SSLC ಪರೀಕ್ಷೆ – 3ರ ದಿನಾಂಕ ಹಾಗು ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ!! ಇಲ್ಲಿದೆ ಮಾಹಿತಿ 

ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, ಹತ್ತನೇ ತರಗತಿಯ ಪರೀಕ್ಷೆ – 3 ರ ದಿನಾಂಕ ಹಾಗು ವೇಳಾಪಟ್ಟಿಯನ್ನು ಕರ್ನಾಟಕ ಸೆಕೆಂಡರಿ ಎಜುಕೇಷನ್ ಬೋರ್ಡ್ ಅವರು ಹೊಸ ಸೂಚನೆ ಅಥವಾ ನೋಟಿಸ್ ಜಾರಿಗೊಳಿಸಿದ್ದಾರೆ. ಇದರ ಕುರಿತು ಪೂರ್ಣ ಮಾಹಿತಿಯನ್ನು ಇಂದಿನ ನಮ್ಮ ಈ ಲೇಖನದಲ್ಲಿ ತಿಳಿಯೋಣ.

ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ. ಹತ್ತನೇ ತರಗತಿಯ ಪರೀಕ್ಷೆ ಬರೆಯಬೇಕೆಂಬವರಿಗೆ ಮಾಹಿತಿ ಉಪಯುಕ್ತವಾಗಿದೆ. ಹೌದು ಸ್ನೇಹಿತರೇ, SSLC ಪರೀಕ್ಷೆ -3 ರ ವೇಳಾಪಟ್ಟಿ ಹಾಗು ದಿನಾಂಕ ಗಳು ಪ್ರಕಟಗೊಂಡಿದೆ.ಬ್ಯೆಲ್ಲ ಹತ್ತನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗೆ ತಯಾರಿ ನಡೆಸಿ ಉತ್ತಮ ಅಂಕ ಪಡೆಯಬೇಕು.

SSLC ಪರೀಕ್ಷೆ -3 ಯಾವಗ ನಡೆಯುವುದು? ಇದರ ವೇಳಾಪಟ್ಟಿ ಏನು?

ಹತ್ತನೇ ತರಗತಿ SSLC ಪರೀಕ್ಷೆ -3 ಆಗಸ್ಟ್ ತಿಂಗಳಲ್ಲಿ ನಡೆಯುವುದು. ಈ ವರ್ಷದಿಂದ ಶಿಕ್ಷಣ ಇಲಾಖೆ ಹೊಸ ರೀತಿಯಲ್ಲಿ ಪರೀಕ್ಷೆ ಮಾಡಲು ಮುಂದಾಗಿ, ಮೂರು ಮೂರು ಬಾರಿ SSLC ಪರೀಕ್ಷೆಯನ್ನು ನಡೆಸುವುದಾಗಿ ತಿಳಿಸಿ, ಈಗಾಗಲೇ ಮೊದಲ ಎರಡು ಬಾರಿ ಪರೀಕ್ಷೆ ಮಾಡಿ ಮುಗಿಸಿದೆ ಹಾಗು ಅದರ ಫಲಿತಾಂಶ ಕೂಡ ಪ್ರಕಟಿಸಲಾಗಿದೆ.

ಇನ್ನು ಯಾರಿಗೆ ತಮ್ಮ ಅಂಕದಿಂದ ಸಮಾಧಾನ ಆಗಿಲ್ಲ, ಅವರು SSLC ಮೂರನೇ ಪರೀಕ್ಷೆ ಬರೆಯಬಹುದು. ಈ ಪರೀಕ್ಷೆ 2 ಆಗಸ್ಟ್ 2024 ರಿಂದ 9 ಆಗಸ್ಟ್ 2024 ರ ವರೆಗೆ ನಡೆಯಲಿದೆ. ಎಂದಿನಂತೆ ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ, ವಿಜ್ಞಾನ, ಸಮಾಜ ಮತ್ತು ಗಣಿತ ವಿಷಯಗಳ ಪರೀಕ್ಷೆ ನಡೆಯಲಿದೆ.

SSLC ಯ ಮೂರನೇ ಪರೀಕ್ಷೆಗೆ ಅರ್ಜಿ ಹೇಗೆ ಸಲ್ಲಿಸುವುದು?

SSLC ಮೂರನೇ ಪರೀಕ್ಷೆ ಬರೆಯಲು ಪರೀಕ್ಷೆ ಬರೆಯಲು ಇಚ್ಛಿಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು. ಈ ಅರ್ಜಿಯನ್ನು ನಿಮ್ಮ ಶಾಲೆಗಳಲ್ಲಿ ಹೋಗಿ, ಶಾಲೆ ಅವರ ಕಡೆಯಿಂದ ಅರ್ಜಿ ತುಂಬಿಸಿ, ಶುಲ್ಕ ಪಾವತಿ ಮಾಡಿ ಅರ್ಜಿ ಸಲ್ಲಿಸಬೇಕು. ಹಾಗೆ ಪರೀಕ್ಷೆಗೆ ಕೆಲವು ದಿನ ಇದ್ದಲ್ಲಿ ಹಾಲ್ ಟಿಕೆಟ್ ಅನ್ನು ನಿಮಗೆ ನೀಡಲಾಗುವುದು.

ಹಾಗೆ SSLC ಯ ಎರಡನೇ ಪರೀಕ್ಷೆಯ ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು, ಇನ್ನೂ ಪರೀಕ್ಷೆಯ ಫಲಿತಾಂಶ ನೋಡದಿದ್ದಲ್ಲಿ ಅವರ ಅಫೀಷಿಯಲ್ ಕರ್ನಾಟಕ ಸೆಕೆಂಡರಿ ಎಜುಕೇಷನ್ ಬೋರ್ಡ್ ಎಂಬ ವೆಬ್ಸೈಟ್ ನಲ್ಲಿ ನೀವು ನಿಮ್ಮ ಫಲಿತಾಂಶವನ್ನು ನೋಡಬಹುದು. ಪರೀಕ್ಷೆ ಮೂರು ಬರೆಯುವರಿಗೆ ಒಳ್ಳೆಯದಾಗಲಿ.

ಇದನ್ನೂ ಓದಿ: 1st and 2nd PUC ಎಕ್ಸಾಮ್ ಸಿಲಬಸ್ ಹಾಗೂ ಟೆಸ್ಟ್  ಕ್ವೆಶ್ಚನ್ ಪೇಪರ್ ಪ್ಯಾಟರ್ನ್!! ಇಲ್ಲಿದೆ ಮಾಹಿತಿ 

Leave a Comment

error: Content is protected !!