುರಿತು ಮಾತನಾಡಿ ಕೇವಲ 9 ಕ್ಷೇತ್ರಗಳಲ್ಲಿ ಜಯ ಸಾಧಿಸಿರುವ ಕಾಂಗ್ರೆಸ್ ಪಕ್ಷ ಹಾಗು ಇದರಿಂದ ಶಾಸಕರು ಈ ಐದು ಗ್ಯಾರಂಟೀ ಯೋಜನೆಗಳನ್ನು ನಿಲ್ಲಿಸುವುದಾಗಿ ಮನವಿ ಮಾಡಿದ್ದಾರೆ.
ಈ ಕುರಿತು ರಾಹುಲ್ ಗಾಂಧಿಯವರ ಕೂಡ ಅವರ ಬೇಸರ ವ್ಯಕ್ತ ಪಡಿಸಿ, ಈ ಐದು ಗ್ಯಾರಂಟೀ ಯೋಜನೆಗಳ ಬಗ್ಗೆ ಮತ್ತೆ ಪರಿಶೀಲನೆ ಮಾಡಿ ನಂತರ ಈ ಯೋಜನೆಗಳ ಮುಂದುವರಿಕೆ ಬಗ್ಗೆ ಯೋಚಿಸಿ ಎಂಬ ಸಲಹೆ ನೀಡಿದ್ದಾರೆ. ಜೂನ್ 13 ರಂದು ಸಂಪುಟ ಸಭೆ ನಡೆಸಲಾಗುವುದು. ಆ ಸಭೆಯಲ್ಲಿ ಈ ಯೋಜನೆಗಳ ಕುರಿತು ಮಾತನಾಡಲಾಗುವುದು.
ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ಅರ್ಜಿಗೆ ಅಪ್ಲಿಕೇಶನ್ ಬಿಡುಗಡೆ ಮಾಡಿಲ್ಲ!